ಕೆಎಸ್​ಆರ್​​ಟಿಸಿ ಬಸ್ ಘಟಕ ನಿರ್ಮಾಣಕ್ಕೆ ರೈತರ ಜಮೀನು ವಶ; ಪರ್ಯಾಯ ಭೂಮಿ ಸಿಗದೆ ಕಂಗಾಲಾದ ಕುಟುಂಬಗಳು

ಇನ್ನೂ ಕೆಎಸ್​ಆರ್​ಟಿಸಿ ಘಟಕ ನಿರ್ಮಾಣಕ್ಕೆ  ರೈತರ ಜಮೀನಿನ ಪಕ್ಕದಲ್ಲಿ ಗೋಮಾಳ ಜಮೀನು ಇದ್ದರೂ ಅದನ್ನ ಬಿಟ್ಟು, ರಸ್ತೆಗೆ ಹೊಂದಿಕೊಂಡಿರೋ ಆರು ಎಕರೆ ಭೂಮಿ ಸರ್ಕಾರ ವಶಕ್ಕೆ ಪಡೆದಿದೆ. ಮೂವತ್ತು ವರ್ಷಗಳಿಂದ ಸಾಗುವಳಿ ಮಾಡಿ ಶ್ರಮಪಟ್ಟು ಬೆಳೆ ಬೆಳೆಯುತ್ತಿದ್ದ ರೈತ ಕುಟುಂಬಗಳಿಗೆ ದಿಕ್ಕು ತೋಚದಂತಾಗಿದೆ. 

ರೈತರ ಜಮೀನು

ರೈತರ ಜಮೀನು

  • Share this:
ಚಿತ್ರದುರ್ಗ(ಮಾ.24):ಅನಾದಿ ಕಾಲದಿಂದಲೂ ಆ ಗ್ರಾಮದ ಬಡ ರೈತರು ಸರ್ಕಾರಿ ಭೂಮಿಯನ್ನ ಉಳುಮೆ ಮಾಡುತ್ತಿದ್ದರು. ಸರ್ಕಾರ ಇವರ ಪರಿಶ್ರಮಕ್ಕೆ ಬಗರ್ ಹುಕುಂ ಯೋಜನೆಯಡಿ ಜಮೀನು ಮಂಜೂರು ಮಾಡಿಕೊಟ್ಟು ಸಹಕಾರಿ ಆಗಿತ್ತು. ಅದರಂತೆ ಸಾಗುವಳಿ ಚೀಟಿ ಪಡೆದಿದ್ದ ಅನ್ನದಾತರಿಗೆ ಪಾಣಿಯೂ ಬಂದಿದೆ. ಆದರೆ ಆ ರೈತರ ಭೂಮಿಯನ್ನ ಸಾರಿಗೆ ಇಲಾಖೆಯ ಕೆಎಸ್​ಆರ್​ಟಿಸಿ ಘಟಕ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡಿದ್ದು, ಆರು ಎಕರೆ ಜಮೀನು ಒತ್ತುವರಿ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ. ಇದರಿಂದ ರೈತರು ಭೂಮಿಗಾಗಿ ತಾಲ್ಲೂಕು ಕಚೇರಿಗೆ ಅಲೆಯುವಂತಾಗಿದೆ.

ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಕ್ಷೇತ್ರದ ಗುಂಡಿಮಡು ಸಮೀಪದ ಬಸಾಪುರ ಗೇಟ್ ಬಳಿ ಸಾರಿಗೆ ಇಲಾಖೆ ನಿರ್ಮಾಣದ ತರಬೇತಿ ಶಾಲೆ. ಇದೇ ತರಬೇತಿ ಶಾಲೆ ಆವರಣದ ಮುಂಭಾಗದಲ್ಲಿ ಸರ್ಕಾರ, ಸಾರಿಗೆ ಬಸ್ ಡಿಪೋ ನಿರ್ಮಾಣಕ್ಕೆ ಮುಂದಾಗಿದೆ. ಸಾರಿಗೆ ಬಸ್ ಘಟಕಕ್ಕೆ ಹಣ ಕೂಡಾ ಸರ್ಕಾರ ಬಿಡುಗಡೆ ಮಾಡಿದೆ. ಇದರಿಂದ ಕಳೆದ ಮೂರು ದಿನಗಳ ಹಿಂದೆ ಹೊಳಲ್ಕೆರೆ ಬಸಾಪುರ ಬಳಿಯ ಚಾಲಕರ ತರಬೇತಿ ಶಾಲೆಯ ಉದ್ಘಾಟನೆ ಮಾಡಿದ್ದ ಸಾರಿಗೆ ಸಚಿವ ಡಿಸಿಎಂ ಲಕ್ಷ್ಮಣ ಸವದಿ, ಅದರ ಮುಂಭಾಗದಲ್ಲಿ ಬಸ್ ಡಿಪೋಗೆ ಭೂಮಿ ಪೂಜೆ ಮಾಡಿದ್ದರು. ಆರು ರೈತ ಕುಂಟುಂಬಗಳ ಜಮೀನನ್ನು  ಶಾಸಕ ಚಂದ್ರಪ್ಪ ಸರ್ಕಾರಕ್ಕೆ ವಶಪಡಿಸಿಕೊಳ್ಳಲು ಸೂಚಿಸಿದ್ದಾರೆ. ಇದರಿಂದ ಬಡ ರೈತರು ಭೂಮಿ‌ ಕಳೆದುಕೊಳ್ಳುವಂತಾಗಿದೆ ಎಂದು ಹೊಳಲ್ಕೆರೆ ಶಾಸಕ‌ ಎಂ.ಚಂದ್ರಪ್ಪ ವಿರುದ್ದ ರೈತ ಕುಟುಂಬಗಳು  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಲ್ಲಿಗೆ ಕೃಷಿ, ಚೆಲ್ಲಿದೆ ಖುಷಿ; ನೂರಾರು ಕುಟುಂಬಗಳ ಬಾಳ ಬಂಗಾರ ಮಾಡಿದ ಹೂವು

ಇನ್ನೂ ಕೆಎಸ್​ಆರ್​ಟಿಸಿ ಘಟಕ ನಿರ್ಮಾಣಕ್ಕೆ  ರೈತರ ಜಮೀನಿನ ಪಕ್ಕದಲ್ಲಿ ಗೋಮಾಳ ಜಮೀನು ಇದ್ದರೂ ಅದನ್ನ ಬಿಟ್ಟು, ರಸ್ತೆಗೆ ಹೊಂದಿಕೊಂಡಿರೋ ಆರು ಎಕರೆ ಭೂಮಿ ಸರ್ಕಾರ ವಶಕ್ಕೆ ಪಡೆದಿದೆ. ಮೂವತ್ತು ವರ್ಷಗಳಿಂದ ಸಾಗುವಳಿ ಮಾಡಿ ಶ್ರಮಪಟ್ಟು ಬೆಳೆ ಬೆಳೆಯುತ್ತಿದ್ದ ರೈತ ಕುಟುಂಬಗಳಿಗೆ ದಿಕ್ಕು ತೋಚದಂತಾಗಿದೆ.

ಈ ರೈತರಿಗೆ ಬೇರೆ ಕಡೆ ಜಮೀನು ಮಂಜೂರು ಮಾಡುವ ಭರವಸೆ ನೀಡಿದ್ದ ಸಾರಿಗೆ ಇಲಾಖೆ ಹಾಗೂ ಚಿತ್ರದುರ್ಗ ಜಿಲ್ಲಾಡಳಿತ ಮೌನವಹಿಸಿದ್ದು,ಅನ್ನದಾತರ ಕಷ್ಠ ಆಲಿಸುವವರೆ ಇಲ್ಲದಂತಾಗಿದೆ. ಇದರಿಂದ ಯಾವುದೇ ಕಾರಣಕ್ಕೂ, ಸಾರಿಗೆ ಘಟಕ ನಿರ್ಮಾಣ ಮಾಡಲು ಬಿಡುವುದಿಲ್ಲ, ನಮ್ಮ ಜಮೀನು ನಮಗೆ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಅಲ್ಲದೆ ಶಾಸಕರು ಹಾಗೂ ಜಿಲ್ಲಾಡಳಿತ ನೀಡಿದ್ದ ಭರವಸೆಯಂತೆ, ಬೇರೆ ಗೋಮಾಳದಲ್ಲಿ ಆರು ಎಕರೆ ಭೂಮಿ ಮಂಜೂರು ಮಾಡಬೇಕು, ಅಲ್ಲಿಯವರೆಗೂ ಭೂಮಿ ಬಿಡುವುದಿಲ್ಲ ಎಂದಿದ್ದಾರೆ.

ಒಟ್ಟಾರೆ ಸರ್ಕಾರವೇ ಬಡ ಕುಟುಂಬಗಳಿಗೆ ಬಗರ್ ಹುಕುಂ ಯೋಜನೆಯಡಿ ಮಂಜೂರು ಮಾಡಿದ್ದ ಭೂಮಿಯನ್ನ, ಸಾರಿಗೆ ಘಟಕ ನೆಪದಲ್ಲಿ ವಾಪಸ್ ಪಡೆದಿದ್ದು, ಬೇರೆ ಕಡೆ ಭೂಮಿ ಮಂಜೂರು ಮಾಡದೆ ಸತಾಯಿಸುತ್ತಿದೆ ಎಂಬ ಆರೋಪ ಜಿಲ್ಲಾಡಳಿತದ ವಿರುದ್ದ ಕೇಳಿ ಬಂದಿದೆ. ಇನ್ನಾದರೂ ಚಿತ್ರದುರ್ಗ ಜಿಲ್ಲಾಧಿಕಾರಿಗಳು ಎಚ್ಚೆತ್ತು ಅನ್ನದಾತರ ಮನವಿಗೆ ಸ್ಪಂದಿಸಬೇಕಿದೆ.
Published by:Latha CG
First published: