HOME » NEWS » State » CHITRADURGA DC KAVITHA SAYS PLEASE FALLOW CORONA GUIDELINES AND CONTROL SPREAD VIRUS VTC LG

ಕೊರೋನಾ ತಡೆಯಲು ಸಹಕರಿಸಿ, ಅನಗತ್ಯ ಓಡಾಡಬೇಡಿ; ಕಾನೂನು ಉಲ್ಲಂಘಿಸಿದರೆ ಕ್ರಮ; ಚಿತ್ರದುರ್ಗ ಡಿಸಿ ಕವಿತಾ ಎಸ್ ಮನ್ನಿಕೇರಿ 

ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ದಿನ ಬೆಳಿಗ್ಗೆ  6 ರಿಂದ ರಾತ್ರಿ 9 ಗಂಟೆಯವರೆಗೆ ಮಾತ್ರ ಅಗತ್ಯ ವಸ್ತುಗಳು  ಅಂಗಡಿ ಮುಂಗಟ್ಟುಗಳು ತೆರೆದಿರುತ್ತವೆ. ಬಟ್ಟೆ ಅಂಗಡಿ ಸೇರಿದಂತೆ ಅಗತ್ಯ ವಸ್ತುಗಳು ಅಲ್ಲದ ಅಂಗಡಿಗಳು ಇರುವುದಿಲ್ಲ. ಸಲೂನ್‍ಗಳು, ಬ್ಯೂಟಿಪಾರ್ಲರ್​ಗಳು ಕೋವಿಡ್ ಮಾರ್ಗ ಸೂಚಿಯನ್ವಯ ವಾರದ ದಿನಗಳಲ್ಲಿ ಮಾತ್ರ ತೆರೆದಿರುತ್ತವೆ ಎಂದು ಹೇಳಿದ್ದಾರೆ.

news18-kannada
Updated:April 24, 2021, 10:18 AM IST
ಕೊರೋನಾ ತಡೆಯಲು ಸಹಕರಿಸಿ, ಅನಗತ್ಯ ಓಡಾಡಬೇಡಿ; ಕಾನೂನು ಉಲ್ಲಂಘಿಸಿದರೆ ಕ್ರಮ; ಚಿತ್ರದುರ್ಗ ಡಿಸಿ ಕವಿತಾ ಎಸ್ ಮನ್ನಿಕೇರಿ 
ಚಿತ್ರದುರ್ಗ ಡಿಸಿ ಕವಿತಾ ಎಸ್ ಮನ್ನಿಕೇರಿ 
  • Share this:
ಚಿತ್ರದುರ್ಗ(ಏ.24): ವೀಕೆಂಡ್ ಕರ್ಫ್ಯೂ ವೇಳೆ ಬೆಳಿಗ್ಗೆ 6 ರಿಂದ 10 ರವರೆಗೆ ಅಗತ್ಯ ವಸ್ತುಗಳ ಸೇವೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಸಾರ್ವಜನಿಕರು ಅನಗತ್ಯವಾಗಿ ಸಂಚಾರ ಮಾಡದೇ ಕೋವಿಡ್ ನಿಯಂತ್ರಣಕ್ಕೆ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹೇಳಿದ್ದಾರೆ. ಕೊರೋನಾ ನಿಯಂತ್ರಣದ ಕುರಿತು ಸುದ್ದಿಗೋಷ್ಠಿ  ಮಾಡಿ ಮಾತನಾಡಿ, ನಾಳೆಯಿಂದ ಸೋಮವಾರ ಬೆಳಗ್ಗೆ ವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದೆ. ಆದರೆ ಅಗತ್ಯ ವಸ್ತುಗಳಾದ ಪಡಿತರ ಅಂಗಡಿ ಹಾಗೂ ದಿನಸಿ, ಹಣ್ಣು, ತರಕಾರಿ, ಹಾಲಿನ ಬೂತ್, ಮೀನು, ಮಾಂಸ, ಪಶು ಆಹಾರ ಅಂಗಡಿಗಳ ಸೇವೆಗೆ ಬೆಳಿಗ್ಗೆ 6 ರಿಂದ 10ರವರೆಗೆ ಮಾತ್ರ ಇದ್ದು, ಮೆಡಿಕಲ್ ಸ್ಟೋರ್​​ಗಳು ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಸೌಲಭ್ಯ ಲಭ್ಯವಿರುತ್ತವೆ ಎಂದಿದ್ದಾರೆ.

ಇನ್ನೂ ವೀಕೆಂಡ್ ಕರ್ಫ್ಯೂ ವೇಳೆ ಕೋವಿಡ್ ಲಸಿಕೆ ಪಡೆಯುವವರಿಗೆ ಅವಕಾಶ ಕಲ್ಪಿಸಲಾಗಿದ್ದು, ಲಸಿಕೆ ಪಡೆದುಕೊಳ್ಳಲು ಆಧಾರ್ ಕಾರ್ಡ್ ಹಾಗೂ ಸಂಬಂಧಿಸಿದ ದಾಖಲೆಗಳನ್ನು ಹಾಜರು ಪಡಿಸಬೇಕು ಎಂದಿದ್ದಾರೆ. ಮದುವೆಗೆ 50 ಜನ ಹಾಗೂ ಅಂತ್ಯಕ್ರಿಯೆಗೆ 20 ಜನ ಮೀರುವಂತಿಲ್ಲ. ಮದುವೆಗೆ ತೆರಳುವವರು ಆಹ್ವಾನ ಪತ್ರಿಕೆ ಹಾಜರುಪಡಿಸಬೇಕು ಎಂದರು.

5 ವರ್ಷಗಳಿಂದ ಕುಕ್ಕೆ ಸುಬ್ರಹ್ಮಣ್ಯ ಆದಾಯದ ಆಡಿಟ್ ಆಗಿಲ್ಲ; ಆಡಳಿತ ಮಂಡಳಿ ವಿರುದ್ಧ ಸಿಎಂಗೆ ದೂರು

ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ದಿನ ಬೆಳಿಗ್ಗೆ  6 ರಿಂದ ರಾತ್ರಿ 9 ಗಂಟೆಯವರೆಗೆ ಮಾತ್ರ ಅಗತ್ಯ ವಸ್ತುಗಳು  ಅಂಗಡಿ ಮುಂಗಟ್ಟುಗಳು ತೆರೆದಿರುತ್ತವೆ. ಬಟ್ಟೆ ಅಂಗಡಿ ಸೇರಿದಂತೆ ಅಗತ್ಯ ವಸ್ತುಗಳು ಅಲ್ಲದ ಅಂಗಡಿಗಳು ಇರುವುದಿಲ್ಲ. ಸಲೂನ್‍ಗಳು, ಬ್ಯೂಟಿಪಾರ್ಲರ್​ಗಳು ಕೋವಿಡ್ ಮಾರ್ಗ ಸೂಚಿಯನ್ವಯ ವಾರದ ದಿನಗಳಲ್ಲಿ ಮಾತ್ರ ತೆರೆದಿರುತ್ತವೆ ಎಂದು ಹೇಳಿದ್ದಾರೆ.

ಕಟ್ಟಡ ನಿರ್ಮಾಣ ಸಾಮಾಗ್ರಿಗಳಿಗೆ ಸಂಬಂಧಿಸಿದ ಅಂಗಡಿಗಳು, ವಾರದ ದಿನಗಳಲ್ಲಿ ತೆರೆದಿರುತ್ತವೆ ಮತ್ತು ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಹಾಗೂ ಇದಕ್ಕೆ ಪೂರಕವಾಗಿರುವ ಅಂಗಡಿಗಳು, ದಾಸ್ತಾನು ಮಳಿಗೆ, ಕೃಷಿ ಯಂತ್ರಗಾರಿಕೆ ಇ-ಕಾಮರ್ಸ್‍ಗೆ ಅವಕಾಶವಿದ್ದು, ದಿನಸಿಗಳ ಮನೆಬಾಗಿಲಿಗೆ ಪಾರ್ಸೆಲ್ ಪಡೆಯಲು ಅವಕಾಶವಿರುತ್ತದೆ. ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ಪಾರ್ಸೆಲ್ ಸೇವೆಗೆ ಅವಕಾಶವಿರುತ್ತದೆ.

ಧಾರ್ಮಿಕ ಸಮಾರಂಭ, ಪೂಜಾಸ್ಥಳ, ಪೂಜೆಗೆ ಮಾತ್ರ ಸೀಮಿತಗೊಳಿಸಿ ಸಾರ್ವಜನಿಕರ ಪ್ರವೇಶಕ್ಕೆ ಸಂಪೂರ್ಣವಾಗಿ ಮುಚ್ಚಲಾಗಿದೆ. ಒಂದು ವೇಳೆ ಯಾರಾದರೂ ಉಲ್ಲಂಘನೆ ಮಾಡಿದ್ದಲ್ಲಿ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ಸಾರ್ವಜನಿಕರು ಅನಗತ್ಯವಾಗಿ ಸಂಚಾರ ಮಾಡದೇ ಕೋವಿಡ್ ನಿಯಂತ್ರಣಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
Youtube Video
ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣದಲ್ಲಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ 795, ಖಾಸಗಿಯಲ್ಲಿ ಆಸ್ಪತ್ರೆಯಲ್ಲಿ 247 ಕೋವಿಡ್ ಬೆಡ್‍ಗಳನ್ನು ಮೀಸಲಿರಿಸಲಾಗಿದೆ. ಸರ್ಕಾರಿಯಲ್ಲಿ 55 ಆಕ್ಸಿನೇಟೆಡ್ ಬೆಡ್ ಹಾಗೂ ಖಾಸಗಿಯಲ್ಲಿ 50 ಬೆಡ್‍ಗಳಿವೆ. ಸರ್ಕಾರಿ ಐಸಿಯು 41, ಖಾಸಗಿ 50 ಐಸಿಯುಗಳಿವೆ ಮತ್ತು ವೆಂಟಿಲೇಟರ್​​ಗಳು ಖಾಸಗಿ 30, ಸರ್ಕಾರಿ 31 ಇವೆ. ಒಂದು ವೇಳೆ ಇನ್ನೂ ಹೆಚ್ಚಾದಲ್ಲಿ ಹಾಸ್ಟೆಲ್‍ಗಳಲ್ಲಿ ಕೋವಿಡ್‍ಗೆ ಚಿಕಿತ್ಸೆಗಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
Published by: Latha CG
First published: April 24, 2021, 10:13 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories