Ramesh Jarkiholi CD Case: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ತನಿಖೆ CID ಅಥವಾ SIT..?

ಸಿಡಿ‌ ಪ್ರಕರಣ ಸಂಬಂಧ ಎಲ್ಲಾ‌ ಜವಾಬ್ದಾರಿಯನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ನೀಡಲಾಗಿದೆ. ಈ ಬಗ್ಗೆ ಅವರೇ ಸ್ಪಷ್ಟ ತೀರ್ಮಾನ ಮಾಡುತ್ತಾರೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದರು.

ಮಾಜಿ ಸಚಿವ ರಮೇಶ್​ ಜಾರಕಿಹೊಳಿ.

ಮಾಜಿ ಸಚಿವ ರಮೇಶ್​ ಜಾರಕಿಹೊಳಿ.

  • Share this:
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆಯನ್ನ ಎಸ್ಐಟಿ ಅಥವಾ ಸಿಐಡಿಗೆ ವಹಿಸುವುದು ಪಕ್ಕಾ ಆಗಿದೆ. ಸಿಎಂ ಯಡಿಯೂರಪ್ಪ ಜೊತೆ ಚರ್ಚಿಸಿ ಇಂದು ಸಂಜೆ ಅಂತಿಮ ತೀರ್ಮಾನ ತೆಗೆದುಕೊಳ್ಳುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ರಮೇಶ್ ಜಾರಕಿಹೊಳಿ ಹಾಗೂ ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ ಸೇರಿ ಅನೇಕರು ಸಿಬಿಐ‌ ತನಿಖೆ ಮಾಡುವಂತೆ ಒತ್ತಾಯಿಸಿದ್ದಾರೆ. ಕಳೆದೊಂದು ವಾರದಿಂದ ಪ್ರಕರಣ ಸಾಕಷ್ಟು ತಿರುವು ಪಡೆದುಕೊಂಡಿದೆ. ರಾಜಕೀಯ ಜೀವನ ಮುಗಿಸಲು ಕೆಲವರು ಮಾಡಿರುವ ಷಡ್ಯಂತ್ರ ಅಂತ ಅನೇಕ ಸಚಿವರು ಆರೋಪಿಸಿದ್ದಾರೆ. ಇನ್ನು ಕೆಲವರು ವಿಪಕ್ಷಗಳತ್ತ ಬೆಟ್ಟು ಮಾಡಿದ್ದಾರೆ. ಸತ್ಯಾಸತ್ಯತೆ ತಿಳಿಯಲು ತನಿಖೆ ಮಾಡಬೇಕೆನ್ನುವುದು ಅನೇಕರ ಒತ್ತಾಯ. ಸರ್ಕಾರವೂ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ‌ ಪರಿಗಣಿಸಿರುವುದರಿಂದ ಎಸ್ಐಟಿ ಅಥವಾ ಸಿಐಡಿಗೆ ವಹಿಸಲು ಸರ್ಕಾರ ಸಿದ್ಧತೆ ನಡೆಸಿದೆ. 

ಸಿಡಿ‌ ಪ್ರಕರಣ ಸಂಬಂಧ ಎಲ್ಲಾ‌ ಜವಾಬ್ದಾರಿಯನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ನೀಡಲಾಗಿದೆ. ಈ ಬಗ್ಗೆ ಅವರೇ ಸ್ಪಷ್ಟ ತೀರ್ಮಾನ ಮಾಡುತ್ತಾರೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದರು. ನಂತರ ಗೃಹ ಸಚಿವರ ಕಚೇರಿಗೆ ಆಗಮಿಸಿದ ಕೆಲ ಸಚಿವರು ಚರ್ಚೆ ನಡೆಸಿದರು. ಸಚಿವ ಎಂಟಿಬಿ ನಾಗರಾಜ್, ಎಸ್.ಟಿ.ಸೋಮಶೇಖರ್ ಕೂಡ ಕೆಲಕಾಲ ಚರ್ಚಿಸಿದರು.

ನಾನು ಕೂಡ 20 ವರ್ಷದಿಂದ ರಾಜಕಾರಣದಲ್ಲಿದ್ದೇನೆ. ಐದು ನಿಮಿಷದಲ್ಲಿ ತೇಜೋವಧೆ ಮಾಡಬಹುದು. ಈ ಕಾರಣದಿಂದ ಕೋರ್ಟ್ ಮೊರೆ ಹೋಗಿದ್ದೇವೆ. ತಡೆಯಾಜ್ಞೆ ತಂದಿರುವುದೇ ತಪ್ಪಾ ಅಂತ ಅವರು ಪ್ರಶ್ನೆ ಮಾಡಿದರು. ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಸತ್ಯಾಸತ್ಯತೆ ಹೊರಬರಬೇಕು ಎಂದು ಸೋಮಶೇಖರ್ ಆಗ್ರಹಿಸಿದ್ದಾರೆ.

ಗೃಹ ಸಚಿವರನ್ನು ಭೇಟಿ ಮಾಡಿದ್ದ ಎಂಟಿಬಿ ನಾಗರಾಜ್ ಸೇರಿದಂತೆ ಬಹುತೇಕರು ಸಿಬಿಐ ತನಿಖೆಯಾಗಲಿ ಎಂದು ಒತ್ತಡ ಹೇರುತ್ತಿದ್ದಾರೆ. ಆದರೆ ಸರ್ಕಾರಕ್ಕೆ ಸಿಬಿಐಗೆ ವಹಿಸಲು ಮನಸ್ಸಿದ್ದಂತೆ ಕಾಣುತ್ತಿಲ್ಲ. ಹೀಗಾಗಿ ಎಸ್‌ಐಟಿ ಅಥವಾ ಸಿಐಡಿಗೆ ನೀಡುವುದು ಖಾತ್ರಿ ಎನ್ನಲಾಗಿದೆ.

ದೂರುದಾರರೇ ಇಲ್ಲ:

ಉನ್ನತಮಟ್ಟದ ತನಿಖೆಗೆ ಸಿದ್ಧತೆ ನಡೆಸಿರುವ ಸರ್ಕಾರಕ್ಕೆ ತಾಂತ್ರಿಕವಾಗಿ ತೊಡರಿದೆ. ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ನೀಡಿದ್ದ ದೂರು ಅರ್ಜಿಯನ್ನು ಅವರೇ ವಾಪಸ್ ಪಡೆದಿದ್ದರು.‌ ಕಬ್ಬನ್ ಪಾರ್ಕ್ ಪೊಲೀಸರು ಕೆಲವಷ್ಟು ಮಾಹಿತಿ ಕಲೆಹಾಕಿ ಸುಮ್ಮನಾಗಿದ್ದರು. ಇನ್ನೂ ಕೂಡ ಜಾರಕಿಹೊಳಿ ಸಿಡಿ ಸಂಬಂಧ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ.

ಇದನ್ನೂ ಓದಿ: MahaShivaratri: ಮೈಸೂರು ಅರಮನೆಯ ತ್ರಿನೇಶ್ವರನಿಗೆ ಶಿವರಾತ್ರಿ ದಿನ ಅಪರಂಜಿ ಚಿನ್ನದ ಕೊಳಗ; ಈ ಮುಖವಾಡದ ವಿಶೇಷತೆ ಗೊತ್ತಾ?

ರಮೇಶ್​ ಜಾರಕಿಹೊಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದೂರುಗಳಿಲ್ಲದ ಕಾರಣ ತನಿಖೆಗೆ ವಹಿಸಲು ಸಾಧ್ಯವಾಗಿಲ್ಲ. ಈಗಲೂ ಉನ್ನತಮಟ್ಟದ ತನಿಖೆ ಮಾಡಿಸಬೇಕೆಂದರೆ ಎಫ್‌ಐಆರ್ ದಾಖಲಿಸಬೇಕಿರುವುದು ಕಡ್ಡಾಯ.

ಸಿಡಿಯಲ್ಲಿರುವ ಯುವತಿ ಈವರೆಗೂ ಪತ್ತೆಯಾಗಿಲ್ಲ. ಹೀಗಾಗಿ ರಮೇಶ್ ಜಾರಕಿಹೊಳಿ ಖುದ್ದು ದೂರು ನೀಡಬೇಕಿದೆ. ನೀಡುವ ದೂರಿನ ಆಧಾರದ ಮೇಲೆ‌ ಉನ್ನತಮಟ್ಟದ ತನಿಖೆಗೆ ಒಪ್ಪಿಸಲು ಸರ್ಕಾರ ಚಿಂತನೆ ನಡೆಸಿದೆ. ಒಂದು ವೇಳೆ ಜಾರಕಿಹೊಳಿ ದೂರು ನೀಡುವುದು ವಿಳಂಬವಾದರೆ ಪೊಲೀಸರೇ ಸ್ವಯಂ ಪ್ರೇರಿತ ದೂರು ದಾಖಲಿಸಲು ಕೂಡ ಅವಕಾಶ ಇದೆ.

(ವರದಿ: ದಶರಥ್ ಸಾವೂರು)
Published by:MAshok Kumar
First published: