ಮೈಸೂರು ಜಿಲ್ಲೆಯಲ್ಲಿರುವ ಪಿರಿಯಾಪಟ್ಟಣದಲ್ಲಿರುವ (Periyapatna, Mysuru) ಸೇಂಟ್ ಮೇರಿ ಚರ್ಚ್ಗೆ ದುಷ್ಕರ್ಮಿಗಳು ನುಗ್ಗಿ ಬಾಲ ಯೇಸು (Infant Jesus)ಪ್ರತಿಮೆಗೆ ಹಾನಿಯುಂಟು ಮಾಡಿದ್ದಾರೆ. ಮಂಗಳವಾರ ರಾತ್ರಿ ಸುಮಾರು ಏಳು ಗಂಟೆಗೆ ಈ ಘಟನೆ ನಡೆದಿದೆ. ಇದರ ಜೊತೆಗೆ ಚರ್ಚ್ನಲ್ಲಿದ್ದ ಕೆಲವು ಅಮೂಲ್ಯ ವಸ್ತುಗಳನ್ನು ಕಳ್ಳತನ (Theft) ಮಾಡಿದ್ದಾರೆ ಎಂದು ವರದಿಯಾಗಿದೆ. ಇದರ ಜೊತೆಗೆ ಚರ್ಚ್ನಲ್ಲಿದ್ದ ಕಾಣಿಕೆ ಪೆಟ್ಟಿಗೆಯನ್ನು ದೋಚಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿರುವ ಪಿರಿಯಾಪಟ್ಟಣ ಪೊಲೀಸರು ಐಪಿಸಿ ಸೆಕ್ಷನ್ 295ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಕೃತ್ಯ) ಮತ್ತು 380 (ಕಳ್ಳತನ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಈ ಚರ್ಚ್ ಪಿರಿಯಾಪಟ್ಟಣದ ಗೋಣಿಕೊಪ್ಪ ರಸ್ತೆಯಲ್ಲಿದೆ. ಕ್ರಿಸ್ಮಸ್ ಆಚರಣೆಯ ಎರಡು ದಿನಗಳ ಬಳಿಕ ದುಷ್ಕರ್ಮಿಗಳು ಚರ್ಚ್ ಮೇಲೆ ದಾಳಿ ನಡೆಸಿದ್ದಾರೆ. ಫಾದರ್ ಚರ್ಚ್ನಲ್ಲಿ ಇಲ್ಲದ ವೇಳೆ ಈ ದಾಳಿ ನಡೆದಿದೆ .
ಕಾಣಿಕೆ ಪೆಟ್ಟಿಗೆ ಕಳ್ಳತನ
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ನಂದಿನಿ ಪರಿಶೀಲನೆ ನಡೆಸಿದರು. ಪರಿಶೀಲನೆ ಬಳಿಕ ಮಾತನಾಡಿರುವ ಎಸ್ಪಿ ಬಿ.ಎನ್.ನಂದಿನಿ, ದುಷ್ಕರ್ಮಿಗಳು ಚರ್ಚ್ ಒಳಗೆ ನುಗ್ಗಿ ಕಾಣಿಕೆ ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: Udupi: ಮಕ್ಕಳ ಎದುರೇ ಕುಡಿದು ಮಲಗಿದ ಶಿಕ್ಷಕ, ಯಾವುದೇ ಕ್ರಮ ಕೈಗೊಳ್ಳದ ಬಿಇಓ
ಎಲ್ಲಾ ಆಯಾಮದಲ್ಲಿಯೂ ತನಿಖೆ
ಬಾಲ ಏಸುವಿನ ಪ್ರತಿಮೆಗೆ ಹಾನಿಯಾಗಿರೋದು ಕಂಡು ಬಂದಿದೆ. ಮೇಲ್ನೋಟಕ್ಕೆ ಇದೊಂದು ಕಳ್ಳತನ ಪ್ರಕರಣ ಅಂತ ಕಂಡು ಬಂದರೂ ಎಲ್ಲಾ ಆಯಾಮಾದಲ್ಲಿಯೂ ತನಿಖೆ ಮಾಡಲಾಗುವುದು. ಎರಡು ದಿನಗಳ ಹಿಂದೆ ಪಿರಿಯಾಪಟ್ಟಣದಲ್ಲಿ ಮನೆಗಳ್ಳತನದ ಪ್ರಕರಣ ದಾಖಲಾಗಿತ್ತು ಎಂದು ಬಿ.ಎನ್.ನಂದಿನಿ ಹೇಳಿದ್ದಾರೆ.
ಅಧಿಕಾರಿಗೆ ಕೋರೆ ತರಾಟೆ
ಬೆಳಗಾವಿಯಲ್ಲಿ ಸಿಎಂ ಬೊಮ್ಮಾಯಿ ನಿನ್ನೆ ಕನ್ನಡ ಭವನ ಉದ್ಘಾಟನೆ ಮಾಡಿದ್ರು. ಆದ್ರೆ ಅದಕ್ಕೂ ಮುನ್ನ ಅಧಿಕಾರಿಗಳ ನಡುವೆ ಕಿತ್ತಾಟ ನಡೆದಿದ್ದು, ಇಲಾಖೆ ಉಪನಿರ್ದೇಶಕರನ್ನು ಹೊರಗೆ ಕಳುಹಿಸಲಾಗಿದೆ. ಇದೇ ಸಂದರ್ಭದಲ್ಲಿ ಮಾಜಿ ಸಂಸದ ಪ್ರಭಾಕರ್ ಕೋರೆ, ಮಹಿಳಾ ಅಧಿಕಾರಿಗೆ ಅವಮಾನಿಸಿದ್ರಂತೆ. ಕನ್ನಡ ಭವನ ನಿರ್ವಹಣೆಯನ್ನ ಇಲಾಖೆಗೆ ಕೊಡಿ ಅಂತ ವಿದ್ಯಾವತಿ ಭಜಂತ್ರಿ ಕೇಳಿದ್ದರಂತೆ.
ಕನ್ನಡ-ಸಂಸ್ಕೃತಿ ಇಲಾಖೆಯಿಂದ ಕನ್ನಡ ಭವನ ನಿರ್ಮಾಣವಾಗಿದ್ದು, ಇಲಾಖೆ ನಾಮಫಲಕ ಹಾಕಲು ಆಗ್ರಹಿಸಿದ್ರಂತೆ. ಇದೇ ಕಾರಣಕ್ಕೆ ವಿದ್ಯಾವತಿ ಭಜಂತ್ರಿಗೆ ಪ್ರಭಾಕರ್ ಕೋರೆ ತೀವ್ರ ತರಾಟೆ ತೆಗೆದುಕೊಂಡಿದ್ದಾರೆ. ಅಷ್ಟಕ್ಕೆ ಸುಮ್ಮನಾಗದೇ ಅಧಿಕಾರಿಯನ್ನ ಹೊರಕಳುಹಿಸಿದ್ದಾರೆ.
ಲಂಚಬಾಕ ಗ್ರಾಮಲೆಕ್ಕಿಗ
ಕಂದಾಯ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬೆಳಕಿಗೆ ಬಂದಿದೆ. ರಾಯಚೂರಿನಲ್ಲಿ ಅಧಿಕಾರಿಗಳು ಗ್ರಾಮ ಮಟ್ಟದಲ್ಲೇ ರೈತರ ರಕ್ತ ಹೀರುತ್ತಿದ್ದಾರೆ.
ಲಿಂಗಸಗೂರು ತಾಲೂಕಿನ ಮುದಗಲ್ನ ಗ್ರಾಮ ಲೆಕ್ಕಿಗ, ಪಹಣಿ ತಿದ್ದುಪಡಿಗೆ ನಾಲ್ವರ ಬಳಿ ತಲಾ 5 ಸಾವಿರ ರೂಪಾಯಿ ವಸೂಲಿ ಮಾಡಿದ್ದಾನೆ. 5000ಕ್ಕಿಂತ ಕಡಿಮೆ ಹಣ ಕೊಟ್ರೆ ನನಗೆ ಏನೂ ಉಳಿಯೋದಿಲ್ಲ ಎಂದಿದ್ದಾನೆ. ಆ ದೃಶ್ಯವನ್ನು ಸ್ಥಳೀಯರು ಸೆರೆ ಹಿಡಿದಿದ್ದಾರೆ.
ಎದೆಗೆ ನುಗ್ಗಿದ ರಾಡ್
ಫ್ಲೈಓವರ್ ಕಾಮಗಾರಿಯ ವೇಳೆ ಕಬ್ಬಿಣದ ರಾಡ್ ಕಾರ್ಮಿಕನ ಎದೆಯಲ್ಲಿ ತೂರಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹೊಸೂರು ಸರ್ಕಲ್ ಬಳಿಯಲ್ಲಿ ಪ್ಲೈ ಓವರ್ ಕಾಮಗಾರಿ ನಡೆಯುತ್ತಿದ್ದು, ಪ್ಲೈಓವರ್ ಮೇಲಿಂದ ಬಿದ್ದ ಕಬ್ಬಿಣದ ರಾಡ್, ಕಾರ್ಮಿಕನ ಬಲಗಡೆಯ ಎದೆ ಭಾಗದಲ್ಲಿ ಸಿಲುಕಿದೆ. ಕೋಲ್ಕತ್ತಾ ಮೂಲದ ಅಬ್ದುಲ್ ಗಂಭೀರವಾಗಿ ಗಾಯವಾಗಿದ್ದು, ಕಾರ್ಮಿಕನ ಸ್ಥಿತಿ ಗಂಭೀರವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ