• Home
  • »
  • News
  • »
  • state
  • »
  • Bengaluru: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಬೆಂಗಳೂರಿನಲ್ಲಿ ಶುರುವಾಗಲಿದೆ ಚಾಪರ್‌ ಸೇವೆ! ಇಲ್ಲಿದೆ ವಿವರ

Bengaluru: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಬೆಂಗಳೂರಿನಲ್ಲಿ ಶುರುವಾಗಲಿದೆ ಚಾಪರ್‌ ಸೇವೆ! ಇಲ್ಲಿದೆ ವಿವರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Bengaluru: ಈ ಸೇವೆ ಆರಂಭವಾದ್ರೆ ಏರ್‌ ಪೋರ್ಟ್‌ನಿಂದ ಸಿಟಿಗೆ ಹೋಗಲು ತಗಲುವ ಎರಡು ಗಂಟೆಗಳ ಬದಲಿಗೆ ನೀವು 15  ನಿಮಿಷಗಳಲ್ಲಿ ಸಿಟಿಗೆ ತಲುಪಬಹುದು.

  • Share this:

ಬೆಂಗಳೂರಿನ ಟ್ರಾಫಿಕ್‌ (Traffic) ಕಿರಿಕಿರಿ ಅನುಭವಿಸಿದವರಿಗೇ ಗೊತ್ತು. ಅದರಲ್ಲೂ ದಿನವೂ ಆಫೀಸ್‌ ಮನೆ ಅಂತ ಓಡಾಡೋರ ಪಾಡಂತೂ ಹೇಳತೀರದು. ಇನ್ನು ಏರ್‌ ಪೋರ್ಟ್‌ ಹೋಗೋರು ಕೂಡ ಟ್ರಾಫಿಕ್‌ ನಿಂದಾಗಿ ಫ್ಲೈಟ್‌ ಮಿಸ್‌ ಮಾಡಿಕೊಂಡ ಅದೆಷ್ಟೋ ಉದಾಹರಣೆಗಳಿವೆ. ಆದರೆ ಬೆಂಗಳೂರಿನ ಟ್ರಾಫಿಕ್‌ ಕಿರಿಕಿರಿ ಇಂದ ತಪ್ಪಿಸಿಕೊಳ್ಳಲು ಇಲ್ಲಿನ ಜನರಿಗೆ (People) ಹೊಸದೊಂದು (New) ಮಾರ್ಗ ಸಿಕ್ಕಿದೆ. ಅದೇ ವಿಮಾನ ಪ್ರಯಾಣ. ಹೌದು ಬ್ಲೇಡ್‌ ಇಂಡಿಯಾ ಕಂಪನಿ (Blade India Company)  ಬೆಂಗಳೂರಿನ ಒಳಗೆ ಚಾಪರ್‌ ಸೇವೆ ಆರಂಭಿಸುವುದಾಗಿ ಘೋಷಿಸಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ (International Airport) ನಿಲ್ದಾಣದಿಂದ ಬೆಂಗಳೂರು ಸಿಟಿಯ ಒಳಗೆ ಪ್ರಯಾಣಿಸಲು ಅನುಕೂಲವಾಗುವಂತೆ ಚಾಪರ್‌ ಸೇವೆ ಒದಗಿಸಲಿದೆ. ಇದರಿಂದ ಏರ್‌ ಪೋರ್ಟ್‌ ಇಂದ ಸಿಟಿಗೆ ಹೋಗಲು ತಗಲುವ ಎರಡು ಗಂಟೆಗಳ ಬದಲಿಗೆ ನೀವು 15  ನಿಮಿಷಗಳಲ್ಲಿ ಸಿಟಿಗೆ ತಲುಪಬಹುದಾಗಿದೆ.


ಅಕ್ಟೋಬರ್‌ 10 ರಿಂದ ಆರಂಭ!


ಈ ಸೇವೆ ಅಕ್ಟೋಬರ್‌ 10 ರಿಂದ ಆರಂಭವಾಗಲಿದೆ. ಅಲ್ಲದೇ ವಾರದಲ್ಲಿ 5 ದಿನಗಳ ಕಾಲ ಈ ಸೇವೆ ಲಭ್ಯ ಇರುತ್ತೆ. ಒಂದು ಸೀಟ್‌ ನ ಬೆಲೆ 3250 ರೂ. ಗಳಾಗಿವೆ. H125 DVG ಏರ್‌ಬಸ್ ಹೆಲಿಕಾಪ್ಟರ್, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ವಿಮಾನ ನಿಲ್ದಾಣ ಮತ್ತು ಬೆಂಗಳೂರು ವಿಮಾನ ನಿಲ್ದಾಣದ ನಡುವೆ ಒಂದೇ ಬಾರಿಗೆ ಐದರಿಂದ ಆರು ಪ್ರಯಾಣಿಕರೊಂದಿಗೆ ಹಾರಬಲ್ಲದು.


120 ನಿಮಿಷದ ಬದಲಿಗೆ 15 ನಿಮಿಷ ಪ್ರಯಾಣ!


ಈ ಕುರಿತು ತನ್ನ‌ ವೆಬ್‌ ಸೈಟ್‌ ನಲ್ಲಿ ಘೋಷಣೆ ಮಾಡಿರುವ ಬ್ಲೇಡ್‌ ಕಂಪನಿ, ಈ ಚಾಪರ್‌ ಸೇವೆಯೊಂದಿಗೆ ಪ್ರಯಾಣಿಕರು 120 ನಿಮಿಷಗಳ ಸವಾರಿಯನ್ನು 15 ನಿಮಿಷಗಳ ಏರ್‌ ರೈಡ್‌ ಗೆ ಬದಲಾಯಿಸಲು ಸಾಧ್ಯವಾಗುತ್ತೆ ಎಂದಿದೆ. ಅಲ್ಲದೇ ಜನರು ಹೆಚ್‌ ಎ ಎಲ್‌ ಗೆ ಪ್ರಯಾಣಿಸುವಾಗಿನ ಕಿರಿಕಿರಿಯ ಬದಲಿಗೆ 15 ನಿಮಿಷಗಳ ತ್ವರಿತ ಹಾರಾಟ ಕೈಗೊಳ್ಳಬಹುದು ಎಂದು ಹೇಳಿದೆ. ನಂತರದ ದಿನಗಳಲ್ಲಿ ಈ ಚಾಪರ್‌ ಸೇವೆಗೆ ಇನ್ನಷ್ಟು ಮಾರ್ಗಗಳನ್ನು ಸೇರಿಸುವುದಾಗಿ ಕಂಪನಿ ಹೇಳಿದೆ. "ವೈಟ್‌ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿಯನ್ನು ಆದಷ್ಟು ಬೇರೆ ಈ ಲಿಸ್ಟ್‌ ನಲ್ಲಿ ಸೇರಿಸಲಾಗುತ್ತದೆ" ಎಂದಿದೆ.


ಇದನ್ನೂ ಓದಿ: ಆಕಾಶದಲ್ಲಿರೋ ಮೋಡ ಇಂದೂ ಮಳೆ ಸುರಿಸುತ್ತಾ? ಹವಾಮಾನ ವರದಿ ಇಲ್ಲಿದೆ


ದಿನಕ್ಕೆ ಎರಡು ಬಾರಿ ಕಾರ್ಯನಿರ್ವಹಿಸಲಿದೆ


ಆರಂಭದಲ್ಲಿ, ಈ ಸೇವೆ ದಿನಕ್ಕೆ ಎರಡು ಬಾರಿ ಕಾರ್ಯನಿರ್ವಹಿಸುತ್ತದೆ. ಬೆಂಗಳೂರಿನಿಂದ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಬೆಳಿಗ್ಗೆ 9 ಗಂಟೆಗೆ ರೈಡ್ ನಿಗದಿಪಡಿಸಲಾಗಿದೆ. ರಿಟರ್ನ್ ಹೆಲಿಕಾಪ್ಟರ್ ಸಂಜೆ 4:15 ಕ್ಕೆ ಟೇಕಾಫ್ ಆಗಲಿದೆ. ಅಂದಹಾಗೆ, ಬ್ಲೇಡ್ ಇಂಡಿಯಾವು ನ್ಯೂಯಾರ್ಕ್ ಮೂಲದ ಬ್ಲೇಡ್ ಅರ್ಬನ್ ಏರ್ ಮೊಬಿಲಿಟಿ ಇಂಕ್ ಮತ್ತು ಹೊಸ ದೆಹಲಿ ಮೂಲದ ಹಂಚ್ ವೆಂಚರ್ಸ್ ನಡುವಿನ ಜಂಟಿ ಉದ್ಯಮವಾಗಿದೆ. ಕಂಪನಿಯು ಭಾರತದಲ್ಲಿ ತನ್ನ ಅಲ್ಪಾವಧಿಯ ಚಲನಶೀಲತೆಯ ಸೇವೆಯನ್ನು ಹೆಚ್ಚಿಸಲು ಫ್ಲೀಟ್ ವಿಸ್ತರಣೆಗಾಗಿ ಏರ್‌ಬಸ್ ಮತ್ತು ಈವ್ ಏರ್ ಮೊಬಿಲಿಟಿಯೊಂದಿಗೆ ಪಾಲುದಾರಿಕೆ ಹೊಂದಿದೆ.


ಇದನ್ನೂ ಓದಿ: ನೀಲಕುರಿಂಜಿ ಹೂ ಮನೆಯಲ್ಲೂ ಬೆಳೆಯುತ್ತಾ?


ಗೋವಾ ವಿಮಾನ ನಿಲ್ದಾಣದಲ್ಲೂ ಇದೆ ಈ ಸೇವೆ


ವೆಬ್‌ಸೈಟ್ ಪ್ರಕಾರ, ಗೋವಾ ವಿಮಾನ ನಿಲ್ದಾಣದಲ್ಲಿ ಇದೇ ರೀತಿಯ ಸೇವೆ ನೀಡುತ್ತಿದೆ.  ಈ ಸೇವೆಗಳು ಯಾವಾಗ ಪ್ರಾರಂಭವಾಗುತ್ತವೆ ಎಂಬುದರ ಕುರಿತು ಯಾವುದೇ ಟೈಮ್‌ಲೈನ್ ಇಲ್ಲ. ಇನ್ನು, ಮುಂಬೈ, ಪುಣೆ ಮತ್ತು ಶಿರಡಿ ನಡುವೆ ಮಹಾರಾಷ್ಟ್ರದಲ್ಲಿ ಕಾರ್ಯನಿರ್ವಹಿಸುವ ಮೂಲಕ ಬ್ಲೇಡ್ ಇಂಡಿಯಾ ತನ್ನ ಸೇವೆಗಳನ್ನು ಪ್ರಾರಂಭಿಸಿತು. ಕಂಪನಿಯು ಟ್ರಾಫಿಕ್‌ ಕಿರಿಕಿರಿಯಿಂದ ಜನರನ್ನು ಮುಕ್ತಗೊಳಿಸುವ ಹಾಗೂ ಗಂಟೆ ಗಟ್ಟಲೆ ರಸ್ತೆಯ ಪ್ರಯಾಣವನ್ನು ಕಡಿಮೆಗೊಳಿಸುವ ಗುರಿ ಹೊಂದಿದೆ ಎಂದು ಹೇಳಿಕೊಂಡಿದೆ. ಈ ಚಾಪರ್‌ ಸೇವೆಯ ದರ ಸ್ವಲ್ಪ ಜಾಸ್ತಿ ಅನ್ನೋದನ್ನು ಹೊರತು ಪಡಿಸಿದರೆ ಅದಕ್ಕಿಂತ ಹೆಚ್ಚಿನ ಮೌಲ್ಯದ ಸಮಯ ಉಳಿತಾಯವಾಗುತ್ತೆ ಅನ್ನೋದ್ರಲ್ಲಿ ಡೌಟಿಲ್ಲ.

First published: