• Home
  • »
  • News
  • »
  • state
  • »
  • Covid-19: ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮಾಸ್ಕ್​ ಕಡ್ಡಾಯಕ್ಕೆ ಬಿಬಿಎಂಪಿ ಸಿದ್ಧತೆ; ಕೋವಿಡ್ ಸಲಹಾ ಸಮಿತಿಗೆ ಮನವಿ ಸಲ್ಲಿಕೆ

Covid-19: ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮಾಸ್ಕ್​ ಕಡ್ಡಾಯಕ್ಕೆ ಬಿಬಿಎಂಪಿ ಸಿದ್ಧತೆ; ಕೋವಿಡ್ ಸಲಹಾ ಸಮಿತಿಗೆ ಮನವಿ ಸಲ್ಲಿಕೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಎಚ್ಚೆತ್ತುಕೊಂಡಿರುವ ಬಿಬಿಎಂಪಿ, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮತ್ತೆ ಮಾಸ್ಕ್​ ಕಡ್ಡಾಯ ಮಾಡಲು ಚಿಂತನ ನಡೆಸಿದೆಯಂತೆ. ಈ ಕುರಿತಂತೆ ಮಾಧ್ಯಮಗಳಿಗೆ ಬಿಬಿಎಂಪಿ ವಿಶೇಷ ಆಯುಕ್ತರಾದ ತ್ರಿಲೋಕ್​​ಚಂದ್ರ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಬೆಂಗಳೂರು: ಚೀನಾ (China) ಸೇರಿದಂತೆ ವಿದೇಶಗಳಲ್ಲಿ ಕೊರೋನಾ (Corona) ಪ್ರಕರಣಗಳ ಸಂಖ್ಯೆ (Covid cases) ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಭಾರತದಲ್ಲೂ ಕೊರೋನಾ ನಿರ್ಬಂಧಗಳನ್ನು ಜಾರಿ ಮಾಡುವ ಕುರಿತಂತೆ ಈಗಾಗಲೇ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಅದರಲ್ಲೂ ಚೀನಾದಲ್ಲಿ ಹೆಚ್ಚುತ್ತಿರುವ ಕೊರೋನಾ ಮತ್ತೊಮ್ಮೆ ಇಡೀ ಜಗತ್ತನ್ನು ಚಿಂತೆಗೀಡು ಮಾಡಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೊಸ ಕೊರೋನಾ ಪ್ರಕರಣಗಳಿಂದ ಆರೋಗ್ಯ ಸೌಲಭ್ಯಗಳ ಕೊರತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಕೂಡ ಇಂದು ಸಂಜೆ ಮಹತ್ವದ ಸಭೆಯನ್ನು ಕರೆದಿದೆ. ಇದರ ನಡುವೆಯೇ ಎಚ್ಚೆತ್ತುಕೊಂಡಿರುವ ಬಿಬಿಎಂಪಿ (BBMP), ಬೆಂಗಳೂರು ನಗರ (Bengaluru City) ವ್ಯಾಪ್ತಿಯಲ್ಲಿ ಮತ್ತೆ ಮಾಸ್ಕ್​ ಕಡ್ಡಾಯ (Mask Compulsory) ಮಾಡಲು ಚಿಂತನ ನಡೆಸಿದೆಯಂತೆ. ಈ ಕುರಿತಂತೆ ಮಾಧ್ಯಮಗಳಿಗೆ ಬಿಬಿಎಂಪಿ ವಿಶೇಷ ಆಯುಕ್ತರಾದ ತ್ರಿಲೋಕ್​​ಚಂದ್ರ (BBMP Special Commissioner Trilok Chandra) ಅವರು ಮಾಹಿತಿ ಹಂಚಿಕೊಂಡಿದ್ದಾರೆ.


ಹೊಸ ವರ್ಷಕ್ಕೆ ಜನಸಂದಣಿ ಹೆಚ್ಚಾಗುವ ಸಾಧ್ಯತೆ


ಇಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ ಬಿಬಿಎಂಪಿ ವಿಶೇಷ ಆಯುಕ್ತ ತ್ರಿಲೋಕ್‌ಚಂದ್ರ‌ ಅವರು, ಹೊರದೇಶಗಳಲ್ಲಿ ಕೋವಿಡ್ ಹೆಚ್ಚಳ ಹಿನ್ನೆಲೆಯಲ್ಲಿ ಮಾಸ್ಕ್ ಕಡ್ಡಾಯಕ್ಕೆ ಬಿಬಿಎಂಪಿ ಚಿಂತನೆ ನಡೆಸಿದೆ. ನಗರದ ವ್ಯಾಪ್ತಿಯಲ್ಲಿ ಮಾಸ್ಕ್ ಕಡ್ಡಾಯಗೊಳಿಸಲು ಸಿದ್ದತೆ ನಡೆಸಲಿದೆ ಎಂದು ತಿಳಿಸಿದ್ದಾರೆ.


ಕೋವಿಡ್ ಸಲಹಾ ಸಮಿತಿಗೆ ಈಗಾಗಲೇ ಮನವಿ ನೀಡಿರುವ ಬಿಬಿಎಂಪಿ, ಹೊಸ ವರ್ಷಕ್ಕೆ ಜನಸಂದಣಿ ಹೆಚ್ಚಾಗುವ ಸಾಧ್ಯತೆ ಹಾಗೂ ಹೊರದೇಶಗಳಿಂದ ನಗರಕ್ಕೆ ವಿದೇಶಿಗರು ಆಗಮಿಸುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಚಿಂತನೆ ನಡೆಸಿದೆ.


China Covid Surges BBMP preparing to make masks mandatory in Bengaluru sns
ಸಾಂದರ್ಭಿಕ ಚಿತ್ರ


ಇದನ್ನೂ ಓದಿ: Covid 19 Cases: ಚೀನಾಗೆ ಶಾಕ್, 90 ದಿನಗಳಲ್ಲಿ ಶೇಕಡಾ 60 ರಷ್ಟು ಜನಸಂಖ್ಯೆಗೆ ವ್ಯಾಪಿಸಲಿದೆ ಕೊರೋನಾ!


ಫೈನ್ ಇಲ್ಲದೇ ಮಾಸ್ಕ್ ಧರಿಸುವಂತೆ ಅರಿವು


ಹೊಸ ವರ್ಷದ ಸಂಭ್ರಮಾಚರಣೆ ನಡೆಸುವ ಸಂದರ್ಭದಲ್ಲಿ ಕೋವಿಡ್ ಹೆಚ್ಚಾಗುವ ಸಾಧ್ಯತೆಯೇ ಹೆಚ್ಚು. ಮೊದಲ ಹಂತದಲ್ಲಿ ಯಾವುದೇ ಫೈನ್ ಇಲ್ಲದೇ ಮಾಸ್ಕ್ ಧರಿಸುವಂತೆ ಅರಿವು ಮೂಡಿಸಲಾಗುತ್ತದೆ.


ಮಾರ್ಕೆಟ್, ಮಾಲ್, ಥಿಯೇಟರ್‌, ಪಾರ್ಕ್ ಸೇರಿದಂತೆ ಬಹುತೇಕ ಜಾಗದಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗುವುದು. ಮೆಟ್ರೋ, ಬಸ್, ವಿಮಾನಯಾನಕ್ಕೂ ಮಾಸ್ಕ್ ಕಡ್ಡಾಯ ಸಾಧ್ಯತೆ. ವೈರಸ್ ಪ್ರಮಾಣ ಹೆಚ್ಚಾದರೆ ದಂಡ ವಿಧಿಸಲು ಸಿದ್ಧತೆ ನಡೆಸಲಾಗಿದೆ ಎಂದು ತ್ರಿಲೋಕ್‌ಚಂದ್ರ‌ ಅವರು ತಿಳಿಸಿದರು.


ವಿದೇಶದಲ್ಲಿ ಕೋವಿಡ್ ಹೆಚ್ಚಳ ಬೆನ್ನಲ್ಲೇ ಅಲರ್ಟ್ ಆದ ಬಿಎಂಆರ್​​ಸಿಎಲ್​


ವಿದೇಶದಲ್ಲಿ ಕೊರೋನಾ ಹೆಚ್ಚಳ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಗೈಡ್ ಲೈನ್ಸ್ ಗಾಗಿ ಕಾಯುತ್ತಿದ್ದೇವೆ. ರಾಜ್ಯ ಆರೋಗ್ಯ ಇಲಾಖೆ ಏನು ನಿರ್ಧಾರ ಕೈಗೊಳ್ಳುತ್ತದೆಯೋ ಅದರಂತೆ ನಿಯಮ ಪಾಲನೆಗೆ ಒತ್ತು ನೀಡುತ್ತೇವೆ. ಮೆಟ್ರೋದಲ್ಲಿ ಮೊದಲಿನಿಂದಲೂ ಕೋವಿಡ್ ವಿಚಾರದಲ್ಲಿ ಪ್ರತ್ಯೇಕವಾಗಿ ರೂಲ್ಸ್ ಪಾಲನೆ ಮಾಡಲ್ಲ.


Namma Metro creates record in one day collects 1 crore 47 lakhs rupees mrq
ನಮ್ಮ ಮೆಟ್ರೋ


ಇದನ್ನೂ ಓದಿ: Coronavirus: ಒಂದೇ ರೀತಿಯ ಮಾಸ್ಕ್ ಎಲ್ಲಾ ವೈರಸ್​ಗಳಿಂದ ರಕ್ಷಣೆ ಕೊಡಲ್ಲ, ಆಯ್ಕೆಗೆ ಹೀಗಿದೆ ನಿಯಮ


ಮಾಸ್ಕ್ ಆಗಲಿ ಅಥವಾ ಬೇರೆ ವಿಚಾರದ ಬಗ್ಗೆ ಆರೋಗ್ಯ ಇಲಾಖೆ ಕೈಗೊಳ್ಳೋ ನಿರ್ಧಾರವೇ ಅಂತಿಮವಾಗಲಿದೆ. ಈ ಬಾರಿ ಕೋವಿಡ್ ವಿಚಾರದಲ್ಲಿ ಕ್ರಮ ಅನುಷ್ಠಾನ ಮಾಡಲು ಜಾಸ್ತಿ ಸಮಯ ತೆಗೆದುಕೊಳ್ಳುವುದಿಲ್ಲ. ಕೋವಿಡ್ ವಿಚಾರದಲ್ಲಿ ಸ್ವತಂತ್ರ ವಾಗಿ ಕ್ರಮ ಕೈಗೊಳ್ಳಲು ಬಿಎಂಆರ್​ಸಿಎಲ್​ಗೆ ಅವಕಾಶವಿಲ್ಲ. ಮಾಸ್ಕ್ ಆಗಲಿ ಅಥವಾ ಎಸಿ ನಿಯಂತ್ರಣ ಆಗಲಿ ಅಥವಾ ಜನರ ಮಿತಿ ಆಗಲಿ ಈ ವಿಚಾರವನ್ನು ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಬಳಿಕ ನಿರ್ಧಾರ ಆಗಲಿದೆ ಎಂದು ನಮ್ಮ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ (BMRCL) ಅಂಜುಮ್ ಪರ್ವೇಜ್ ಮಾಹಿತಿ ನೀಡಿದ್ದಾರೆ.

Published by:Sumanth SN
First published: