ಅಂತರಾಷ್ಟ್ರೀಯ ಅಥ್ಲೆಟಿಕ್ಸ್​​​ ಕ್ರೀಡಾಕೂಟದಲ್ಲಿ ಬೆಳ್ಳಿ ಗೆದ್ದ ಕರುನಾಡಿನ ಪ್ರತಿಭೆ

ಕೋಟೆನಾಡಿನ ಪ್ರತಿಭೆ ಜೂನ್ ನಲ್ಲಿ ನಡೆದ ಯುನೈಟೆಡ್ ನ್ಯಾಷನಲ್ ಗೇಮ್ 2019, 6ನೇ ನ್ಯಾಷನಲ್ ಚಾಂಪಿಯನ್ ಶಿಫ್, 2019 ಜೂನ್ 09 ರಿಂದ 11ವರೆಗೆ ನಡೆದಿದ್ದ 5ಸಾವಿರ ಅಥ್ಲೆಟಿಕ್ ಕ್ರೀಡಾಕೂಟ‌ದಲ್ಲಿ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದ.

Latha CG | news18
Updated:August 29, 2019, 8:24 PM IST
ಅಂತರಾಷ್ಟ್ರೀಯ ಅಥ್ಲೆಟಿಕ್ಸ್​​​ ಕ್ರೀಡಾಕೂಟದಲ್ಲಿ ಬೆಳ್ಳಿ ಗೆದ್ದ ಕರುನಾಡಿನ ಪ್ರತಿಭೆ
ಬೆಳ್ಳಿ ಗೆದ್ದ ಹಾಲೇಶ್​
  • News18
  • Last Updated: August 29, 2019, 8:24 PM IST
  • Share this:
ಚಿತ್ರದುರ್ಗ(ಆ.29): ನೇಪಾಳದಲ್ಲಿ ನಡೆದ ಯುನೈಟೆಡ್​ ಇಂಟರ್​​ ನ್ಯಾಷನಲ್​ ಅಥ್ಲೆಟಿಕ್​ ಕ್ರೀಡಾಕೂಟ-2019ರಲ್ಲಿ ಕೋಟೆನಾಡಿನ ಪ್ರತಿಭೆ ದೇಶಕ್ಕೆ ಕೀರ್ತಿ ತಂದಿದ್ದಾನೆ.  ಕೋಟೆನಾಡು ಚಿತ್ರದುರ್ಗದ ಹಾಸ್ಟೆಲ್​ ವಿದ್ಯಾರ್ಥಿ ಕೆ.ಹಾಲೇಶ್​​ ಭಾರತವನ್ನು ಪ್ರತಿನಿಧಿಸಿ 5 ಸಾವಿರ ಮೀಟರ್​ ಓಟದಲ್ಲಿ ಬೆಳ್ಳಿ ಗೆದ್ದಿದ್ಧಾನೆ.

ಚಿತ್ರದುರ್ಗ ಸರಸ್ವತಿ ಕಾಲೇಜಿನ ಪ್ರಥಮ ಕಾನೂನು ಪದವಿ ವಿದ್ಯಾರ್ಥಿ ಕೆ.ಹಾಲೇಶ್​​ ಬೆಳ್ಳಿ ಗೆದ್ದ ಯುವಕ. ಚಿತ್ರದುರ್ಗ ಸರ್ಕಾರಿ ಮೆಟ್ರಿಕ್​ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿ ಮೂಲತಃ ದಾವಣೆಗೆರೆಯವ. ಬಡ ಕುಟುಂಬದಿಂದ ಬಂದ ಗ್ರಾಮೀಣ ಪ್ರತಿಭೆ  ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.ಡಿಕೆಶಿಗೆ ಮತ್ತೆ ಸಂಕಷ್ಟ; ಅಕ್ರಮ ಹಣ ಪತ್ತೆ ಪ್ರಕರಣ ಸಂಬಂಧ ಇ.ಡಿ. ತನಿಖೆಗಿಲ್ಲ ತಡೆ

ದಾವಣಗೆರೆ ಜಿಲ್ಲೆ ಜಗಳೂರು ತಾಲೂಖಿನ ಸೊಕ್ಕೆ ಗ್ರಾಮದ ಕೆ.ಹಾಲೇಶ್​ ಸ್ವಂತ ಪರಿಶ್ರಮದಿಂದಲೇ ಕ್ರೀಡೆಯಲ್ಲಿ ಯಶಸ್ಸು ಕಂಡ ಯುವಕ. ಕ್ರೀಡೆಯಲ್ಲಿ ಪಾಲ್ಗೊಳ್ಳಲು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ನೆರವನ್ನೂ ಸಹ ಹಾಲೇಶ್​ ಪಡೆದಿದ್ದ.

ಹಾಲೇಶ್​ ಈ ಹಿಂದೆ ಗೋವಾದಲ್ಲಿ ನಡೆದಿದ್ದ ರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದ. ಕೋಟೆನಾಡಿನ ಪ್ರತಿಭೆ ಜೂನ್ ನಲ್ಲಿ ನಡೆದ ಯುನೈಟೆಡ್ ನ್ಯಾಷನಲ್ ಗೇಮ್ 2019, 6ನೇ ನ್ಯಾಷನಲ್ ಚಾಂಪಿಯನ್ ಶಿಫ್, 2019 ಜೂನ್ 09 ರಿಂದ 11ವರೆಗೆ ನಡೆದಿದ್ದ 5ಸಾವಿರ ಅಥ್ಲೆಟಿಕ್ ಕ್ರೀಡಾಕೂಟ‌ದಲ್ಲಿ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದ.

First published:August 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading