Chitradurga: ದೇಗುಲಗಳನ್ನೇ ಟಾರ್ಗೆಟ್ ಮಾಡಿದ್ದ ಖತರ್ನಾಕ್ ಕಳ್ಳರ ಗ್ಯಾಂಗ್ ಅರೆಸ್ಟ್!

ಆಭರಣಗಳನ್ನ ಕದ್ದು ಪರಾರಿಯಾಗಿದ್ದ ಅಂತರಾಜ್ಯದ ಖತರ್ನಾಕ್ ಕಳ್ಳರನ್ನ ಚಿತ್ರದುರ್ಗ ಜಿಲ್ಲೆ ಹಿರಿಯೂರು ಪೋಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ಚಿತ್ರದುರ್ಗ ಜಿಲ್ಲೆಯ ಹಲವೆಡೆ ದೇವಸ್ಥಾನಗಳನ್ನೇ ಟಾರ್ಗೆಟ್‌ ಮಾಡಿ ಕಳ್ಳತನ ಮಾಡುತ್ತಿದ್ದರು.

ಆಭರಣಗಳನ್ನ ಕದ್ದು ಪರಾರಿಯಾಗಿದ್ದ ಅಂತರಾಜ್ಯದ ಖತರ್ನಾಕ್ ಕಳ್ಳರನ್ನ ಚಿತ್ರದುರ್ಗ ಜಿಲ್ಲೆ ಹಿರಿಯೂರು ಪೋಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ಚಿತ್ರದುರ್ಗ ಜಿಲ್ಲೆಯ ಹಲವೆಡೆ ದೇವಸ್ಥಾನಗಳನ್ನೇ ಟಾರ್ಗೆಟ್‌ ಮಾಡಿ ಕಳ್ಳತನ ಮಾಡುತ್ತಿದ್ದರು.

ಆಭರಣಗಳನ್ನ ಕದ್ದು ಪರಾರಿಯಾಗಿದ್ದ ಅಂತರಾಜ್ಯದ ಖತರ್ನಾಕ್ ಕಳ್ಳರನ್ನ ಚಿತ್ರದುರ್ಗ ಜಿಲ್ಲೆ ಹಿರಿಯೂರು ಪೋಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ಚಿತ್ರದುರ್ಗ ಜಿಲ್ಲೆಯ ಹಲವೆಡೆ ದೇವಸ್ಥಾನಗಳನ್ನೇ ಟಾರ್ಗೆಟ್‌ ಮಾಡಿ ಕಳ್ಳತನ ಮಾಡುತ್ತಿದ್ದರು.

  • Share this:
ಚಿತ್ರದುರ್ಗ(ಮೇ.10): ದೇವಸ್ಥಾನಗಳ (Temple) ಬೀಗ ಮುರಿದು, ಹುಂಡಿ ಹಣ, ದೇವರ ಆಭರಣಗಳನ್ನ (Jewellery) ಕದ್ದು ಪರಾರಿಯಾಗಿದ್ದ ಅಂತರಾಜ್ಯದ ಖತರ್ನಾಕ್ ಕಳ್ಳರನ್ನ ಚಿತ್ರದುರ್ಗ (Chitradurga) ಜಿಲ್ಲೆ ಹಿರಿಯೂರು ಪೋಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ಚಿತ್ರದುರ್ಗ ಜಿಲ್ಲೆಯ ಹಲವೆಡೆ ದೇವಸ್ಥಾನಗಳನ್ನೇ ಟಾರ್ಗೆಟ್‌ ಮಾಡಿ ಕಳ್ಳತನ ಮಾಡುತ್ತಿದ್ದರು. ಇದರಿಂದ ಜಿಲ್ಲೆಯ ಪೋಲೀಸರು (Police) ಕಣ್ಣಿಗೆ ನಿದ್ದೆಯಿಲ್ಲದೆ ರಾತ್ರಿ ಹಗಲು ಎನ್ನದೆ ಗಸ್ತು ತಿರುಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇತ್ತೀಚೆಗೆ ಹಿರಿಯೂರು ತಾಲ್ಲೂಕಿನ ಎರಡು ದೇವಸ್ಥಾನಗಳಲ್ಲಿ ಒಂದೇ ದಿನ ಬೀಗ ಒಡೆದು ಹಣ, ದೇವರ ಆಭರಣಗಳನ್ನ  ಕದ್ದು ಪರಾರಿ ಆಗಿದ್ದು ಪೋಲೀಸರಿಗೆ ಮತ್ತಷ್ಟು ತಲೆನೋವಾಗಿತ್ತು.

ಅದು ಚಿತ್ರದುರ್ಗ ಜಿಲ್ಲೆ ಹಿರಿಯೂರು ಪಟ್ಟಣದಲ್ಲಿರುವ ಐತಿಹಾಸಿಕ ಹಿನ್ನಲೆಯ ತೇರು ಮಲ್ಲೇಶ್ವರ ದೇವಸ್ಥಾನ, ಹಾಗೂ ತಾಲ್ಲೂಕಿನ ಮಸ್ಕಲ್ ಗ್ರಾಮದ ಚಿಕ್ಕ ಮೈಲಾರ ಲಿಂಗೇಶ್ವರ ಸೇರಿ ಎರಡೂ ದೇಗುಲಗಳ ಬೀಗ ಮುರಿದು ಆಭರಣ, ಹುಂಡಿ ಹಣ ದೋಚಿದ್ದ ಕಳ್ಳರು ಪರಾರಿ ಆಗಿದ್ದರು. ಎರಡೂ ಪ್ರಕರಣ ದಾಖಲಿಸಿಕೊಂಡ ಪೋಲೀಸರು, ಕಳ್ಳತನ ಮಾಡಿದ್ದ ಕಳ್ಳರ ಚಹರೆಯನ್ನ ಸಿಸಿ ಟಿವಿ ವೀಡಿಯೋ ಮೂಲಕ ನೋಡಿ ಅನುಮಾನಿತ ಆರೋಪಿಗಳ ಸೆರೆ ಹಿಡಿಯೋಕೆ ಬಲೆ ಬೀಸಿ ತನಿಖೆ ಪ್ರಾರಂಭ ಮಾಡಿದ್ದರು.

ಅರೆಸ್ಟ್ ಆದ ಕಳ್ಳರು

ಅದರಂತೆ ಈಗ ಆಂದ್ರಾ ಮೂಲದ ರಮೇಶ್ ರಾಮು, ಪ್ರಸಾದ್ ಗುರುಪ್ರಸಾದ್ ಎಂಬ  ಖತರ್ನಾಕ್ ಕಳ್ಳರನ್ನ ಹಿರಿಯೂರಿನ APMC ಬಳಿ ಪೋಲೀಸರು ಬಂದಿಸಿ ಜೈಲಿಗೆ ಕಳುಸಿದ್ದಾರೆ‌. ಕಳ್ಳರು ಈ ಹಿಂದೆಯೂ ಜಿಲ್ಲೆಯ ಹೊಸದುರ್ಗ, ಶ್ರೀರಾಂಪುರ, ಪರುಶುರಾಂಪುರ, ಶಿರಾ, ಮದುಗಿರಿ ಸೇರಿದಂತೆ ಆಂದ್ರಾದ ಅಮರಾಪುರ ಪೋಲೀಸ್ ಠಾಣೆಗಳ ಒಟ್ಟು 15 ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.

ಅಣ್ಣ-ತಮ್ಮಂದಿರೇ ಕಳ್ಳರು

ಇವರಿಬ್ಬರೂ ಅಣ್ಣ ತಮ್ಮರಾಗಿದ್ದು  ರಾಮು 15 , ಪ್ರಸಾದ್ 19 ಪ್ರಕರಣಗಳಲ್ಲಿ ಬಾಗಿಯಾಗಿದ್ದಾರೆ. ಬಂದಿತ ಆರೋಪಿಗಳಿಂದ ಹಿರಿಯೂರುನ ತೇರು ಮಲ್ಲೇಶ್ವರ  ದೇವಸ್ಥಾದಲ್ಲಿ  ಕದ್ದಿದ್ದ  2 ಲಕ್ಷ 40 ಸಾವಿರ, 500 ಮೌಲ್ಯದ ಮೂರು ಕೆಜಿ ತೂಕದ ಬೆಳ್ಳಿ ಪ್ರಭಾವಳಿ, 41 ಸಾವಿರ ಮೌಲ್ಯದ,  500 ಗ್ರಾಂ ತೂಕದ ನಾಗಭರಣ , 500 ಗ್ರಾಂ ತೂಕದ 41 ಸಾವಿರ ಮೌಲ್ಯದ  ಬೆಳ್ಳಿ ನಾಗಭರಣ , ಕೃತ್ಯಕ್ಕೆ ಬಳಸಿದ್ದ ಫಲ್ಸರ್ ಬೈಕ್ ಹಾಗು 17 ಸಾವಿರ ನಗದು,  ಸೇರಿ, ಮಸ್ಕಲ್ ಚಿಕ್ಕಮೈಲಾರ ದೇಗುಲದ 41 ಸಾವಿರ ಬೆಲೆ ಬಾಳುವ,  500 ಗ್ರಾಂ ಬೆಳ್ಳಿ ಕಿರೀಟ, ನಾಗಾಭರಣ, ಶಿರಾ, ಮದುಗಿರಿ,  ಠಾಣೆ ವ್ಯಾಪ್ತಿಗೆ ಸೇರಿದ ತಲಾ ಒಂದೊಂದು ಬೈಕುಗಳು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಭಾರೀ ಮಳೆ; ಇನ್ನೂ ಸತತ 3 ಗಂಟೆಗಳ ಕಾಲ ಅಬ್ಬರಿಸಲಿದ್ದಾನೆ ವರುಣ

ಒಟ್ಟು5 ಕೆಜಿ ಬೆಳ್ಳಿ, 3 ಬೈಕು, 17400 ನಗದು, ಸೇರಿ ಒಟ್ಟು 7 ಲಕ್ಷದ 2 ಸಾವಿರದ 400 ರೂ ಮೌಲ್ಯವನ್ನ  ವಶಪಡಿಸಿಕೊಳ್ಳಲಾಗಿದೆ.ಬಂದಿತ ಆರೋಪಿಗಳು ಹಿರಿಯೂರು ನಗರದಲ್ಲಿಯೇ ವಾಸವಿದ್ದು ಎಲ್ಲಾ ಕೃತ್ಯಗಳನ್ನು ಮಾಡಲು ಪ್ಲಾನ್ ಮಾಡುತ್ತಿದ್ದರು ಎನ್ನಲಾಗಿದೆ.

2 ವರ್ಷಗಳ ಹಿಂದೆ ತಾನು ಕೆಲಸ ಮಾಡುತ್ತಿದ್ದ ಮನೆಯೊಂದನ್ನು ಚೆನ್ನಾಗಿ ಗಮನಿಸಿದ 34 ವರ್ಷದ ಮನೆ ಕೆಲಸ ಮಾಡುವ ಮೋತಿ ಸಿಂಗ್ ಚೌಹಾಣ್ ಅದೇ ಮನೆಯಲ್ಲಿಯೇ ಕಳ್ಳತನ ಮಾಡಲು ತನ್ನ ದೇಹದ ತೂಕ ಇಳಿಸಿಕೊಳ್ಳಲು 3 ತಿಂಗಳ ಕಾಲ ಕಟ್ಟುನಿಟ್ಟಾದ ಆಹಾರ ಕ್ರಮ ಪಾಲಿಸಿದ್ದಾನೆ.

ಒಂದು ಹೊತ್ತು ಮಾತ್ರ ಊಟ

2 ವರ್ಷಗಳ ಹಿಂದೆ ಅವನು ತಾನು ಕೆಲಸ ಮಾಡುತ್ತಿದ್ದ ಮನೆಯನ್ನು ಬಿಟ್ಟ ನಂತರವೂ ಭೋಪಾಲ್‌ನಲ್ಲಿರುವ ಆ ಮನೆಯಲ್ಲಿರುವ ಅತ್ಯಂತ ದುರ್ಬಲ ಸ್ಥಳ ನೆನಪಿಸಿಕೊಂಡನು. ಆಗ ಅವನ ಕಣ್ಣು ಮುಂದೆ ಬಂದಿದ್ದು ಆ ಮನೆಯ ಒಂದು ಗಾಜಿನ ಕಿಟಕಿ. ಆದರೆ, ಈ ಗಾಜಿನ ಕಿಟಕಿಯ ಮೂಲಕ ಮನೆಯೊಳಗೆ ಹೋಗಲು ಇನ್ನೂ ತೆಳ್ಳಗಿರಬೇಕು ಮತ್ತು ತನ್ನ ಪ್ರಸ್ತುತ ದೇಹದ ತೂಕದಿಂದ ಇದು ಸಾಧ್ಯವಿಲ್ಲ ಎಂದು ಅವನಿಗೆ ತಿಳಿದಿತ್ತು. ಇದನ್ನು ಅರಿತ ಮೋತಿ ಸಿಂಗ್ ಆ ಆಕಾರಕ್ಕೆ ಬರಲು 3 ತಿಂಗಳುಗಳ ಕಾಲ ಬರೀ ಒಂದು ಬಾರಿ ಅಷ್ಟೇ ಊಟ ಮಾಡಿದರು ಮತ್ತು 10 ಕೆಜಿ ತೂಕ ಇಳಿಸಿಕೊಂಡಿದ್ದರು ಎಂದು ಹೇಳಲಾಗುತ್ತಿದೆ.

ಸುದ್ದಿ ಮಾಧ್ಯಮದ ಪ್ರಕಾರ, ಮೂಲತಃ ರಾಜಸ್ಥಾನದ ಉದಯಪುರ ಮೂಲದ ಚೌಹಾಣ್, ಮೋಹಿತ್ ಮರಡಿಯಾ ಅವರ ಬಸಂತ್ ಬಹಾರ್ ಸೊಸೈಟಿ ನಿವಾಸದಲ್ಲಿ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಎಲ್ಲಾ ಸಿಸಿಟಿವಿ ಕ್ಯಾಮೆರಾಗಳನ್ನು ಎಲ್ಲಿ ಹಾಕಲಾಗಿದೆ ಮತ್ತು ಯಾರಿಗೂ ಕಾಣಿಸದ ಸ್ಥಳಗಳು ಯಾವುದು ಎಂದು ತಿಳಿದಿದ್ದರು. ಬೆಲೆಬಾಳುವ ವಸ್ತುಗಳನ್ನು ಮರಡಿಯಾ ನಿವಾಸದಲ್ಲಿ ಎಲ್ಲಿ ಇಡಲಾಗಿದೆ ಎಂದು ಸಹ ಅವನಿಗೆ ತಿಳಿದಿತ್ತು.

ಇದನ್ನೂ ಓದಿ: Benagaluru: ಮಿಸ್ ಆದವನ ಮಾಸ್ಕ್ ಕೊಟ್ಟ ಸುಳಿವು; ಲಾರಿಯಲ್ಲಿ ಸಿಗ್ತು ಕಾಲೇಜು ಹುಡ್ಗನ ಮೃತದೇಹ

ಕೆಲವು ತಿಂಗಳ ಹಿಂದೆ, ಮರಡಿಯಾ ಕುಟುಂಬವು ಕೆಲವು ದಿನಗಳ ಕಾಲ ರಜೆಗೆ ಹೋಗುತ್ತಿದ್ದಾರೆ ಎಂದು ಚೌಹಾಣ್‌ಗೆ ತಿಳಿಯಿತು. ಎಲ್ಲಾ ಸಿಸಿಟಿವಿ ಕ್ಯಾಮೆರಾಗಳು ಎಲ್ಲಿವೆ ಎಂದು ಅವನಿಗೆ ತಿಳಿದಿದ್ದರಿಂದ, ಅವನು ಕ್ಯಾಮೆರಾಗಳನ್ನು ತಪ್ಪಿಸಿಕೊಂಡು ತನ್ನ ಸೈಕಲ್ ಮೇಲೆ ಮರಡಿಯಾ ನಿವಾಸವನ್ನು ತಲುಪಿದನು.

ಕಿಟಕಿಯ ಗಾಜನ್ನು ಕತ್ತರಿಸಲು ಅವನು ತನ್ನ ಉಪಕರಣಗಳನ್ನು ಬಳಸಿ ಅದರ ಮೂಲಕ ಒಳಗೆ ಹೋದನು. ನಂತರ ಮನೆಯಲ್ಲಿದ್ದ 37.14 ಲಕ್ಷ ರೂಪಾಯಿ ಮೊತ್ತದ ನಗದು ಮತ್ತು ಚಿನ್ನಾಭರಣಗಳನ್ನು ಕಳವು ಮಾಡಿದನು.
Published by:Divya D
First published: