• Home
  • »
  • News
  • »
  • state
  • »
  • Bengaluru: ಬೆಂಗಳೂರಿನ ಮಾರ್ಥೋಮಾ ಸಿರಿಯನ್ ಚರ್ಚ್​ನಲ್ಲಿ ಪರಿಸರ ಸ್ನೇಹಿ ಕ್ರಿಸ್‌ಮಸ್‌ ಟ್ರೀ!

Bengaluru: ಬೆಂಗಳೂರಿನ ಮಾರ್ಥೋಮಾ ಸಿರಿಯನ್ ಚರ್ಚ್​ನಲ್ಲಿ ಪರಿಸರ ಸ್ನೇಹಿ ಕ್ರಿಸ್‌ಮಸ್‌ ಟ್ರೀ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಾರ್ಥೋಮಾ ಸಿರಿಯನ್ ಚರ್ಚ್‌ ಸಿಬ್ಬಂದಿಗಳು ಕ್ರಿಸ್‌ಮಸ್ ಆಚರಣೆಗೆ ಒಂದು ತಿಂಗಳ ಮೊದಲು ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದರು.

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

ಮರುಬಳಕೆ ಪ್ರಸ್ತುತ ಜಗತ್ತಿಗೆ ಅಗತ್ಯವಾಗಿರುವ ಮಾರ್ಗ. ತ್ಯಾಜ್ಯ ಮರುಬಳಕೆ ಎನ್ನುವುದು ಪರಿಸರಕ್ಕೆ ನಾವು ನೀಡುವ ದೊಡ್ಡ ಕೊಡುಗೆ ಎನ್ನಬಹುದು. ಹಲವು ಸಂಘಸಂಸ್ಥೆಗಳು ಮರುಬಳಕೆ ವಸ್ತುಗಳಿಂದ ಮಾಡುವ ಅಲಂಕಾರ ಅಥವಾ ಅವುಗಳನ್ನು ಬಳಸಿಕೊಳ್ಳುವ ಮಾರ್ಗಗಳಿಂದ ಅನೇಕ ಬಾರಿ ಉದಾಹರಣೆಯಾಗಿ ನಿಲ್ಲುತ್ತವೆ. ಅಂತೆಯೇ ಸಿಲಿಕಾನ್‌ ಸಿಟಿ ಬೆಂಗಳೂರಿನ (Bengaluru News) ಚರ್ಚ್‌ವೊಂದು ಕ್ರಿಸ್‌ಮಸ್‌ ಹಬ್ಬದ (Christmas 2022) ಅಲಂಕಾರವನ್ನು ಸಹ ಹೀಗೆ ಮರುಬಳಕೆ ಮಾಡಬಹುದಾದ ವಸ್ತುಗಳಿಂದ ಮಾಡಿ ಎಲ್ಲರಿಗೂ ಮಾದರಿಯಾಗಿದೆ.


ಬೆಂಗಳೂರಿನ ಮಾರ್ಥೋಮಾ ಸಿರಿಯನ್ ಚರ್ಚ್‌ ಪ್ರತಿವರ್ಷ ಇಂತದ್ದೇ ಒಂದು ಹೊಸ ಕಲ್ಪನೆಯನ್ನು ಹೊರತರುತ್ತದೆ. ಈ ವರ್ಷವೂ ಸಹ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಿ ಕ್ರಿಸ್‌ಮಸ್‌ ಟ್ರೀಗಳನ್ನು ರಚಿಸಿದ್ದಾರೆ.


25-ಅಡಿ ಕ್ರಿಸ್‌ಮಸ್‌ ಮರಕ್ಕೆ ರೀಸೈಕ್ಲಿಂಗ್‌ ಮಾಡಬಹುದಾದ ಸಿಡಿಗಳು ಮತ್ತು ಬಿದಿರಿನ ಪಟ್ಟಿಗಳನ್ನು ಬಳಸಿಕೊಂಡು ಅದ್ಭುತವಾಗಿ ಅಲಂಕಾರ ಮಾಡಿದ್ದಾರೆ.


ಕಳೆದ ಹತ್ತಾರು ವರ್ಷಗಳಿಂದ ಇದೇ ರೀತಿಯ ಆಚರಣೆ
ಕಳೆದ 14 ವರ್ಷಗಳಿಂದ ಚರ್ಚ್‌ನಲ್ಲಿ ಪರಿಸರ ಸ್ನೇಹಿಯಾಗಿ ಹಬ್ಬವನ್ನು ಆಚರಿಸಲಾಗುತ್ತಿದೆ. ಚರ್ಚ್‌ ಆವರಣವನ್ನು ಬಾಟಲಿಗಳು, ಹಳೆಯ ಟೈರುಗಳು, ಪೆಟ್ಟಿಗೆಗಳು, ಚೂರುಚೂರು ಪೇಪರ್, ಸ್ಟ್ರಾಗಳು ಮತ್ತು ತೆಂಗಿನ ಚಿಪ್ಪುಗಳಂತಹ ಮರುಬಳಕೆಯ ವಸ್ತುಗಳಿಂದ ಅಲಂಕರಿಸಲಾಗಿದೆ.


ಸುಸ್ಥಿರತೆಯ ಸಂದೇಶ ಸಾರಿದ ಮಾರ್ ಥೋಮಾ ಸಿರಿಯನ್ ಚರ್ಚ್‌
ಚರ್ಚ್‌ ಕಳೆದ ಕೆಲ ವರ್ಷಗಳಿಂದಲೂ ಇದೇ ರೀತಿ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಮಾತ್ರ ಅಲಂಕಾರಕ್ಕೆ ಬಳಸಿಕೊಳ್ಳುತ್ತಿದೆ. ಪರಿಸರ ಸ್ನೇಹಿ ಮತ್ತು ಸ್ಥಳೀಯವಾಗಿ ಸಿಗುವ ಕೆಲ ಉತ್ಪನ್ನಗಳನ್ನು ಬಳಸುವ ಮೂಲಕ ಚರ್ಚ್‌ ಮುಖ್ಯಸ್ಥರು ಸುಸ್ಥಿರತೆಯ ಸಂದೇಶವನ್ನು ಸಾರುತ್ತಿದ್ದಾರೆ.


ತಂಡದ ಮುಖ್ಯಸ್ಥ ಡೇನಿಯಲ್ ಥಾಮಸ್ ಹೇಳೋದು ಹೀಗೆ
ಕ್ರಿಸ್‌ಮಸ್‌ ಟ್ರೀಯ ಈ ಅದ್ಭುತ ಅಲಂಕಾರದ ಬಗ್ಗೆ ಮಾತನಾಡಿದ ಕ್ರಿಸ್ಮಸ್ ಡೆಕೋರೇಶನ್ ತಂಡದ ಮುಖ್ಯಸ್ಥ ಡೇನಿಯಲ್ ಥಾಮಸ್, "ಪರಿಸರ ಸ್ನೇಹಿಯಾಗಿರುವುದು ಈಗ ಜಾಗತಿಕವಾಗಿ ಚರ್ಚೆಯ ವಿಷಯವಾಗಿದ್ದರೂ, ಕ್ರಿಸ್‌ಮಸ್‌ ಅಲಂಕಾರಗಳನ್ನು ಹೇಗೆ ಮೂಲವಾಗಿ ಪಡೆಯುವುದು ಎಂಬುದರ ಕುರಿತು ನಾವು ಮಾತನಾಡುತ್ತಿದ್ದಾಗ ಈ ಕಲ್ಪನೆಯು ನಮಗೆ ಬಂತು" ಎಂದು ತಿಳಿಸಿದ್ದಾರೆ.


"ಕೇವಲ ಮರವನ್ನು ಖರೀದಿಸಿ ಅದನ್ನು ಅಲಂಕರಿಸುವ ಬದಲು, ಮರವನ್ನೇ ರಚಿಸಿದರೆ ಹೇಗೆ ಎಂಬ ಕಲ್ಪನೆ ಬಂತು. ಹೀಗಾಗಿ ನಾವೇ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಬಳಸಿ ಕ್ರಿಸ್‌ಮಸ್‌ ಅಲಂಕಾರ ಮಾಡಿದ್ದೇವೆ" ಎಂದು ವಿವರಿಸಿದ್ದಾರೆ.


ಸಿಡಿ, ಬಿದಿರಿನ ರಟ್ಟಿನ ಬಾಕ್ಸ್ ಬಳಕೆ
ಹಳೆಯ ವಿಡಿಯೋ ಟೇಪ್‌ಗಳು, ಬಳಸಿದ ಪ್ಲಾಸ್ಟಿಕ್ ಬಾಟಲಿಗಳು ಮತ್ತು ರಟ್ಟಿನ ಪೆಟ್ಟಿಗೆಗಳಂತಹ ತ್ಯಾಜ್ಯಗಳನ್ನು ಬಳಸಿ ಚರ್ಚ್‌ನ ಅಲಂಕಾರ ಮಾಡಲಾಗಿದೆ. ಪ್ರತಿವರ್ಷವೂ ಬೆಂಗಳೂರಿನ ಮಾರ್ಥೋಮಾ ಸಿರಿಯನ್ ಕ್ರಿಸ್‌ಮಸ್ ಟ್ರೀ ಅಲಂಕಾರಗಳು ಮತ್ತು ಇತರ ಅಲಂಕಾರಗಳಲ್ಲಿ ಎಲ್ಲರ ಗಮನ ಸೆಳೆದಿದೆ.


ಪ್ರತಿವರ್ಷ ಈ ರೀತಿಯ ಕಲ್ಪನೆಯೊಂದಿಗೆ ಅಲಂಕಾರ ಮಾಡುವುದು ಸುಲಭದ ಮಾತಲ್ಲ, ಈ ಮಾರ್ಗದಲ್ಲಿ ಹಲವಾರು ಅಡೆತಡೆಗಳು ಬರುತ್ತವೆ ಎಂದು ಡೇನಿಯಲ್ ಥಾಮಸ್ ಹೇಳಿದರು.


ಇದನ್ನೂ ಓದಿ: Karnataka Covid Guidelines : ಹೊಸ ವರ್ಷಾಚರಣೆ ಹೇಗಿರಬೇಕು? ಸರ್ಕಾರಕ್ಕೆ ಅಷ್ಟ ಸೂತ್ರ ನೀಡಿದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ


ಈ ವರ್ಷವೂ ಪರಿಸರ ಸ್ನೇಹಿ ಮರವನ್ನು ತಯಾರಿಸುವುದು ಭಿನ್ನವಾಗಿರಲಿಲ್ಲ. ಈ ವರ್ಷ, ನಾವು ಮರವನ್ನು ರಚಿಸಲು ಮೊದಲಿಗೆ ರಾಟೆ ಬಳಸಿದೆವು ಆದರೆ ಸ್ವಲ್ಪ ಸಮಯದಲ್ಲೇ ಅದು ಕೆಳಗೆ ಬಿತ್ತು. ಹೀಗೆ ಕ್ರಿಸ್‌ಮಸ್‌ ಟ್ರೀ ಸ್ವತಃ ನಾವೇ ರಚಿಸುವುದು ಎಂದರೆ ಸ್ವಲ್ಪ ಕಷ್ಟದ ಮಾತಾಗಿತ್ತು. ಆದರೆ ಎಲ್ಲಾ ಸವಾಲುಗಳಿಗೆ ಒಂದೊಳ್ಳೆ ಪ್ರತಿಫಲ ಸಿಕ್ಕಿದೆ ಎಂದು ಅವರು ಹೇಳಿದರು.


ಇದನ್ನೂ ಓದಿ: Pruthvi Ambaar: ಉತ್ತರ ಕನ್ನಡದಲ್ಲಿ ಪೃಥ್ವಿ ಅಂಬಾರ್! ಏನ್ಮಾಡ್ತಿದ್ದಾರೆ ನೋಡಿ


ಮಾರ್ಥೋಮಾ ಸಿರಿಯನ್ ಚರ್ಚ್‌ ಸಿಬ್ಬಂದಿಗಳು ಕ್ರಿಸ್‌ಮಸ್ ಆಚರಣೆಗೆ ಒಂದು ತಿಂಗಳ ಮೊದಲು ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದರು. ಬಾಂಬೂ ಬಜಾರ್ ಬಳಿ ಬಿದಿರಿನ ಅಲಂಕಾರವನ್ನು ಮಾರಾಟ ಮಾಡುವ ಕುರುಡು ಬುಟ್ಟಿ ತಯಾರಕ ಸತೀಶ್ ಕುಮಾರ್ ಅವರಿಂದ ಪಟ್ಟಿಗಳನ್ನು ಖರೀದಿಸಿದ್ದು, ಚರ್ಚ್ ಸದಸ್ಯರಿಂದ ಸಿಡಿಗಳನ್ನು ಸಂಗ್ರಹಿಸಿ ಕ್ರಿಸ್‌ಮಸ್‌ ಟ್ರೀ ರಚಿಸಲಾಗಿದೆ.

Published by:ಗುರುಗಣೇಶ ಡಬ್ಗುಳಿ
First published: