ಈಗಲೇ ಠಾಣೆಗೆ ಬಾ ಅಂದಿದ್ದಕ್ಕೆ ರೌಡಿಶೀಟರ್​​ ಸಿಟ್ಟು.. ಅರೆಬೆತ್ತಲೆಯಾಗಿಯೇ ನಡೆದು ಬಂದು ಹೈಡ್ರಾಮಾ!

ವೇಣುಗೋಪಾಲ್ ಗೆ ಈಗಲೇ ಬಾ ಅಂತ ಮುಖ್ಯ ಪೇದೆ ಚಂದ್ರಾ ನಾಯ್ಕ್ ತಾಕೀತು ಮಾಡಿದ್ರು. ಸ್ನಾನಕ್ಕೆ ಹೊರಟಾಗ ಹೇಗಿದ್ದನೋ ಹಾಗೆಯೇ ಕೈಯಲ್ಲಿ ಚೆಂಬು ಹಿಡಿದು ಅರೆ ಬೆತ್ತಲೆಯಲ್ಲೇ ಠಾಣೆಗೆ ಬಂದಿದ್ದಾನೆ.

ನಡೆದು ಬಂದ ರೌಡಿಶೀಟರ್​

ನಡೆದು ಬಂದ ರೌಡಿಶೀಟರ್​

  • Share this:
ಚಿತ್ರದುರ್ಗ : ಪೊಲೀಸ್  ಠಾಣೆಗೆ (Police Station) ಬಾ ಅಂತ  ಪೇದೆ ಹೇಳಿದ ಒಂದೇ ಕಾರಣಕ್ಕೆ ಮನೆಯಿಂದ ರೌಡಿಶೀಟರ್ (Rowdy Sheeter) ಅರೆ ಬೆತ್ತಲೆಯಲ್ಲೇ ಠಾಣೆಗೆ ಬಂದಿದ್ದಾನೆ. ಮಾನಕ್ಕೆ ಅಂಜದೆ ರಸ್ತೆಯುದ್ದಕ್ಕೂ ಅರೆ ಬೆತ್ತಲೆಯಾಗಿ ನಡೆದುಕೊಂಡು ಹೋಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ರಾದ್ದಾಂತ ಮಾಡಿ ಅಸಭ್ಯ ವರ್ತನೆ ತೋರಿದ್ದಾನೆ.  ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ  ಗ್ರಾಮದಲ್ಲಿ ಡಿಸೆಂಬರ್ 18 ನೇ ತಾರೀಕು ಬೆಳಗ್ಗೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ವೀಡಿಯೋ ಫುಲ್ ವೈರಲ್ ಆಗಿದೆ. 

ಜಗಳ ತೆಗೆಯೋದು, ಕಿರಿಕ್​ ಮಾಡೋದೇ ಫುಲ್​ ಟೈಂ ಕೆಲಸ 

ನಾಯಕನ ಹಟ್ಟಿ ಗ್ರಾಮದ ವೇಣು ಗೋಪಾಲ್ ಎಂಬುವ ವ್ಯಕ್ತಿ ಗ್ರಾಮದ ಜನರ ಜೊತೆ ದುರ್ವರ್ತನೆ ತೋರಿ, ಆಗಾಗ ಜಗಳ ಮಾಡುತ್ತಿದ್ದ. ಸುಮಾರು ಮೂರ್ನಾಲ್ಕು ಸಲ ಸಣ್ಣ ಸಣ್ಣ ವಿಷಯಕ್ಕೆ ಚಪ್ಪಲಿಯಲ್ಲಿ ಒಡೆದಾಡಿದ್ದ. 2005 ರಲ್ಲಿ ವೇಣುಗೋಪಾಲ್ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಪ್ರಚೋದನೆ ಆರೋಪಕ್ಕೆ 306  ಕಾಲಂ ನಲ್ಲಿ ಪ್ರಕರಣ ಕೂಡಾ ದಾಖಲಾಗಿದೆ. ಹೀಗೆ ಇವನ ಪುಂಡಾಟ, ದುರ್ವರ್ತನೆ ಕಾರಣಕ್ಕೆ 2017 ರಲ್ಲಿ ಇವನ ವಿರುದ್ದ ರೌಡಿ ಶೀಟರ್ ಪ್ರಕರಣ ದಾಖಲಾಗಿದೆ. ಅಲ್ಲದೇ ಇತ್ತೀಚೆಗೆ ತಾನು ವಾಸ ಮಾಡುವ ಮನೆಯ ಬಳಿ ನೀರು ಹರಿಯುವ ವಿಚಾರಕ್ಕೆ ನೆರೆ ಮನೆಯ ದಂಪತಿ ಬಳಿ ಜಗಳ ಕಾಯ್ದು ,  ಚಪ್ಪಲಿಯಿಂದ ಹಲ್ಲೆ ಮಾಡಿದ್ದಾಗ್ಯೂ ಪ್ರಕರಣ ದಾಖಲಾಗಿದೆ‌. ಇದು ಹೀಗೆ ಮುಂದುವರೆದ ಕಾರಣ  ನ್ಯಾಯಾಲಯದಿಂದ ರೌಡಿಶೀಟರ್ ಗೆ ಸಮನ್ಸ್ ಜಾರಿ ಆಗಿತ್ತು.

ಇದನ್ನೂ ಓದಿ: ಇಂಟರ್ನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ: ತಲೆಮರೆಸಿಕೊಂಡಿದ್ದ ವಕೀಲ 2 ತಿಂಗಳ ಬಳಿಕ ಪ್ರತ್ಯಕ್ಷ!

ಈಗಲೇ ಬಾ ಎಂದಿದ್ದ ಸಿಟ್ಟಿಗೆದ್ದ ರೌಡಿಶೀಟರ್​ 

ಆದ್ರೆ ಅವನು ಅದಕ್ಕೆ ಕ್ಯಾರೇ ಅಂತ ಕೂಡಾ ಅಂದಿರ್ಲಿಲ್ಲ. ನ್ಯಾಯಲಯದ ಆದೇಶವನ್ನ ಪಾಲಿಸಬೇಕಾದ ಪೋಲೀಸರು ರೌಡಿ ಶೀಟರ್ ಮನೆ ಬಳಿಗೆ ತೆರಳಿ   ಠಾಣೆಗೆ ಬರುವಂತೆ ತಿಳಿಸಿದ್ರು. ಇದಕ್ಕೆ ಸಿಟ್ಟಿಗೆದ್ದ ರೌಡಿಶೀಟರ್ ವೇಣುಗೋಪಾಲ್ ಪೊಲೀಸರಿಗೆ ಸ್ನಾನ ಮಾಡಿದ ಬಳಿಕ ಬರುತ್ತೇನೆ ಹೋಗಿ ಅಂತ ಹೇಳಿದ್ದ‌. ಆದರೇ ನ್ಯಾಯಾಲಯದ ಆದೇಶಕ್ಕೆ ಕಿಮ್ಮತ್ತು ಕೊಡದ ವೇಣುಗೋಪಾಲ್ ಗೆ ಈಗಲೇ ಬಾ ಅಂತ ಮುಖ್ಯ ಪೇದೆ ಚಂದ್ರಾ ನಾಯ್ಕ್ ತಾಕೀತು ಮಾಡಿದ್ರು.  ಮೊದಲೇ ಜನರ ಜೊತೆ ಆಗಾಗ ಜಗಳ ಕಾಯ್ದು, ದುರ್ವರ್ತನೆ ತೋರುವುದನ್ನೇ ಚಾಳಿ ಮಾಡಿಕೊಂಡಿದ್ದ ಆತ ಸ್ನಾನಕ್ಕೆ ಹೊರಟಾಗ ಹೇಗಿದ್ದನೋ ಹಾಗೆಯೇ ಕೈಯಲ್ಲಿ ಚೆಂಬು ಹಿಡಿದು ಅರೆ ಬೆತ್ತಲೆಯಲ್ಲೇ ಠಾಣೆಗೆ ಬಂದಿದ್ದಾನೆ.

ಇವನ ಈ ವರ್ತನೆಯನ್ನ ಸಾರ್ವಜನಿಕರು ನೋಡಿ ತಲೆ ತಗ್ಗಿಸುವಂತ ಸ್ಥಿತಿ ನಿರ್ಮಿಸಿದ್ದಾನೆ. ಆದರೂ ತಲೆ ಕೆಡಿಸಿಕೊಳ್ಳದ ವೇಣುಗೋಪಾಲ್ ಠಾಣೆ ವರೆಗೂ ನಡೆದು ಬಂದು ಸ್ನಾನ ಮಾಡುವುದಕ್ಕೂ ಬಿಡದೆ ಒತ್ತಡ ಹಾಕಿದ್ದಾರೆ. ವಾರೆಂಟ್ ಇಲ್ಲದೇ ಕರೆದೊಯ್ಯುತ್ತಿದ್ದಾರೆ, ವಾರೆಂಟ್ ತೋರ್ಸಿ  ಎಂದು ಪೋಲೀಸರ ಜೊತೆ ವಾಗ್ವಾದ ಮಾಡಿದ್ದಾನೆ. ಕೊನೆಗೆ ಠಾಣೆಗೆ ತೆರಳಿದ್ದು, ಪೋಲಿಸರು ನ್ಯಾಯಾಲಯ ಕ್ಕೆ ಒಪ್ಪಿಸಿ ಕರ್ತವ್ಯ ನಿರ್ವಹಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ನಿಶ್ಚಿತಾರ್ಥ ಆಗಿರೋ ಯುವತಿಯ ಬೆತ್ತಲೆ ಫೋಟೋಗಳನ್ನು ಹರಿಬಿಟ್ಟ ಹಳೆ ಲವರ್!

ಇನ್ನು 2020ರಲ್ಲಿ ತನ್ನ ಸ್ವಂತ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ತಂದೆಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯದ ಪೋಕ್ಸೋ ಫಾಸ್ಟ್​​ ಟ್ರ್ಯಾಕ್​​​ ನ್ಯಾಯಾಲಯದ ವಿಶೇಷ ನ್ಯಾಯಾಧೀಶರು ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಬಾಲಕಿಗೆ ಜೀವ ಬೆದರಿಕೆ ಹಾಕಿದ್ದಕ್ಕೆ ಹೆಚ್ಚುವರಿಯಾಗಿ 5 ಸಾವಿರ ರೂ. ದಂಡ ಹಾಗೂ ಸಂತ್ರಸ್ತರಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸರ್ಕಾರಕ್ಕೆ ಸೂಚಿಸಲಾಗಿದೆ.ಕಳೆದ ವರ್ಷ ಮೇ ತಿಂಗಳಿನಲ್ಲಿ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 41 ವರ್ಷದ ತಂದೆ ಮನೆಯಲ್ಲಿ ಪತ್ನಿ, ಮಗ ಇಲ್ಲದಿದ್ದಾಗ ತನ್ನ 14 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿದ್ದ.
Published by:Kavya V
First published: