onion crop: ನಿರಂತರವಾಗಿ ಸುರಿದ ಮಳೆ ಈರುಳ್ಳಿಗೆ ಕೊಳೆ ರೋಗ ಕಾಟ; ಕಂಗಾಲಾದ ರೈತ

ಆದರೆ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಎಡಬಿಡದೆ ಸುರಿದ ಸೈಕ್ಲೋನ್ ಮಳೆ ಭಾರೀ ಸಂಕಷ್ಟ ತಂದೊಡ್ಡಿದೆ.

ಈರುಳ್ಳಿಗೆ ಕೊಳೆ ರೋಗ ಕಾಟ

ಈರುಳ್ಳಿಗೆ ಕೊಳೆ ರೋಗ ಕಾಟ

  • Share this:
ಚಿತ್ರದುರ್ಗ  (ಸೆ. 5) : ಲಕ್ಷ ಲಕ್ಷ ಖರ್ಚು ಮಾಡಿ ಈರುಳ್ಳಿ (onion crop) ಬೆಳೆದಿದ್ದ ಕೋಟೆನಾಡಿನ ಜಿಲ್ಲೆ (chitradurga) ರೈತರು ಬಂಗಾರದ ಫಸಲು ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ ಎಡಬಿಡದೆ ಸುರಿದ ಜಿಟಿ ಜಿಟಿ ಮಳೆ ಈರುಳ್ಳಿ ಬೆಳೆಗಾರರಿಗೆ ದೊಡ್ಡ ಹೊಡೆತ ನೀಡಿದೆ. ಮಳೆಯಿಂದಾಗಿ ಈರುಳ್ಳಿ ಬೆಳೆ ಕೊಳೆ ರೋಗಕ್ಕೆ ತುತ್ತಾಗಿದೆ. ಇದರಿಂದ ಬರದ ಭೂಮಿಯ ರೈತರು ಸಂಕಷ್ಟಕ್ಕೆ ಸಿಲುಕುವಂತೆ ಆಗಿದೆ. ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರು ಈ ಬಾರಿ ಬಂಗಾದಂತ ಬೆಳೆ ಬರುತ್ತೆ ಎಂದು ಕೊಂಡಿದ್ದರು. ಆದರೆ, ಈರುಳ್ಳಿ ಬೆಳೆ ತೇವಾಂಶದಿಂದ ಕೊಳೆ ರೋಗಕಕೆ ತುತ್ತಾಗಿದ್ದು, ರೈತರಲ್ಲಿ ಕಣ್ಣೀರು ತರಿಸಿದೆ.  ಸತತ ಬರಗಾಲ ಎದುರಿಸಿರುವ ಜಿಲ್ಲೆಯಲ್ಲಿ ಅನ್ನದಾತರು ಎದೆಗುಂದದೆ ಬರದ ಭೂಮಿಯಲ್ಲಿ ಬಂಗಾರದ ಬೆಳೆ ಬೆಳೆದ ನಿದರ್ಶನಗಳು ಹಲವು. ಪ್ರತಿ ವರ್ಷದಂತೆ ಈ ಬಾರಿಯೂ ಚಿತ್ರದುರ್ಗ ಜಿಲ್ಲೆಯ ರೈತರು ಸಾವಿರಾರು ಹೆಕ್ಟರ್ ಗಳಲ್ಲಿ ಈರುಳ್ಳಿ ಭಿತ್ತನೆ ಮಾಡಿದ್ದರು. ಆದರೆ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಎಡಬಿಡದೆ ಸುರಿದ ಸೈಕ್ಲೋನ್ ಮಳೆ ಅನ್ನದಾತರಿಗೆ ಜೀವನದಲ್ಲಿ ಬರೆ ಎಳೆಯುಂತೆ ಮಾಡಿದೆ. 

ಕಳೆದ ಎರಡು ತಿಂಗಳ ಅಂತರದಲ್ಲಿ ಪ್ರತಿ ವರ್ಷಕ್ಕಿಂತ ಅಧಿಕ ಮಳೆ ಜಿಲ್ಲೆಯಲ್ಲಿ ಸುರಿದಿದ್ದು, ಈರುಳ್ಳಿ ಬೆಳೆಗಾರರಿಗೆ ದೊಡ್ಡ ಆಘಾತ ನೀಡಿದೆ. ಮಳೆಯಿಂದ ಈರುಳ್ಳಿ ಬೆಳೆ ಗೆಡ್ಡೆ ಕಟ್ಟುವ ಮುನ್ನವೇ ಗಡ್ಡ ಕೊಳೆ, ನೇರಳೆ ಮಚ್ಚೆ ರೋಗಕ್ಕೆ ತುತ್ತಾಗಿದೆ. ಬೆಳೆ ಕೈಗೆ ಬರುತ್ತೆ ಲಾಭ ಸಿಗುತ್ತದೆ ಅಂದು ಕೊಂಡ ಅನ್ನದಾತರ  ಈರುಳ್ಳಿ ಬೆಳೆ ಹಾನಿಯಿಂದ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.

ಜಿಲ್ಲೆಯ ಕಲ್ಲಹಳ್ಳಿ, ಲಿಂಗಾವರಹಟ್ಟಿ, ದ್ಯಾಮವ್ವನಹಳ್ಳಿ, ಕಾಸವರಹಟ್ಟಿ ಸೇರಿದಂತೆ ಹಲವು ಗ್ರಾಮಗಳ ರೈತರ ಜಮೀನುಗಳಲ್ಲಿ ಗೆಡ್ಡೆ ಕಟ್ಟುವ ಮುನ್ನವೇ ಮಳೆಗೆ ಈರುಳ್ಳಿ ಬೆಳೆಗೆ ಕೊಳೆ ರೋಗ ಬಿದ್ದಿದೆ. ಇದರಿಂದ ಲಕ್ಷಾಂತರ ಹಣ ಕಳೆದುಕೊಂಡ ರೈತರು ನಷ್ಟಕ್ಕೆ ಸಿಲುಕಿದ್ದಾರೆ.  ಆದರೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಇತ್ತ ಭೇಟಿ ನೀಡಿಲ್ಲ, ಯಾವುದೇ ಮಾಹಿತಿಯೂ ಕೂಡಾ ನೀಡಿಲ್ಲ ಎಂದು ರೈತರು  ಆರೋಪಿಸಿದ್ದಾರೆ.

ಇದನ್ನು ಓದಿ: ನೆನಸಿದ ಬಾದಾಮಿಯನ್ನು ಮುಂಜಾನೆ ಸಮಯದಲ್ಲಿ ತಿನ್ನುವುದರಿಂದ ಈ ಸಮಸ್ಯೆ ಪರಿಹಾರವಂತೆ

ಇನ್ನೂ ಈ ವರ್ಷ ಜಿಲ್ಲೆಯಲ್ಲಿ 21 ಸಾವಿರದ 580 ಹೆಕ್ಟೇರ್ ಈರುಳ್ಳಿಜಿಲ್ಲೆಯಲ್ಲಿ ಭಿತ್ತನೆ ಮಾಡಿದ್ದಾರೆ. ಇದ್ರಲ್ಲಿ 4941 ಹೆಕ್ಟೇರ್ ಗೂ ಅಧಿಕ ಜಮೀನಿನಲ್ಲಿ ಬೆಳೆ ಹಾನಿ,   1649 ನೇರಳೆ ಮಚ್ಚೆ 1130 ಗೆಡ್ಡೆ ಕೊಳೆ ರೋಗ ಕಾಣಿಸಿಕೊಂಡಿದೆ. ಈ ಕುರಿತು  ಪ್ರತಿಕ್ರಿಯೆ ನೀಡಿರುವ ಚಿತ್ರದುರ್ಗ ತೋಟಗಾರಿಕೆ ಇಲಾಖೆಯ ಡಿಡಿ, ಸವಿತಾ, ಜಿಲ್ಲೆಯಲ್ಲಿ ಕೊಳೆ ರೋಗಕ್ಕೆ ಅಪಾರ ಹಾನಿಯಾಗಿದೆ, ತಜ್ಞರಿಂದ ಜಿಲ್ಲೆಯ ರೈತರಿಗೆ ಈ ಕುರಿತು ಮಾಹಿತಿ ನೀಡಿದ್ದು, ಮುನ್ನೆಚ್ಚರಿಕೆ ವಹಿಸಿ ಕೊಳೆ ರೋಗ ಬಾರದಂತೆ ಔಷಧಿ ಸಿಂಪಡಿಸುವಂತೆ  ಸೂಚನೆ ನೀಡಿದ್ದೇವೆ ಎಂದಿದ್ದಾರೆ.

ಆದರೆ ಎಷ್ಟೆ ಔಷಧಿ ಸಿಂಪಡಿಸಿದರೂ ರೋಗ ಮಾತ್ರ ಹೋಗಿಲ್ಲ ಎನ್ನುತ್ತಿದ್ದಾರೆ ರೈತರು. ಒಟ್ಟಾರೆ ಪ್ರತಿ  ವರ್ಷ ಬರ ಎದುರಿಸಿ ಈರುಳ್ಳಿ ಬೆಳೆ ತೆಗೆಯುತ್ತಿದ್ದ ರೈತರಿಗೆ ಈ ಬಾರಿ ಮಳೆಯೇ ಶತೃವಾಗಿದೆ. ಕೋಟೆನಾಡಲ್ಲಿ ಸುರಿದ ಮಳೆ ಈರುಳ್ಳಿ ಬೆಳೆಗಾರರಿಗೆ ಶಾಪವಾಗಿದೆ. ಕೊಳೆ ರೋಗ ಈರುಳ್ಳಿ ಬೆಳೆಗಾರರ ಬೆನ್ನತಿ ಕಾಡುತ್ತಿದೆ. ಹಾಗಾಗಿ ಇನ್ನಾದರೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಎಚ್ಚೆತ್ತು, ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸೂಕ್ತ ಮಾರ್ಗದರ್ಶನ  ನೀಡಿ ಈರುಳ್ಳಿ ಬೆಳೆ ಜೊತೆ ಬೆಳೆಗಾರರನ್ನೂ ರಕ್ಷಿಸಬೇಕಿದೆ.

(ವರದಿ : ವಿನಾಯಕ ತೊಡರನಾಳ್)
Published by:Seema R
First published: