Murder: ಪತ್ನಿಯನ್ನು ಕೊಂದು ಮಂಚದ ಕೆಳಗೆ ಹೂತಿಟ್ಟ; ಪೊಲೀಸರ ಮುಂದೆ ಹೆಗ್ಗಣದ ಕತೆ ಹೇಳಿದ್ದವ ಅರೆಸ್ಟ್ ಆಗಿದ್ದೇಗೆ?

ಮನೆಯಲ್ಲಿ ಮೆಕ್ಕೆಜೋಳ ಇಟ್ಟೆದ್ದೆ, ಹೆಗ್ಗಣ ಎಳೆದು ಗುಂಡಿ ಮಾಡಿದ್ದಕ್ಕೆ ಸಿಮೆಂಟ್ ಹಾಕಿದ್ದೆ ಎಂದು ಸಬೂಬು ಹೇಳಿ ತಪ್ಪಿಸಿಕೊಳ್ಳೋ ಪ್ಲಾನ್ ಮಾಡಿದ್ದ. ಆದರೇ ಅವನಿಗೆ ತಾನು ಪ್ರಕರಣದ ಅರ್ಧ ಸತ್ಯವನ್ನ ಬಿಟ್ಟಿದ್ದು ಗೊತ್ತೇ ಆಗಿರ್ಲಿಲ್ಲ.

ಪತ್ನಿಯನ್ನ ಕೊಲೆಗೈದ ಪತಿ

ಪತ್ನಿಯನ್ನ ಕೊಲೆಗೈದ ಪತಿ

  • Share this:
ಚಿತ್ರದುರ್ಗ: ಪತ್ನಿಯನ್ನ (Wife) ಕೊಂದು ಹೂತಿಟ್ಟ ಪಾಪಿ ಪತಿ (Husband) ಮಡದಿ ಕಾಣೆಯಾಗಿದ್ದಾಳೆ ಅಂತ ಊರ ತುಂಬ ಹುಡುಕಾಡಿದ್ದನು. ಪತ್ನಿ ಕಾಣದ ಕುರಿತು ಪೊಲೀಸ್ ಠಾಣೆಗೆ ಸುಳ್ಳು ದೂರು ನೀಡಿ ನಾಟಕವಾಡಿದ್ದನು. ಆದರೆ ಈಗ ಅವನ ಬಂಡವಾಳ ಬಯಲಾಗಿದೆ. ಪತ್ನಿಯನ್ನ ಕೊಲೆ ಮಾಡಿ ಮಂಚದ ಕೆಳಗೆ ಮುಚ್ಚಿಟ್ಟ ಕಿಲ್ಲರ್ ಪತಿಯ ಬಣ್ಣ ಬಯಲಾಗಿದೆ. ದೃಶ್ಯ ಸಿನಿಮಾ ಶೈಲಿಯಲ್ಲಿ ನಡೆದಿರುವ ಕೊಲೆಯ ವಿಷಯ ಕೇಳಿ ಚಿತ್ರದುರ್ಗ (Chitradurga) ಜಿಲ್ಲೆಯ ಜನ ಬೆಚ್ಚಿ ಬಿದ್ದಿದ್ದಾರೆ.  ಚಿತ್ರದುರ್ಗ ತಾಲ್ಲೂಕಿನ ಕೋಣನೂರು ಗ್ರಾಮದಲ್ಲಿ ಈ ಕೊಲೆ ನಡೆದಿದೆ.  ಗ್ರಾಮದ ನಾರಪ್ಪ ಎಂಬಾತ ಪತ್ನಿ  ಸುಮಾಳನ್ನು ಕೊಲೆಗೈದು ಶವವನ್ನು ಮನೆಯಲ್ಲಿ ಮುಚ್ಚಿಟ್ಟಿದ್ದನು.

ನಾರಪ್ಪ ತನ್ನ ಪತ್ನಿ ಸುಮಾ ಡಿಸೆಂಬರ್ 25ರಂದು ಕಾಣೆಯಾಗಿದ್ದಾಳೆ. ಎಲ್ಲಿಯೋ ಹೋಗಿದ್ದಾಳೆ ಅಂತ ಸುಮಾ ಪೋಷಕರಿಗೆ ಹೇಳಿದ್ದ. ಮಗಳು ಕಾಣೆಯಾದ ಸುದ್ದಿ ತಿಳಿದು ಕೊಣನೂರಿಗೆ ಬಂದಿದ್ದ ಸುಮಾ ತಂದೆ, ತಮ್ಮ ಜಿಲ್ಲೆಯ ಹಲವೆಡೆ ಹುಡುಕಾಟ ಕೂಡ ಮಾಡಿದ್ರು.

ಸುಮಾ ಪತಿ ನಾರಪ್ಪ ಭರಮಸಾಗರ ಪೊಲೀಸ್ ಠಾಣೆಗೆ ಹೋಗಿ ಪತ್ನಿ ಕಾಣೆಯಾಗಿದ್ದಾಳೆ ಹುಡಿಕಿ ಕೊಡಿ ಅಂತ ದೂರು ನೀಡಿದ್ದ. ದೂರು ಆಧರಿಸಿ ತನಿಖೆ ಶುರು ಮಾಡಿದ ಪೊಲೀಸರು ದೂರುದಾರ ಸುಮಾಳ ಪತಿ ನಾರಪ್ಪನ ಬಳಿ ಕೂಲಂಕುಶ ಮಾಹಿತಿ ಕಲೆ ಹಾಕಿದ್ದರು.

ಇದನ್ನೂ ಓದಿ:  Mandya: ಶಾಲೆಗೆ ಮೊಬೈಲ್ ತಂದ ತಪ್ಪಿಗೆ ಬಾಲಕಿಯ ಬಟ್ಟೆ ಬಿಚ್ಚಿಸಿದ ಮುಖ್ಯ ಶಿಕ್ಷಕಿ?

ಸಿಮೆಂಟ್, ಕಲ್ಲು ತಂದಿರೋದನ್ನು ನೋಡಿದ್ದ ಗ್ರಾಮಸ್ಥರು

ನಾರಪ್ಪ ಹೇಳಿದ ಮಾಹಿತಿಯ ಜಾಡು ಹಿಡಿದ ಪೊಲೀಸರಿಗೆ ಆರಂಭದಲ್ಲಿಯೇ ಪತಿಯ ಮೇಲೆಯೇ ಅನುಮಾನ ಬಂದಿದೆ. ಇತ್ತೀಚೆಗೆ ನಾರಪ್ಪ ಮನೆಗೆ ಸಿಮೆಂಟ್ ತಂದು ಕಲ್ಲು ಹಾಕುವ ಕೆಲಸ ಮಾಡಿದ್ದ ಅನ್ನೋದು ಗ್ರಾಮಸ್ಥರಿಂದ ಮಾಹಿತಿ ಹೊರ ಬಂದಿತ್ತು. ಆದ್ದರಿಂದಲೇ ಭರಮಸಾಗರ ಪೊಲೀಸರು ನಾರಪ್ಪನನ್ನ ಠಾಣೆಗೆ ಕರೆಸಿ ಮನೆಗೆ ಸಿಮೆಂಟ್ ಯಾಕೆ ತಂದಿದ್ದೆ, ಈಗ ಸಿಮೆಂಟ್  ಕೆಲಸ ಮಾಡೋ ಅಗತ್ಯವಾದರೂ ಏನಿತ್ತು ಅಂತ ಪ್ರಶ್ನೆ ಮಾಡಿದ್ರು.

ಪೊಲೀಸರ ಮುಂದೆ ಹೆಗ್ಗಣದ ಕಥೆ

ಪೊಲೀಸರ ಪ್ರಶ್ನೆಗೆ ಉತ್ತರಿಸಿದ ನಾರಪ್ಪ ಮನೆಯಲ್ಲಿ ಮೆಕ್ಕೆಜೋಳ ಇಟ್ಟೆದ್ದೆ, ಹೆಗ್ಗಣ ಎಳೆದು ಗುಂಡಿ ಮಾಡಿದ್ದಕ್ಕೆ ಸಿಮೆಂಟ್ ಹಾಕಿದ್ದೆ ಎಂದು ಸಬೂಬು ಹೇಳಿ ತಪ್ಪಿಸಿಕೊಳ್ಳೋ ಪ್ಲಾನ್ ಮಾಡಿದ್ದ. ಆದರೆ ಅವನಿಗೆ ತಾನು ಪ್ರಕರಣದ ಅರ್ಧ ಸತ್ಯವನ್ನ ಬಿಟ್ಟಿದ್ದು ಗೊತ್ತೇ ಆಗಿರ್ಲಿಲ್ಲ.

ನಾರಪ್ಪ ಹೆಗ್ಗಣದ ಕಥೆ ಹೇಳಿದ್ದೇ ತಡ ಪತ್ನಿ ಕಾಣೆಯಾಗಿದ್ದರಲ್ಲಿ ಇವನದೇ ಕೈವಾಡ ಅಂತ ತೀರ್ಮಾನಿಸಿ ಮನೆಗೆ ಬರುತ್ತೇವೆ ಅಂತ ಪೊಲೀಸರು ಹೇಳಿದ್ದರು‌. ಮನೆಗೆ ಪೊಲೀಸರು ಬರುತ್ತೇವೆ ಅಂತ ಹೇಳುತ್ತಿದ್ದಂತೆ ನಾರಪ್ಪ ಕಕ್ಕಾಬಿಕ್ಕಿಯಾಗಿದ್ದನು. ಬಳಿಕ ಅಲ್ಲಿಂದ ಹೊರಟವ ತನ್ನ ಫೋನ್ ಸ್ವಿಚ್ಛ್ ಆಫ್ ಮಾಡಿಕೊಂಡಿದ್ದ. ಬಳಿಕ ಸುಮಾ ಪೋಷಕರು ಕೂಡಾ ಅವನ ಮೇಲೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು‌.

ಇದನ್ನೂ ಓದಿ:  Anekalನಲ್ಲಿ ಉದ್ಯಮಿಯ ಬರ್ಬರ ಕೊಲೆ: ಹೆಣ್ಣಿನ ಸಹವಾಸವೇ ಹೆಣ ಬೀಳುವಂತೆ ಮಾಡಿತಾ?

ಈಗ ಕೊಲೆಯಾಗಿರೋ ಸುಮಾ ತಂದೆ ಅಳಿಯನ ಮೇಲೆ ಅನುಮಾನ ಪಟ್ಟು ದೂರು ನೀಡೋಕೂ ಒಂದು ಕಾರಣವಿದೆ. ಅದೇನಂದ್ರೆ,  ಬೆಣ್ಣೆಹಳ್ಳಿ ಮೂಲದ ಕರಿಯಪ್ಪ ಎಂಬ ಇವರು ಮಗಳು ಸುಮಾ ಅವರನ್ನ ಕೋಣನೂರು ಗ್ರಾಮದ ನಾರಪ್ಪಗೆ ಆರು ವರ್ಷಗಳ ಹಿಂದೆಯಷ್ಟೆ ವಿವಾಹ ಮಾಡಿಕೊಟ್ಟಿದ್ದರು. ಮದುವೆ ಬಳಿಕ ಸುಮಾ, ನಾರಪ್ಪ ದಂಪತಿಗೆ ಒಂದು ಗಂಡು ಮಗು ಕೂಡಾ ಜನಿಸಿ ಐದು ವರ್ಷ ತುಂಬಿದೆ. ಆದರೆ ಕೆಲ ವರ್ಷಗಳವರೆಗೆ ಸುಖ ಸಂಸಾರ ನಡೆಸುತ್ತಿದ್ದ ನಾರಪ್ಪ ಜಗಳ ಮಾಡಲು ಆರಂಭಿಸಿದ್ದನು.

ಹಲವು ಅನುಮಾನಗಳು

ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಎಂದು ಸುಮಾ ತನ್ನ  ತಮ್ಮನ ಬಳಿ ಹೇಳುತ್ತಿದ್ದಳು. ಅಲ್ಲದೇ  ಕಾಣೆಯಾಗಿದ್ದಾಳೆ ಎನ್ನಲಾದ ಡಿಸೆಂಬರ್ 25ರಂದು ರಾತ್ರಿ 10:30  ಸಮಯಕ್ಕೆ  ಸುಮಾ  ಮನೆಯ ಅಕ್ಕ ಪಕ್ಕದ ಜನ್ರನ್ನ ಮಾತನಾಡಿಸಿದ್ದಳು. ಕಾಣೆಯಾದರೂ ಆಕೆಯ ಚಪ್ಪಲಿ ಮಾತ್ರ ಮನೆಯ ಬಳಿಯೇ ಇದ್ದದ್ದು. ಜೊತೆಗೆ  ಇದ್ದಕ್ಕಿಂದ್ದಂತೆ ಫೋನ್ ಸ್ವಿಚ್ ಆಫ್ ಮಾಡಿಕೊಂಡು ತಲೆ ಮರೆಸಿಕೊಂಡಿದ್ದು ಅನುಮಾನಕ್ಕೆ ಸಾಕ್ಷಿ ಸಿಕ್ಕಂತಾಗಿತ್ತು.

ಹೀಗೆ ಎಲ್ಲಾ ಮೂಲಗಳಿಂದಲೂ ಸುಮಾ ಕಾಣೆಯಾಗಿರೋ ಪ್ರಕರಣದ ಹಿಂದೆ ನಾರಪ್ಪನ ಕೈವಾಡ ಇದೆ ಎಂದು ತಿಳಿಯುತ್ತಿದ್ದಂತೆ ಪೊಲೀಸರು ಕೋಣನೂರು ಗ್ರಾಮಕ್ಕೆ ಭೇಟಿ ನೀಡಿ ಮನೆ ಪರಿಶೀಲನೆ ನಡೆಸಿದ್ದರು. ಮಂಚದ ಕಳೆಗೆ ಹೂತಿಟ್ಟ ಶವ ಪೊಲೀಸರಿಗೆ ಸಿಕ್ಕಿದೆ.
Published by:Mahmadrafik K
First published: