ನಿರ್ಜನ ಪ್ರದೇಶದಲ್ಲಿರೋ ಜೋಡಿಯೇ ಇವನ ಟಾರ್ಗೆಟ್; ಪೊಲೀಸರ ಬಲೆಗೆ ಬಿದ್ದಿದ್ದೇಗೆ?

ಅರಣ್ಯ ಪ್ರದೇಶ, ಪಾರ್ಕ್, ದೇವಸ್ಥಾನ ಸೇರಿದಂತೆ ನಿರ್ಜನ ಪ್ರದೇಶದಲ್ಲಿ ಯುವಕ ಯುವತಿ ಜೊತೆಯಲ್ಲಿದ್ದಾಗ, ಟಾರ್ಗೇಟ್ ಮಾಡಿದ್ದ ರಾಜಶೇಖರ್ @ ರಾಜ ಎಂಬ ನಕಲಿ ಪೋಲೀಸ್ ಈಗ ಜೈಲಲ್ಲಿ ಮುದ್ದೆ ಮುರಿಯುತ್ತಿದ್ದಾನೆ

ಬಂಧಿತ ನಕಲಿ ಪೊಲೀಸ್

ಬಂಧಿತ ನಕಲಿ ಪೊಲೀಸ್

  • Share this:
ಚಿತ್ರದುರ್ಗ: ಪ್ರೇಮಿಗಳನ್ನ (Couple) ಹಿಂಬಾಲಿಸಿ ಪೊಲೀಸ್ (Police) ಎಂದು ಹೆದರಿಸಿ ಹಣ, ಒಡವೆ ಸುಲಿಗೆ ಮಾಡಿ ಪರಾರಿ ಆಗುತ್ತಿದ್ದ ನಕಲಿ ಪೋಲೀಸನನ್ನ ಬೆನ್ನತ್ತಿ ಹೆಡೆಮುರಿ ಕಟ್ಟಿ ಜೈಲಿಗೆ ಕಳುಹಿಸುವಲ್ಲಿ ಯಶಸ್ವಿ ಆಗಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆಯಲ್ಲಿ ನಡೆದಿದೆ. ಇತ್ತೀಚೆಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಅರಣ್ಯ ಪ್ರದೇಶ, ಪಾರ್ಕ್, ದೇವಸ್ಥಾನ ಸೇರಿದಂತೆ ನಿರ್ಜನ ಪ್ರದೇಶದಲ್ಲಿ ಯುವಕ ಯುವತಿ ಜೊತೆಯಲ್ಲಿದ್ದಾಗ, ಟಾರ್ಗೇಟ್ ಮಾಡಿದ್ದ ರಾಜಶೇಖರ್ @ ರಾಜ ಎಂಬ ನಕಲಿ ಪೋಲೀಸ್ ಈಗ ಜೈಲಲ್ಲಿ ಮುದ್ದೆ ಮುರಿಯುತ್ತಿದ್ದಾನೆ.  ಮೂಲತಃ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಕೂಡ್ಲಗೆರೆ ಗ್ರಾಮದವನು. ವೃತ್ತಿಯಲ್ಲಿ ಡ್ರೈವರ್ ಕೆಲಸ ಮಾಡುತ್ತಿದ್ದ ಈತ ಸುಲಿಗೆ ಮಾಡಿ ಬದುಕೋಕೆ ನಿಂತುಬಿಟ್ಡಿದ್ದ‌. ನೋಡೋಕೆ ಕಟ್ಟುಮಸ್ತಾಗಿರೋ ಇವನು ನೀಟಾಗಿ ಪೋಲೀಸ್ ಕಟಿಂಗ್ ಮಾಡಿಸಿ, ಖಾಕಿ ಪ್ಯಾಂಟ್ ಧರಿಸಿ, ಮೈ ಮೇಲೆ ಜರ್ಕಿನ್ ಹಾಕಿ ನಿತ್ಯ ಕರ್ತವ್ಯದಲ್ಲಿ ಊರೂರು, ಬೆಟ್ಟ, ಗುಡ್ಡ ಗಸ್ತು ತಿರುಗೋ ಪೊಲೀಸರ ಹಾಗೆ ರೌಂಡ್ಸ್ ಮಾಡುತ್ತಿದ್ದ.  ಹೀಗೆ ಸುತ್ತುವ ವೇಳೆ ಅಮಾಯಕ ಯುವ ಪ್ರೇಮಿಗಳು, ಯುವಕ ಯುವತಿಯು ಸಿಕ್ಕಿದ್ರೆ ಅಂದ್ರೆ ಇವನಿಗೆ ಹಬ್ಬ.

ಯಾಕಂದ್ರೆ ಹೀಗೆ ಸಿಕ್ಕ ಯುವಕ ಯುವತಿಯರನ್ನ ಹೆದರಿಸಿ, ಇಲ್ಲೇಕೆ ಬಂದಿದ್ದೀರಿ, ಕಾನೂನು ಬಾಹಿರವಾಗಿ ಸುತ್ತಾಟ ನಡೆಸಿದ್ದೀರಿ, ನಿಮ್ಮ ಮೇಲೆ FIR ಮಾಡುವೆ ಎಂದೆಲ್ಲಾ ಹೆದರಿಸುತ್ತಿದ್ದ. ಅಲ್ಲದೇ ಅವರ ಬಳಿ ಇರುತ್ತಿದ್ದ ಮೊಬೈಲ್, ಹಣ, ಚಿನ್ನಾಭರಣ ಸೇರಿದಂತೆ ಬೆಲೆ ಬಾಳುವ ಎಲ್ಲವನ್ನೂ ಕಸಿದು ಠಾಣೆಗೆ ನಡೆಯಿರಿ ಎಂದೆಲ್ಲಾ ಹೇಳಿ ಇವನು ಹಿಂದೆಯೇ ಪರಾರಿಯಾಗುತ್ತಿದ್ದ. ಹೀಗೆ ದೋಚಿದ ಹಣದಿಂದ ಮಜವಾಗಿ ಜೀವನ ಸಾಗಿಸುತ್ತಿದ್ದ ಎನ್ನಲಾಗಿದೆ.

ಇದನ್ನೂ ಓದಿ:  Rape Shame: ರೇಪ್ ಅನಿವಾರ್ಯ ಆದಾಗ ಆನಂದಿಸಬೇಕು ಎಂದ ರಮೇಶ್ ಕುಮಾರ್; ಮುಗುಳ್ನಕ್ಕ ಸ್ಪೀಕರ್

ಆರೋಪಿಯ ಬಂಧನಕ್ಕೆ ವಿಶೇಷ ತಂಡ ರಚನೆ

ಆದರೇ ಮರ್ಯಾದೆಗೆ ಅಂಜಿದ ಯುವಕ ಯುವತಿಯರು ಪೊಲೀಸರಿಗೆ ದೂರು ನೀಡಲು ಹಿಂಜರಿದಿದ್ದಾರೆ. ಬಳಿಕ  ಈ ಕುರಿತು ಹೊಳಲ್ಕೆರೆ ತಾಲ್ಲೂಕಿನ ಚಿತ್ರಹಳ್ಳಿ ಪೋಲೀಸ್ ಠಾಣೆಯಲ್ಲಿ ಮುರುಳಿ ಎಂಬಾತ ದೂರು ನೀಡಿದ್ದ, ದೂರನ್ನ ಆಧರಿಸಿದ್ದ ಚಿತ್ರದುರ್ಗ ಎಸ್ಪಿ ರಾಧಿಕಾ, ಪ್ರಕರಣ ಭೇದಿಸಲು ಹೊಳಲ್ಕೆರೆ ಸಿಪಿಐ ರವೀಶ್, PSI ವಿಶ್ವನಾಥ್, ಹಾಗೂ ಚಿತ್ರಹಳ್ಳಿ  PSI ಆಶಾ ಒಳಗೊಂಡಂತೆ  ಪೋಲಿಸರ ವಿಶೇಷ ತನಿಖಾ ತಂಡ ರಚಿಸಿದ್ದರು.

ಚಿನ್ನದ ಚೈನ್ ಕಸಿದುಕೊಳ್ಳುವಾಗ ತಗ್ಲಾಕೊಂಡ 

ಅದರಂತೆ ಪೋಲೀಸ್ ವಿಶೇಷ ತಂಡ ತನ್ನ ಕಾರ್ಯಾಚರಣೆ ಆರಂಭ ಮಾಡಿತ್ತು. ಆದರೆ ಆರೋಪಿ  ಗ್ರಹಚಾರ ಕೆಟ್ಟಿತ್ತೋ ಏನೋ ಓರ್ವ ಯುವತಿಯ ಬಳಿ ಚಿನ್ನದ ಸರ ಬಿಚ್ಚಿಸಿಕೊಳ್ಳುವಾಗ ಎಚ್ಚೆತ್ತ ಯುವತಿಯ ಧೈರ್ಯದ ಕೂಗು ನಕಲಿ ಪೊಲೀಸ್ ಸೆರೆಗೆ ಕಾರಣವಾಗಿದೆ.

ಇದನ್ನೂ ಓದಿ:  ಆತ್ಮಹತ್ಯೆಗೂ ಮುನ್ನ ಹೆತ್ತ ಮಗುವನ್ನೇ ನೀರಿನ ಬಕೆಟ್​ನಲ್ಲಿ ಮುಳುಗಿಸಿ ಕೊಲೆ ಮಾಡಿದ ತಾಯಿ; ನಂಜನಗೂಡಲ್ಲಿ ದಾರುಣ ಘಟನೆ

ಚಿತ್ರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಒಂದು ಮೊಬೈಲ್, ಚಿಕ್ಕಜಾಜೂರು ವ್ಯಾಪ್ತಿಯ ಪ್ರಕರಣದಲ್ಲಿ ಒಂದು ಮೊಬೈಲ್, 33 ಸಾವಿರ ಹಣ, ಶ್ರೀರಾಂಪುರ ಠಾಣೆ ವ್ಯಾಪ್ತಿಯಲ್ಲಿ ಒಂದು ಬೈಕ್, ವಂಚನೆ ಪ್ರಕರಣ  ಸೇರಿದಂತೆ ಬಂಧಿತ ಆರೋಪಿಯಿಂದ ಒಟ್ಟು 2 ಲಕ್ಷ 9 ಸಾವಿರ ವಶ ಪಡಿಸಿಕೊಳ್ಳಲಾಗಿದೆ.

ಸರಣಿ ಅಪಘಾತಕ್ಕೆ ನಾಲ್ವರು ಬಲಿ

ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿ, ನಾಲ್ವರು ಮೃತಪಟ್ಟಿದ್ದಾರೆ. 30 ವರ್ಷದ ಅಸುಪಾಸಿನ ನಾಲ್ವರು ಪುರುಷರು ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ.  ಈರುಳ್ಳಿ ತುಂಬಿದ್ದ ಲಾರಿಯ ಟಯರ್ ಬ್ಲಾಸ್ಟ್ ಆಗಿ ಲಾರಿ ಪಲ್ಟಿಯಾಗಿ ಸರಣಿ ಅಪಘಾತ ಸಂಭವಿಸಿದೆ. ಇದರಿಂದ 1 ಕಾರು, 6 ಲಾರಿಗಳು ಡಿಕ್ಕಿ ಹೊಡೆದುಕೊಂಡಿವೆ. ಹಿರಿಯೂರು ರಾ.ಹೆ.47 ಆಲೂರು ಕ್ರಾಸ್ ಬಳಿ ಘಟನೆ ನಡೆದಿತ್ತು.


ವರದಿ : ವಿನಾಯಕ ತೊಡರನಾಳ್ 
Published by:Mahmadrafik K
First published: