ಚಿತ್ರದುರ್ಗ ಜಿಲ್ಲಾ ಪಂಚಾಯ್ತಿಅಧಿಕಾರಿಯ ಐ ಲವ್​ ಯು ಮೇಸೆಜ್ ಫಜೀತಿ !

news18
Updated:July 11, 2018, 7:01 PM IST
ಚಿತ್ರದುರ್ಗ ಜಿಲ್ಲಾ ಪಂಚಾಯ್ತಿಅಧಿಕಾರಿಯ ಐ ಲವ್​ ಯು ಮೇಸೆಜ್ ಫಜೀತಿ !
news18
Updated: July 11, 2018, 7:01 PM IST
- ವಿನಾಯಕ ತೊಡರನಾಳ್, ನ್ಯೂಸ್ 18 ಕನ್ನಡ

ಚಿತ್ರದುರ್ಗ ( ಜುಲೈ 11) :  ಐ ಲವ್ಯೂ ಕಣೇ.....ನೀ ನನ್ನ ಬಿಟ್ರೆ ನನ್ನ ಜೀವಾನೇ ಇಲ್ಲದಾಗೆ ಆಗುತ್ತೆ...‌ ಕೊನೆ ಬಾರಿ ನಿನ್ನ ಮನೇಗೆ ಬರ್ತಿನಿ ಪ್ಲೀಸ್... ಅಬ್ಬಾಬ್ಬಾ ಇವೆಲ್ಲಾ ಹದಿಹರೆಯದವರು ಬೇಜಾರಾಗಿರುವ ಪ್ರೇಯಿಸಿಗೆ ಮಾಡೋ ಚಾಟಿಂಗ್ ಅನ್ಕೊಂಡ್ರಾ?  ಅಲ್ಲಾ ಕಂಡ್ರಿ. ಇದನ್ನೆಲ್ಲಾ ಮಾಡಿರೋ ಮಹಾನುಭಾವ ಯಾರು? ಚಾಟ್ ಮಾಡಿರೋದಾದ್ರು ಎಲ್ಲಿ? ಈ ಲವ್ವಿ ಡವ್ವಿ ಸ್ಟೋರಿ ಓದಿ..

ಹೌದು ಕಾಲ ಕಾಲಕ್ಕೆ ಕೆಡಿಪಿ ಸಭೆಗಳನ್ನ ಮಾಡಿ ಪ್ರಗತಿ ಪರಿಶೀಲನಾ ಬಗ್ಗೆ ಸಾಧಕ -ಭಾದಕಗಳನ್ನ ಜಿಲ್ಲಾ ಪಂಚಾಯತ್​ನಲ್ಲಿ ಅಧಿಕಾರಿಗಳ ಸಭೆ ನಡೆಸಲಾಗುತ್ತೆ. ಆದ್ರೆ ಅಧಿಕಾರಿಗಳು ಮಾತ್ರ ತಮಗೂ ಆ ಸಭೆಗೂ ಸಂಬಂಧವೇ ಇಲ್ಲದ ರೀತಿ ವರ್ತನೆ ಮಾಡೋದು ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯ ಕಂಡು ಬರುವ ಸರ್ವೇ ಸಾಮಾನ್ಯ ಸಂಗತಿಗಳು. ಸಭೆಯಲ್ಲಿ ಕೆಲವರು ನಿದ್ರೆಯ ಮೂಡಲ್ಲಿದ್ರೆ,  ಜಿಲ್ಲಾ ಅಕ್ಷರ ದಾಸೋಹದ ಶಿಕ್ಷಣ ಅಧಿಕಾರಿ ದಾರುಕೇಶ್ ಮಾತ್ರ ಒಂದೇ ಸಲಕ್ಕೆ ಮೂವರು ಮಹಿಳೆಯರ ಜೊತೆ ಲವ್ವಿ ಡವ್ವಿ ಶುರು ಮಾಡ್ಕೊಂಡಿದ್ರು. ಈ ಬಗ್ಗೆ ಮಾಧ್ಯಮದಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ಸಿಇಓ ಪಿಎನ್ ರವೀಂದ್ರ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದು, ಮುಂದಿನ ಸಭೆಯಲ್ಲಿ ಯಾವುದೇ ಕಾರಣಕ್ಕೂ ಮೊಬೈಲ್ ತರಬೇಡಿ, ಸಭೆಗೆ ಬಂದು ಗಂಭೀರತೆ ಅರ್ಥ ಮಾಡಿಕೊಳ್ಳಬೇಕೆಂದು ಚಾಟಿ ಬೀಸಿದ್ರು.

ಇನ್ನು ಬರದ ನಾಡು ಚಿತ್ರದುರ್ಗದಲ್ಲಿ ಈ ಬಾರಿ ಸರಿಯಾದ ಸಮಯಕ್ಕೆ ಮಳೆ ಬಾರದೇ ರೈತರ ಬೆಳೆಗಳನ್ನು ಬೆಳೆದು ಚಿಂತಾಜನಕರಾಗಿದ್ದಾರೆ. ಇನ್ನು ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕ ಅಧಿಕಾರಿಗಳನ್ನು ಸರಿಯಾದ ಮಾಹಿತಿ ಇಲ್ಲದೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಕೇಳುವ ಪ್ರಶ್ನೆಗಳಿಗೆ ತಡವರಿಸುತ್ತಿದ್ರು. ಸರಿಯಾದ ಮಾಹಿತಿ ಇಲ್ಲದೇ ಅಧಿಕಾರಿಗಳ ಸಭೆಗೆ ಯಾಕೆ ಬರುತ್ತೀರಿ ಅಂತಾ ಜಿ.ಪಂ ಅಧ್ಯಕ್ಷರು ಅಧಿಕಾರಿಗಳ ವಿರುದ್ಧ ಗರಂ ಆದ್ರು.

ಇನ್ನು ಅಧಿಕಾರಿಗಳು ಜನ ಸಾಮಾನ್ಯರ ಕುಂದು ಕೊರತೆಗಳ ಬಗ್ಗೆ ಗಂಭೀರವಾಗಿ ಚರ್ಚೆ ಮಾಡದೇ ಸ್ಲೀಪಿಂಗ್‌ ಮೂಡಲ್ಲಿರುವುದು, ಲವ್ವಿ ಡವ್ವಿ ಚಾಟಿಂಗ್ ಮಾಡಿರುವ ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕೆಂದು ಮೇಲಾಧಿಕಾರಿಗಳಿಗೆ ಜನಪ್ರತಿನಿಧಿಗಳು ಒತ್ತಾಯಿಸಿದ್ದಾರೆ

ಅಧಿಕಾರಿಗಳ ಈ ಬೇಜವ್ದಾರಿತನ ಮತ್ತೆ ಮತ್ತೆ ಪ್ರದರ್ಶನವಾಗ್ತಿದೆ. ಈ ಹಿಂದೆಯೂ ಕೂಡ ಮೇಲಾಧಿಕಾರಿಗಳು ಸೂಚನೆ ಕೊಟ್ಟಿದ್ರು ಕೂಡ ಪರಿಪಾಲನೆ ಮಾಡಿಲ್ಲ. ಹೀಗಿದ್ದು ಇನ್ಮೇಲೆ ಹೊಸ ನಿಮಯ ಯಾವ ರೀತಿ ಅಳವಡಿಸಿಕೊಳ್ಳುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.
First published:July 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...