• Home
  • »
  • News
  • »
  • state
  • »
  • Muruga Mutt: ಮುರುಘಾ ಮಠದಲ್ಲಿ ಫೋಟೋ ಕದ್ದ ಕೇಸ್​; ಮಾಜಿ ಶಾಸಕ 4 ದಿನ ಪೊಲೀಸ್​ ಕಸ್ಟಡಿಗೆ

Muruga Mutt: ಮುರುಘಾ ಮಠದಲ್ಲಿ ಫೋಟೋ ಕದ್ದ ಕೇಸ್​; ಮಾಜಿ ಶಾಸಕ 4 ದಿನ ಪೊಲೀಸ್​ ಕಸ್ಟಡಿಗೆ

ಮುರುಘಾ ಮಠ

ಮುರುಘಾ ಮಠ

ಮಠದ ರಾಜಾಂಗಣದ ಗೋಡೆ ಮೇಲಿನ ಫೋಟೋ ಕಳ್ಳತನ ಕೇಸ್​ನಲ್ಲಿ ಮಠದ ಮಾಜಿ ಆಡಳಿತಾಧಿಕಾರಿ, ಮಾಜಿ ಶಾಸಕ ಎಸ್ ಕೆ ಬಸವರಾಜನ್ ಬಂಧನ ಮಾಡಲಾಗಿದ್ದು, 4 ದಿನ ಪೊಲೀಸ್​ ಕಸ್ಟಡಿಗೆ ನೀಡಲಾಗಿದೆ.

  • News18 Kannada
  • Last Updated :
  • Karnataka, India
  • Share this:

ಚಿತ್ರದುರ್ಗ (ನ.10): ಮುರುಘಾ ಮಠದಲ್ಲಿ (Muruga Mutt) 47 ಫೋಟೋ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಠದ ಮಾಜಿ ಆಡಳಿತಾಧಿಕಾರಿ, ಮಾಜಿ ಶಾಸಕ ಎಸ್.ಕೆ ಬಸವರಾಜನ್ (Basavarajan) ಅವರನ್ನು ಪೊಲೀಸರು ಬಂಧಿಸಿ ಕೋರ್ಟ್​ಗೆ ಹಾಜರುಪಡಿಸಿದ್ದು, ವಿಚಾರಣೆ ಬಳಿಕ 4 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಚಿತ್ರದುರ್ಗದ (Chitradurga) 1ನೇ ಹೆಚ್ಚುವರಿ ನ್ಯಾಯಲಯ ಆದೇಶ ಹೊರಡಿಸಿದೆ. 


ಮಠದಲ್ಲಿ ಫೋಟೋ ಕಳ್ಳತನ ಕೇಸ್​


ಮಠದ ರಾಜಾಂಗಣದ ಗೋಡೆ ಮೇಲಿನ ಫೋಟೋ ಕಳ್ಳತನ ಕೇಸ್​ನಲ್ಲಿ ಮಠದ ಮಾಜಿ ಆಡಳಿತಾಧಿಕಾರಿ, ಮಾಜಿ ಶಾಸಕ ಎಸ್ ಕೆ ಬಸವರಾಜನ್ ಬಂಧನ ಮಾಡಲಾಗಿದೆ. 1ನೇ ಹೆಚ್ಚುವರಿ ನ್ಯಾಯಾಲಯದ ಎದುರು ಹಾಜರು ಪಡಿಸಿದ ಪೊಲೀಸರು, 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ಪೊಲೀಸರು ಕೇಳಿದ್ರು.


ಮಾಜಿ ಶಾಸಕ ಬಸವರಾಜನ್​


4 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ


10 ದಿನ ಪೊಲೀಸ್ ಕಸ್ಟಡಿಗೆ ಬಸವರಾಜನ್ ಪರ ವಕೀಲರ ತಕರಾರು ಎತ್ತಿದ್ರು.  ವಿಚಾರಣೆ ನಡೆಸಿದ ಕೋರ್ಟ್, 4 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಎಸ್.ಕೆ.ಬಸವರಾಜನ್ ಹಾಗೂ A-1 ಆರೋಪಿ ಬಸವರಾಜೇಂದ್ರ ಗೆ ಪೊಲೀಸ್ ಕಸ್ಟಡಿ ನೀಡಲಾಗಿದೆ.  ಒಂದನೇ ಹೆಚ್ಚುವರಿ JMFC ನ್ಯಾಯಾಲಯದಲ್ಲಿ ನ್ಯಾಯಾಧೀಶೆ ಅನಿತಾ ಕುಮಾರಿ ಅವರು ಆದೇಶ ನೀಡಿದ್ದಾರೆ.


ಪೊಲೀಸ್​ ಠಾಣೆಗೆ ಬಸವರಾಜನ್​ ಶಿಫ್ಟ್​!


ಆದೇಶದ ಬಳಿಕ ಚಿತ್ರದುರ್ಗ ನಗರ ಠಾಣೆಗೆ ಮಾಜಿ ಶಾಸಕ ಎಸ್ ಕೆ ಬಸವರಾಜನ್ ಶಿಫ್ಟ್ ಮಾಡಲಾಗಿದ್ದು, ಠಾಣೆಯಲ್ಲಿ ನಾಲ್ಕು ದಿನಕಾಲ ವಿಚಾರಣೆ ನಡೆಯಲಿದೆ.


ಕಾಮುಕ ಸ್ವಾಮಿ ಕಥೆ ಬಾಯ್ಬಿಟ್ರು ಆಪ್ತರು


ಚಿತ್ರದುರ್ಗ (ನ.10): ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರ (Shivamurthy Murugha Sharana) ಕಾಮುಕ ಮುಖ ಬಯಲಾಗಿದೆ. ಮುರುಘಾಸ್ವಾಮಿ (Murugha Swamy) ವಿರುದ್ಧ ತನಿಖಾಧಿಕಾರಿ ಡಿವೈಎಸ್​ಪಿ ಅನಿಲ್ ಚಾರ್ಜ್ ಶೀಟ್ (Charge Sheet) ಸಲ್ಲಿಸಿದ್ದಾರೆ. ಸಂತ್ರಸ್ತ ಬಾಲಕಿಯರು (Girls) ಕಾಮಿಸ್ವಾಮಿ ಅಸಲಿ ಮುಖವನ್ನು ಪೊಲೀಸರೆದುರು ಬಿಚ್ಚಿಟ್ಟಿದ್ದಾರೆ. ಇತ್ತ ಸ್ವಾಮೀಜಿಯ ಆಪ್ತರು ಸಹ ಮುರುಘಾ ಸ್ವಾಮಿಯ ಕರಾಳ ಕಥೆಯನ್ನು ಬಿಡಿಬಿಡಿಯಾಗಿ ಬಾಯ್ಬಿಟ್ಟಿದ್ದಾರೆ.


ಸಹಾಯಕ ಮಹಾಲಿಂಗ ಹೇಳಿಕೆ


ಚಾರ್ಜ್ ಶೀಟ್​​ನಲ್ಲಿ ಮುರುಘಾ ಸ್ವಾಮಿ ಆಪ್ತರಿಂದ ಮಹತ್ವದ ಹೇಳಿಕೆ ದಾಖಲಾಗಿದೆ. ಮುರುಘಾ ಸ್ವಾಮಿ ಸಹಾಯಕ ಮಹಾಲಿಂಗ ಪೊಲೀಸರೆದುರು ಅನೇಕ ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ. ಹಗಲಿನಲ್ಲಿ ಆಗಾಗ್ಗೆ ರಶ್ಮಿ, ಮಕ್ಕಳೊಂದಿಗೆ ಬರುತ್ತಿದ್ದಳು. ಇನ್ನು ಕೆಲವು ಸಲ ರಾತ್ರಿ ವೇಳೆ ಬಾಲಕಿಯರು ಹಿಂಬಾಗಿಲಿನಿಂದ ಮುರುಘಾ ಸ್ವಾಮಿ ರೂಮಿಗೆ ಹೋಗುತ್ತಿದ್ದರು ಎಂದು ಮುರುಘಾ ಸ್ವಾಮಿ ಸಹಾಯಕ ಮಹಾಲಿಂಗ ಹೇಳಿದ್ದಾರೆ.

 ಮುರುಘಸ್ವಾಮಿಯ ಬೆಡ್​ ಮೇಲೆ ಕೆಲವು ಕಲೆಗಳು ಆಗಿರುತ್ತಿತ್ತು. ಸ್ವಚ್ಛವಾಗಿ ತೊಳೆಯುವಂತೆ ಮುರುಘಾ ಸ್ವಾಮಿ ಹೇಳುತ್ತಿದ್ದರು. ಬಟ್ಟೆ ಮೇಲೆ ಕೆಂಪು ಕಂದು ಬಣ್ಣದ ಕಲೆ ಉಳಿಯದಂತೆ ಸ್ವಚ್ಛ ತೊಳೆಯಲು ಮುರುಘಾ ಸ್ವಾಮಿ ಹೇಳುತ್ತಿದ್ದರು. ಬಟ್ಟೆ ತೊಳೆದ ಬಳಿಕ ಕಲಸ ನೋಡಿ ಖಾತ್ರಿ ಪಡಿಸಿಕೊಳ್ಳುತ್ತಿದ್ದರು ಎಂದು ಮುರುಘಾಶ್ರೀ ಸಹಾಯಕ‌ ಮಲ್ಲಿಕಾರ್ಜುನ ಹೇಳಿಕೆ ನೀಡಿದ್ದಾರೆ.




ಇದನ್ನೂ ಓದಿ:  Murugha Shri: ಟಿಪ್ಪು ವರ್ಣನೆ ಮಾಡಿದ್ದಕ್ಕೆ ಮುರುಘಾ ಶ್ರೀಗಳಿಗೆ ಈ ಪರಿಸ್ಥಿತಿ: ಶಾಸಕ ಯತ್ನಾಳ್


ಡ್ರಿಂಕ್ಸ್ ಮಾಡಿ ಬೈದ್ರು- ಸಂತ್ರಸ್ತೆ


ದೈಹಿಕ ಆಸೆ ತೀರಿದ ಬಳಿಕ ಬೆದರಿಕೆ ಹಾಕುತ್ತಿದ್ರಂತೆ. ಮಠದಲ್ಲಿದ್ದಾಗ ರಶ್ಮಿ ಅಕ್ಕ ಸ್ವಾಮೀಜಿ ರೂಂಗೆ ಕಳಿಸುತ್ತಿದ್ದರು. ಹೋಗಲ್ಲ ಅಂದರೆ ಬೈಯುವುದು, ಹೊಡೆಯುವುದು ಮಾಡ್ತಿದ್ರು ಎಂದು ಸಂತ್ರಸ್ಥ ಬಾಲಕಿ ಹೇಳಿದ್ದಾಳೆ. ಸ್ವಾಮೀಜಿ ನನ್ನ ಮೇಲೆ ಅತ್ಯಾಚಾರ ಮಾಡಿದ್ರು. ಡ್ರಿಂಕ್ಸ್ ಮಾಡಿ ಬೈದ್ರು. ಗುಟ್ಟು ರಟ್ಟು ಮಾಡಲು ಹೋದವಳ ಮರ್ಡರ್ ಆಗಿದ್ಯಂತೆ. ಆದ್ದರಿಂದ ನಾನು, ನನ್ನ ಸ್ನೇಹಿತೆ ಮಾತನಾಡಿಕೊಂಡು ಬೆಂಗಳೂರಿಗೆ ಬಂದ್ವಿ ಎಂದು ಇನ್ನೊಬ್ಬ ಬಾಲಕಿ ಹೇಳಿದ್ದಾಳೆ.


Published by:ಪಾವನ ಎಚ್ ಎಸ್
First published: