HOME » NEWS » State » CITY MUNICIPAL COUNCIL BILL COLLECTOR CHEATED AND TAKEN BRIBE IN THE SAKE OF HOUSE CONSTRUCTION IN KODAGU HK

ಮನೆ ಕೊಡಿಸುವುದಾಗಿ ಸಂತ್ರಸ್ತರಿಂದ ಲಂಚ ಸ್ವೀಕಾರ ; ನಗರ ಸಭೆ ಬಿಲ್ ಕಲೆಕ್ಟರ್ ಎಸಿಬಿ ಬಲೆಗೆ 

ದೂರು ಆಧರಿಸಿದ ಎಸಿಬಿ ಪೊಲೀಸರು ಡಿವೈಎಸ್‍ಪಿ ತಿಪ್ಪಣ್ಣನವರ್ ನೇತೃತ್ವದಲ್ಲಿ ದಾಳಿ ಮಾಡಿ ಬಿಲ್ ಕಲೆಕ್ಟರ್ ಲೋಹಿತ್ ನನ್ನು ಇಪ್ಪತ್ತು ಸಾವಿರ ಹಣದ ಸಹಿತ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ

news18-kannada
Updated:June 6, 2020, 10:53 AM IST
ಮನೆ ಕೊಡಿಸುವುದಾಗಿ ಸಂತ್ರಸ್ತರಿಂದ ಲಂಚ ಸ್ವೀಕಾರ ; ನಗರ ಸಭೆ ಬಿಲ್ ಕಲೆಕ್ಟರ್ ಎಸಿಬಿ ಬಲೆಗೆ 
ಬಿಲ್ ಕಲೆಕ್ಟರ್ ಲೋಹಿತ್
  • Share this:
ಕೊಡಗು(ಜೂ.06): ಮನೆ ಕೊಡಿಸುವುದಾಗಿ ಹೇಳಿ ಸಂತ್ರಸ್ಥರಿಂದ ಸಾವಿರಾರು ರೂಪಾಯಿ ಲಂಚ ಪಡೆಯುತ್ತಿದ್ದ ಬಿಲ್ ಕಲೆಕ್ಟರ್ ಎಸಿಬಿ ಬಲೆಗೆ ಬಿದ್ದಿದ್ದಾನೆ. ಮಡಿಕೇರಿ ನಗರ ಸಭೆಯ ಬಿಲ್ ಕಲೆಕ್ಟರ್ ಲೋಹಿತ್ ಎಸಿಬಿ ಬಲೆಗೆ ಬಿದ್ದ ಆರೋಪಿ.

ಮಡಿಕೇರಿ ನಗರದ ಚಾಮುಂಡೇಶ್ವರಿ ನಗರ ನಿವಾಸಿ ಗಣೇಶ್ ಎಂಬುವವರ ಮನೆ 2018 ರ ಭೀಕರ ಭೂಕುಸಿತದಲ್ಲಿ ಬಿದ್ದು ಹೋಗಿತ್ತು. ಸಂತ್ರಸ್ಥರ ಮನೆ ಫಲಾನುಭವಿಗಳ ಎರಡನೇ ಪಟ್ಟಿಯಲ್ಲಿ ಗಣೇಶ್ ಅವರ ಹೆಸರಿತ್ತು. ಆದರೆ, ಕೆಲವೇ ದಿನಗಳಲ್ಲಿ ಎರಡನೇ ಪಟ್ಟಿಯಲ್ಲಿ ಅವರ ಹೆಸರು ನಾಪತ್ತೆಯಾಗಿತ್ತು.

ಈ ವಿಷಯ ತಿಳಿದ ಬಿಲ್ ಕಲೆಕ್ಟರ್ ಲೋಹಿತ್ ಗಣೇಶ್ ಅವರನ್ನು ಭೇಟಿಯಾಗಿ ನಿಮಗೆ ಮನೆಯನ್ನು ಕೊಡಿಸುತ್ತೇನೆ ಆದರೆ 50 ಸಾವಿರ ಕೊಡುವಂತೆ ಲಂಚಕ್ಕೆ ಬೇಡಿಕೆ ಇಟ್ಟಿದ್ದನಂತೆ. ಆದರೆ, ಅದಕ್ಕೆ ಗಣೇಶ್ ಒಪ್ಪದಿದ್ದಾಗ 25 ಸಾವಿರ ರೂಪಾಯಿಗೆ ಫೈನಲ್ ಮಾಡಿದ್ದನಂತೆ. ಸಂತ್ರಸ್ಥರಾದ ಗಣೇಶ್ ಅವರು ಆಗಲಿ ಎಂದು ಹೇಳಿ ಮನೆಯ ಬೆಲೆಬಾಳುವ ವಸ್ತುಗಳನ್ನು ಮಾರಿ ಮೊನ್ನೆಯಷ್ಟೇ 5 ಸಾವಿರ ರೂಪಾಯಿ ಅಡ್ವಾನ್ಸ್ ಎಂದು ನೀಡಿದ್ದಾರೆ. ಬಳಿಕ ಲೋಹಿತ್ ಗುರುವಾರ ಉಸ್ತುವಾರಿ ಸಚಿವರು ಜಂಬೂರಿನಲ್ಲಿ ಮನೆಗಳ ಹಕ್ಕುಪತ್ರ ನೀಡುತ್ತಾರೆ.

ಶುಕ್ರವಾರ ಉಳಿದ 20 ಸಾವಿರ ಹಣವನ್ನು ಚುಪ್ತಾ ಮಾಡುವಂತೆ ಹೇಳಿದ್ದನಂತೆ. ಆಗಲಿ ಎಂದು ಒಪ್ಪಿಕೊಂಡಿದ್ದ ಗಣೇಶ್ ನಿನ್ನೆಯಷ್ಟೇ ಜಂಬೂರಿನಲ್ಲಿ ಮನೆ ಪಡೆದುಕೊಂಡು  ಹಣ ನೀಡಲು ಮಡಿಕೇರಿ ನಗರ ಸಭೆ ಬಳಿಗೆ ಬಂದಿದ್ದಾರೆ.  ಈ ವೇಳೆ ಗಣೇಶ್‍ನನ್ನು  ನಗರಸಭೆಯಿಂದ ಎಪಿಎಂಸಿ ಮಾರುಕಟ್ಟೆ ಬಳಿಗೆ ಬರುವಂತೆ ಲೋಹಿತ್ ಹೇಳಿದ್ದಾನೆ.

2018 ರ ಭೂಕುಸಿತದಲ್ಲಿ ಮನೆ ಕಳೆದುಕೊಂಡಿದ್ದ ಗಣೇಶ್ ತಾನು ನ್ಯಾಯಯುತವಾಗಿ ಮನೆ ಪಡೆದುಕೊಳ್ಳಲು ಇಷ್ಟೊಂದು ಕಷ್ಟ ಪಡಬೇಕೆ ಎಂದು ಯೋಚಿಸಿ ಇದೆಲ್ಲವನ್ನೂ  ಎಸಿಪಿ ಪೊಲೀಸರಿಗೆ ದೂರು ನೀಡಿ ಬಂದಿದ್ದಾರೆ.

ಇದನ್ನೂ ಓದಿ : ಉಪ್ಪಿಗೂ ಕಂಟಕವಾದ ಕೊರೋನಾ - ಸಾಣೆಕಟ್ಟಾದಲ್ಲಿ ರಫ್ತಾಗದೆ ಕರಗಿ ನೀರಾಗುತ್ತಿರುವ ಉಪ್ಪಿನ ರಾಶಿ

ದೂರು ಆಧರಿಸಿದ ಎಸಿಬಿ ಪೊಲೀಸರು ಡಿವೈಎಸ್‍ಪಿ ತಿಪ್ಪಣ್ಣನವರ್ ನೇತೃತ್ವದಲ್ಲಿ ದಾಳಿ ಮಾಡಿ ಬಿಲ್ ಕಲೆಕ್ಟರ್ ಲೋಹಿತ್ ನನ್ನು ಇಪ್ಪತ್ತು ಸಾವಿರ ಹಣದ ಸಹಿತ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
First published: June 6, 2020, 10:51 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading