ಅಡಕತ್ತರಿಯಲ್ಲಿ ಬಿಜೆಪಿ, ಕಾಂಗ್ರೆಸ್​ ಟ್ವೀಟ್​ ಬಾಣಕ್ಕೆ ಏನಂತಾರೆ ರಾಜ್ಯಪಾಲರು?


Updated:May 16, 2018, 1:48 PM IST
ಅಡಕತ್ತರಿಯಲ್ಲಿ ಬಿಜೆಪಿ, ಕಾಂಗ್ರೆಸ್​ ಟ್ವೀಟ್​ ಬಾಣಕ್ಕೆ ಏನಂತಾರೆ ರಾಜ್ಯಪಾಲರು?

Updated: May 16, 2018, 1:48 PM IST
ನ್ಯೂಸ್ 18 ಕನ್ನಡ

ಬೆಂಗಳೂರು(ಮೇ. 16): ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಬಂದ ಬಳಿಕ ರಾಜ್ಯ ರಾಜಕೀಯದಲ್ಲಿ ಬಿರುಸಿನ ಚಟುವಟಿಕೆಗಳು ಆರಂಭವಾಗಿವೆ. ಕಾಂಗ್ರೆಸ್​ ಅರುಣ್ ಜೇಟ್ಲಿಯವರ ಈ ಹಿಂದಿನ ಟ್ವೀಟ್​ ಒಂದನ್ನು ಉಲ್ಲೇಖಿಸುತ್ತಾ ಜೆಡಿಎಸ್​ನೊಂದಿಗೆ ಮೈತ್ರಿ ಮಾಡಿ ಸರ್ಕಾರ ರಚಿಸುತ್ತರುವುದು ಸರಿ ಎಂಬ ವಾದ ಮಾಡಿದೆ.

ಕಾಂಗ್ರೆಸ್​ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ತಮ್ಮ ಟ್ವಿಟರ್​ನಲ್ಲಿ ಗೋವಾ, ಮೇಘಾಲಯ ಹಾಗೂ ಮಣಿಪುರದಲ್ಲಿ ರಾಜ್ಯಪಾಲರಿಗಿದ್ದ ಸಂವಿಧಾನಿಕ ಅಧಿಕಾರಗಳೇ ಕರ್ನಾಟಕ ರಾಜ್ಯದಲ್ಲೂ ಅನ್ವಯವಾಗಬೇಕು ಎಂದು ಬರೆದುಕೊಂಡಿದ್ದಾರೆ. ಇದರೊಂದಿಗೆ ಅವರು ಹಳೆಯ ನ್ಯೂಸ್ ರಿಪೋರ್ಟ್​ ಒಂದನ್ನು ಟ್ಯಾಗ್ ಮಾಡಿದ್ದಾರೆ. ಈ ವರದಿಯಲ್ಲಿ ಒಂದು ವೇಳೆ ಅತಂತ್ರ ಪರಿಸ್ಥಿತಿ ಎದುರಾದರೆ ರಾಜ್ಯಪಾಲರು ಮೈತ್ರಿ ಮಾಡಿ ಬಹುಮತ ಪಡೆದ ಪಕ್ಷ/ನಾಯಕರಿಗೆ ರಾಜ್ಯಪಾಲರು ಸರ್ಕಾರ ರಚಿಸುವ ಅವಕಾಶ ನೀಡಬಹುದು, ಸಂವಿಧಾನಿಕವಾಗಿ ಇದು ಸರಿ ಎಂದು ಸರುಣ್ ಜೇಟ್ಲಿ ಹೇಳಿರುವುದಾಗಿ ಬರೆಯಲಾಗಿತ್ತು.

Loading...ಇತ್ತ ಸಿಪಿಐ(ಎಂ) ಮುಖ್ಯ ಕಾರ್ಯದರ್ಶಿ ಸೀತಾರಾಮ್ ಕೂಡಾ ಜೇಟ್ಲಿಯವರ ಟ್ವೀಟ್​ನ್ನು ಉಲ್ಲೇಖಿಸುತ್ತಾ "ಬಿಜೆಪಿಯಿಂದ ನಿಯೋಜಿಸಲಾದ ಗವರ್ನರ್ ಗೋವಾ, ಮಣಿಪುರ ಹಾಗೂ ಮೇಘಾಲಯದಲ್ಲಿ ಸರ್ಕಾರ ರಚಿಸಲು ಅತಿ ದೊಡ್ಡ ಪಕ್ಷಕ್ಕೆ ಆಮಂತ್ರಣ ನೀಡಿರಲಿಲ್ಲ. ಕೇಂದ್ರ ಸರ್ಕಾರದ ಮಂತ್ರಿ ಅವರನ್ನು ಸಮರ್ಥಿಸಿಕೊಂಡಿದ್ದರು. ಹೀಗಾಗಿ ಕರ್ನಾಟಕದಲ್ಲೂ ಇದನ್ನು ಪಾಲಿಸಬಹುದೆಂದು ಭರವಸೆ ಇದೆ" ಎಂದಿದ್ದಾರೆ.


ಕಾಂಗ್ರೆಸ್​ನ ಮುಖ್ಯ ವಕ್ತಾರ ರಣ್​ದೀಪ್​ ಸುರ್ಜೇವಾಲಾ ಕೂಡಾ ಬಿಜೆಪಿಯು ಸ್ಪಷ್ಟ ಬಹುಮತದಿಂದ ದೂರವಿದೆ. ಆದರೆ ಷಡ್ಯಂತ್ರ ರೂಪಿಸಿ ಸರ್ಕಾರ ರಚಿಸುವ ಪ್ರಯತ್ನ ನಡೆಯುತ್ತಿದೆ ಎಂದಿದ್ದಾರೆ. ಈ ಮೂಲಕ ದೇಶ ಹಾಗೂ ಮಾಧ್ಯಮವನ್ನು ದಾರಿ ತಪ್ಪಿಸುವ ಯತ್ನ ನಡೆಸುತ್ತಿದೆ.
First published:May 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ