ಚಿತ್ರದುರ್ಗ: ನೂತನ ಸಿದ್ದರಾಮಯ್ಯ ಸರ್ಕಾರವನ್ನು (Siddaramaiah Government) ಟೀಕಿಸಿ ಸೋಶಿಯಲ್ ಮೀಡಿಯಾದಲ್ಲಿ (Social Media) ಪೋಸ್ಟ್ ಮಾಡಿಕೊಂಡಿದ್ದ ಶಿಕ್ಷಕರೊಬ್ಬರನ್ನು (Teacher) ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಶಾಂತಮೂರ್ತಿ ಎಂಜಿ ಅಮಾನತ್ತಾದ ಶಿಕ್ಷಕ. ಶಾಂತಮೂರ್ತಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ (Hosadurga, Chitradurga) ಕಾನುಬೆನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಫೇಸ್ಬುಕ್ನಲ್ಲಿ ಕಾಂಗ್ರೆಸ್ ನೀಡಿರುವ 5 ಗ್ಯಾರಂಟಿಗಳನ್ನು ಟೀಕಿಸಿ ಪೋಸ್ಟ್ ಮಾಡಿಕೊಂಡಿದ್ದರು. ಇದರ ಜೊತೆಗೆ ರಾಜ್ಯ ಸರ್ಕಾರವನ್ನು (Government Of Karnataka) ಟೀಕಿಸಿದ್ದರು. ಉಚಿತ ಯೋಜನೆಗಳನ್ನು ನೀಡುವುದು ಬಿಟ್ಟು ನಿಮ್ಮಿಂದ ಏನು ಮಾಡಲು ಸಾಧ್ಯ ಎಂದು ಪ್ರಶ್ನೆ ಮಾಡಿದ್ದರು.
ಇದರ ಜೊತೆಗೆ ಎಸ್.ಎಂ.ಕೃಷ್ಣ 3,590 ಕೋಟಿ ರೂಪಾಯೊ, ಧರಂ ಸಿಂಗ್ 15,635 ಕೋಟಿ ರೂ., ಹೆಚ್.ಡಿ.ಕುಮಾರಸ್ವಾಮಿ ರೂ. 3,545 ಕೋಟಿ, ಬಿ.ಎಸ್. ,42,000 ಕೋಟಿ ರೂಪಾಯಿ ಸಾಲ ಮಾಡಿದ್ದಾರೆ ಎಂದು ಶಾಂತಮೂರ್ತಿ ಎಫ್ಬಿಯಲ್ಲಿ ಬರೆದುಕೊಂಡಿದ್ದರು.
ಬಿಜೆಪಿ ಕಾಲದ ಕಾಮಗಾರಿಗಳಿಗೆ ಬ್ರೇಕ್
ಬಿಜೆಪಿ ಸರ್ಕಾರ ಜಾರಿ ಮಾಡಿದ್ದ ಎಲ್ಲಾ ಟೆಂಡರ್ಗಳಿಗೆ, ಕಾಮಗಾರಿಗೆ ಸಿಎಂ ಸಿದರಾಮಯ್ಯ ಸರ್ಕಾರ ಬ್ರೇಕ್ ಹಾಕಿದೆ. ಯಾವುದೇ ಕಾಮಗಾರಿಗಳನ್ನ ಮುಂದುವರಿಸಬಾರದು, ಹಾಗೇನೇ ಯಾವುದೇ ಹಣಕಾಸು ಬಿಡುಗಡೆ ಮಾಡಬಾರದು. ಹೊಸ ಸಚಿವರಿಗೆ ಖಾತೆ ಹಂಚಿಕೆ ಬಳಿಕವೇ ಎಲ್ಲಾ ಕೆಲಸಗಳನ್ನ ಶುರು ಮಾಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಿಗಮ ಮಂಡಳಿ ನೇಮಕಾತಿ ರದ್ದು
ಈ ನಡುವೆ ಬಿಜೆಪಿ ಸರ್ಕಾರದಲ್ಲಿ ನೇಮಕ ಮಾಡಿದ್ದ ಎಲ್ಲಾ ನಿಮಗ ಮಂಡಳಿಗಳ ಅಧ್ಯಕ್ಷರು ಹಾಗೂ ನಿರ್ದೇಶಕರ ನೇಮಕಾತಿಗೆ ಸಿಎಂ ಸಿದ್ದರಾಮಯ್ಯ ಬ್ರೇಕ್ ಹಾಕಿದ್ದಾರೆ. ಹೊಸ ಸರ್ಕಾರ ಬಂದಿರೋ ಕಾರಣ ಕಾಂಗ್ರೆಸ್ನಲ್ಲಿನವರಿಗೆ ನಿಗಮ ಮಂಡಳಿ ಹುದ್ದೆ ಸಿಗಲಿದೆ.
ಇದನ್ನೂ ಓದಿ: Bengaluru Rains: ರಾಜಧಾನಿಯಲ್ಲಿ ಮರಗಳು ಧರೆಗೆ ಉರುಳುತ್ತಿರೋದು ಯಾಕೆ? ಇಲ್ಲಿದೆ ನೋಡಿ ಕಾರಣ
ನಿಗಮ ಮಂಡಳಿಗಳಿಗೂ ಕೂಡಾ ಹಣ ರಿಲೀಸ್ ಮಾಡಬೇಡಿ. ನಿಗಮದಿಂದಲೂ ಯಾವುದೇ ಫಂಡ್ ರಿಲೀಸ್ ಮಾಡಬೇಡಿ. ಹೊಸಬರ ನೇಮಕವಾದ ಮೇಲೆ ಎಲ್ಲಾ ಕೆಲಸ ಶುರು ಮಾಡಿ ಎಂದು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ