PSI Recruitment Scam: ಸಿಐಡಿ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ದಿವ್ಯಾ ಹಾಗರಗಿ: ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿದ್ದು ಹೀಗೆ?
ಪರೀಕ್ಷೆಯಲ್ಲಿ ಓಎಂಆರ್ ಶೀಟ್ ತಿದ್ದುವ ಬಗ್ಗೆ ಕಾಶಿನಾಥ್ ದಿವ್ಯಾಗೆ ಹೇಳಿದ್ದನು. ಕಾಶಿನಾಥ್ ಮುಖ್ಯಾಂತರ ಅಕ್ರಮ ಎಸಗಲು ಇಂಜಿನೀಯರ್ ಮಂಜುನಾಥ್ ಪ್ಲಾನ್ ಮಾಡಿದ್ದನು. ದಿವ್ಯಾ ಹಾಗರಗಿ ಒಡೆತನ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪರೀಕ್ಷೆ ಬರೆಯಬೇಕಿದ್ದ ಅಭ್ಯರ್ಥಿಗಳನ್ನು ಈ ಮಂಜುನಾಥ್ ಸಂಪರ್ಕಿಸಿದ್ದನು.
ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ (PSI Recruitment Scam) ಅಕ್ರಮ ಪ್ರಕರಣದ ಕ್ವೀನ್ ಪಿನ್ ದಿವ್ಯಾ ಹಾಗರಗಿ (Divya Hagaragi) ಸಿಐಡಿ ಅಧಿಕಾರಿಗಳ (CID Officer) ಮುಂದೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾಳೆ. ದಿವ್ಯಾ ಹಾಗರಗಿ ಜ್ಞಾನ ಜ್ಯೋತಿ ಆಂಗ್ಲ ಮಾದ್ಯಮ ಶಾಲೆಯ ಒಡತಿಯಾಗಿದ್ದು, ಪರೀಕ್ಷೆ ಅಕ್ರಮದಲ್ಲಿ ದೊಡ್ಡ ಮೊತ್ತದ ಹಣ (Money) ಪಡೆದ ಬಗ್ಗೆ ದಿವ್ಯಾ ಹಾಗರಗಿ ಒಪ್ಪಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ. ಆರ್ ಡಿ ಪಾಟೀಲ್ (RD Patil Gang) ಆಂಡ್ ಮಂಜುನಾಥ್ ಗ್ಯಾಂಗ್ (Manjunath Gang) ನಿಂದ ದೊಡ್ಡ ಮಟ್ಟದ ಹಣ ಸಂದಾಯ ಆಗಿರುವ ವಿಷಯವನ್ನ ಸಹ ಕ್ವೀನ್ ಪಿನ್ ಒಪ್ಪಿಕೊಂಡಿದ್ದಾಳೆ. ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಕಾಶಿನಾಥ್ ಎಂಬಾತನೇ ಆರ್ ಡಿ ಪಾಟೀಲ್ ಆಂಡ್ ಮಂಜುನಾಥ್ ಬಳಿಯಿಂದ ಹಣ ಕೊಡಿಸಿದ್ದ ಎನ್ನಲಾಗಿದೆ. ದಿವ್ಯಾ ಹಾಗರಗಿ , ಆರ್ ಡಿ ಪಾಟೀಲ್ , ಮಂಜುನಾಥ್ ಮಧ್ಯೆ ಮಧ್ಯವರ್ತಿಯಾಗಿ ಕಾಶಿನಾಥ್ ಕೆಲಸ ಮಾಡಿದ್ದನು.
ಕಾಶಿನಾಥ್ ಕೂಡ ಅಕ್ರಮದಲ್ಲಿ ದೊಡ್ಡ ಮೊತ್ತದ ಹಣ ಪಡೆದಿರೋದು ಬೆಳಕಿಗೆ ಬಂದಿದೆ. ಸದ್ಯ ಪ್ರಕರಣ ಬಯಲಾಗ್ತಿದ್ದಂತೆ ಮುಖ್ಯ ಶಿಕ್ಷಕ ಕಾಶಿನಾಥ್ ತೆಲೆಮರೆಸಿಕೊಂಡಿದ್ದಾನೆ.
ಸಿಬಿಐ ಡ್ರಿಲ್ ಗೆ ದಿವ್ಯಾ ಸುಸ್ತು!
ಪ್ರಕರಣದ ಬಗ್ಗೆ ದಿವ್ಯಾ ಹಾಗರಗಿ ಯಿಂದ ಇಂಚಿಂಚು ಮಾಹಿತಿಯನ್ನು ಸಿಐಡಿ ಅಧಿಕಾರಿಗಳು ಪಡೆಯುತ್ತಿದ್ದಾರೆ. ಸಿಬಿಐ ಡ್ರಿಲ್ ಗೆ ಸುಸ್ತಾಗಿರುವ ದಿವ್ಯಾ ಹಾಗರಗಿ ಅಕ್ರಮದ ವಿಚಾರವನ್ನು ಬಾಯಿ ಬಿಟ್ಟಿದ್ದಾಳೆ. ಪರೀಕ್ಷೆಯಲ್ಲಿ ನಡೆದ ಕ್ರಮದ ಬಗ್ಗೆ ಒಂದೊಂದಾಗಿ ಮಾಹಿತಿ ಮಾಹಿತಿ ನೀಡಿದ್ದಾಳೆ. ಶಾಲೆಯ ಮುಖ್ಯೋಪಾದ್ಯಾಯ ಕಾಶಿನಾಥ ಮಾತನ್ನು ದಿವ್ಯಾ ಕೇಳಿದ್ದಳು ಎನ್ನಲಾಗಿದೆ.
ಪರೀಕ್ಷೆಯಲ್ಲಿ ಓಎಂಆರ್ ಶೀಟ್ ತಿದ್ದುವ ಬಗ್ಗೆ ಕಾಶಿನಾಥ್ ದಿವ್ಯಾಗೆ ಹೇಳಿದ್ದನು. ಕಾಶಿನಾಥ್ ಮುಖ್ಯಾಂತರ ಅಕ್ರಮ ಎಸಗಲು ಇಂಜಿನೀಯರ್ ಮಂಜುನಾಥ್ ಪ್ಲಾನ್ ಮಾಡಿದ್ದನು. ದಿವ್ಯಾ ಹಾಗರಗಿ ಒಡೆತನ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪರೀಕ್ಷೆ ಬರೆಯಬೇಕಿದ್ದ ಅಭ್ಯರ್ಥಿಗಳನ್ನು ಈ ಮಂಜುನಾಥ್ ಸಂಪರ್ಕಿಸಿದ್ದನು.
ತಮ್ಮ ಅಭ್ಯರ್ಥಿಗಳಿಗೆ ಸಹಾಯ ಮಾಡುವಂತೆ ಮಂಜುನಾಥ್ ಕೇಳಿದ್ದನು. ಈ ವಿಷಯವನ್ನು ಕಾಶಿನಾಥ್ ತನ್ನ ಶಾಲೆಯ ಒಡತಿ ದಿವ್ಯಾ ಗಮನಕ್ಕೆ ತಂದಿದ್ದನು. ಇದರ ಜೊತೆಗೆ ಇದೇ ಕಾಶಿನಾಥ್ ಇಡೀ ಪರೀಕ್ಷಾ ಕೇಂದ್ರವನ್ನು ಮೇಲ್ವಿಚಾರಣೆ ಮಾಡುತ್ತಿದ್ದನು. ಹಾಗಾಗಿ ಸರಳವಾಗಿ ತಮಗೆ ಬೇಕಾದ ಅಭ್ಯರ್ಥಿಗಳು ಯಾವ ಕೋಣೆಯಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ ಎಂಬುದನ್ನು ಪತ್ತೆ ಮಾಡಿದ್ದನು.
ಮೇಲ್ವಿಚಾರಕರಿಂದ ಓಎಂಆರ್ ಶೀಟ್ ತಿದ್ದುಪಡಿ
ತಮ್ಮ ಅಭ್ಯರ್ಥಿಗಳು ಇರೋ ಕೋಣೆಗೆ ತನಗೆ ಬೇಕಾದ ಶಿಕ್ಷಕರನ್ನೇ ಮೇಲ್ವಿಚಾರಕರನ್ನಾಗಿ ನೇಮಿಸಿದ್ದನು. ಈ ಮೇಲ್ವಿಚಾರಕರಿಗೆ ಓಎಂಆರ್ ಶೀಟ್ ತಿದ್ದುವ ಬಗ್ಗೆ ಹೇಳಿಕೊಟ್ಟಿದ್ದನು. ಮೊದಲೇ ಮೇಲ್ವಿಚಾರಕರಿಗೆ ಅಭ್ಯರ್ಥಿಗಳ ಓಎಂಆರ್ ಶೀಟ್ ನಂಬರ್ ಸಹ ಹೇಳಿದ್ದನು.
ಪರೀಕ್ಷೆ ಬರೆದು ಪರಿಕ್ಷಾರ್ಥಿಗಳು ಹೊರಗೆ ಹೋದ ಬಳಿಕ ಕಾಶಿನಾಥ ನೀಡಿದ ಉತ್ತರವನ್ನ ಓಎಂಆರ್ ನಲ್ಲಿ ತಿದ್ದಲಾಗಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ದಿವ್ಯಾ ಹಾಗರಗಿ ಬಿಚ್ಚಿಟ್ಟಿದ್ದಾಳೆ.
ಪ್ರಧಾನಿ ಕಚೇರಿಗೆ ದೂರು
ಬಿಜೆಪಿ ನಾಯಕರೊಬ್ಬರು (BJP Leader) ಪಿಎಸ್ಐ ಅಕ್ರಮ ಪ್ರಕರಣವನ್ನ ಸಿಬಿಐ ತನಿಖೆಗೆ ನೀಡಬೇಕು ಎಂದು ಆಗ್ರಹಿಸಿ ಪ್ರಧಾನಿ ಕಚೇರಿಗೆ (Prime Minister Office) ದೂರು ಸಲ್ಲಿಸಿದ್ದಾರೆ. ತಮ್ಮ ಸರ್ಕಾರದ ವಿರುದ್ಧವೇ ಬಿಜೆಪಿ ನಾಯಕ ರಾಘವ್ ಅಣ್ಣಿಗೇರಿ (Raghav Annigeri) ದೂರು ನೀಡಿದ್ದಾರೆ. ರಾಜ್ಯದಲ್ಲಿರುವ ಸರ್ಕಾರ ಭ್ರಷ್ಟವಾಗಿದ್ದು, ಪೊಲೀಸ್ ಇಲಾಖೆ ಅಲ್ಲದೆ ಬೇರೆ ಇಲಾಖೆಯಲ್ಲೂ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದಾರೆ. ದೂರು ಸಲ್ಲಿಸಿರುವ ರಾಘವ್ ಅಣ್ಣೀಗೇರಿ ಅವರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಆಪ್ತರಾಗಿದ್ದಾರೆ.
Published by:Mahmadrafik K
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ