ಮದುವೆಯಾಗುವುದಾಗಿ ನಂಬಿಸಿ ವಂಚನೆ; ಚಿತ್ರದುರ್ಗದ ಪ್ರಿಯಕರನಿಗೆ ಯುವತಿಯಿಂದ ಚಪ್ಪಲಿಯೇಟು

ವರ್ಷಾನುಗಟ್ಟಲೆ ಪ್ರೀತಿ ಮಾಡಿದ್ದ ಯುವಕ ಆಕೆಯನ್ನು ಮದುವೆ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ್ದ. ಆದರೆ, ಆಕೆಯನ್ನು ಮದುವೆಯಾಗಲು 15 ಲಕ್ಷ ರೂ. ಹಣ ಪಡೆದಿದ್ದ ಆತ ಪರಾರಿಯಾಗಲು ಯತ್ನಿಸಿದ್ದ.

news18-kannada
Updated:January 18, 2020, 9:18 AM IST
ಮದುವೆಯಾಗುವುದಾಗಿ ನಂಬಿಸಿ ವಂಚನೆ; ಚಿತ್ರದುರ್ಗದ ಪ್ರಿಯಕರನಿಗೆ ಯುವತಿಯಿಂದ ಚಪ್ಪಲಿಯೇಟು
ಪೊಲೀಸ್ ಠಾಣೆ ಎದುರೇ ಯುವಕನಿಗೆ ಥಳಿಸಿದ ಯುವತಿ
  • Share this:
ಚಿತ್ರದುರ್ಗ (ಜ. 18): ಪ್ರೀತಿಯ ನಾಟಕವಾಡಿ, ತನ್ನನ್ನು ಮದುವೆಯಾಗುವುದಾಗಿ ನಂಬಿಸಿದ್ದ ಯುವಕನನಿಗೆ ಯುವತಿ ಚಪ್ಪಲಿಯಿಂದ ಥಳಿಸಿದ್ದಾಳೆ. ಚಿತ್ರದುರ್ಗದಲ್ಲಿ ಈ ಘಟನೆ ನಡೆದಿದೆ.

ವರ್ಷಾನುಗಟ್ಟಲೆ ಪ್ರೀತಿ ಮಾಡಿದ್ದ ಯುವಕ ಆಕೆಯನ್ನು ಮದುವೆ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ್ದ. ಆದರೆ, ಆಕೆಯನ್ನು ಮದುವೆಯಾಗಲು 15 ಲಕ್ಷ ರೂ. ಹಣ ಪಡೆದಿದ್ದ ಆತ ಪರಾರಿಯಾಗಲು ಯತ್ನಿಸಿದ್ದ. ಈ ವಿಷಯ ತಿಳಿದ ಯುವತಿ ಆತನ ವಿರುದ್ಧ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ವಿಚಾರಣೆಗಾಗಿ ಠಾಣೆಗೆ ಬಂದ ಉಮೇಶ್ ಮೇಲೆ ಯುವತಿ ಚಪ್ಪಲಿಯಿಂದ ಹೊಡೆದಿದ್ದಾಳೆ.

ಉಮೇಶ್ ಎಂಬ ಯುವಕನೇ ಈ ರೀತಿ ವಂಚನೆ ಮಾಡಿರುವ ಆರೋಪಿ. ಚಿತ್ರದುರ್ಗ ನಗರದ ಮಹಿಳಾ ಠಾಣೆ ಬಳಿ ಘಟನೆ ನಡೆದಿದ್ದು, ಮದುವೆಯಾಗುವುದಾಗಿ 15 ಲಕ್ಷ ರೂ. ಪಡೆದು ವಂಚನೆ ಮಾಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಆರೋಪಿ ಉಮೇಶನಿಗೆ ಚಪ್ಪಲಿಯಿಂದ ಹೊಡೆದ ಯುವತಿ ಆತನ ಮೇಲೆ ತನ್ನ ಆಕ್ರೋಶವನ್ನು ಹೊರಹಾಕಿದ್ದಾಳೆ.

ಇದನ್ನೂ ಓದಿ: ವಿದ್ಯಾರ್ಥಿನಿಯರೊಂದಿಗೆ ಅಸಭ್ಯ ವರ್ತನೆ; ತುಮಕೂರಿನ ಶಿಕ್ಷಕನಿಗೆ ಹಿಗ್ಗಾಮುಗ್ಗ ಥಳಿಸಿದ ಪೋಷಕರು

ವಿಚಾರಣೆಗಾಗಿ ಬಂದಿದ್ದ ವೇಳೆ ಘಟನೆ ನಡೆದಿದೆ. ಘಟನೆಯಿಂದ ಕೋಪಗೊಂಡು ಅಲ್ಲಿಂದ ತೆರಳಿದ ಉಮೇಶನ ಕಾರನ್ನು ಅಡ್ಡ ಹಾಕಿದ ಯುವತಿ ರಸ್ತೆಯಲ್ಲೇ ಜೋರಾಗಿ ಅತ್ತು ರಾದ್ಧಾಂತ ಮಾಡಿದ್ದಾರೆ. ಚಿತ್ರದುರ್ಗ ನಗರದ ಕೆಳಗೋಟೆಯ ಯುವತಿ ಚಳ್ಳಕೆರೆ ತಾಲೂಕಿನ ಚೌಳಕೆರೆ ಗ್ರಾಮದ ಉಮೇಶ್ ಇಬ್ಬರೂ ಮೂರು ವರ್ಷಗಳಿಂದ ಪ್ರೀತಿಸಿದ್ದರು. ಪ್ರೀತಿಯ ಹೆಸರಲ್ಲಿ ನಾಟಕವಾಡಿದ್ದ ಉಮೇಶ್ ಆಕೆಗೆ ವಂಚನೆ ಮಾಡಿದ್ದ ಎನ್ನಲಾಗಿದೆ.

(ವಿನಾಯಕ ತೊಡರನಾಳ್)
First published:January 18, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ