ಹಂಪಿಯ ವಿಜಯ ವಿಠ್ಠಲ ದೇವಸ್ಥಾನ ಬಳಿ ಹುಷಾರ್! ಸುತ್ತಲೂ ಕಾಣಿಸುತ್ತಿವೆ ಚಿರತೆ

news18
Updated:September 5, 2018, 7:50 PM IST
ಹಂಪಿಯ ವಿಜಯ ವಿಠ್ಠಲ ದೇವಸ್ಥಾನ ಬಳಿ ಹುಷಾರ್! ಸುತ್ತಲೂ ಕಾಣಿಸುತ್ತಿವೆ ಚಿರತೆ
news18
Updated: September 5, 2018, 7:50 PM IST
- ಶರಣು ಹಂಪಿ, ನ್ಯೂಸ್ 18 ಕನ್ನಡ

ಬಳ್ಳಾರಿ (ಸೆ.05)  :  ವಿಶ್ವಪ್ರಸಿದ್ಧ ಹಂಪಿಯಲ್ಲಿ ಚಿರತೆ ದಾಳಿ ಮುಂದುವರೆದಿದೆ. ಈ ಬಾರಿ ಪ್ರವಾಸಿಗರ ಸ್ವರ್ಗ ಹಂಪಿಯ ಕಲ್ಲಿನ ರಥವಿರುವ ವಿಜಯವಿಠ್ಠಲ ದೇವಸ್ಥಾನದ ಬಳಿ ಚಿರತೆ ಪ್ರತ್ಯಕ್ಷವಾಗುತ್ತಿದ್ದು, ಕುದುರೆಗಳನ್ನು ಟಾರ್ಗೆಟ್ ಮಾಡಿ ದಾಳಿ ಮಾಡುತ್ತಿದೆ. ನಿನ್ನೆ ಸಂಜೆ ಪುರಂದರದಾಸರ ಮಂಟಪದ ಬಳಿ ಮುಂಭಾಗ ತುಲಾಭಾರ ಮಂಟಪದ ಬಳಿ ಚಿರತೆ ಕಾಣಿಸಿಕೊಂಡಿದೆ.

ಅಲ್ಲಿಯೇ ಹುಲ್ಲು ಮೇಯುತ್ತಿದ್ದ ಕುದುರೆ ಮೇಲೆ ದಾಳಿ ಮಾಡಿದೆ. ಕುದುರೆಯ ಕುತ್ತಿಗೆ, ಕಾಲು ಹಾಗೂ ಹೊಟ್ಟೆ ಭಾಗದ ಮೇಲೆ ಚಿರತೆ ದಾಳಿ ಮಾಡಿ ಗಾಯ ಮಾಡಿದೆ. ಚಿರತೆ ದಾಳಿಗೆ ಪ್ರತಿರೋಧ ಒಡ್ಡಿ ಗಾಯಗೊಂಡ ಕುದುರೆ ತಪ್ಪಿಸಿಕೊಂಡು ಬಂದಿದೆ. ನಿನ್ನೆಯಿಂದ ಆಹಾರ ಸ್ವೀಕರಿಸದೇ ನರಳಾಡುತ್ತಿದೆ.

ಬೆಳಗಾವಿ ಮೂಲದ ಕುರಿಗಾಹಿಗಳು ಕುರಿಗಳ ಜೊತೆ ಕುದುರೆಗಳನ್ನು ಮೇವುಗಾಗಿ ಹಂಪಿ ಭಾಗಕ್ಕೆ ಬಂದಿದೆ. ತನ್ನ ಆಹಾರಕ್ಕಾಗಿ ಹಂಪಿ ಪ್ರದೇಶದಲ್ಲಿ ಚಿರತೆ ಕುದುರೆ ಮೇಲೆ ದಾಳಿ ಮುಂದುವರೆಸಿದ್ದು, ಕಳೆದ ಹದಿನೈದು ದಿನಗಳಲ್ಲಿ ಹಂಪಿಯಲ್ಲಿಯೆ ಮೂರು ಬಾರಿ ಕುದುರೆ ಮೇಲೆ ದಾಳಿ ಮಾಡಿದೆ.

ವಿಜಯವಿಠ್ಠಲ ದೇವಸ್ಥಾನಕ್ಕೆ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಫೋಟೋಗ್ರಫಿಗಾಗಿ ದೇವಸ್ಥಾನದ ಬಲಬದಿಯಲ್ಲಿರುವ ತುಲಭಾರ ಮಂಟಪದ ಬಳಿ ಹೋಗುತ್ತಾರೆ. ರಾತ್ರಿ ವೇಳೆ ಸೆಕ್ಯೂರಟಿ ಗಾರ್ಡ್ ಸಹ ಇರುತ್ತಾರೆ. ಆದರೂ ಚಿರತೆ ಹಲವು ಬಾರಿ ಪ್ರತ್ಯಕ್ಷವಾಗಿ ಕುದುರೆ ಮೇಲೆ ದಾಳಿ ಮುಂದುವರೆಸಿದೆ. ಈ ಹಿಂದೆ ಕುದುರೆ ಬೊಂಬೆ ಮಂಟಪ, ಹಳೆಯ ಶಿವ ದೇವಸ್ಥಾನದ ಬಳಿ ದಾಳಿ ಕುದುರೆ ಮೇಲೆ ದಾಳಿ ಮಾಡಿತ್ತು. ಇದೀಗ ತುಲಾಭಾರ ಮಂಟಪದ ಬಳಿ ಮೂರನೇ ಬಾರಿ ಚಿರತೆ ದಾಳಿ ಮಾಡಿ ಆತಂಕ ಹೆಚ್ಚುಮಾಡಿದೆ.

 
First published:September 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ