• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Chamarajanagar: ಪ್ರಧಾನಿ ಕಚೇರಿಯ ಅಧಿಕಾರಿ ಸೋಗಿನಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿಗೆ ಕರೆ;  ನಕಲಿ ಅಧಿಕಾರಿ ವಿರುದ್ದ FIR

Chamarajanagar: ಪ್ರಧಾನಿ ಕಚೇರಿಯ ಅಧಿಕಾರಿ ಸೋಗಿನಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿಗೆ ಕರೆ;  ನಕಲಿ ಅಧಿಕಾರಿ ವಿರುದ್ದ FIR

ಡಿಸಿ ಚಾರುಲತಾ ಸೋಮಲ್​

ಡಿಸಿ ಚಾರುಲತಾ ಸೋಮಲ್​

ಈತನ ಮಾತಿನ ಶೈಲಿಯಿಂದ ಮತ್ತಷ್ಟು ಅನುಮಾನಗೊಂಡ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಮೊಬೈಲ್ ವಿವರಗಳನ್ನು ಪರಿಶೀಲಿಸಿದಾಗ ಈತ ಹೇಳುತ್ತಿರುವುದು ಸುಳ್ಳು ಎಂದು ಗೊತ್ತಾಗಿದೆ. ಅಪರಿಚಿತನ ವಿರುದ್ಧ ದೂರು ದಾಖಲು

 • Share this:

ಚಾಮರಾಜನಗರ (ಜು.03)  ಅಧಿಕಾರಿಗಳ ಸೋಗಿನಲ್ಲಿ  ಕರೆ ಮಾಡಿ ಬೆದರಿಕೆ (Threat) ಹಾಕುವುದು, ಮೋಸ ಮಾಡುವುದು, ಸುಲಿಗೆ ಮಾಡುವುದು, ಸರ್ಕಾರಿ ಸವಲತ್ತುಗಳನ್ನು ದುರುಪಯೋಗಪಡಿಸಿಕೊಳ್ಳುವುದು ಹೀಗೆ ಅನೇಕ ವಂಚನೆ ಪ್ರಕರಣಗಳು ಆಗಾಗ್ಗೆ ನಡೆಯುತ್ತಲೇ ಇವೆ. ಇದೀಗ ಪ್ರಧಾನ ಮಂತ್ರಿ ಕಚೇರಿಯ (Prime Minister Office) ಅಧಿಕಾರಿ ಎಂದು ಹೇಳಿಕೊಂಡು ಚಾಮರಾಜನಗರ ಜಿಲ್ಲಾಧಿಕಾರಿ (ChamarajanagarDC) ಚಾರುಲತಾ ಸೋಮಲ್ (Charulatha Somal) ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿದ್ದು ಈ ಬಗ್ಗೆ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ (FIR) ದಾಖಲಾಗಿದೆ.


ರಾವ್​ ಎಂದು ಹೆಸರು ಹೇಳಿ ಕರೆ


ನಾನು ಗುಜರಾತ್ ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ, ಪ್ರಸ್ತುತ ಪ್ರಧಾನ ಮಂತ್ರಿ ಕಚೇರಿಯಿಂದ ಮಾತನಾಡುತ್ತಿರುವುದಾಗಿ 7892747117 ಮೊಬೈಲ್ ಸಂಖ್ಯೆಯಿಂದ  ರಾವ್ ಎಂದು ಹೆಸರು ಹೇಳಿಕೊಂಡು ವ್ಯಕ್ತಿಯೊಬ್ಬ ಚಾಮರಾಜನಗರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರಿಗೆ ಜೂ.27 ರಂದು ಕರೆ ಮಾಡಿದ್ದಾನೆ.


ವಾಸ್ತವ್ಯಕ್ಕೆ ಕೊಠಡಿ ಕಾಯ್ದಿರಿಸಬೇಕೆಂದು ಕರೆ


ಜುಲೈ 2 ರಂದು ತಾನು ಕುಟುಂಬ ಸಮೇತ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟ ದ ಕೆ.ಗುಡಿಗೆ ಬರುತ್ತಿರುವುದಾಗಿ ತನ್ನ ವಾಸ್ತವ್ಯಕ್ಕೆ ಕೊಠಡಿ ಕಾಯ್ದಿರಿಸಬೇಕು, ಜಂಗಲ್ ಸಫಾರಿ ಮತ್ತು ಬಿಳಿಗಿರಿರಂಗನ ಬೆಟ್ಟದ ದೇವಸ್ಥಾನದಲ್ಲಿ ದರ್ಶನಕ್ಕೆ ವ್ಯವಸ್ಥೆ  ಮಾಡಬೇಕು ಹಾಗು ದೊಡ್ಡಸಂಪಿಗೆ ಮರದ ವೀಕ್ಷಣೆಗೆ ವ್ಯವಸ್ಥೆ ಮಾಡಬೇಕು ಎಂದು ಕೇಳಿದ್ದಾನೆ


ಇದನ್ನೂ ಓದಿ: BMTC ಬಸ್​ನಲ್ಲಿ ಇನ್ಮುಂದೆ ಕಂಡಕ್ಟರ್ ಇರೋದಿಲ್ಲ! ಟಿಕೆಟ್ ಪಡೆಯೋದು ಹೇಗೆ ಗೊತ್ತಾ?


ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಬಂತು ಅನುಮಾನ


NTRO (National Technical Research Organisation) New Delhi, very high Profile officer ಎಂದು ಹಾಗು ಪ್ರಧಾನ ಮಂತ್ರಿಗಳ ಕಚೇರಿ ಹೆಸರು ಹೇಳಿಕೊಂಡು ದೂರವಾಣಿ ಕರೆ ಹಾಗು ವಾಟ್ಸ್ ‌ಪ್ ಸಂದೇಶಗಳನ್ನು ಕಳುಹಿಸಿದ್ದಾನೆ. ಅನುಮಾನಗೊಂಡ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಆತನ ನಿಖರ ಹುದ್ದೆ  ಬಗ್ಗೆ ಕೇಳಿದ್ದಾರೆ. ಆದರೆ ಆತ ಇದು ಗೌಪ್ಯವಾಗಿರುವುದರಿಂದ ಹೆಸರು ಮತ್ತು ಹುದ್ದೆ ಬಹಿರಂಗಪಡಿಸಬಾರದು ಎಂದು ತಿಳಿಸಿದ್ದಾನೆ.


ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು


ಈತನ ಮಾತಿನ ಶೈಲಿಯಿಂದ ಮತ್ತಷ್ಟು ಅನುಮಾನಗೊಂಡ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಮೊಬೈಲ್ ವಿವರಗಳನ್ನು ಪರಿಶೀಲಿಸಿದಾಗ ಈತ ಹೇಳುತ್ತಿರುವುದು ಸುಳ್ಳು ಎಂದು ಗೊತ್ತಾಗಿದೆ. ಗಣ್ಯ ವ್ಯಕ್ತಿಗಳ ಕಚೇರಿ ಮತ್ತು ಹುದ್ದೆಗಳ ಹೆಸರುಗಳನ್ನು ದುರುಪಯೋಗಪಡಿಸಿಕೊಂಡು ಮೋಸ ಮಾಡುತ್ತಿರುವ ಈ ವ್ಯಕ್ತಿಯ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ. ಈ ದೂರನ್ನು ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದ್ದು ಇದೀಗ  ಎಫ್.ಐ.ಆರ್ ದಾಖಲಾಗಿದೆ.


ಇದನ್ನೂ ಓದಿ: Suicide: ಪ್ರೀತಿ ನಿರಾಕರಿಸಿದ್ದಕ್ಕೆ ಮನನೊಂದು ಯುವಕ ನೇಣಿಗೆ ಶರಣು


ಜಿಲ್ಲಾಧಿಕಾರಿಗೆ ಕಾಲ್​ ಮಾಡಿದ್ದು ಯಾರು?

top videos


  ಈ ಬಗ್ಗೆ ಪ್ರತಿಕ್ರಿಯಿಸಿರುವ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಢಾಧಿಕಾರಿ ಶಿವಕುಮಾರ್ ಅವರು ಅಪರಿಚಿತ ವ್ಯಕ್ತಿ ಪ್ರಧಾನಿ ಕಾರ್ಯಾಲಯದ ಹೆಸರು ದುರುಪಯೋಗಪಡಿಸಿಕೊಂಡಿರುವ  ಬಗ್ಗೆ ಜಿಲ್ಲಾಧಿಕಾರಿ ದೂರು ನೀಡಿದ್ದಾರೆ, ಈ ದೂರಿನ ಮೇರೆಗೆ ಅಪರಿಚಿತ ವ್ಯಕ್ತಿಯ ವಿರುದ್ದ ವಂಚನೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆತನ ಮೊಬೈಲ್ ನಂಬರಿನ ವಿವರಗಳನ್ನು ಪರಿಶೀಲಿಸಲಾಗಿ ಮೈಸೂರು ಮೂಲದ ವ್ಯಕ್ತಿ ಎಂದು ಗೊತ್ತಾಗಿದೆ.  ಆದರೆ ಆತ ಯಾರು ಎಂಬುದು ಪತ್ತೆಯಾಗಿಲ್ಲ, ತನಿಖೆ ನಡೆಯುತ್ತಿದೆ" ಎಂದು ನ್ಯೂಸ್18 ಗೆ ತಿಳಿಸಿದರು

  First published: