ಸಿಎಎ ಕಾನೂನಿಗೆ ಕ್ರೈಸ್ತರ ಬೆಂಬಲ ಇಲ್ಲ; ಬೆಂಗಳೂರಿನ ಪ್ರಧಾನ ಬಿಷಪ್ ಪೀಟರ್ ಮಚಾದೋ ಸ್ಪಷ್ಟನೆ

ವಲಸಿಗರಿಗೆ ಧರ್ಮದ ಆಧಾರ ಮೇಲೆ ಪೌರತ್ವ ನೀಡುವ ಬದಲು ವ್ಯಯಕ್ತಿಕ ಅರ್ಹತೆಯ ಆಧಾರದ ಮೇಲೆ ಪೌರತ್ವ ನೀಡಬೇಕು. ಧಾರ್ಮಿಕ ದೃಷ್ಟಿಯಿಂದ ಸರ್ಕಾರದ ಈ ನಿಲುವು ಕಾನಿಹಾರಕವಾಗಿದ್ದು, ಸಿಎಎ ವಿರೋಧಿಸುವವರ ಜೊತೆಗೆ ಸಂವಾದಕ್ಕೆ ಮುಂದಾಗಬೇಕು ಎಂದು ಬಿಷಪ್ ಪೀಟರ್ ಮಚಾದೋ ಸರ್ಕಾರವನ್ನು ವಿನಂತಿಸಿಕೊಂಡಿದ್ದಾರೆ.

MAshok Kumar | news18-kannada
Updated:January 9, 2020, 1:26 PM IST
ಸಿಎಎ ಕಾನೂನಿಗೆ ಕ್ರೈಸ್ತರ ಬೆಂಬಲ ಇಲ್ಲ; ಬೆಂಗಳೂರಿನ ಪ್ರಧಾನ ಬಿಷಪ್ ಪೀಟರ್ ಮಚಾದೋ ಸ್ಪಷ್ಟನೆ
ಬೆಂಗಳೂರು ಬಿಷಪ್ ಪೀಟರ್​ ಮಚಾದೋ.
  • Share this:
ಬೆಂಗಳೂರು (ಜನವರಿ 09); ಸ್ವಚ್ಚ ಭಾರತ ಸೇರಿದಂತೆ ಕೇಂದ್ರ ಸರ್ಕಾರದ ಹಲವಾರು ಜನಪರ ಯೋಜನೆಗಳಿಗೆ ನಾವು ಬೆಂಬಲ ಸೂಚಿಸಿದ್ದೇವೆ. ಆದರೆ, ವಿವಾದಾತ್ಮಕ 'ಸಿಎಎ' ಕಾನೂನಿಗೆ ಕ್ರೈಸ್ತ ಸಮುದಾಯದ ಬೆಂಬಲ ಇಲ್ಲ ಎಂದು ಬೆಂಗಳೂರು ರೋಮನ್ ಕ್ಯಾಥೋಲಿಕ್ ಚರ್ಚ್​ ಒಕ್ಕೂಟದ ಪ್ರಧಾನ ಬಿಷಪ್ ಪೀಟರ್ ಮಚಾದೋ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಬಿಷಪ್ ಪೀಟರ್ ಮಚಾದೋ, “ಕ್ರೈಸ್ತ ಸಮುದಾಯದ ಸಿಎಸ್ಐ, ಮೆಥೋಡಿಸ್ಟ್ ಸೇರಿದಂತೆ ವಿವಿಧ ಪಂಗಡಗಳನ್ನು ನಾವು ಒಂದುಗೂಡಿಸಿದ್ದೇವೆ. ಇಂದು ನಾವು ರಾಜ್ಯಪಾಲರನ್ನು ಭೇಟಿ ಮಾಡಲಿದ್ದು, ಆ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ 'ಸಿಎಎ' ಕಾನೂನಿನ ಕುರಿತ ನಮ್ಮ ನಿಲುವನ್ನು ರವಾನಿಸಲಿದ್ದೇವೆ” ಎಂದಿದ್ದಾರೆ.

“ಡಿಸೆಂಬರ್ 12 ರಂದು ನೂತನ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಂಸತ್ ಅಂಗೀಕರಿಸಿದೆ. ಈ ಕಾಯ್ದೆಯಲ್ಲಿ ಅಕ್ರಮ ಸಿಖ್, ಪಾರ್ಸಿ, ಕ್ರಿಶ್ಚಿಯನ್ ಇತ್ಯಾದಿ ಪ್ರಜೆಗಳನ್ನು ದೇಶದ ನಾಗರಿಕರನ್ನಾಗಿ ಮಾಡುವ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದೆ. ಆದರೆ ಮೇಲಿನ ಪಟ್ಟಿಯಲ್ಲಿಲ್ಲದ ಧರ್ಮದವರು ನೆರೆಯ 3 ದೇಶಗಳಲ್ಲಿ ಉಳಿದಿದ್ದಾರೆ ಅವರಿಗೇಕೆ ಪೌರತ್ವ ಇಲ್ಲ?" ಎಂದು ಪ್ರಶ್ನಿಸಿದ್ದಾರೆ.

"ಸಿಎಎ ಕಾನೂನು ಅಸ್ಸಾಂನಲ್ಲಿ ಹಿಂಸಾಚಾರಕ್ಕೆ ಕಾರಣವಾಗುವುದರ ಜೊತೆಗೆ ಸಮಾಜದಲ್ಲಿ ಭಾರಿ ಕೋಲಾಹಲವನ್ನು ಉಂಟುಮಾಡಿದೆ. ಅಲ್ಲದೆ, ಈ ಬಿಸಿ ಇದೀಗ ಇತರ ರಾಜ್ಯಗಳಿಗೂ ಹರಡುತ್ತಿದೆ. ಕ್ರಿಶ್ಚಿಯನ್ ಸಮುದಾಯದವರಾದ ನಾವು ಶಾಂತಿಪ್ರಿಯರಾಗಿದ್ದು, ಈ ಕಾರಣದಿಂದಾಗಿ ಸಿಎಎ ಕಾನೂನನ್ನು ವಿರೋಧಿಸುತ್ತೇವೆ” ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಅಲ್ಲದೆ, “ವಲಸಿಗರಿಗೆ ಧರ್ಮದ ಆಧಾರ ಮೇಲೆ ಪೌರತ್ವ ನೀಡುವ ಬದಲು ವ್ಯಯಕ್ತಿಕ ಅರ್ಹತೆಯ ಆಧಾರದ ಮೇಲೆ ಪೌರತ್ವ ನೀಡಬೇಕು. ಧಾರ್ಮಿಕ ದೃಷ್ಟಿಯಿಂದ ಸರ್ಕಾರದ ಈ ನಿಲುವು ಕಾನಿಹಾರಕವಾಗಿದ್ದು, ಸಿಎಎ ವಿರೋಧಿಸುವವರ ಜೊತೆಗೆ ಸಂವಾದಕ್ಕೆ ಮುಂದಾಗಬೇಕು” ಎಂದು ಕೇಂದ್ರ ಸರ್ಕಾರವನ್ನು ಅವರು ವಿನಂತಿಸಿಕೊಂಡಿದ್ದಾರೆ.

ಇದನ್ನೂ ಓದಿ : ಮೈಸೂರು ವಿವಿಯಲ್ಲಿ Free Kashmir ಘೋಷಣೆ: ಪೊಲೀಸರಿಂದ ಸ್ವಯಂಪ್ರೇರಿತ ದೂರು ದಾಖಲು
First published:January 9, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ