PSI Exam Scam: ಪ್ರೈಮರಿ ಚಾರ್ಜ್‌ಶೀಟ್ ಸಲ್ಲಿಕೆಗೆ ಸಿಐಡಿ ಸಿದ್ಧತೆ, ಯಾರಿಗೆಲ್ಲ ಬೀಳಲಿದೆ ಅಕ್ರಮದ ಉರುಳು?

ದೇಶವನ್ನೇ ತಲ್ಲಣಗೊಳಿಸಿದ್ದ ಕರ್ನಾಟಕದ ಬಹುಕೋಟಿ ಪಿಎಸ್ಐ ನೇಮಕಾತಿ ಹಗರಣದ ಆರೋಪಿಗಳ ಬಂಧನ ಪ್ರಕ್ರಿಯೆ ಮುಂದುವರೆದಿದೆ. ಮತ್ತೊಂದೆಡೆ ಶೀಘ್ರದಲ್ಲೇ ಪ್ರಾಥಮಿಕ ಚಾರ್ಜ್ ಶೀಟ್ (Primary Charge Sheet) ಸಲ್ಲಿಕೆಗೂ ಸಿಐಡಿ ಅಧಿಕಾರಿಗಳು ಮುಂದಾಗಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಕರ್ನಾಟಕದ (Karnataka) ಪಿಎಸ್ಐ ನೇಮಕಾತಿ ಅಕ್ರಮ ಹಗರಣದ (PSI Recruitment Scam) ತನಿಖೆ (Investigation) ಚುರುಕುಗೊಂಡಿದೆ. ಈ ಮಧ್ಯೆ ಆರೋಪಿಗಳ (Accused) ಬಂಧನ (Arrest) ಪ್ರಕ್ರಿಯೆ ಮುಂದುವರೆದಿದ್ದು, ಶೀಘ್ರದಲ್ಲೇ ಪ್ರಾಥಮಿಕ ಚಾರ್ಜ್ ಶೀಟ್ (Primary Charge Sheet) ಸಲ್ಲಿಕೆಗೂ ಸಿಐಡಿ (CID) ಮುಂದಾಗಿದೆ. ಈಗಾಗ್ಲೇ ಬಂಧಿತ ಆರೋಪಿಗಳ ಹೇಳಿಕೆ (Statements) ಮತ್ತು ಅಕ್ರಮ ನಡೆಸಿರೋ ಬಗ್ಗೆ ದಾಖಲೆಗಳನ್ನ (Records) ಸಂಗ್ರಹಿಸಿದ್ದು, ಮತ್ತಷ್ಟು ಸಾಕ್ಷ್ಯಗಳನ್ನ (Evidence) ಕಲೆಹಾಕಲು ಸಿಐಡಿ ಅಧಿಕಾರಿಗಳು ಮುಂದಾಗಿದ್ದಾರೆ. ಬಹುಕೋಟಿ ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಆರೋಪಿಗಳಿಗೆ ಸಹಾಯ ಮಾಡಿದ್ದ ಮಧ್ಯವರ್ತಿಗಳನ್ನ (Intermediaries) ಬಂಧನ ಮಾಡಲಾಗ್ತಿದೆ. ಜೊತೆಗೆ ಆರೋಪಿಗಳಿಗೆ ಕಠಿಣ ಶಿಕ್ಷೆಗಾಗಿ ಟೆಕ್ನಿಕಲ್ ಎವಿಡೆನ್ಸ್ (Technical Evidence) ಜೊತೆಗೆ ಸಾಕ್ಷ್ಯ ನಾಶದ ಬಗ್ಹೆಯೂ ರಿಪೋರ್ಟ್ (Report) ಮಾಡಲಾಗಿದೆ.

ಶೀಘ್ರವೇ ಪ್ರೈಮರಿ ಚಾರ್ಜ್‌ಶೀಟ್‌ ಸಲ್ಲಿಕೆ

ಈ ಮಧ್ಯೆ ಇದೇ ತಿಂಗಳಲ್ಲಿ ಪ್ರಾಥಮಿಕ ದೋಷಾರೋಪಣೆ ಪಟ್ಟಿ ಸಲ್ಲಿಸಲು ಸಿಐಡಿ ಮುಂದಾಗಿದೆ. ಜೊತೆಗೆ ಸಿಐಡಿ ಡಿಜಿ ಸಂಧುರಿಗೆ ತನಿಖೆಯ ರಿಪೋರ್ಟ್ ನೀಡಲಾಗಿದೆ.. ಅದ್ರಲ್ಲಿ ಮೊದಲು ಅಂದ್ರೆ ಏಪ್ರಿಲ್ 9 ರ ಬಳಿಕ ಬಂಧನವಾಗಿದ್ದವರ ಮೇಲೆ‌ ಪ್ರಾಥಮಿಕ ಚಾರ್ಜ್ ಶೀಟ್ ಹಾಕಲು ಸಿದ್ದತೆ  ನಡೆಸಲಾಗಿದೆ. ಬೆಂಗಳೂರು ಮತ್ತು ಕಲ್ಬುರ್ಗಿ ಸೇರಿ ಒಟ್ಟು 28 ಮಂದಿ ಆರೋಪಿಗಳ ವಿರುದ್ದ ಮೊದಲ ಚಾರ್ಜ್ ಶೀಟ್ ನ್ನ ಸಿಐಡಿ ಅಧಿಕಾರಿಗಳು ನ್ಯಾಯಾಲಕ್ಕೆ ಸಲ್ಲಿಕೆ ಮಾಡಲಿದ್ದಾರೆ ಎನ್ನಲಾಗಿದೆ.

ಯಾರ್ಯಾರ ವಿರುದ್ಧ ದೋಷಾರೋಪ ಪಟ್ಟಿ?

ಪ್ರಮುಖ ಆರೋಪಿಗಳಾದ ಆರ್ ಡಿ ಪಾಟೀಲ್, ದಿವ್ಯಾಹಾಗರಗಿ, ಬ್ಲೂಟೂತ್ ಕಿಂಗ್ ಪಿನ್ ಮಂಜುನಾಥ್ ವಿರುದ್ದ ಪ್ರಬಲ ಸಾಕ್ಷ್ಯಗಳನ್ನ ಕಲೆಹಾಕಿದ್ದು, ಇತ್ತೀಚೆಗೆ ಬಂಧನವಾದ ಆರೋಪಿಗಳನ್ನ ಅಡಿಷನಲ್ ಚಾರ್ಚ್ ಶೀಟ್ ನಲ್ಲಿ ಸೇರಿಸಿಕೊಳ್ಳಲು ಸಿಐಡಿ ಮುಂದಾಗಿದೆ.

ಇದನ್ನೂ ಓದಿ: Explained: ಏನಿದು PSI Exam Scam? ಇದರ ಆಳ, ಅಗಲ ಏನು? ಈವರೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ

ಜುಲೈನಲ್ಲಿ ಹೆಚ್ಚುವರಿ ಜಾರ್ಜ್‌ ಶೀಟ್ ಸಲ್ಲಿಕೆ

ಇನ್ನು ಮಧ್ಯವರ್ತಿಗಳ ವಿರುದ್ದ ಸಾಕ್ಷ್ಯಗಳನ್ನ ಸಂಪೂರ್ಣವಾಗಿ ಸಂಗ್ರಹಿಸುತ್ತಿದ್ದು, ಬಂಧಿತ ಎಲ್ಲಾ ಅಭ್ಯರ್ಥಿಗಳ ಓಎಮ್‌ಆರ್ ಶೀಟ್ ತಿದ್ದುಪಡಿಯ ಎಫ್‌ಎಸ್‌ಎಲ್ ರಿಪೋರ್ಟ್ ಅನ್ನು ಚಾರ್ಜ್ ಶೀಟ್‌ನಲ್ಲಿ ಸೇರಿಸಲಾಗ್ತಿದೆ... ಹೆಚ್ಚುವರಿ ದೋಷಾರೋಪ ಪಟ್ಟಿಯನ್ನ ಜುಲೈ ತಿಂಗಳಲ್ಲಿ ಕೋರ್ಟ್‌ಗೆ  ಸಿಐಡಿ ಟೀಂ ಸಲ್ಲಿಕೆ ಮಾಡಲಿದೆ.

ಮತ್ತಷ್ಟು ಆರೋಪಿಗಳಿಗೆ ಸಿಐಡಿ ಬಲೆ

ಈ ಮಧ್ಯೆ ಆರ್ ಡಿ ಪಾಟೀಲ್ ನ ಇಬ್ಬರು ಸಹಚರರಾದ ಅಸ್ಲಾಂ ಮುಜಾವರ್, ಮಹಮ್ಮದ್ ಅಯೂಬ್ ನನ್ನ ಎಂಟು ದಿನ ಕಸ್ಟಡಿಗೆ ಪಡೆದು ವಿಚಾರಣೆ ಮಾಡಲಾಗ್ತಿದೆ.. ಅಭ್ಯರ್ಥಿಗಳನ್ನ ಆರ್ ಡಿ ಪಾಟೀಲ್ ಗೆ ಆರೋಪಿ ಅಸ್ಲಂ ಪರಿಚಯ ಮಾಡಿಸ್ತಿದ್ದ.. ಆರ್ ಡಿ ಪಾಟೀಲ್ ಗೆ ಬಲಗೈ ಬಂಟನಾಗಿದ್ದ ಅಸ್ಲಂ ಅಭ್ಯರ್ಥಿಗಳನ್ನ ಪರಿಚಯಿಸಿ ಡೀಲ್ ಕುದುರಿಸ್ತಿದ್ದ.. ಹೀಗಾಗಿ ಸಿಐಡಿ ಅಸ್ಲಂ ವಿಚಾರಣೆ ಮಾಡುವ ಮೂಲಕ ಸಂಪರ್ಕಿತ ವ್ಯಕ್ತಿಗಳಿಗೆ ಬಲೆ ಬೀಸಿದೆ..

ಇದನ್ನೂ ಓದಿ: Explained: ಪಿಎಸ್ಐ Exam Scamನ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಯಾರು? ಇಲ್ಲಿದೆ ಓದಿ 'ದಿವ್ಯ' ಇತಿಹಾಸ!

ಸದ್ಯ  ಪ್ರಮುಖ ಆರೋಪಿಗಳ ಮೊಬೈಲ್ ಮತ್ತು ದಾಖಲೆಗಳ ಎಫ್ ಎಸ್ ಎಲ್ ರಿಪೋರ್ಟ್ ಗಾಗಿ ಕಾಯ್ತಿದ್ದು,ಇನ್ನೊಂದು ವಾರದಲ್ಲಿ ಅಧಿಕಾರಿಗಳ ಕೈ ಸೇರುವ ಸಾಧ್ಯತೆ ಇದೆ. ಇನ್ನು ಅಸ್ಲಂ ಧಾರವಾಡದಲ್ಲಿ ಪಿಎಸ್ ಐ ಅಭ್ಯರ್ಥಿಗೆ ಬೆದರಿಕೆ ಹಾಕಿದ್ದ. ಆರ್ ಡಿ ಪಾಟೀಲ್ ಬಂಧನಕ್ಕೆ ನೀನೇ ಕಾರಣವೆಂದು ಅವಾಜ್ ಹಾಕಿದ್ದ. ಈ ಸಂಬಂಧ ಧಾರವಾಡದಲ್ಲಿ ಪ್ರಕರಣ ದಾಖಲಾಗಿತ್ತು...ಅಭ್ಯರ್ಥಿಗಳನ್ನ ಪರಿಚಯಿಸಿ ಡೀಲ್ ಮಾಡ್ತಿದ್ದ ಅಸ್ಲಂ ಸ್ನೇಹಿತರ ಮೂಲಕ ಸ್ಕೆಚ್ ಹಾಕ್ತಿದ್ದ..ಕೆಲಸ ಸಿಕ್ಕೇ ಬಿಡುತ್ತೆ ಎಂದು ಆರ್ ಡಿ ಪಾಟೀಲ್ ಬಳಿ ಲಕ್ಷ ಲಕ್ಷ ಹಣವನ್ನು ಕುದಿರಿಸ್ತಿದ್ದ.
Published by:Annappa Achari
First published: