ಅಪ್ಪನ ಕಾಮತೃಷೆಗೆ ಗರ್ಭಿಣಿಯಾಗಿ ಶಾಲೆಯನ್ನೂ ಬಿಟ್ಟು ಹಡೆದ ಮಗುವನ್ನೂ ಕಳೆದುಕೊಂಡ ಬಾಲಕಿ

ಅಪ್ಪನ ಕಾಮದ ತೃಷೆಯಿಂದ ಗರ್ಭಿಣಿಯಾದ ಬಾಲಕಿಯು ಸತ್ತ ಮಗವಿಗೆ ಜನ್ಮ ನೀಡಿದ್ದಾಳೆ. ಹೊಟ್ಟೆಯಲ್ಲೇ ಸತ್ತಿದ್ದ ಮಗುವನ್ನು ಅಪ್ಪ ಮಣ್ಣಿನಲ್ಲಿ ಹೂತು ಹಾಕಲು ಯತ್ನಿಸಿದ್ದಾನೆ. ಈ ವೇಳೆ ಗ್ರಾಮಸ್ಥರು ಮಕ್ಕಳ ಸಹಾಯವಾಣಿಗೆ ಮಾಹಿತಿ ನೀಡಿದ್ದರಿಂದ ಪೊಲೀಸರು  ಕೂಡಲೇ ಕಾರ್ಯಪ್ರವೃತ್ತರಾಗಿ ಕೀಚಕ ತಂದೆಯನ್ನು ಬಂಧಿಸಿದ್ದಾರೆ.

G Hareeshkumar | news18
Updated:April 22, 2019, 10:25 PM IST
ಅಪ್ಪನ ಕಾಮತೃಷೆಗೆ ಗರ್ಭಿಣಿಯಾಗಿ ಶಾಲೆಯನ್ನೂ ಬಿಟ್ಟು ಹಡೆದ ಮಗುವನ್ನೂ ಕಳೆದುಕೊಂಡ ಬಾಲಕಿ
ಪ್ರಾತಿನಿಧಿಕ ಚಿತ್ರ
G Hareeshkumar | news18
Updated: April 22, 2019, 10:25 PM IST
ಚಿತ್ರದುರ್ಗ(ಏ. 22): ಶಾಲೆಗೆ ಹೋಗುವ ಮಗಳ ಮೇಲೆ ತಂದೆಯೇ ನಿರಂತರ ಅತ್ಯಾಚಾರ ಎಸಗಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಗ್ರಾಮವೊಂದರಲ್ಲಿ ಬೆಳಕಿಗೆ ಬಂದಿದೆ. ಅಪ್ಪನ ಕಾಮದ ತೃಷೆಯಿಂದ ಗರ್ಭಿಣಿಯಾದ ಬಾಲಕಿಯು ಸತ್ತ ಮಗವಿಗೆ ಜನ್ಮ ನೀಡಿದ್ದಾಳೆ. ಹೊಟ್ಟೆಯಲ್ಲೇ ಸತ್ತಿದ್ದ ಮಗುವನ್ನು ಅಪ್ಪ ಮಣ್ಣಿನಲ್ಲಿ ಹೂತು ಹಾಕಲು ಯತ್ನಿಸಿದ್ದಾನೆ. ಈ ವೇಳೆ ಗ್ರಾಮಸ್ಥರು ಮಕ್ಕಳ ಸಹಾಯವಾಣಿಗೆ ಮಾಹಿತಿ ನೀಡಿದ್ದರಿಂದ ಪೊಲೀಸರು  ಕೂಡಲೇ ಕಾರ್ಯಪ್ರವೃತ್ತರಾಗಿ ಕೀಚಕ ತಂದೆಯನ್ನು ಬಂಧಿಸಿದ್ದಾರೆ.

ತನ್ನ ಅಪ್ರಾಪ್ತ ಮಗಳ ಮೇಲೆ ಆರೋಪಿಯು ಕಳೆದ 4- 5 ತಿಂಗಳಿಂದ ನಿರಂತರವಾಗಿ ಅತ್ಯಾಚಾರ ಮಾಡುತ್ತಿದ್ದ ಎನ್ನಲಾಗಿದೆ. ಕೂಲಿ ಕೆಲಸವನ್ನು ಮಾಡುತ್ತಿದ್ದ ಆರೋಪಿಯ ಪ್ರತಿದಿನ ಕುಡಿದು ಬರುತ್ತಿದ್ದ. ಈತನಿಗೆ ಮೂರು ಹೆಣ್ಣು ಮಕ್ಕಳು. ಈತನ ಪತ್ನಿ ನಾಲ್ಕು ವರ್ಷಗಳ ಹಿಂದೆ ನಿಧನ ಹೊಂದಿದ್ದರೆನ್ನಲಾಗಿದೆ. ತನ್ನ ಕಾಮ ತೃಷೆ ತೀರಿಸಿಕೊಳ್ಳಲು ಹಿರಿಯ ಮಗಳನ್ನು ಗುರಿ ಮಾಡಿರುತ್ತಾನೆ.

ಬಾಲಕಿ ಗರ್ಭಿಣಿಯಾಗಿರುವ ವಿಷಯ ತಿಳಿದ ಕೂಡಲೇ ಆರೋಪಿ, ತನ್ನ ಮಗಳು ಶಾಲೆಗೆ ಹೋಗುವದನ್ನು ಮೊಟಕುಗೊಳಿಸಿದ್ದಾನೆ. ಶಿಕ್ಷಕರಿಗೆ ನೆಪ ಹೇಳಿ ಮಗಳನ್ನು ಮನೆಯಲ್ಲಿ ಇರುವಂತೆ ನೋಡಿಕೊಂಡನೆನ್ನಲಾಗಿದೆ.

ಘಟನೆ ಏನು?

ಏಪ್ರಿಲ್​​​ 16 ರಂದು ಬಾಲಕಿಗೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಆಸ್ಪತ್ರೆಗೆ ಕರೆದುಕೊಂಡು ಹೋಗಲು ಪ್ರಯತ್ನಿಸಿದ ಸಂದರ್ಭದಲ್ಲಿ ಬಾಲಕಿ ಶಿಶುವಿಗೆ ಜನ್ಮ ನೀಡಿದ್ದಾಳೆ. ವಿಷಯ ಗೊತ್ತಾದ ಗ್ರಾಮಸ್ಥರು ಮಕ್ಕಳ ಸಹಾಯವಾಣಿಗೆ ಮಾಹಿತಿ ನೀಡಿದ್ದಾರೆ. ಆದರೆ, ಹೊಟ್ಟೆಯಲ್ಲೇ ಸತ್ತಿದ್ದೀ ನವಜಾತ ಶಿಶುವನ್ನು ಮನೆಯಿಂದ ಸುಮಾರು 2 ಕಿ.ಮೀ ದೂರದಲ್ಲಿ ಹೂತು ಹಾಕುತ್ತಾನೆ.

ಇದನ್ನೂ ಓದಿ :  ಬಾಲಕಿ ಮೇಲೆ ಅತ್ಯಾಚಾರ ಎಸಗಲು ಗಂಡನಿಗೆ ಹೆಂಡತಿಯಿಂದಲೇ ಪ್ರಚೋದನೆ..!
Loading...

ಹಬ್ಬನ ಹೋಳೆ  ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ಶಿಶು ಹೂತ ಸ್ಥಳದಲ್ಲಿ ಗೋಣಿ ಚೀಲ ಮಾತ್ರ ಪತ್ತೆಯಾಗಿದೆ. ಶಿಶುವಿನ ಮೃತದೇಹವನ್ನು ಪ್ರಾಣಿಗಳು ತಿಂದು ಹಾಕಿರಬಹುದೆಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

First published:April 22, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...