Elizabeth II: ಬ್ರಿಟನ್ ರಾಣಿಗೆ ಬೆಂಗಳೂರು ನಂಟು! ಲಾಲ್‌ಬಾಗ್‌ನಲ್ಲಿ ಎಲಿಜಬೆತ್‌ ನೆಟ್ಟ ಮರ ಈಗ ಹೇಗಿದೆ ನೋಡಿ

ರಾಣಿ ಬೆಂಗಳೂರಿಗೆ ಭೇಟಿ ನೀಡಿದ್ದಾಗ 16ರ ಹರೆಯದವರಾಗಿದ್ದ 77ರ ಗಾಂಧಿವಾದಿ ಸೋಮಶೇಖರನ್ ಎಲಿಜಬೆತ್ ಬೆಂಗಳೂರಿಗೆ ಭೇಟಿ ನೀಡಿದ ಕ್ಷಣಗಳನ್ನು ನೆನಪಿಸಿಕೊಂಡರು. ಅವರು ಆಗಮಿಸುವ ರಸ್ತೆಗಳಿಗೆ ಡಾಂಬರೀಕರಣ ಮಾಡಲಾಯಿತು ಅಂತೆಯೇ ಕೆಲವು ರಸ್ತೆಗಳ ವಿಸ್ತರಣೆ ಕೂಡ ನಡೆಯಿತು.

ಬೆಂಗಳೂರಿಗೆ ಬಂದ ರಾಣಿ ಎಲಿಜಬೆತ್ II

ಬೆಂಗಳೂರಿಗೆ ಬಂದ ರಾಣಿ ಎಲಿಜಬೆತ್ II

  • Share this:
ಬ್ರಿಟಿಷ್ ರಾಜಮನೆತನದ ರಾಣಿ ಎಲಿಜಬೆತ್ II (Queen Elizabeth II) 1961 ರಲ್ಲಿ ಭಾರತದ ತನ್ನ ಮೊದಲ ಭೇಟಿಯ ಸಮಯದಲ್ಲಿ ಬೆಂಗಳೂರಿನ ಲಾಲ್‌ಬಾಗ್ ಉದ್ಯಾನವನದಲ್ಲಿ (Lalbagh Park) ಕ್ರಿಸ್ಮಸ್ ಟ್ರೀಯನ್ನು (Christmas tree) ನೆಟ್ಟಿದ್ದರು. 60 ವರ್ಷಗಳ ನಂತರ ಕೂಡ ಕ್ರಿಸ್ಮಸ್ ಟ್ರೀ 60 ಅಡಿ ಎತ್ತರದಲ್ಲಿದೆ. ಫೆಬ್ರವರಿ 21, 1961 ರಂದು, ರಾಣಿ ಎಲಿಜಬೆತ್ II ಲಾಲ್‌ಬಾಗ್ ಸೇರಿದಂತೆ ಬೆಂಗಳೂರಿನ (Bengaluru) ಹಲವಾರು ಸ್ಥಳಗಳಿಗೆ ಭೇಟಿ ನೀಡಿದ್ದು, ಬೆಂಗಳೂರಿನಿಂದ 60 ಕಿಮೀ ದೂರದಲ್ಲಿರುವ ನಂದಿ ಬೆಟ್ಟದಲ್ಲಿ ರಾಣಿ (Queen) ತಂಗಿದ್ದರು. ಅಂದಿನ ರಾಜ್ಯಪಾಲ ಹಾಗೂ ಮೈಸೂರು (Mysore) ಸಂಸ್ಥಾನದ ರಾಜ ಜಯಚಾಮರಾಜ ಒಡೆಯರ್ ರಾಣಿಯನ್ನು ಭವ್ಯ ಸ್ವಾಗತಿಸಿದ್ದರು. ಅವರ ಜೊತೆಗೆ ಆಗಿನ ಮುಖ್ಯಮಂತ್ರಿ ಬಿ ಡಿ ಜತ್ತಿ ಮತ್ತು ಹಲವಾರು ಅಧಿಕಾರಿಗಳು ಉಪಸ್ಥಿತರಿದ್ದರು.

ತೆರೆದ ಕಾರಿನಲ್ಲಿ ರಾಣಿಯ ಆಗಮನ
HAL ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಣಿಯನ್ನು ತೆರೆದ ಕಾರಿನಲ್ಲಿ ಕರೆದೊಯ್ಯಲಾಯಿತು ಅಂತೆಯೇ ರಾಣಿಯನ್ನು ನೋಡಲು ಸಾರ್ವಜನಿಕರು ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದರು. ಬೈಬಲ್ ಸೊಸೈಟಿ ಆಫ್ ಇಂಡಿಯಾದಿಂದ ಆಕೆಯನ್ನು ಸನ್ಮಾನಿಸಲಾಯಿತು. ರಾಣಿ ಎಲಿಜಬೆತ್ II ಮತ್ತು ಪ್ರಿನ್ಸ್ ಫಿಲಿಪ್ ಸಹಾಯಕ ಪ್ರಾದೇಶಿಕ ಸೇವೆಗೆ ಭೇಟಿ ನೀಡಿದಾಗ, ಅವರಿಗೆ ಹಿಂದಿ ಭಾಷೆಯಲ್ಲಿರುವ ಬೈಬಲ್ ಪ್ರತಿಯನ್ನು ನೀಡಲಾಯಿತು.

ರಾಣಿ ಬೆಂಗಳೂರಿಗೆ ಭೇಟಿ ನೀಡಿದ ಸಮಯ ನೆನಪಿಸಿಕೊಂಡ ಗಾಂಧಿವಾದಿ ಸೋಮಶೇಖರನ್
ರಾಣಿ ಬೆಂಗಳೂರಿಗೆ ಭೇಟಿ ನೀಡಿದ್ದಾಗ 16 ರ ಹರೆಯದವರಾಗಿದ್ದ 77ರ ಗಾಂಧಿವಾದಿ ಸೋಮಶೇಖರನ್ ಎಲಿಜಬೆತ್ ಬೆಂಗಳೂರಿಗೆ ಭೇಟಿ ನೀಡಿದ ಕ್ಷಣಗಳನ್ನು ನೆನಪಿಸಿಕೊಂಡರು. ಅವರು ಆಗಮಿಸುವ ರಸ್ತೆಗಳಿಗೆ ಡಾಂಬರೀಕರಣ ಮಾಡಲಾಯಿತು ಅಂತೆಯೇ ಕೆಲವು ರಸ್ತೆಗಳ ವಿಸ್ತರಣೆ ಕೂಡ ನಡೆಯಿತು. MG ರೋಡ್‌ನಲ್ಲಿ ರಾಣಿಯನ್ನು ನೋಡಲು ಜನಸಾಗರವೇ ನೆರೆದಿತ್ತು. ಸಂಪೂರ್ಣ ನಗರವೇ ರಾಣಿ ಹಾಗೂ ಅವರ ರಾಜವೈಭವವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ನೆರೆದಿತ್ತು ಎಂದು ಸೋಮಶೇಖರನ್ ನೆನಪಿಸಿಕೊಳ್ಳುತ್ತಾರೆ. ವಿಧಾನಸೌಧ ಇರುವ ಅಂಬೇಡ್ಕರ್ ರಸ್ತೆಯಲ್ಲಿಯೂ ರಾಣಿಯೂ ಸವಾರಿ ಮಾಡಿದ್ದಾರೆ.ಇದನ್ನೂ ಓದಿ: Queen Elizabeth ll: ಚರ್ಚಿಲ್​ರಿಂದ ಲಿಜ್​ ಟ್ರಸ್​ವರೆಗೆ, 15 ಪ್ರಧಾನಿಗಳಿಗೆ ಪ್ರಮಾಣವಚನ ಬೋಧಿಸಿದ್ದಾರೆ ರಾಣಿ ಎಲಿಜಬೆತ್!

ರಾಣಿ ಎಲಿಜಬೆತ್ ಆಗಮಿಸಿದ ರಸ್ತೆಯ ಇಕ್ಕೆಲಗಳಲ್ಲೂ ಜನಸಾಗರ ತುಂಬಿ ತುಳುಕುತ್ತಿತ್ತು. ಲಾಲ್‌ಬಾಗ್ ತಲುಪಲು ಅವರು ಎಮ್‌ಜಿ ರೋಡ್ ಹಾಗೂ ಇತರ ಕೆಲವು ರಸ್ತೆಗಳಲ್ಲಿ ಪ್ರಯಾಣಿಸಿದರು. ತೆರೆದ ಕಾರಿನಲ್ಲಿ ಆಸೀನರಾಗಿದ್ದ ರಾಣಿ, ನೆರೆದಿದ್ದ ಜನಸ್ತೋಮಕ್ಕೆ ಕೈಬೀಸಿ ವಂದಿಸಿದರು. ರಾಣಿ ಜನರತ್ತ ಕೈಬೀಸಬೇಕೆಂದೇ ಪ್ರತಿ ಜಂಕ್ಷನ್‌ನಲ್ಲಿಯೂ ಕಾರನ್ನು ನಿಲ್ಲಿಸಲಾಗುತ್ತಿತ್ತು ಎಂಬುದು 77 ರ ಸೋಮಶೇಖರ್ ನೆನಪಿಸಿಕೊಂಡ ಸ್ಮರಣೆಗಳಾಗಿವೆ.

ಲಾಲ್‌ಬಾಗ್ ಉದ್ಯಾನವನದಲ್ಲಿ ಕ್ರಿಸ್ಮಸ್ ಟ್ರೀ ನೆಟ್ಟ ರಾಣಿ ಎಲಿಜಬೆತ್ II
ಲಾಲ್‌ಬಾಗ್‌ಗೆ ಭೇಟಿ ನೀಡಿದ ರಾಣಿ, 1760 ರಲ್ಲಿ ಹೈದರಾಲಿ ನಿರ್ಮಿಸಿದ ಉದ್ಯಾನವನಕ್ಕೆ ಭೇಟಿ ನೀಡಿದ ನೆನಪಿಗಾಗಿ ಕ್ರಿಸ್ಮಸ್ ಟ್ರೀ ನೆಟ್ಟರು. ಲಾಲ್‌ಬಾಗ್ ವಾತಾವರಣ ರಾಣಿಗೆ ತುಂಬಾ ಪ್ರಿಯವಾಗಿತ್ತು ಆ ಖುಷಿಗಾಗಿ ಅವರು ಸಸಿ ನೆಟ್ಟರು ಎಂದು ತೋಟಗಾರಿಕಾ ಇಲಾಖೆ ಜಂಟಿ ನಿರ್ದೇಶಕ (ಉದ್ಯಾನಗಳು ಮತ್ತು ಉದ್ಯಾನ) ಜಗದೀಶ್ ಎಂ. ಹೇಳಿದರು. ಅವರು ನೆಟ್ಟ ಕ್ರಿಸ್ಮಸ್ ಟ್ರೀ ಕಳೆದ 61 ವರ್ಷಗಳಲ್ಲಿ ಕನಿಷ್ಠ 60 ಅಡಿ ಬೆಳೆದಿದೆ.

ಇದನ್ನೂ ಓದಿ:  Prince Charles: 70 ವರ್ಷಗಳ ಕಾಯುವಿಕೆ ಕೊನೆಗೂ ಅಂತ್ಯ, ರಾಜನಾದ ಪ್ರಿನ್ಸ್ ಚಾರ್ಲ್ಸ್!ಸ್ವಲ್ಪ ದೂರದಲ್ಲಿ, ಪಾಕಿಸ್ತಾನದ ಸ್ವಾತಂತ್ರ್ಯ ಹೋರಾಟಗಾರ ಅಬ್ದುಲ್ ಗಫಾರ್ ಖಾನ್ ಅವರು ನೆಟ್ಟ ಮತ್ತೊಂದು ಕ್ರಿಸ್ಮಸ್ ಟ್ರೀ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಭೇಟಿ ನೀಡಿದ್ದಾಗ ನೆಟ್ಟ ಸರಕಾ ಅಸೋಕಾ ಮರವನ್ನು ನೆಟ್ಟಿದ್ದರು ಎಂದು ಜಗದೀಶ್ ಹೇಳಿದರು. ರಾಣಿ ಎಲಿಜಬೆತ್ ಅವರು ಗಿಡ ನೆಡುವಾಗ ತೋಟಗಾರಿಕೆ ಇಲಾಖೆ ನಿರ್ದೇಶಕರಾದ ಎಂ ಎಚ್ ಮರಿಗೌಡ ಅವರು ಜೊತೆಗಿದ್ದಿದ್ದು ಲಾಲ್ ಬಾಗ್ ಇತಿಹಾಸದಲ್ಲಿ ದಾಖಲಾಗಿದೆ ಎಂದು ಜಗದೀಶ ಹೇಳಿದರು. ರಾಣಿ ಎಲಿಜಬೆತ್ ಅವರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್‌ಗೆ ಕೂಡ ಭೇಟಿ ನೀಡಿದ್ದರು.
Published by:Ashwini Prabhu
First published: