• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಬೆಂಗಳೂರು ಮಾರುಕಟ್ಟೆಗೆ ಲಗ್ಗೆ ಇಟ್ಟ ಭಿನ್ನ ಪಟಾಕಿಗಳು; ಇದನ್ನು ನೀವು ಟೇಸ್ಟ್​ ಕೂಡ ಮಾಡಬಹುದು!

ಬೆಂಗಳೂರು ಮಾರುಕಟ್ಟೆಗೆ ಲಗ್ಗೆ ಇಟ್ಟ ಭಿನ್ನ ಪಟಾಕಿಗಳು; ಇದನ್ನು ನೀವು ಟೇಸ್ಟ್​ ಕೂಡ ಮಾಡಬಹುದು!

ಪಟಾಕಿ

ಪಟಾಕಿ

 ಕಳೆದ ವರ್ಷ ಹಾನಿ ಮಾಡದ ಪಟಾಕಿಗಳ ತಯಾರಿಕೆ ನಿಧಾನಕ್ಕೆ ಶುರುವಾಗಿತ್ತು. ಆದ್ರೆ ಈ ಸಲ ಇವುಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದುಬಿಟ್ಟಿದೆ.

  • Share this:

ಬೆಂಗಳೂರು (ನವೆಂಬರ್ 14): ಈ ಬಾರಿಯ ದೀಪಾವಳಿಗೆ ಸರ್ಕಾರವೇ ಅಧಿಕೃತವಾಗಿ ಪಟಾಕಿಗಳನ್ನು ನಿಷೇಧಿಸಿದೆ. ಮಾಲಿನ್ಯ ತಡೆ, ಕೋವಿಡ್ ಈ ಎಲ್ಲದಕ್ಕೆ ಇದು ಒಳ್ಳೆ ನಿರ್ಧಾರ ಎನಿಸಿದ್ರೂ ಮಕ್ಕಳಿಗೆ ಪಟಾಕಿಗಳ ಮೇಲಿನ ವ್ಯಾಮೋಹ ಕಮ್ಮಿಯಾಗಲ್ಲ.‌ ಇದಕ್ಕಾಗಿ ಅಂತಲೇ ಒಂದಷ್ಟು ವಿಭಿನ್ನ ಪಟಾಕಿಗಳು ಮಾರ್ಕೆಟ್​​​ನಲ್ಲಿ ಸದ್ದುಮಾಡ್ತಿವೆ.


ಅಂದಹಾಗೆ ಈ ಪಟಾಕಿಗಳು ಸಖತ್ ರುಚಿಯಾಗಿವೆ! ಲಕ್ಷ್ಮಿ ಪಟಾಕಿ, ಆಟಂ ಬಾಂಬ್, ಹೂವಿನ ಕುಂಡ, ರಾಕೆಟ್. ಯಾವದು ಬೇಕು ಹೇಳಿ. ಎಲ್ಲವೂ ಇಲ್ಲಿದೆ.. ಆದ್ರೆ ಇವೆಲ್ಲಾ ಸದ್ದು ಮಾಡೋಲ್ಲ, ಮಾಲಿನ್ಯ ಮೊದಲೇ ಮಾಡೋಲ್ಲ.. ಆದ್ರೂ ಎಲ್ರಿಗೂ ಇಷ್ಟವಾಗ್ತಿವೆ. ಯಾಕಂದ್ರೆ ಇವೆಲ್ಲಾ ಚಾಕೊಲೇಟ್​​ಗಳು. ಈ ಬಾರಿಯ ದೀಪಾವಳಿಗೆ ಅತೀ ಹೆಚ್ಚು ಡಿಮ್ಯಾಂಡ್ ಇರೋ ಪಟಾಕಿಗಳು ಇವೇ ಅಂತಾರೆ ಇವುಗಳ‌ ತಯಾರಕಿ ಪ್ರಿಯಾ ಜೈನ್.


ಕಳೆದ ವರ್ಷ ಹಾನಿ ಮಾಡದ ಪಟಾಕಿಗಳ ತಯಾರಿಕೆ ನಿಧಾನಕ್ಕೆ ಶುರುವಾಗಿತ್ತು. ಆದ್ರೆ ಈ ಸಲ ಇವುಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದ್ಬಿಟ್ಟಿದೆ. ಕೋವಿಡ್ ಬಂದ ನಂತರ ಜನ ಆರೋಗ್ಯ, ಪರಿಸರದ ಬಗ್ಗೆ ಸ್ವಲ್ಪ ಜಾಸ್ತಿಯೇ ಮುತುವರ್ಜಿ ವಹಿಸುತ್ತಿದ್ದಾರೆ. ಹಾಗಾಗಿ ಮಕ್ಕಳಿಗೆ ತಮಗಿಷ್ಟವಾದ ಪಟಾಕಿಗಳನ್ನು ಮನಸೋ ಇಚ್ಛೆ ಸವಿಯೋಕೆ ಚಾಕೊಲೇಟ್ಸ್ ಅತ್ಯುತ್ತಮ ದಾರಿಯಾದಂತಾಗಿದೆ.


ಅಷ್ಟೇ ಅಲ್ಲ. ದೀಪಾವಳಿಯ ಗಿಫ್ಟ್ ಲಿಸ್ಟ್ ನಲ್ಲೂ ಇವು ಸೂಪರ್ ಹಿಟ್ ಆಗಿವೆ. ಮಿಲ್ಕ್ ಚಾಕೊಲೇಟ್ ನಲ್ಲೇ ದೀಪಗಳ ಆಕಾರವೂ ಇಲ್ಲಿದೆ. ಬೇಕಿದ್ದವ್ರಿಗೆ ಡ್ರೈ ಫ್ರೂಟ್ಸ್, ಆರೆಂಜ್, ವೆನಿಲಾ ಹೀಗೆ ಅವರಿಷ್ಟದ ಫ್ಲೇವರ್ ಗಳಲ್ಲೂ ಈ ಎಲ್ಲಾ ಪಟಾಕಿಗಳು ಲಭ್ಯ. ಹಬ್ಬ ಅನ್ನೋದು ಖುಷಿಪಡುವ ಸಂದರ್ಭ. ಸಿಹಿ ಜೊತೆ ಆ ಖುಷಿ ಮತ್ತಷ್ಟು ಹೆಚ್ಚಿಸಿಕೊಳ್ಳೋಕೆ ಈ ಚಾಕೊಲೇಟ್ ಪಟಾಕಿಗಳು ಬೆಸ್ಟ್ ದಾರಿ ಎನ್ನೋದನ್ನ ಎಲ್ಲರೂ ಒಪ್ತಾರೆ.

Published by:Rajesh Duggumane
First published: