HOME » NEWS » State » CHOUKABAR PLACE IS LIBRARY NOW MINISTER GIVEN GOOD TIME PASS IDEA FOR DRIVERS HK

ಚೌಕಾಬಾರ ಜಾಗ ಇದೀಗ ವಾಚನಾಲಯ; ವಾಹನ ಚಾಲಕರ ಟೈಂಪಾಸ್​ಗೆ ಸಚಿವರಿಂದ ಒಂದೊಳ್ಳೆ ಐಡಿಯಾ

ಸಚಿವರ ನಿರ್ದೇಶನದಂತೆ ಗ್ರಂಥಾಲಯ ಇಲಾಖೆ ನಿರ್ದೇಶಕರು ಚಾಲಕರು ಚೌಕಾಬಾರ ಆಡುತ್ತಿದ್ದ ಸ್ಥಳಕ್ಕೆ ಪತ್ರಿಕೆಗಳನ್ನು ಪೂರೈಸಿದ್ದು, ಚಾಲಕರೆಲ್ಲ ಚೌಕಾಬಾರ ಆಟದ ಬದಲಿಗೆ ಪತ್ರಿಕೆ ಓದುವುದರಲ್ಲಿ ಮಗ್ನರಾಗಿದ್ದಾರೆ.

news18-kannada
Updated:September 17, 2020, 7:25 AM IST
ಚೌಕಾಬಾರ ಜಾಗ ಇದೀಗ ವಾಚನಾಲಯ; ವಾಹನ ಚಾಲಕರ ಟೈಂಪಾಸ್​ಗೆ ಸಚಿವರಿಂದ ಒಂದೊಳ್ಳೆ ಐಡಿಯಾ
ಪತ್ರಿಕೆಗಳನ್ನು ಓದುತ್ತಿರುವ ಚಾಲಕರು
  • Share this:
ಬೆಂಗಳೂರು(ಸೆಪ್ಟೆಂಬರ್​ 17): ರಾಜಧಾನಿ ಬೆಂಗಳೂರಿನಲ್ಲಿ ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳ ವಾಹನ ಚಾಲಕರಿಗೆ ಕಾಲ ಕಳೆಯುವುದೇ ಕಷ್ಟ! ಬೆಳಗ್ಗೆ ಕಚೇರಿಗೆ ಹೋಗುವ ಅಧಿಕಾರಿಗಳ ಬರುವುದು ಸಂಜೆಯವರೆಗೆ. ಅಲ್ಲಿಯ ವರೆಗೆ ಆ ವಾಹನಗಳ ಚಾಲಕರು ಟೈಮ್ ಪಾಸ್ ಮಾಡುವುದಕ್ಕೆ ವಿವಿಧ ರೀತಿ ಆಟ ಆಡುತ್ತಾರೆ. ಇದನ್ನು ಗಮನಿಸಿದ ಸಚಿವರು ಇವರಿಗೆ ಒಂದೊಳ್ಳೆ ಐಡಿಯಾ ಕೊಟ್ಟಿದ್ದಾರೆ. ಕೇವಲ ಐಡಿಯಾ ಮಾತ್ರವಲ್ಲ ಇದನ್ನು ಜಾರಿಗೊಳಿಸಿಯೂ ಸೈ ಎನಿಸಿಕೊಂಡಿದ್ದಾರೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಕಚೇರಿಗಳು, ನಿರ್ದೇಶನಾಲಯಗಳು, ಅಕಾಡೆಮಿಗಳಿರುವ ನಗರದ ಅಂಬೇಡ್ಕರ್ ವೀಧಿಯ ವಿಶ್ವೇಶ್ವರಯ್ಯ ಟವರ್ಸ್ ಆವರಣದಲ್ಲಿ ಮುಖ್ಯದ್ವಾರದ ಸನಿಹದಲ್ಲಿ ನಿತ್ಯವೂ ವಿರಾಮದ ಸಮಯದಲ್ಲಿ ಚೌಕಾಬಾರ ಆಡುತ್ತಿದ್ದರು. ಹೀಗೆ  ಕುಳಿತಿರುತ್ತಿದ್ದ ವಿವಿಧ ಅಧಿಕಾರಿಗಳ ಕಾರು ಚಾಲಕರ ಚೌಕಾಬಾರ ಆಟವನ್ನು ನೋಡಿದ ಸಚಿವರು ಚೌಕಾಬಾರ್ ಬದಲು ಪತ್ರಿಕೆ ಓದುವಂತೆ ಮನವಿ ಮಾಡಿಕೊಂಡಿದ್ದರು.

ಇಷ್ಟು ಮಾತ್ರವಲ್ಲ ವಿರಾಮ ಸಮಯದಲ್ಲಿ ಕೂರುವ ವಾಹನ ಚಾಲಕರಿಗೆ ಅನುಕೂಲವಾಗುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್  ಸೂಚನೆ ಮೇರೆಗೆ ಗ್ರಂಥಾಲಯ ಇಲಾಖೆಯಿಂದ ಪತ್ರಿಕೆಗಳನ್ನು ಒದಗಿಸಲಾಗಿದೆ. ಇತ್ತೀಚಿಗೆ ಬೆಂಗಳೂರಿನ ವಿಶ್ವೇಶ್ವರಯ್ಯ ಟವರ್ಸ್ ನ 4ನೇ ಮಹಡಿಯಲ್ಲಿರುವ ಗ್ರಂಥಾಲಯ ಇಲಾಖೆ ಕಚೇರಿಯಲ್ಲಿನ ಸಭೆಗೆ ಆಗಮಿಸಿದ್ದ ಪ್ರಾಥಮಿಕ ಸುರೇಶ್ ಕುಮಾರ್ ಭೇಟಿ ನೀಡಿ ಸಭೆ ಮುಗಿಸಿ ಹೊರಬಂದು ಕಾರಿನಲ್ಲಿ ತೆರಳುತ್ತಿದ್ದರು.

ಆಗ ಎಡಗಡೆ ಕಣ್ಣು ಹಾಯಿಸಿದಾಗ ಹತ್ತಾರು ಮಂದಿ ಗುಂಪೂಗೂಡಿದ್ದನ್ನು ನೋಡಿ ಕಾರಿನಿಂದ ಇಳಿದು ಸ್ಥಳಕ್ಕೆ ಭೇಟಿ ನೀಡಿದರು. ಆಗ ಕಾರು ಚಾಲಕರೆಲ್ಲ ಚೌಕಾಬಾರ ಆಡುವುದರಲ್ಲಿ ತೊಡಗಿದ್ದರು. ಕಾರು ಚಾಲಕರು ಚೌಕಾಬಾರ ಆಡುವುದನ್ನು ಗಮನಿಸಿ ಅವರನ್ನು ಮಾತನಾಡಿಸಿದ ಸಚಿವರು ಗ್ರಂಥಾಲಯ ಇಲಾಖೆ ನಿರ್ದೇಶಕರನ್ನು ಕರೆದು, ಚಾಲಕರಿಗೆ ವಿರಾಮ ದೊರೆತಾಗ ಓದಲು ಅನುಕೂಲವಾಗುವಂತೆ ಈ ಸ್ಥಳಕ್ಕೆ ಪತ್ರಿಕೆಗಳನ್ನು ಪೂರೈಸಲು ಸೂಚಿಸಿದರು.

ಇದನ್ನೂ ಓದಿ : ಸಿನಿಮಾ ನಟಿಯರನ್ನು ಬಿಟ್ಟು ಬೇರೆ ಯಾರು ಡ್ರಗ್ಸ್ ದಂಧೆಯಲ್ಲಿಲ್ವಾ? ರಾಜಕಾರಣಿಗಳು, ಪೋಲಿಸರ ಮೇಲೂ ಕ್ರಮಕ್ಕೆ ವಿಶ್ವನಾಥ್ ಆಗ್ರಹ

ಸಚಿವರ ನಿರ್ದೇಶನದಂತೆ ಗ್ರಂಥಾಲಯ ಇಲಾಖೆ ನಿರ್ದೇಶಕರು ಚಾಲಕರು ಚೌಕಾಬಾರ ಆಡುತ್ತಿದ್ದ ಸ್ಥಳಕ್ಕೆ ಪತ್ರಿಕೆಗಳನ್ನು ಪೂರೈಸಿದ್ದು, ಚಾಲಕರೆಲ್ಲ ಚೌಕಾಬಾರ ಆಟದ ಬದಲಿಗೆ ಪತ್ರಿಕೆ ಓದುವುದರಲ್ಲಿ ಮಗ್ನರಾಗಿದ್ದಾರೆ.

ತಮಗೆಲ್ಲ ಪತ್ರಿಕೆ ಒದಗಿಸಲು ಸೂಚಿಸಿರುವುದಕ್ಕೆ ಚಾಲಕರು ಸಚಿವ ಸುರೇಶ್ ಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈಗ ಚೌಕಾಬಾರ ಆಡುವ ಸ್ಥಳ ವಾಚನಾಲಯವಾಗಿ ಮಾರ್ಪಟ್ಟಿದೆ ಎಂದು ಚಾಲಕರು ಖುಷಿ ವ್ಯಕ್ತಪಡಿಸಿದ್ದಾರೆ.
Published by: G Hareeshkumar
First published: September 17, 2020, 7:25 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories