Chitradurga: ತೊಗರಿ, ರಾಗಿ ಜೊತೆಯಲ್ಲಿ ಮಿಶ್ರ ಬೆಳೆಯಾಗಿ ಸೋಯಾ, ಅವರೆ! ರೈತರಿಗೆ ಲಾಭದಾಯಕ ಸಲಹೆಗಳು

ಸುಮಾರು  105 ರಿಂದ 110 ದಿನಗಳ ಅವಧಿಯಲ್ಲಿ ಫಸಲಿಗೆ ಬರುತ್ತದೆ. ಎಕರೆಗೆ ಸುಮಾರು 4 ರಿಂದ 6 ಕ್ವಿಂಟಲ್ ಖುಷ್ಕಿ ಜಮೀನು, 8 ರಿಂದ 10 ಕ್ವಿಂಟಲ್ ನೀರಾವರಿ ಜಮೀನುಗಳಲ್ಲಿ ಇಳುವರಿ ಕೊಡುತ್ತದೆ. ಎಲ್ಲಾ ಕಾಲಗಳಲ್ಲೂ ಬಿತ್ತನೆ ಮಾಡಬಹುದಾದ ತಳಿಯಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಿತ್ರದುರ್ಗ(ಜೂ.22): ಮಿಶ್ರ ಬೆಳೆಯಾಗಿ ಸೋಯಾ, ಅವರೆಯನ್ನು ತೊಗರಿ ಮತ್ತು ರಾಗಿಯ ಜೊತೆಯಲ್ಲಿ ಬಿತ್ತನೆ ಮಾಡಬಹುದು ಎಂದು ಕೃಷಿ ಚಿತ್ರದುರ್ಗ (Chitradurga) ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸಂಪ್ರದಾಯಿಕ ಬೆಳೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದ ಚಿತ್ರದುರ್ಗ ಜಿಲ್ಲೆಯ ರೈತರು (Farmers) ಈಗ ಈ ಬೆಳೆಯನ್ನೂ ಬೆಳೆಯಬಹುದು ಎಂದು ಹೇಳಿದ್ದಾರೆ.  ಸೋಯಾ ಅವರೆ ಮುಖ್ಯವಾದ ಎಣ್ಣೆಕಾಳು ಹಾಗೂ ದ್ವಿದಳ ಧಾನ್ಯದ ಬೆಳೆಯಾಗಿದೆ. ಶೇ.40ರಷ್ಟು ಸಸಾರಜನಕ ಮತ್ತು ಶೇ.20ರಷ್ಟು ಎಣ್ಣೆಯನ್ನು ಹೊಂದಿದೆ. ಇದರ ಬೇರುಗಳಲ್ಲಿ (Roots) ವಾತಾವರಣದಲ್ಲಿರುವ (Climate) ಸಾರಜನಕ ಸ್ಥಿರೀಕರಿಸುವ ಗಂಟುಗಳಿರುವುದರಿಂದ ಬೆಳೆಯು ಕಟಾವಿನ ನಂತರ ಬೇರಿನ ಭಾಗ ಮತ್ತು ಅದರಿಂದ  ಉದುರುವ ಎಲೆಗಳನ್ನು ಭೂಮಿಗೆ (Land) ಸೇರಿಸುವುದರಿಂದ ಮಣ್ಣಿನ ಫಲವತ್ತತೆ (Soil Fertility) ಹೆಚ್ಚುತ್ತದೆ ಇದು ಮಿಶ್ರ ಬೆಳೆಗೆ ಅಥವಾ ಬೆಳೆಯ ಪರಿವರ್ತನೆಗೆ ಸೂಕ್ತವಾದ ಬೆಳೆಯಾಗಿದೆ.

ಸೋಯಾ ಅವರೆ  ತಳಿಗಳು ಮತ್ತು ವಿಶೇಷ ಗುಣಗಳು:

ಎಂ.ಎ.ಯು.ಎಸ್-2, ತಳಿಯನ್ನು ನೀರಾವರಿ ಇದ್ದರೆ ಮುಂಗಾರು, ಹಿಂಗಾರು ಮತ್ತು ಬೇಸಿಗೆಯ ಸಮಯದಲ್ಲಿ ಬಿತ್ತನೆ ಮಾಡಬಹುದು ಖುಷ್ಕಿ ಜಮೀನು ಆದರೆ ಜುಲೈ ತಿಂಗಳ ಮೊದಲ ವಾರದಲ್ಲಿ ಬಿತ್ತನೆ ಮಾಡಬಹುದು. ಸುಮಾರು  105 ರಿಂದ 110 ದಿನಗಳ ಅವಧಿಯಲ್ಲಿ ಫಸಲಿಗೆ ಬರುತ್ತದೆ. ಎಕರೆಗೆ ಸುಮಾರು 4 ರಿಂದ 6 ಕ್ವಿಂಟಲ್ ಖುಷ್ಕಿ ಜಮೀನು, 8 ರಿಂದ 10 ಕ್ವಿಂಟಲ್ ನೀರಾವರಿ ಜಮೀನುಗಳಲ್ಲಿ ಇಳುವರಿ ಕೊಡುತ್ತದೆ. ಎಲ್ಲಾ ಕಾಲಗಳಲ್ಲಿ ಬಿತ್ತನೆ ಮಾಡಬಹುದು.

ಕೆ.ಬಿ.ಎಸ್.-23, ತಳಿಯನ್ನು ನೀರಾವರಿ ಇದ್ದರೆ ಮುಂಗಾರು, ಹಿಂಗಾರು ಮತ್ತು ಬೇಸಿಗೆಯ ಸಮಯದಲ್ಲಿ ಬಿತ್ತನೆ ಮಾಡಬಹುದು ಖುಷ್ಕಿ ಜಮೀನು ಆದರೆ ಜುಲೈ ತಿಂಗಳ ಮೊದಲ ವಾರದಲ್ಲಿ ಬಿತ್ತನೆ ಮಾಡಬಹುದು. ಸುಮಾರು  90 ರಿಂದ 95 ದಿನಗಳ ಅವಧಿಯಲ್ಲಿ ಫಸಲಿಗೆ ಬರುತ್ತದೆ. ಎಕರೆಗೆ ಸುಮಾರು 8 ರಿಂದ 10 ಕ್ವಿಂಟಲ್ ಖುಷ್ಕಿ ಜಮೀನು, 10 ರಿಂದ 12 ಕ್ವಿಂಟಲ್ ನೀರಾವರಿ ಜಮೀನುಗಳಲ್ಲಿ ಇಳುವರಿ ಕೊಡುತ್ತದೆ. ಅಧಿಕ ಇಳುವರಿ ಕೊಡುವ ಅಲ್ಪಾವಧಿ ತಳಿಯಾಗಿದೆ.

ಇದನ್ನೂ ಓದಿ: Dharawad: 100 ವರ್ಷದ ಬಳಿಕ ಈ ಗ್ರಾಮದಲ್ಲಿ ಜಾತ್ರೆ ಸಂಭ್ರಮ; ಪಾದರಕ್ಷೆ ಹಾಕಂಗಿಲ್ಲ, ಮದ್ಯಪಾನ ಮಾಡಂಗಿಲ್ಲ

ಡಿ.ಎಸ್.ಪಿ-21, ತಳಿಯನ್ನು ನೀರಾವರಿ ಇದ್ದರೆ ಮುಂಗಾರು, ಹಿಂಗಾರು ಮತ್ತು ಬೇಸಿಗೆಯ ಸಮಯದಲ್ಲಿ ಬಿತ್ತನೆ ಮಾಡಬಹುದು. ಖುಷ್ಕಿ ಜಮೀನು ಆದರೆ ಜುಲೈ ತಿಂಗಳ ಮೊದಲ ವಾರದಲ್ಲಿ ಬಿತ್ತನೆ ಮಾಡಬಹುದು.

105 ರಿಂದ 110 ದಿನಗಳ ಅವಧಿಯಲ್ಲಿ ಫಸಲಿಗೆ

ಸುಮಾರು  105 ರಿಂದ 110 ದಿನಗಳ ಅವಧಿಯಲ್ಲಿ ಫಸಲಿಗೆ ಬರುತ್ತದೆ. ಎಕರೆಗೆ ಸುಮಾರು 4 ರಿಂದ 6 ಕ್ವಿಂಟಲ್ ಖುಷ್ಕಿ ಜಮೀನು, 8 ರಿಂದ 10 ಕ್ವಿಂಟಲ್ ನೀರಾವರಿ ಜಮೀನುಗಳಲ್ಲಿ ಇಳುವರಿ ಕೊಡುತ್ತದೆ. ಎಲ್ಲಾ ಕಾಲಗಳಲ್ಲೂ ಬಿತ್ತನೆ ಮಾಡಬಹುದಾದ ತಳಿಯಾಗಿದೆ.

ಬಿತ್ತನೆ  ಮಾಡುವುದಕ್ಕಿಂತ ಮುಂಚೆ ರೈತರು ಅನುಸರಿಸಬೇಕಾದ ಕ್ರಮಗಳು:

ರೈತರು ನೀರಾವರಿ ಇದ್ದರೆ ವರ್ಷದ ಎಲ್ಲಾ ಕಾಲಗಳಲ್ಲಿಯೂ ಬಿತ್ತಬಹುದು ಕುಷ್ಕಿ ಬೆಳೆಯನ್ನು ಆಗಸ್ಟ್ ಮೊದಲನೇ ವಾರದಲ್ಲಿ ಬಿತ್ತಬಹುದು ಬಿತ್ತನೆಗೆ ಭೂಮಿ ಸಿದ್ಧವಾದ ಕೂಡಲೇ ಶಿಫಾರಸ್ಸು ಮಾಡಿದ ಪ್ರಮಾಣದ ಕೊಟ್ಟಿಗೆ ಮತ್ತು ಕಾಂಪೋಸ್ಟ್ ಗೊಬ್ಬರ, ರಾಸಾಯನಿಕ ಗೊಬ್ಬರವನ್ನು  ಮೂರರಿಂದ ನಾಲ್ಕು ವಾರಗಳ ಮೊದಲು ಮಣ್ಣಿನಲ್ಲಿ ಬೆರೆಸುವುದು.

ಇದನ್ನೂ ಓದಿ: Bommai: ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ದೇವೇಗೌಡರ ಸಲಹೆ ಪರಿಗಣಿಸುತ್ತೇವೆ ಎಂದ ಸಿಎಂ ಬೊಮ್ಮಾಯಿ

ಬೀಜವನ್ನು ಮೊದಲು 50 ಗ್ರಾಂ ಥೈರಾಮ್ ಮತ್ತು 25 ಗ್ರಾಂ ಕಾರ್ಬೆಡೈಜಿಂ  ಶಿಲೀಂಧ್ರನಾಶಕ ಹಾಗೂ 200 ಗ್ರಾಂ ರೈಸೋಬಿಯಂ, ರಂಜಕ ರಾಸಾಯನಿಕಗಳಿಂದ ಉಪಚರಿಸಬೇಕು ಎಂದು ರೈತರಿಗೆ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
Published by:Divya D
First published: