• Home
  • »
  • News
  • »
  • state
  • »
  • POCSO Case: ಮುರುಘಾ ಸ್ವಾಮಿಗೆ ಜೈಲೇ ಗತಿ! ನ.25ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

POCSO Case: ಮುರುಘಾ ಸ್ವಾಮಿಗೆ ಜೈಲೇ ಗತಿ! ನ.25ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

ಮುರುಘಾ ಸ್ವಾಮೀಜಿ

ಮುರುಘಾ ಸ್ವಾಮೀಜಿ

ವಿಡಿಯೋ ಕಾನ್ಫೆರನ್ಸ್​ ಮೂಲಕ ವಿಚಾರಣೆ ನಡೆಸಿದ ಕೋರ್ಟ್,​ ಎ1  ಮುರುಘಾಶ್ರೀ, ಎ2  ವಾರ್ಡನ್ ರಶ್ಮಿ, ಎ3  ಮಠದ ಮ್ಯಾನೇಜರ್ ಪರಮಶಿವಯ್ಯಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದೆ.

  • News18 Kannada
  • Last Updated :
  • Karnataka, India
  • Share this:

ಚಿತ್ರದುರ್ಗ (ನ.21):  ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿರುವ ಚಿತ್ರದುರ್ಗದ ಮುರುಘಾ ಮಠದ (Murugha Mutt) ಮುರುಘಾ ಸ್ವಾಮಿಗೆ (Murugha Swamy) ಜೈಲೇ ಗತಿಯಾಗಿದೆ. ಮುರುಘಾ ಸ್ವಾಮಿಗೆ ನವೆಂಬರ್ 25ರವರೆಗೆ ನ್ಯಾಯಾಂಗ ಬಂಧನ (Judicial Custody) ವಿಸ್ತರಣೆ ಮಾಡಲಾಗಿದೆ. ವಿಡಿಯೋ ಕಾನ್ಫೆರನ್ಸ್​ ಮೂಲಕ ವಿಚಾರಣೆ (Inquiry) ನಡೆಸಿದ ಕೋರ್ಟ್,​ ಎ1  ಮುರುಘಾಶ್ರೀ, ಎ2  ವಾರ್ಡನ್ ರಶ್ಮಿ, ಎ3  ಮಠದ ಮ್ಯಾನೇಜರ್ ಪರಮಶಿವಯ್ಯಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದೆ.


ಜಿಲ್ಲಾ & ಸತ್ರ ನ್ಯಾಯಾಲಯ ಆದೇಶ


ನಾಲ್ವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿ ಚಿತ್ರದುರ್ಗ 2ನೇ ಅಪರ ಜಿಲ್ಲಾ & ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ. ಮುರುಘಾ ಶರಣರು, ಪರಮಶಿವಯ್ಯ ಚಿತ್ರದುರ್ಗ ಜೈಲಿನಲ್ಲಿದ್ದಾರೆ. ಇನ್ನು ಎ2 ಆರೋಪಿ ಹಾಸ್ಟೆಲ್​ ವಾರ್ಡನ್ ರಶ್ಮಿ ಶಿವಮೊಗ್ಗ ಸೆಂಟ್ರಲ್​ ಜೈಲಿನಲ್ಲಿದ್ದಾರೆ.


basava prabhu sree appointed as in charge of chitradurga muruga mutt
ಮುರುಘಾ ಶ್ರೀಗಳು


ಪೋಕ್ಸೋ ಕಾಯ್ದೆಯಡಿ ಶ್ರೀಗಳ ವಿರುದ್ಧ ಪ್ರಕರಣ


ಚಿತ್ರದುರ್ಗದ ಮುರುಘಾ ಮಠದ ಹಾಸ್ಟೆಲ್‍ನಲ್ಲಿ ಓದುತ್ತಿದ್ದ ಇಬ್ಬರು ಹೆಣ್ಣು ಮಕ್ಕಳ ಮೇಲೆ ಮುರುಘಾಶ್ರೀಗಳು ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ಆಗಸ್ಟ್‌ 26ರಂದು ಶ್ರೀಗಳು ಸೇರಿದಂತೆ ಐವರ ವಿರುದ್ಧ ಮೈಸೂರಿನ ನಜರ್‌ಬಾದ್‌ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿತ್ತು. ಸಂತ್ರಸ್ತ ಬಾಲಕಿಯರು ಒಡನಾಡಿ ಸಂಸ್ಥೆಯ ನೆರವು ಪಡೆದು ಶ್ರೀಗಳ ವಿರುದ್ಧ ಕೇಸ್ ದಾಖಲಿಸಿದ್ದರು. ಬಳಿಕ ಈ ಪ್ರಕರಣವು ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವರ್ಗಾವಣೆಯಾಗಿತ್ತು.


ಮುರುಘಾ ಶ್ರೀಗಳು A-1 ಆರೋಪಿ


ಪೋಕ್ಸೋ ಪ್ರಕರಣದಡಿ ಮುರುಘಾಶ್ರೀ ಸೇರಿ ಐವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಮುರುಘಾಶ್ರೀಗಳು A-1 ಆರೋಪಿಯಾದರೆ, A- 2 ಲೇಡಿ ವಾರ್ಡನ್ ಪೊಲೀಸರ ವಶದಲ್ಲಿದ್ದಾರೆ. A-3 ಆರೋಪಿ ಮಠದ ಉತ್ತರಾಧಿಕಾರಿ ಬಸವಾದಿತ್ಯ , A-4 ಮಠದ ಕಾರ್ಯದರ್ಶಿ ಪರಮಶಿವಯ್ಯ ಎಂದು ತಿಳಿದು ಬಂದಿದೆ.


ಮುರುಘಾಸ್ವಾಮಿ ಮುಖವಾಡ ಬಯಲು



ಚಾರ್ಜ್ ಶೀಟ್​​ನಲ್ಲಿ ಮುರುಘಾ ಸ್ವಾಮಿ ಆಪ್ತರಿಂದ ಮಹತ್ವದ ಹೇಳಿಕೆ ದಾಖಲಾಗಿದೆ. ಮುರುಘಾ ಸ್ವಾಮಿ ಸಹಾಯಕ ಮಹಾಲಿಂಗ ಪೊಲೀಸರೆದುರು ಅನೇಕ ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ. ಹಗಲಿನಲ್ಲಿ ಆಗಾಗ್ಗೆ ರಶ್ಮಿ, ಮಕ್ಕಳೊಂದಿಗೆ ಬರುತ್ತಿದ್ದಳು. ಇನ್ನು ಕೆಲವು ಸಲ ರಾತ್ರಿ ವೇಳೆ ಬಾಲಕಿಯರು ಹಿಂಬಾಗಿಲಿನಿಂದ ಮುರುಘಾ ಸ್ವಾಮಿ ರೂಮಿಗೆ  ಹೋಗುತ್ತಿದ್ದರು ಎಂದು ಮುರುಘಾ ಸ್ವಾಮಿ ಸಹಾಯಕ ಮಹಾಲಿಂಗ ಹೇಳಿದ್ದರು


ಬೆಡ್​ ಮೇಲೆ ಕಲೆಗಳು


ಮುರುಘಾ ಸ್ವಾಮಿಯ ಬೆಡ್​ ಮೇಲೆ ಕೆಲವು ಕಲೆಗಳು ಆಗಿರುತ್ತಿತ್ತು. ಸ್ವಚ್ಛವಾಗಿ ತೊಳೆಯುವಂತೆ ಮುರುಘಾ ಸ್ವಾಮಿ ಹೇಳುತ್ತಿದ್ದರು. ಬಟ್ಟೆ ಮೇಲೆ ಕೆಂಪು ಕಂದು ಬಣ್ಣದ ಕಲೆ ಉಳಿಯದಂತೆ ಸ್ವಚ್ಛ ತೊಳೆಯಲು ಮುರುಘಾ ಸ್ವಾಮಿ ಹೇಳುತ್ತಿದ್ದರು. ಬಟ್ಟೆ ತೊಳೆದ ಬಳಿಕ ಕಲಸ ನೋಡಿ ಖಾತ್ರಿ ಪಡಿಸಿಕೊಳ್ಳುತ್ತಿದ್ದರು ಎಂದು ಮುರುಘಾಶ್ರೀ ಸಹಾಯಕ‌ ಮಲ್ಲಿಕಾರ್ಜುನ ಹೇಳಿಕೆ ನೀಡಿದ್ದಾರೆ.


ಇದನ್ನೂ ಓದಿ:  Murugha Shri: ಟಿಪ್ಪು ವರ್ಣನೆ ಮಾಡಿದ್ದಕ್ಕೆ ಮುರುಘಾ ಶ್ರೀಗಳಿಗೆ ಈ ಪರಿಸ್ಥಿತಿ: ಶಾಸಕ ಯತ್ನಾಳ್


ಅಡುಗೆ ಭಟ್ಟ ಹೇಳಿದ್ದೇನು?


ಮುರುಘಾ ಸ್ವಾಮಿ ಅಡುಗೆಭಟ್ಟ ಕರಿಬಸ್ಸಪ್ಪ ಹೇಳಿಕೆ ದಾಖಲು ಮಾಡಲಾಗಿದೆ. ರಶ್ಮಿ ಮತ್ತು ಮಕ್ಕಳು ಮುರುಘಾ ಸ್ವಾಮಿ ರೂಮಿಗೆ ಹೋದಾಗ ನನ್ನನ್ನು ಅವರು ಒಳಗೆ ಬಿಟ್ಟುಕೊಳ್ಳುತ್ತಿರಲಿಲ್ಲ ಎಂದು ಹೇಳಿದ್ದಾರೆ. ಸುಮಾರು ಗಂಟೆಗಳ ಬಳಿಕ ರಶ್ಮಿ ಮತ್ತು ಮಕ್ಕಳು ಹೊರಬರುತ್ತಿದ್ದರು. ಹಾಸ್ಟೆಲ್ ಬಾಲಕಿಯರನ್ನು ರೂಮಿಗೆ ಕರೆಸಿಕೊಳ್ಳುತ್ತಾರೆಂದು ಮಠಕ್ಕೆ ಬರುವ ಜನ ಮಾತಾಡುತ್ತಿದ್ದರು ಎಂದು ಹೇಳಿದ್ದಾರೆ.


Published by:ಪಾವನ ಎಚ್ ಎಸ್
First published: