Chitradurga: ಸಾಹಿತಿ ಬಿಎಲ್ ವೇಣುಗೆ ಎರಡನೇ ಬೆದರಿಕೆ ಪತ್ರ! ಅನಾಮಧೇಯ ವ್ಯಕ್ತಿಗಳ ವಿರುದ್ಧ FIR

ಬಿಎಲ್ ವೇಣು ಅವರು ಬೆದರಿಕೆ ಪತ್ರ ಕಳಿಸಿದ ಅನಾಮಧೇಯ ವ್ಯಕ್ತಿಗಳ ವಿರುದ್ದ ಚಿತ್ರದುರ್ಗ ನಗರದ ಬಡಾವಣೆ ಠಾಣೆಗೆ ದೂರು ನೀಡಿದ್ದಾರೆ. ದೂರು ಪಡೆದ ಪೊಲೀಸರು ಅನಾಮಧೆಯ ವ್ಯಕ್ತಿಗಳ ವಿರುದ್ದ IPC ಸೆಕ್ಷನ್ 504 , 507 ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಬಿ. ಎಲ್. ವೇಣು

ಬಿ. ಎಲ್. ವೇಣು

  • Share this:
ಚಿತ್ರದುರ್ಗ(ಜು.15): ಖ್ಯಾತ ಕಾದಂಬರಿಕಾರ B.L ವೇಣು (BL Venu) ಅವರಿಗೆ ಯಾರೋ ಅನಾಮಧೇಯರಿಂದ ಬೆದರಿಕೆ ಪತ್ರ (Threat Letter) ಬಂದ ಹಿನ್ನೆಲೆ, ಚಿತ್ರದುರ್ಗ (Chitradurga) ನಗರದ ಬಡಾವಣೆ ಪೊಲೀಸ್ ಠಾಣೆಯಲ್ಲಿ (Police) ದೂರು ನೀಡಲಾಗಿದೆ. ಅಪರಿಚಿತ ವ್ಯಕ್ತಿಗಳ ಮೇಲೆ FIR ದಾಖಲಿಸಿರುವ ಪೊಲೀಸರು (Police), ಆರೋಪಿಗಳ ಪತ್ತೆಗೆ ಬಲೆ ಬೀಸಿ ತನಿಖೆ (Inquiry) ಪ್ರಾರಂಭ ಮಾಡಿದ್ದಾರೆ.  ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹೆಮ್ಮೆಯ ಸಾಹಿತಿ, ಬಿ.ಎಲ್. ವೇಣು ಕಳೆದ ಎರಡು ಮೂರು ತಿಂಗಳುಗಳ ಹಿಂದೆಯಷ್ಠೆ ಶಾಲೆಗಳ (School) ಪಠ್ಯ ಪುಸ್ತಕ  (Text Book) ಪರಿಷ್ಕರಣೆಯಲ್ಲಿ ಆಗಿದ್ದ ಲೋಪ, ಬದಲಾವಣೆ ಹಾಗೂ ವೀರ ಸಾವರ್ಕರ್ ಕುರಿತು, ವಿರುದ್ದವಾದ ಭಾಷಣ (Speech) ಮಾಡಿದ್ದರು ಎನ್ನಲಾಗಿದೆ.

ಆದರೇ ಇದೇ ಭಾಷಣದಿಂದ ಸಾಹಿತಿ ಬಿಎಲ್ ವೇಣುರವರ ಅಭಿಪ್ರಾಯದ ಮಾತುಗಳಿಗೆ ವಿರೋಧ, ಪ್ರತಿರೋಧ ವ್ಯಕ್ತಪಡಿಸಿರುವ ಯಾರೋ ಅನಾಮಧೇಯ ವ್ಯಕ್ತಿಗಳು (Unknown) ಅವರಿಗೆ ಬೆದರಿಕೆ ಪತ್ರ ಬರೆದು ಈ ಹಿಂದೆ ಜೂನ್ 22 ರಂದು ಕೂಡಾ ಒಂದು ಪತ್ರ ರವಾನಿಸಿದ್ದ ಅನಾಮಧೇಯ ವ್ಯಕ್ತಿಗಳು ಕ್ಷಮೆ ಕೇಳುವಂತೆ ತಾಕೀತು ಮಾಡಿದ್ದರು.

ಆದರೇ ಮೊದಲು ಬಂದಿದ್ದ ಬೆದರಿಕೆ ಪತ್ರಕ್ಕೆ ತಲೆಕೆಡಿಸಿಕೊಳ್ಳದ ಬಿಎಲ್ ವೇಣು, ಎಂದಿನಂತೆ ಆರಾಮವಾಗಿಯೇ ಇದ್ದರು. ಆದರೇ ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಆಗುತ್ತಿರುವ ವ್ಯತಿರಿಕ್ತ ಪರಿಸ್ಥಿತಿ, ಬೆಳವಣಿಗೆಗಳನ್ನ ಟಾರ್ಗೇಟ್ ಮಾಡಿಕೊಂಡು ಈ ವಿಚಾರವನ್ನ ಇಲ್ಲಿಗೇ ಕೈ ಬಿಡದ ಅನಾಮಧೇಯ ವ್ಯಕ್ತಿಗಳು, ಇದೀಗ ಮತ್ತೆ ಎರಡನೇ ಸಾರಿ ಬೆದರಿಕೆ ಪತ್ರ ಬರೆದಿದ್ದಾರೆ‌.

ಬೆದರಿಕೆ ಪತ್ರದಲ್ಲೇನಿತ್ತು?

ಆದ್ದರಿಂದ ಸ್ವಾಭಾವಿಕವಾಗಿ ಕೆಲವು ದಿನಗಳಿಂದ ಬಿಗುವಿನ ವಾತಾವರಣ ಸೃಷ್ಠಿಯಾಗಿದೆಯಾ ಎಂಬ ಭಾವನೆ ತುಂಬಿದೆ. ಆ ಪತ್ರದಲ್ಲಿ ಬಿಎಲ್ ವೇಣು ಸೇರಿದಂತೆ  61ಸಾಹಿತಿಗಳಿಗೆ ಬುದ್ದಿ ಹೇಳಿ ಎಂದ ಪ್ರಸ್ತಾಪಿಸಲಾಗಿದ್ದು, ಹುಟ್ಟಿದ ದೇಶದ ಬಗ್ಗೆ ನಿಮಗೆ ಯಾಕೆ ಹೀನಾ ಭಾವನೆ ಎಂದು ಪ್ರಶ್ನಿಸಿ BL ವೇಣು ಅವರೇ ಇಂಥವರಿಗೆ ಬುದ್ದಿ ಹೇಳಿ, ಇಲ್ಲ ಕಾಲನ ಉಪಚಾರಕ್ಕೆ ಸಿದ್ದರಾಗಿ ಎಂದು ಬೆದರಿಕೆ ಹಾಕಲಾಗಿತ್ತು.

ಇದನ್ನೂ ಓದಿ: Karnataka Weather: ಈ ಭಾಗದಲ್ಲಿಂದು ಕೊಂಚ ಬ್ರೇಕ್ ನೀಡಿದ ವರುಣ; ಮತ್ತೆ ನಾಳೆ ಸುರಿಯಲಿದೆ ಮಳೆ

ಸಾವರ್ಕರ್ ವಿಚಾರದಲ್ಲಿ ನೀಡಿದ್ದ ಹೇಳಿಕೆಗೆ ಕ್ಷಮೆ ಕೇಳುವಂತೆ ಬೆದರಿಕೆ

ಅಲ್ಲದೇ ಸಾವರ್ಕರ್ ವಿಚಾರದಲ್ಲಿ ನೀಡಿದ್ದ ಹೇಳಿಕೆಗೆ ಕ್ಷಮೆ ಕೇಳುವಂತೆಯು ಬೆದರಿಕೆ ಹಾಕಿದ್ದು, ಅಂಚೆ ಮೂಲಕ ನಗರದ ಮುನ್ಸಿಪಲ್ ಕಾಲೋನಿ ನಿವಾಸಕ್ಕೆ ಪತ್ರವನ್ನ ರವಾನೆ ಮಾಡಿದ್ದಾರೆ. ಸದ್ಯ ಈ ಕುರಿತು ವೇಣು ಅವರು ಅನಾಮಧೇಯ ವ್ಯಕ್ತಿಗಳು ಬೆದರಿಕೆ ಪತ್ರ ಕಳಿಸಿದ ವಿರುದ್ದ ಚಿತ್ರದುರ್ಗ ನಗರದ  ಬಡಾವಣೆ ಠಾಣೆಗೆ ದೂರು ನೀಡಿದ್ದಾರೆ. ದೂರು ಪಡೆದ ಪೊಲೀಸರು ಅನಾಮಧೆಯ ವ್ಯಕ್ತಿಗಳ ವಿರುದ್ದ  IPC ಸೆಕ್ಷನ್ 504 , 507 ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Murder: ಶಿವಮೊಗ್ಗದಲ್ಲಿ ಹಾಡಹಗಲೇ ರೌಡಿಶೀಟರ್ ಬರ್ಬರ ಹತ್ಯೆ; ಹಂದಿ ಹಣ್ಣಿಯನ್ನು ಕೊಚ್ಚಿ ಕೊಲೆ ಮಾಡಲು ಕಾರಣವೇನು?

ಅಲ್ಲದೇ ಬಿಎಲ್ ವೇಣು ಅವರ ನಿವಾಸಕ್ಕೆ ಪೋಲೀಸ್ ಬೀಟ್ ಕೂಡಾ ಹಾಕಲಾಗಿದ್ದು, ಹದ್ದಿನ ಕಣ್ಣಿಡಲಾಗಿದೆ. ಅಲ್ಲದೇ ಇದೇ ವಿಚಾರವಾಗಿ ಚಿತ್ರದುರ್ಗ ಎಸ್ಪಿ ಪರುಶುರಾಮ್ ವೇಣು ಅವರ ನಿವಾಸಕ್ಕೆ ತೆರಳಿ ಆತ್ಮ ಸ್ಥೈರ್ತ ತುಂಬಿದ್ದಾರೆ‌. ಅಲ್ಲದೇ ಬೆದರಿಕೆ ಪತ್ರ ಬರೆದಿರುವ ಅನಾಮಧೇಯ ವ್ಯಕ್ತಿಗಳ ಪತ್ತೆ ಕಾರ್ಯಕ್ಕೆ ಪೋಲೀಸರ ವಿಶೇಷ ತಂಡಗಳನ್ನ ಮಾಡಿದ್ದಾರೆ.
Published by:Divya D
First published: