ಚಿತ್ರದುರ್ಗದಲ್ಲಿ ನಕಲಿ ಪರೀಕ್ಷಾರ್ಥಿ ಬಂಧನದಿಂದ ರಾಜ್ಯದ ನಕಲಿ ಪರೀಕ್ಷಾ ಜಾಲ ಪತ್ತೆ
ರಾಜ್ಯದಲ್ಲಿ ಬಹು ದೊಡ್ಡ ನಕಲಿ ಪರೀಕ್ಷಾ ಜಾಲ ಇರುವುದು ತನಿಖೆಯಿಂದ ಹೊರಬಂದಿದ್ದು, ನಕಲಿ ಆಧಾರ್ ಕಾರ್ಡ್, ಐಡಿ ಕಾರ್ಡ್ ಹಾಗೂ ಹಾಲ್ ಟಿಕೆಟ್ ಬಳಸಿ ಪರೀಕ್ಷೆ ಬರೆಸುತ್ತಿದ್ದ ಬೆಳಗಾಂನ ಭೀಮ್ ಶೀ ಹುಲ್ಲೋಳ್ ಹಾಗೂ ಲಕ್ಷಣ್ ಪರನವರ್ ಎಂಬ ಮತ್ತಿಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
news18-kannada Updated:November 24, 2020, 7:55 AM IST

ಆರೋಪಿ ಸಿದ್ದರೂಢ ಮಲ್ಲಪ್ಪ ಒಡೆಯರ್
- News18 Kannada
- Last Updated: November 24, 2020, 7:55 AM IST
ಚಿತ್ರದುರ್ಗ (ನ.24): 2 ದಿನಗಳ ಹಿಂದೆ ಕರ್ನಾಟಕದಲ್ಲಿ ವಿಶೇಷ ಮೀಸಲು ಪಡೆಯ ಪರೀಕ್ಷೆ ಮುಕ್ತಾಯವಾಗಿದೆ. ಈ ಬೆನ್ನಲ್ಲೇ ಚಿತ್ರದುರ್ಗದಲ್ಲಿ ನಕಲಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿಗಳ ಮುಖವಾಡ ಬಯಲಾಗಿದೆ. ಅಲ್ಲದೆ, ರಾಜ್ಯದ ಬಹುತೇಕ ಪರೀಕ್ಷಾ ಕೇಂದ್ರಗಳಲ್ಲಿ ನಕಲಿ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆಂಬ ಸ್ಪೋಟಕ ಮಾಹಿತಿ ಹೊರ ಬಂದಿದೆ. ರಾಜ್ಯದಲ್ಲಿ KSRP ಮತ್ತು IRB ಮೀಸಲು ಪಡೆಯ ಲಿಖಿತ ಪರೀಕ್ಷೆ ನಡೆದಿದೆ. ಅದರಲ್ಲಿ ಕೋಟೆನಾಡು ಚಿತ್ರದುರ್ಗದ 22 ಪರಿಕ್ಷಾ ಕೇಂದ್ರಗಳಲ್ಲಿ ಒಟ್ಟು 4,769 ಅಭ್ಯರ್ಥಿಗಳು ಪರೀಕ್ಷಗೆ ಹಾಜರಾಗಿದ್ದರು. ಆದರೆ, ನಗರದ ಸರ್ಕಾರಿ ಬಾಲಕಿಯರ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ನಕಲಿ ಪರೀಕ್ಷಾರ್ಥಿ ಪರಿಕ್ಷೆ ಬರೆಯುವ ವೇಳೆ ಸಿಕ್ಕಿ ಬಿದ್ದಿದ್ದ.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಚಿತ್ರದುರ್ಗ ಎಸ್ಪಿ ಜಿ. ರಾಧಿಕಾ ಪರೀಕ್ಷಾ ಕೇಂದ್ರದಲ್ಲೇ ನಕಲಿ ಅಭ್ಯರ್ಥಿಯ ವಿಚಾರಣೆ ನಡೆಸಿದರು. ಈ ವೇಳೆ ಆರೋಪಿ ಸಿದ್ದರೂಢ ಮಲ್ಲಪ್ಪ ಒಡೆಯರ್ ಗೋಕಾಕ್ ಮೂಲದ ಬಸವರಾಜ್ ಸಿದ್ದಪ್ಪ ಚನ್ನಪ್ಪ ಗೋಳ್ ಎಂಬ ಹೆಸರಿನಲ್ಲಿ ಪರೀಕ್ಷೆ ಬರೆಯುತ್ತಿದ್ದುದಾಗಿ ಬಾಯಿಬಿಟ್ಟಿದ್ದ. ಇದನ್ನೇ ಬೆನ್ನತ್ತಿದ್ದ ಚಿತ್ರದುರ್ಗ ಎಸ್ಪಿ ರಾಧಿಕಾ ಆರೋಪಿಯನ್ನು ಮತ್ತಷ್ಟು ವಿಚಾರಣೆ ನಡೆಸಿದ್ದರು. ಈ ವೇಳೆ ರಾಜ್ಯದಲ್ಲಿ ಹಲವು ಕಡೆ ಇದೇ ಮಾದರಿಯಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆಂಬ ಮಾಹಿತಿ ಬಾಯಿಬಿಟ್ಟಿದ್ದ. ಇದರ ಬೆನ್ನತ್ತಿದ್ದ ಚಿತ್ರದುರ್ಗ ಪೊಲೀಸರು ಬೆಂಗಳೂರಿನ ಹಲವು ಕೇಂದ್ರಗಳಲ್ಲಿ ಪರೀಕ್ಷೆ ಬರೆಯುತ್ತಿದ್ದ ನಕಲಿ ಪರೀಕ್ಷಾರ್ಥಿಗಳನ್ನು ವಶಕ್ಕೆ ಪಡೆದಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಬಹು ದೊಡ್ಡ ನಕಲಿ ಪರೀಕ್ಷಾ ಜಾಲ ಇರುವುದು ತನಿಖೆಯಿಂದ ಹೊರ ಬಂದಿದ್ದು, ನಕಲಿ ಆಧಾರ್ ಕಾರ್ಡ್, ಐಡಿ ಕಾರ್ಡ್ ಹಾಗೂ ಹಾಲ್ ಟಿಕೆಟ್ ಬಳಸಿ ಪರೀಕ್ಷೆ ಬರೆಸುತ್ತಿದ್ದ ಇಬ್ಬರೂ ಕಿಂಗ್ ಪಿನ್ ಗಳ ಮಾಹಿತಿಯೂ ಪೊಲೀಸರು ಕಲೆ ಹಾಕಿದ್ದರು. ಇದನ್ನೇ ಬೆನ್ನತ್ತಿದ್ದ ಚಿತ್ರದುರ್ಗ ಪೊಲೀಸರು ಪರೀಕ್ಷೆ ಬರೆಸುತ್ತಿದ್ದ, ಕಿಂಗ್ ಪಿನ್ ಗಳಾದ ಬೆಳಗಾಂನ ಭೀಮ್ ಶೀ ಹುಲ್ಲೋಳ್ ಹಾಗೂ ಲಕ್ಷಣ್ ಪರನವರ್ ಎಂಬ ಮತ್ತಿಬ್ಬರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಇದೇ ಜಾಲ ರಾಜ್ಯದ 20ಕ್ಕೂ ಹೆಚ್ಚು ಕಡೆ ಪರೀಕ್ಷಾ ಕೇಂದ್ರಗಳಲ್ಲಿ ಈ ರೀತಿಯಲ್ಲಿ ಎಕ್ಸಾಂ ಬರೆದಿದ್ದಾರೆಂಬ ಆತಂಕಕಾರಿ ಮಾಹಿತಿ ಬಯಲಾಗಿದೆ.
ಇದನ್ನೂ ಓದಿ: ಮಸ್ಕಿ ಉಪಚುನಾವಣೆಗೆ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ರಣಕಹಳೆ
ಎರಡು ಲಕ್ಷ ಹಣದಾಸೆಗೆ ಈ ರೀತಿ ನಕಲಿ ಪರೀಕ್ಷಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆಂಬ ಸ್ಪೋಟಕ ಮಾಹಿತಿ ಹೊರ ಬಿದ್ದಿದೆ. ಅಷ್ಟೆ ಅಲ್ಲದೆ ಆರೋಪಿ ಸಿದ್ದರೂಢ ಮಲ್ಲಪ್ಪ ಒಡೆಯರ್ ಈ ಹಿಂದೆ ಯಲಹಂಕದಲ್ಲಿ CPC ಹಾಗೂ ಬೆಳಗಾವಿಯಲ್ಲಿ APC ಪರೀಕ್ಷೆ ಬರೆದಿದ್ದಾಗಿ ಪೊಲೀಸ್ ತನಿಖೆ ಬಾಯ್ಬಿದ್ದಾನೆ. ಈ ಜಾಲದ ಹಿಂದೆ ಪೊಲೀಸರು ಕೂಡ ಭಾಗಿಯಾಗಿರೋ ಶಂಕೆ ಕೂಡಾ ವ್ಯಕ್ತವಾಗಿದ್ದು, ಚಿತ್ರದುರ್ಗ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಟ್ಟಾರೆ, ಬೇರೆಯವರ ಹೆಸರಲ್ಲಿ ನಕಲಿ ಅಭ್ಯರ್ಥಿ ಪರೀಕ್ಷೆ ಬರೆಯುತ್ತಿದ್ದಾಗ ಸಿಕ್ಕಿಬಿದ್ದಿದ್ದರಿಂದ ರಾಜ್ಯದಲ್ಲಿನ ಪರಿಕ್ಷಾ ಗೋಲ್ಮಾಲ್ ಪ್ರಕರಣ ಬೆಳಕಿಗೆ ಬಂದಿದೆ. ಈ ಬೃಹತ್ ಜಾಲವನ್ನು ಚಿತ್ರದುರ್ಗ ಎಸ್ಪಿ ಜಿ. ರಾಧಿಕಾ ಪತ್ತೆ ಹಚ್ಚಿದ್ದಾರೆ. ಈ ಕುರಿತು ರಾಜ್ಯದ ನಾನಾ ಭಾಗಗಳಲ್ಲಿ ತನಿಖೆ ನಡೆಯುತ್ತಿದೆ. ಈ ಜಾಲದ ಹಿಂದೆ ಯಾರ ಕೈವಾಡ ಇದೆ ಎಂಬುದನ್ನ ಪತ್ತೆ ಹಚ್ಚುವಲ್ಲಿ ರಹಸ್ಯ ಕಾರ್ಯಾಚರಣೆ ನಡೆಯುತ್ತಿದೆ. ಆದಷ್ಟು ಬೇಗ ಈ ನಕಲಿ ಜಾಲ ಹೊರ ಬರಬೇಕು ಎಂಬುದು ಅಸಲಿ ಪರೀಕ್ಷಾರ್ಥಿಗಳ ಒತ್ತಾಯ.
(ವರದಿ: ವಿನಾಯಕ ತೊಡರನಾಳ್)
ಈ ವೇಳೆ ಸ್ಥಳಕ್ಕೆ ಆಗಮಿಸಿದ ಚಿತ್ರದುರ್ಗ ಎಸ್ಪಿ ಜಿ. ರಾಧಿಕಾ ಪರೀಕ್ಷಾ ಕೇಂದ್ರದಲ್ಲೇ ನಕಲಿ ಅಭ್ಯರ್ಥಿಯ ವಿಚಾರಣೆ ನಡೆಸಿದರು. ಈ ವೇಳೆ ಆರೋಪಿ ಸಿದ್ದರೂಢ ಮಲ್ಲಪ್ಪ ಒಡೆಯರ್ ಗೋಕಾಕ್ ಮೂಲದ ಬಸವರಾಜ್ ಸಿದ್ದಪ್ಪ ಚನ್ನಪ್ಪ ಗೋಳ್ ಎಂಬ ಹೆಸರಿನಲ್ಲಿ ಪರೀಕ್ಷೆ ಬರೆಯುತ್ತಿದ್ದುದಾಗಿ ಬಾಯಿಬಿಟ್ಟಿದ್ದ. ಇದನ್ನೇ ಬೆನ್ನತ್ತಿದ್ದ ಚಿತ್ರದುರ್ಗ ಎಸ್ಪಿ ರಾಧಿಕಾ ಆರೋಪಿಯನ್ನು ಮತ್ತಷ್ಟು ವಿಚಾರಣೆ ನಡೆಸಿದ್ದರು. ಈ ವೇಳೆ ರಾಜ್ಯದಲ್ಲಿ ಹಲವು ಕಡೆ ಇದೇ ಮಾದರಿಯಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆಂಬ ಮಾಹಿತಿ ಬಾಯಿಬಿಟ್ಟಿದ್ದ. ಇದರ ಬೆನ್ನತ್ತಿದ್ದ ಚಿತ್ರದುರ್ಗ ಪೊಲೀಸರು ಬೆಂಗಳೂರಿನ ಹಲವು ಕೇಂದ್ರಗಳಲ್ಲಿ ಪರೀಕ್ಷೆ ಬರೆಯುತ್ತಿದ್ದ ನಕಲಿ ಪರೀಕ್ಷಾರ್ಥಿಗಳನ್ನು ವಶಕ್ಕೆ ಪಡೆದಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.