ಚಿತ್ರದುರ್ಗ: ಫೇಸ್ಬುಕ್ನಲ್ಲಿ (Facebook) ಶಿಕ್ಷಕನಿಂದ ಸರ್ಕಾರಕ್ಕೆ ನಿಂದನೆ ಆರೋಪ ಹಿನ್ನಲೆ. ಶಿಕ್ಷಕನನ್ನು ಅಮಾನತು ಮಾಡಲಾಗಿದೆ. ಫೇಸ್ಬುಕ್ನಲ್ಲಿ ನೀವು ಯಾವುದಾದರೂ ಪೋಸ್ಟ್ ಹಾಕುವ ಮುನ್ನ ಈ ವಿಚಾರವನ್ನು ನಿಮ್ಮ ಗಮನದಲ್ಲಿಟ್ಟುಕೊಳ್ಳಿ. ಕಾನುಬೇನಹಳ್ಳಿ ಸರ್ಕಾರಿ ಶಾಲೆ (Government School) ಶಿಕ್ಷಕನ ಅಮಾನತಾಗಿದ್ದಾರೆ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕು ಕಾನುಬೇನಹಳ್ಳಿ ಶಾಲೆ ಶಿಕ್ಷಕ (Teacher) ಈ ರೀತಿ ಅಮಾನತಾಗಿದ್ದಾರೆ. ಹಾಗಾದರೆ ಇವರು ಬರೆದದ್ದೇನು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ.
ಶಾಂತಮೂರ್ತಿ ಎನ್ನುವರು ಫೇಸ್ಬುಕ್ ಪೋಸ್ಟ್ ಮಾಡಿ ಅಮಾನತಾದ ಶಿಕ್ಷಕರಾಗಿದ್ದಾರೆ.ಸರ್ಕಾರಿ ಯೋಜನೆಗಳ ಕುರಿತು ಫೇಸ್ಬುಕ್ನಲ್ಲಿ ಅವಹೇಳನಕಾರಿ ಬರಹವನ್ನು ಇವರು ಬರೆದಿರುವುದು ತಿಳಿದು ಬಂದಿದೆ. ಸರ್ಕಾರಿ ಶಾಲೆ ಶಿಕ್ಷಕನಾಗಿ ನಿಯಮ ಉಲ್ಲಂಘಿಸಿದ್ದಕ್ಕೆ ಅಮಾನತು ಮಾಡಲಾಗಿದೆ ಎಂದು ವರದಿಯಾಗಿದೆ.
ಸಿಎಂ ಸಿದ್ದರಾಮಯ್ಯ ಸರ್ಕಾರದ ಯೋಜನೆಗಳ ಘೋಷಣೆ ಕುರಿತು ಅವಹೇಳನಕಾರಿ ಫೋಸ್ಟ್ ಮಾಡಿರುವುದರಿಂದ ಅಮಾನತು ಮಾಡಲಾಗಿದೆ. ಎಸ್.ಎಂ ಕೃಷ್ಣ ರಿಂದ ಜಗದೀಶ್ ಶೆಟ್ಟರ್ ವರೆಗೆ ಮಾಡಿದ ಸಾಲ 71331 ಕೋಟಿ. ಸಿದ್ದು ಮಾಡಿದ ಸಾಲ 2.42.000 ಕೋಟಿ ಎಂದು ಫೇಸ್ಬುಕ್ ಫೋಸ್ಟ್.
ಇದನ್ನೂ ಓದಿ: Student Benefits: ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ; ನೀವೂ ಅಪ್ಲೈ ಮಾಡಿ
ಬಿಟ್ಟಿ ಭಾಗ್ಯ ಕೊಡದೆ ಇನ್ನೇನು ಎಂದು ಸರ್ಕಾರ ಕ್ಕೆ ಅವಹೇಳನ ಮಾಡಿದ್ದಾರೆ ಎಂದು ಈ ಕಾರಣಕ್ಕಾಗಿ ಅವರನ್ನು ಅಮಾನತು ಮಾಡಲಾಗಿದೆ. ನಿನ್ನೆ ಸರ್ಕಾರದ ಗ್ಯಾರಂಟಿ ಯೋಜನೆ ಗೋಷಿಸಿದ್ದ ಸಿಎಂ ಸಿದ್ದರಾಮಯ್ಯ ಸರ್ಕಾರದ ಕುರಿತು ಇವರಲು ತಮ್ಮ ಫೇಸ್ಬುಕ್ ವಾಲ್ನಲ್ಲಿ ಬರೆದುಕೊಂಡಿದ್ದರು. ಶಿಕ್ಷಣ ಇಲಾಖೆ ಚಿತ್ರದುರ್ಗ DDPI ನಿರ್ದೇಶನ ಮೇರೆಗೆ ಬಿಇಒ ಆದೇಶ ನೀಡಿದ ಕಾರಣ ಇವರನ್ನು ಅಮಾನತುಗೊಳಿಸಲಾಗಿದೆ.
ಶಿಕ್ಷಕ ಶಾಂತಮೂರ್ತಿ ಅಮಾನತು ಮಾಡಿ ಎಂದು ಹೊಸದುರ್ಗ ಬಿಇಒ ಎಲ್.ಜಯ್ಯಪ್ಪ ಆದೇಶ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ಅಧಿಕೃತ ನೋಟೀಸ್ ಕುಡಾ ಜಾರಿ ಮಾಡಕಾಗಿದೆ.
ಪ್ರತಿನಿತ್ಯ ಸರ್ಕಾರದ ಪರ ಹಾಗೂ ವಿರುದ್ಧ ಸಾಕಷ್ಟು ವಾದ ವಿವಾಧಗಳನ್ನು ನಾವೆ ಕಂಡೇ ಕಾಣುತ್ತೇವೆ. ಎಷ್ಟೋ ಜನ ಠಿಕೆ ಮಾಡುತ್ತಾರೆ ಅಥವಾ ಹೊಗಳುತ್ತಾರೆ. ಇಂಥವರ ನಡುವೆ ಈ ಶಿಕ್ಷಕರನ್ನು ಕೆಲಸದಿಂದದಲೇ ಅಮಾನತು ಮಾಡಲಾಗಿದೆ. ಬೇರೊಬ್ಬರು ಠೀಕೆ ಮಾಡಿ ಬರೆದ ಪೋಸ್ಟ್ ಶೇರ್ ಮಾಡಿದರೂ ಅದು ತುಂಬಾ ತಪ್ಪು ಎಂಬುದು ಇವರ ವಿಚಾರವಾಗಿ ತಿಳಿದು ಬರುತ್ತದೆ.
ವರದಿ: ವಿನಾಯಕ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ