• Home
  • »
  • News
  • »
  • state
  • »
  • Murugha Sharana Case: ಮುರುಘಾಸ್ವಾಮಿಯ ಕಾಮುಕ ಮುಖ ಬಿಚ್ಚಿಟ್ಟ ಆಪ್ತರು; ಸಹಾಯಕ, ಅಡುಗೆ ಭಟ್ಟ ಬಾಯ್ಬಿಟ್ಟ ಸತ್ಯ!

Murugha Sharana Case: ಮುರುಘಾಸ್ವಾಮಿಯ ಕಾಮುಕ ಮುಖ ಬಿಚ್ಚಿಟ್ಟ ಆಪ್ತರು; ಸಹಾಯಕ, ಅಡುಗೆ ಭಟ್ಟ ಬಾಯ್ಬಿಟ್ಟ ಸತ್ಯ!

ಶಿವಮೂರ್ತಿ ಮುರುಘಾ ಶರಣರು

ಶಿವಮೂರ್ತಿ ಮುರುಘಾ ಶರಣರು

ಹಗಲಿನಲ್ಲಿ ಆಗಾಗ್ಗೆ ರಶ್ಮಿ ಮಕ್ಕಳೊಂದಿಗೆ ಬರುತ್ತಿದ್ದಳು. ಇನ್ನು ಕೆಲವು ಸಲ ರಾತ್ರಿ ವೇಳೆ ಬಾಲಕಿಯರು ಹಿಂಬಾಗಿಲಿನಿಂದ ಮುರುಘಾ ಸ್ವಾಮಿ ರೂಮಿಗೆ  ಹೋಗುತ್ತಿದ್ದರು ಎಂದು ಮುರುಘಾ ಸ್ವಾಮಿ ಸಹಾಯಕ ಮಹಾಲಿಂಗ ಹೇಳಿದ್ದಾರೆ.

  • Share this:

ಚಿತ್ರದುರ್ಗ (ನ.10): ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರ (Shivamurthy Murugha Sharana) ಕಾಮುಕ ಮುಖ ಬಯಲಾಗಿದೆ. ಮುರುಘಾಸ್ವಾಮಿ (Murugha Swamy) ವಿರುದ್ಧ ತನಿಖಾಧಿಕಾರಿ ಡಿವೈಎಸ್​ಪಿ ಅನಿಲ್ ಚಾರ್ಜ್ ಶೀಟ್ (Charge Sheet) ಸಲ್ಲಿಸಿದ್ದಾರೆ. ಸಂತ್ರಸ್ತ ಬಾಲಕಿಯರು (Girls) ಕಾಮಿಸ್ವಾಮಿ ಅಸಲಿ ಮುಖವನ್ನು ಪೊಲೀಸರೆದುರು ಬಿಚ್ಚಿಟ್ಟಿದ್ದಾರೆ. ಇತ್ತ ಸ್ವಾಮೀಜಿಯ ಆಪ್ತರು ಸಹ ಮುರುಘಾ ಸ್ವಾಮಿಯ ಕರಾಳ ಕಥೆಯನ್ನು ಬಿಡಿಬಿಡಿಯಾಗಿ ಬಾಯ್ಬಿಟ್ಟಿದ್ದಾರೆ.


ಚಾರ್ಜ್ ಶೀಟ್​​ನಲ್ಲಿ ಮುರುಘಾ ಸ್ವಾಮಿ ಆಪ್ತರಿಂದ ಮಹತ್ವದ ಹೇಳಿಕೆ ದಾಖಲಾಗಿದೆ. ಮುರುಘಾ ಸ್ವಾಮಿ ಸಹಾಯಕ ಮಹಾಲಿಂಗ ಪೊಲೀಸರೆದುರು ಅನೇಕ ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ. ಹಗಲಿನಲ್ಲಿ ಆಗಾಗ್ಗೆ ರಶ್ಮಿ, ಮಕ್ಕಳೊಂದಿಗೆ ಬರುತ್ತಿದ್ದಳು. ಇನ್ನು ಕೆಲವು ಸಲ ರಾತ್ರಿ ವೇಳೆ ಬಾಲಕಿಯರು ಹಿಂಬಾಗಿಲಿನಿಂದ ಮುರುಘಾ ಸ್ವಾಮಿ ರೂಮಿಗೆ ಹೋಗುತ್ತಿದ್ದರು ಎಂದು ಮುರುಘಾ ಸ್ವಾಮಿ ಸಹಾಯಕ ಮಹಾಲಿಂಗ ಹೇಳಿದ್ದಾರೆ.


ಬೆಡ್​ ಮೇಲೆ ಕಲೆಗಳು


ಮುರುಘಸ್ವಾಮಿಯ ಬೆಡ್​ ಮೇಲೆ ಕೆಲವು ಕಲೆಗಳು ಆಗಿರುತ್ತಿತ್ತು. ಸ್ವಚ್ಛವಾಗಿ ತೊಳೆಯುವಂತೆ ಮುರುಘಾ ಸ್ವಾಮಿ ಹೇಳುತ್ತಿದ್ದರು. ಬಟ್ಟೆ ಮೇಲೆ ಕೆಂಪು ಕಂದು ಬಣ್ಣದ ಕಲೆ ಉಳಿಯದಂತೆ ಸ್ವಚ್ಛ ತೊಳೆಯಲು ಮುರುಘಾ ಸ್ವಾಮಿ ಹೇಳುತ್ತಿದ್ದರು. ಬಟ್ಟೆ ತೊಳೆದ ಬಳಿಕ ಕಲಸ ನೋಡಿ ಖಾತ್ರಿ ಪಡಿಸಿಕೊಳ್ಳುತ್ತಿದ್ದರು ಎಂದು ಮುರುಘಾಶ್ರೀ ಸಹಾಯಕ‌ ಮಲ್ಲಿಕಾರ್ಜುನ ಹೇಳಿಕೆ ನೀಡಿದ್ದಾರೆ.


MLA shamanuru shivashankarappa reacts on murugha swamy case mrq
ಮುರುಘಾ ಸ್ವಾಮಿ


ಅಡುಗೆ ಭಟ್ಟ ಹೇಳಿದ್ದೇನು?


ಮುರುಘಾ ಸ್ವಾಮಿ ಅಡುಗೆಭಟ್ಟ ಕರಿಬಸ್ಸಪ್ಪ ಹೇಳಿಕೆ ದಾಖಲು ಮಾಡಲಾಗಿದೆ. ರಶ್ಮಿ ಮತ್ತು ಮಕ್ಕಳು ಮುರುಘಾ ಸ್ವಾಮಿ ರೂಮಿಗೆ ಹೋದಾಗ ನನ್ನನ್ನು ಅವರು ಒಳಗೆ ಬಿಟ್ಟುಕೊಳ್ಳುತ್ತಿರಲಿಲ್ಲ ಎಂದು ಹೇಳಿದ್ದಾರೆ. ಸುಮಾರು ಗಂಟೆಗಳ ಬಳಿಕ ರಶ್ಮಿ ಮತ್ತು ಮಕ್ಕಳು ಹೊರಬರುತ್ತಿದ್ದರು. ಹಾಸ್ಟೆಲ್ ಬಾಲಕಿಯರನ್ನು ರೂಮಿಗೆ ಕರೆಸಿಕೊಳ್ಳುತ್ತಾರೆಂದು ಮಠಕ್ಕೆ ಬರುವ ಜನ ಮಾತಾಡುತ್ತಿದ್ದರು ಎಂದು ಹೇಳಿದ್ದಾರೆ.


ಹಾಸ್ಟೆಲ್ ನ ಇಬ್ಬರು ಬಾಲಕಿಯರ ಮೇಲೆ ದೌರ್ಜನ್ಯ


ಈ ಬಗ್ಗೆ ನಮಗೂ ಸಹ ಕೆಲವೊಮ್ಮೆ ಅನುಮಾನ ಬರುತ್ತಿತ್ತು. ನಾವು ಬಾಯಿಬಿಟ್ಟರೆ ಕೆಲಸ ಬಿಡಿಸುತ್ತಾರೆಂಬ ಭಯವಿತ್ತು. ಹಾಸ್ಟೆಲ್ ನ ಇಬ್ಬರು ಬಾಲಕಿಯರ ಮೇಲೆ ದೌರ್ಜನ್ಯ ಮಾಡಿದ್ದಾರೆಂದು ಮಠದಲ್ಲಿ ಮಾತಾಡುತ್ತಿದ್ದರು ಎಂದು ಅಡುಗೆ ಭಟ್ಟ ಹೇಳಿದ್ದಾರೆ.


ಆಫೀಸ್​ ಬಾಯ್ ಬಾಯ್ಬಿಟ್ಟ ಸತ್ಯ


ಮುರುಘಾ ಸ್ವಾಮಿ ಆಫೀಸ್ ಬಾಯ್ ಪ್ರಜ್ವಲ್ ಹೇಳಿಕೆ ದಾಖಲು ಮಾಡಿದ್ದಾರೆ. ಕೆಲ ಬಾಲಕಿಯರು ಮುರುಘಾಶ್ರೀ ರೂಮಿಗೆ ಕರೆಸಿಕೊಳ್ಳುತ್ತಿದ್ದರು. ಬೆಡ್ ರೂಮ್ ನಲ್ಲಿ ಕೆಲಸವಿದೆ ಎಂದು ಕರೆಸಿಕೊಳ್ಳುತ್ತಿದ್ದರು. ಸಂತ್ರಸ್ತ ಬಾಲಕಿಯರಿಬ್ಬರನ್ನು ಬೆಡ್ ರೂಮಿಗೆ ಕರೆಸಿದ್ದು ನನಗೆ ಗೊತ್ತಿದೆ ಆದರೆ, ರೂಮಿನಲ್ಲಿ ಏನು ನಡೆದಿದೆ ನನಗೆ ಗೊತ್ತಿಲ್ಲ ಎಂದು ಆಫೀಸ್ ಬಾಯ್ ಪ್ರಜ್ವಲ್ ಹೇಳಿದ್ದಾರೆ.


ಚಾಕ್ಲೆಟ್​ ರೂಪದ ವಸ್ತು ತಿನ್ನಿಸಿ ಬಲತ್ಕಾರ


ಮುರುಘಾ ಮಠದ ಲೈಂಗಿಕ ದೌರ್ಜನ್ಯ ಕೇಸ್​​ನ ಸ್ಫೋಟಕ ಸುದ್ದಿ ಹೊರಬಿದ್ದಿಕೆ. ಚಾರ್ಜ್​ಶೀಟ್​​ನಲ್ಲಿ ಯಾರು ಏನ್​ ಹೇಳಿಕೆ ಕೊಟ್ಟಿದ್ದಾರೆ ಅಂತ ಕೇಳಿದ್ರೆ ಎಂಥವ್ರೂ ದಂಗಾಗ್ತಾರೆ. 2018ರಲ್ಲಿ 1 ಬಾರಿ, 2020ರಲ್ಲಿ ಇನ್ನೊಂದು ಬಾರಿ ಚಾಕ್ಲೆಟ್​ ರೂಪದ ಮತ್ತು ಬರುವ ವಸ್ತು ತಿನ್ನಿಸಿ ಬಲತ್ಕಾರ ಮಾಡಿದ್ರಂತೆ.


ಇದನ್ನೂ ಓದಿ:  Murugha Shri: ಟಿಪ್ಪು ವರ್ಣನೆ ಮಾಡಿದ್ದಕ್ಕೆ ಮುರುಘಾ ಶ್ರೀಗಳಿಗೆ ಈ ಪರಿಸ್ಥಿತಿ: ಶಾಸಕ ಯತ್ನಾಳ್


ಡ್ರಿಂಕ್ಸ್ ಮಾಡಿ ಬೈದ್ರು- ಸಂತ್ರಸ್ತೆ


ದೈಹಿಕ ಆಸೆ ತೀರಿದ ಬಳಿಕ ಬೆದರಿಕೆ ಹಾಕುತ್ತಿದ್ರಂತೆ. ಮಠದಲ್ಲಿದ್ದಾಗ ರಶ್ಮಿ ಅಕ್ಕ ಸ್ವಾಮೀಜಿ ರೂಂಗೆ ಕಳಿಸುತ್ತಿದ್ದರು. ಹೋಗಲ್ಲ ಅಂದರೆ ಬೈಯುವುದು, ಹೊಡೆಯುವುದು ಮಾಡ್ತಿದ್ರು ಎಂದು ಸಂತ್ರಸ್ಥ ಬಾಲಕಿ ಹೇಳಿದ್ದಾಳೆ. ಸ್ವಾಮೀಜಿ ನನ್ನ ಮೇಲೆ ಅತ್ಯಾಚಾರ ಮಾಡಿದ್ರು. ಡ್ರಿಂಕ್ಸ್ ಮಾಡಿ ಬೈದ್ರು. ಗುಟ್ಟು ರಟ್ಟು ಮಾಡಲು ಹೋದವಳ ಮರ್ಡರ್ ಆಗಿದ್ಯಂತೆ. ಆದ್ದರಿಂದ ನಾನು, ನನ್ನ ಸ್ನೇಹಿತೆ ಮಾತನಾಡಿಕೊಂಡು ಬೆಂಗಳೂರಿಗೆ ಬಂದ್ವಿ ಎಂದು ಇನ್ನೊಬ್ಬ ಬಾಲಕಿ ಹೇಳಿದ್ದಾಳೆ.


ಇದನ್ನೂ ಓದಿ:  Kodagu: ವಿದ್ಯಾರ್ಥಿಗಳ ಗದ್ದೆ ನಾಟಿ ಕೆಲಸಕ್ಕೆ ಹುಬ್ಬೇರಿಸಿದ ಗ್ರಾಮಸ್ಥರು 


ಸ್ವಾಮಿ ಹಾಗೂ ವಾರ್ಡನ್ ರಶ್ಮಿ ಕಳ್ಳಾಟ ಬಯಲು!


ಶಿವಮೂರ್ತಿ ಕೋಣೆಗೆ ಮುಖ್ಯದ್ವಾರ ಬಿಟ್ಟು ಇನ್ನೊಂದು ಮಾರ್ಗ ಇತ್ತಂತೆ. ಆ ಮಾರ್ಗದಿಂದ ನೇರ ಹಾಸ್ಟೆಲ್​ಗೆ ಹೋಗಬಹುದಿತ್ತಂತೆ. ವಿದ್ಯಾರ್ಥಿನಿಯರು ನನ್ನನ್ನು ಅಪ್ಪಾಜಿ ಎನ್ನುತ್ತಿದ್ರು ಅವ್ರಿಗೆ ಹಣ್ಣು, ಡ್ರೈ ಫ್ರೂಟ್ಸ್​ ಕೊಡ್ತಿದ್ದೆ. ಲೈಂಗಿಕವಾಗಿ ಬಳಸಿಕೊಂಡಿಲ್ಲ ಎಂದು ಸ್ವಾಮಿ ಹೇಳಿದ್ದಾನೆ. ಹಾಸ್ಟೆಲ್​ನಲ್ಲಿ ಮಕ್ಕಳು ಗಲಾಟೆ ಮಾಡಿದಾಗ ಸ್ವಾಮೀಜಿ ಬಳಿ ಕರೆದೊಯ್ದು ಬುದ್ದಿ ಹೇಳಿಸ್ತಿದ್ದೆ ಎಂದು ವಾರ್ಡನ್ ರಶ್ಮಿ ಹೇಳಿದ್ದಾಳೆ.

Published by:ಪಾವನ ಎಚ್ ಎಸ್
First published: