• Home
  • »
  • News
  • »
  • state
  • »
  • Muruga Mutt: ಮುರುಘಾ ಸ್ವಾಮಿ ವಿರುದ್ಧ ಸುಳ್ಳು ದೂರು; ಮಠದ ಅಡುಗೆ ಸಹಾಯಕಿ ಬಂಧನ!

Muruga Mutt: ಮುರುಘಾ ಸ್ವಾಮಿ ವಿರುದ್ಧ ಸುಳ್ಳು ದೂರು; ಮಠದ ಅಡುಗೆ ಸಹಾಯಕಿ ಬಂಧನ!

ಮುರುಘಾ ಸ್ವಾಮಿ

ಮುರುಘಾ ಸ್ವಾಮಿ

ಮುರುಘಾಶ್ರೀ ವಿರುದ್ಧ 2ನೇ ಫೋಕ್ಸೋ ದೂರು ನೀಡಿದ್ದ ಮಹಿಳೆಯನ್ನು ಅರೆಸ್ಟ್​​ ಮಾಡಲಾಗಿದೆ. ನಿನ್ನೆ ಮೈಸೂರಿನ ಒಡನಾಡಿ ಸಂಸ್ಥೆಯಿಂದ ಕರೆತಂದಿದ್ದ ಪೊಲೀಸರು, ಮಹಿಳೆಯ ವಿಚಾರಣೆ ನಡೆಸಿ ಬಂಧಿಸಿದ್ದಾರೆ. 

  • News18 Kannada
  • Last Updated :
  • Karnataka, India
  • Share this:

ಚಿತ್ರದುರ್ಗ (ನ.11): ಚಿತ್ರದುರ್ಗದ ಮುರುಘಾ ಮಠದ (Chitradurga Muruga Mutt) ಶಿವಮೂರ್ತಿ ಶರಣರ ವಿರುದ್ಧದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಗಳ ವಿರುದ್ಧ ದೂರು ನೀಡುವಂತೆ ಬಾಲಕಿಗೆ ಕುಮ್ಮಕ್ಕು ನೀಡಿದ ಆರೋಪದ ಮೇರೆಗೆ ಚಿತ್ರದುರ್ಗ ಪೊಲೀಸರು (Chitradurga Rural Police) ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ. ಮಠದ ಅಡುಗೆ ಸಹಾಯಕಿ ಬಂಧನ ಮಾಡಲಾಗಿದೆ. 


ಚಿತ್ರದುರ್ಗ ಪೊಲೀಸರಿಂದ ಮಹಿಳೆ ಬಂಧನ


ಮುರುಘಾಶ್ರೀ ವಿರುದ್ಧ 2ನೇ ಫೋಕ್ಸೋ ದೂರು ನೀಡಿದ್ದ ಮಹಿಳೆಯನ್ನು ಅರೆಸ್ಟ್​​ ಮಾಡಲಾಗಿದೆ. ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಮೈಸೂರಿನ ಒಡನಾಡಿ ಸಂಸ್ಥೆಯಿಂದ ಕರೆತಂದಿದ್ದ ಪೊಲೀಸರು, ಮಹಿಳೆಯ ವಿಚಾರಣೆ ನಡೆಸಿ ಬಂಧಿಸಿದ್ದಾರೆ.


ಸ್ವಾಮೀಜಿ ಆಪ್ತರು ಹೇಳೋದೇನು?


ಚಾರ್ಜ್ ಶೀಟ್​​ನಲ್ಲಿ ಮುರುಘಾ ಸ್ವಾಮಿ ಆಪ್ತರಿಂದ ಮಹತ್ವದ ಹೇಳಿಕೆ ದಾಖಲಾಗಿದೆ. ಮುರುಘಾ ಸ್ವಾಮಿ ಸಹಾಯಕ ಮಹಾಲಿಂಗ ಪೊಲೀಸರೆದುರು ಅನೇಕ ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ. ಹಗಲಿನಲ್ಲಿ ಆಗಾಗ್ಗೆ ರಶ್ಮಿ, ಮಕ್ಕಳೊಂದಿಗೆ ಬರುತ್ತಿದ್ದಳು. ಇನ್ನು ಕೆಲವು ಸಲ ರಾತ್ರಿ ವೇಳೆ ಬಾಲಕಿಯರು ಹಿಂಬಾಗಿಲಿನಿಂದ ಮುರುಘಾ ಸ್ವಾಮಿ ರೂಮಿಗೆ ಹೋಗುತ್ತಿದ್ದರು ಎಂದು ಮುರುಘಾ ಸ್ವಾಮಿ ಸಹಾಯಕ ಮಹಾಲಿಂಗ ಹೇಳಿದ್ದಾರೆ.


murugha swamy case police filed chargesheet mrq
ಮುರುಘಾ ಸ್ವಾಮಿ


ಬೆಡ್​ ಮೇಲೆ ಕಲೆಗಳು


ಮುರುಘಸ್ವಾಮಿಯ ಬೆಡ್​ ಮೇಲೆ ಕೆಲವು ಕಲೆಗಳು ಆಗಿರುತ್ತಿತ್ತು. ಸ್ವಚ್ಛವಾಗಿ ತೊಳೆಯುವಂತೆ ಮುರುಘಾ ಸ್ವಾಮಿ ಹೇಳುತ್ತಿದ್ದರು. ಬಟ್ಟೆ ಮೇಲೆ ಕೆಂಪು ಕಂದು ಬಣ್ಣದ ಕಲೆ ಉಳಿಯದಂತೆ ಸ್ವಚ್ಛ ತೊಳೆಯಲು ಮುರುಘಾ ಸ್ವಾಮಿ ಹೇಳುತ್ತಿದ್ದರು. ಬಟ್ಟೆ ತೊಳೆದ ಬಳಿಕ ಕಲಸ ನೋಡಿ ಖಾತ್ರಿ ಪಡಿಸಿಕೊಳ್ಳುತ್ತಿದ್ದರು ಎಂದು ಮುರುಘಾಶ್ರೀ ಸಹಾಯಕ‌ ಮಲ್ಲಿಕಾರ್ಜುನ ಹೇಳಿಕೆ ನೀಡಿದ್ದಾರೆ.


ಅಡುಗೆ ಭಟ್ಟ ಹೇಳಿದ್ದೇನು?


ಮುರುಘಾ ಸ್ವಾಮಿ ಅಡುಗೆಭಟ್ಟ ಕರಿಬಸ್ಸಪ್ಪ ಹೇಳಿಕೆ ದಾಖಲು ಮಾಡಲಾಗಿದೆ. ರಶ್ಮಿ ಮತ್ತು ಮಕ್ಕಳು ಮುರುಘಾ ಸ್ವಾಮಿ ರೂಮಿಗೆ ಹೋದಾಗ ನನ್ನನ್ನು ಅವರು ಒಳಗೆ ಬಿಟ್ಟುಕೊಳ್ಳುತ್ತಿರಲಿಲ್ಲ ಎಂದು ಹೇಳಿದ್ದಾರೆ. ಸುಮಾರು ಗಂಟೆಗಳ ಬಳಿಕ ರಶ್ಮಿ ಮತ್ತು ಮಕ್ಕಳು ಹೊರಬರುತ್ತಿದ್ದರು. ಹಾಸ್ಟೆಲ್ ಬಾಲಕಿಯರನ್ನು ರೂಮಿಗೆ ಕರೆಸಿಕೊಳ್ಳುತ್ತಾರೆಂದು ಮಠಕ್ಕೆ ಬರುವ ಜನ ಮಾತಾಡುತ್ತಿದ್ದರು ಎಂದು ಹೇಳಿದ್ದಾರೆ.


ಹಾಸ್ಟೆಲ್ ನ ಇಬ್ಬರು ಬಾಲಕಿಯರ ಮೇಲೆ ದೌರ್ಜನ್ಯ


ಈ ಬಗ್ಗೆ ನಮಗೂ ಸಹ ಕೆಲವೊಮ್ಮೆ ಅನುಮಾನ ಬರುತ್ತಿತ್ತು. ನಾವು ಬಾಯಿಬಿಟ್ಟರೆ ಕೆಲಸ ಬಿಡಿಸುತ್ತಾರೆಂಬ ಭಯವಿತ್ತು. ಹಾಸ್ಟೆಲ್ ನ ಇಬ್ಬರು ಬಾಲಕಿಯರ ಮೇಲೆ ದೌರ್ಜನ್ಯ ಮಾಡಿದ್ದಾರೆಂದು ಮಠದಲ್ಲಿ ಮಾತಾಡುತ್ತಿದ್ದರು ಎಂದು ಅಡುಗೆ ಭಟ್ಟ ಹೇಳಿದ್ದಾರೆ.


ಆಫೀಸ್​ ಬಾಯ್ ಬಾಯ್ಬಿಟ್ಟ ಸತ್ಯ


ಮುರುಘಾ ಸ್ವಾಮಿ ಆಫೀಸ್ ಬಾಯ್ ಪ್ರಜ್ವಲ್ ಹೇಳಿಕೆ ದಾಖಲು ಮಾಡಿದ್ದಾರೆ. ಕೆಲ ಬಾಲಕಿಯರು ಮುರುಘಾಶ್ರೀ ರೂಮಿಗೆ ಕರೆಸಿಕೊಳ್ಳುತ್ತಿದ್ದರು. ಬೆಡ್ ರೂಮ್ ನಲ್ಲಿ ಕೆಲಸವಿದೆ ಎಂದು ಕರೆಸಿಕೊಳ್ಳುತ್ತಿದ್ದರು. ಸಂತ್ರಸ್ತ ಬಾಲಕಿಯರಿಬ್ಬರನ್ನು ಬೆಡ್ ರೂಮಿಗೆ ಕರೆಸಿದ್ದು ನನಗೆ ಗೊತ್ತಿದೆ ಆದರೆ, ರೂಮಿನಲ್ಲಿ ಏನು ನಡೆದಿದೆ ನನಗೆ ಗೊತ್ತಿಲ್ಲ ಎಂದು ಆಫೀಸ್ ಬಾಯ್ ಪ್ರಜ್ವಲ್ ಹೇಳಿದ್ದಾರೆ.


ಚಾಕ್ಲೆಟ್​ ರೂಪದ ವಸ್ತು ತಿನ್ನಿಸಿ ಬಲತ್ಕಾರ


ಮುರುಘಾ ಮಠದ ಲೈಂಗಿಕ ದೌರ್ಜನ್ಯ ಕೇಸ್​​ನ ಸ್ಫೋಟಕ ಸುದ್ದಿ ಹೊರಬಿದ್ದಿಕೆ. ಚಾರ್ಜ್​ಶೀಟ್​​ನಲ್ಲಿ ಯಾರು ಏನ್​ ಹೇಳಿಕೆ ಕೊಟ್ಟಿದ್ದಾರೆ ಅಂತ ಕೇಳಿದ್ರೆ ಎಂಥವ್ರೂ ದಂಗಾಗ್ತಾರೆ. 2018ರಲ್ಲಿ 1 ಬಾರಿ, 2020ರಲ್ಲಿ ಇನ್ನೊಂದು ಬಾರಿ ಚಾಕ್ಲೆಟ್​ ರೂಪದ ಮತ್ತು ಬರುವ ವಸ್ತು ತಿನ್ನಿಸಿ ಬಲತ್ಕಾರ ಮಾಡಿದ್ರಂತೆ.


ಇದನ್ನೂ ಓದಿ:  Murugha Shri: ಟಿಪ್ಪು ವರ್ಣನೆ ಮಾಡಿದ್ದಕ್ಕೆ ಮುರುಘಾ ಶ್ರೀಗಳಿಗೆ ಈ ಪರಿಸ್ಥಿತಿ: ಶಾಸಕ ಯತ್ನಾಳ್


ಡ್ರಿಂಕ್ಸ್ ಮಾಡಿ ಬೈದ್ರು- ಸಂತ್ರಸ್ತೆ


ದೈಹಿಕ ಆಸೆ ತೀರಿದ ಬಳಿಕ ಬೆದರಿಕೆ ಹಾಕುತ್ತಿದ್ರಂತೆ. ಮಠದಲ್ಲಿದ್ದಾಗ ರಶ್ಮಿ ಅಕ್ಕ ಸ್ವಾಮೀಜಿ ರೂಂಗೆ ಕಳಿಸುತ್ತಿದ್ದರು. ಹೋಗಲ್ಲ ಅಂದರೆ ಬೈಯುವುದು, ಹೊಡೆಯುವುದು ಮಾಡ್ತಿದ್ರು ಎಂದು ಸಂತ್ರಸ್ಥ ಬಾಲಕಿ ಹೇಳಿದ್ದಾಳೆ. ಸ್ವಾಮೀಜಿ ನನ್ನ ಮೇಲೆ ಅತ್ಯಾಚಾರ ಮಾಡಿದ್ರು. ಡ್ರಿಂಕ್ಸ್ ಮಾಡಿ ಬೈದ್ರು. ಗುಟ್ಟು ರಟ್ಟು ಮಾಡಲು ಹೋದವಳ ಮರ್ಡರ್ ಆಗಿದ್ಯಂತೆ. ಆದ್ದರಿಂದ ನಾನು, ನನ್ನ ಸ್ನೇಹಿತೆ ಮಾತನಾಡಿಕೊಂಡು ಬೆಂಗಳೂರಿಗೆ ಬಂದ್ವಿ ಎಂದು ಇನ್ನೊಬ್ಬ ಬಾಲಕಿ ಹೇಳಿದ್ದಾಳೆ.

Published by:ಪಾವನ ಎಚ್ ಎಸ್
First published: