• Home
  • »
  • News
  • »
  • state
  • »
  • Voters Data Steal: 1 ವೋಟರ್ ಐಡಿಗೆ 25 ರೂಪಾಯಿ; ಇತ್ತ ಸ್ಫೋಟಕ ಹೇಳಿಕೆ ನೀಡಿದ ಡಿಕೆಶಿ

Voters Data Steal: 1 ವೋಟರ್ ಐಡಿಗೆ 25 ರೂಪಾಯಿ; ಇತ್ತ ಸ್ಫೋಟಕ ಹೇಳಿಕೆ ನೀಡಿದ ಡಿಕೆಶಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಚೇರಿಯಲ್ಲಿ ನೋಟ್ ಕೌಂಟಿಂಗ್ ಮಿಷನ್ ಇದೆ. ಚಿಲುಮೆ ಕಚೇರಿಯಲ್ಲಿ  ಹಣದ ಅವ್ಯವಹಾರ ಕೂಡ ನಡೆದಿದೆ. ಅದ್ರ ಬಗ್ಗೆಯೂ ತನಿಖೆ ಆಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಗ್ರಹಿಸಿದ್ದಾರೆ.

  • Share this:

ವೋಟರ್ ಐಡಿ ಪರಿಷ್ಕರಣೆ ಅಕ್ರಮ (Voter ID Data Details) ಆರೋಪ ಕೇಸ್​ನಲ್ಲಿ ಸ್ಫೋಟಕ ಮಾಹಿತಿಗಳು ಹೊರಬೀಳ್ತಿವೆ. ಚಿಲುಮೆಗೆ (Chilume Organization) ಸಂಬಂಧಿಸಿದ ಮತ್ತೊಂದು ಮಾಹಿತಿ ಬಂದಿದ್ದು, ಚಿಲುಮೆ ತಾನೇ ನೇರವಾಗಿ ಸರ್ವೇ (Survey) ನಡೆಸಿಲ್ಲವಂತೆ. ಬದಲಿಗೆ ಮತದಾರರ ಮಾಹಿತಿ ಸಂಗ್ರಹಕ್ಕೆ ಬೇರೊಂದು ಸಂಸ್ಥೆಗೆ ಚಿಲುಮೆ ಗುತ್ತಿಗೆ ನೀಡಿತ್ತಂತೆ. ಚಿಲುಮೆಯವರು ಒಂದು ವೋಟರ್ ಐಡಿಗೆ (Per Voter ID Pay) 25 ರೂಪಾಯಿ ಕೊಡ್ತಿದ್ರಂತೆ. ಅಂದ್ರೆ ಒಬ್ಬ ಮತದಾರನ ಮಾಹಿತಿ ಪಡೆದ್ರೆ 25 ರೂಪಾಯಿ ಸಿಗ್ತಿತ್ತಂತೆ. ಒಂದ್ವೇಳೆ 10 ವೋಟರ್ ಐಡಿ ಪಡೆದ್ರೆ 250, 100 ಐಡಿಗೆ 2500 ರೂಪಾಯಿ ಕೊಡ್ತಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ.


ವೋಟರ್ ಐಡಿ ಪರಿಷ್ಕರಣೆ ಅಕ್ರಮಕ್ಕೆ ಸಂಬಂಧಿಸಿ ಚಿಲುಮೆ ಮುಖ್ಯಸ್ಥ ರವಿಕುಮಾರ್​ ಪತ್ನಿ ಐಶ್ವರ್ಯಾ, ಕೃಷ್ಣೇಗೌಡ ಪತ್ನಿ ವಶಕ್ಕೆ ಪಡೆಯಲಾಗಿದೆ. ಚಿಲುಮೆ ಸಂಸ್ಥೆ ನಿರ್ದೇಶಕಿ ಆಗಿರುವ ರವಿಕುಮಾರ್ ಪತ್ನಿ ಐಶ್ವರ್ಯ ಹಾಗೂ ಟಿ.ಬೇಗೂರು ತೋಟದ ಮನೆಗೆ ದಾಖಲಾತಿ ಸಾಗಿಸಿದ್ದ ಕೃಷ್ಣೇಗೌಡ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇತ್ತ ನಾಪತ್ತೆಯಾಗಿದ್ದ ಕೃಷ್ಣೇಗೌಡ ಸಹ ಪೊಲೀಸರ ಬಲೆ ಬಿದ್ದಿದ್ದಾನೆ.


ಡಿಕೆಶಿ ಸ್ಫೋಟಕ ಹಳಿಕೆ


ಚಿಲುಮೆ ವಿರುದ್ಧ ಡಿ.ಕೆ ಶಿವಕುಮಾರ್ ಮತ್ತೊಂದು ಸ್ಫೋಟಕ ಆರೋಪ ಮಾಡಿದ್ದಾರೆ. ಅಲ್ಲಿ ಬ್ಲ್ಯಾಕ್ ಮನಿ ವೈಟ್ ಮಾಡುವ ದಂಧೆ ನಡೆಯುತ್ತಿದೆ. ಅದೇ ಕಚೇರಿಯಲ್ಲಿ ನೋಟ್ ಕೌಂಟಿಂಗ್ ಮಿಷನ್ ಇದೆ. ಚಿಲುಮೆ ಕಚೇರಿಯಲ್ಲಿ  ಹಣದ ಅವ್ಯವಹಾರ ಕೂಡ ನಡೆದಿದೆ. ಅದ್ರ ಬಗ್ಗೆಯೂ ತನಿಖೆ ಆಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಗ್ರಹಿಸಿದ್ದಾರೆ.


ಬಿಬಿಎಂಪಿ ಕಚೇರಿ ಮುಂದೆ ಕಾಂಗ್ರೆಸ್ ಪ್ರತಿಭಟನೆ


ಮತದಾರರ ಮಾಹಿತಿಗೆ ಕನ್ನ ಹಾಕಿದ ಆರೋಪ ಖಂಡಿಸಿ ಬಿಬಿಎಂಪಿ ಕಚೇರಿ ಮುಂದೆ ಕಾಂಗ್ರೆಸ್ ಪ್ರತಿಭಟನೆ ಮಾಡಿತು. ಬಿಬಿಎಂಪಿ ಚೀಫ್ ಕಮಿಷಿನರ್ ತುಷಾರ್ ಗಿರಿ ನಾಥ್ ಸೇರಿದಂತೆ ಅಕ್ರಮದಲ್ಲಿ ಭಾಗಿಯಾದ ಬಿಬಿಎಂಪಿ ಅಧಿಕಾರಿಗಳನ್ನ ವಜಾಗೊಳಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.


ಪಿ.ಸಿ.ಮೋಹನ್ ಪ್ರತಿಕ್ರಿಯೆ


ಕಾಂಗ್ರೆಸ್​ಗೆ ಅಶ್ವತ್ಥ ನಾರಾಯಣ ಮೇಲೆ ಹೊಟ್ಟೆ ಉರಿ. ಅದೇ ಕಾರಣಕ್ಕೆ ಕಾಂಗ್ರೆಸ್ ಇಲ್ಲ ಸಲ್ಲದ ಆರೋಪ ಮಾಡ್ತಿದೆ ಅಂತ ಸಂಸದ ಪಿ.ಸಿ ಮೋಹನ್ ಆಕ್ರೋಶ ಹೊರಹಾಕಿದ್ದಾರೆ.


voter data steal case chilume organization cctv dvr missing
ಸಾಂದರ್ಭಿಕ ಚಿತ್ರ


‘ಚಿಲುಮೆ’ಗೆ ಬಿಜೆಪಿ ನಾಯಕನ ಹಣ


ಚಿಲುಮೆ ಸಂಸ್ಥೆಗೆ ಬಿಜೆಪಿ ನಾಯಕ ನಂದೀಶ್ ರೆಡ್ಡಿ ಹಣ ನೀಡಿದ್ದಾರೆ. ಹೌದು ಸತೀಶ್ ರೆಡ್ಡಿ ಅಫಿಡವಿಟ್​ನಲ್ಲಿ ಒಂದು ಬಾರಿ 17 ಲಕ್ಷದ 50 ಸಾವಿರ ಇನ್ನೊಂದು ಬಾರಿ 50 ಸಾವಿರ ನೀಡಿರೋದಾಗಿ ಉಲ್ಲೇಖಿಸಲಾಗಿದೆ. 2018ರ ಚುನಾವಣಾ ಅಫಿಡವಿಟ್​ನಲ್ಲಿ ಹಣ ಕೊಟ್ಟಿರುವ ಬಗ್ಗೆ ಉಲ್ಲೇಖಿಸಲಾಗಿದೆ. ಇದರೊಂದಿಗೆ ಹತ್ತಾರು ಅನುಮಾಣ ಹುಟ್ಟಿಕೊಂಡಿವೆ.


ಇದನ್ನೂ ಓದಿ:  Voters Data Steal: ಮತದಾರರ ಮಾಹಿತಿ ಕದ್ದ ಚಿಲುಮೆ ಸಂಸ್ಥೆ ಜೊತೆ ಬಿಜೆಪಿ ಶಾಸಕನ ಲೇವಾದೇವಿ


ಚಿಲುಮೆ ಜೊತೆ ಬಿಜೆಪಿ ನಾಯಕರ ಒಡನಾಟ ಇತ್ತಾ? ಎರಡು ಬಾರಿ ನಂದೀಶ್ ರೆಡ್ಡಿ ಹಣ ಸಂದಾಯ ಮಾಡಿದ್ಯಾಕೆ? ಆಯಾ ವಿಧಾನಸಭಾ ಕ್ಷೇತ್ರದ ದತ್ತಾಂಶ ಸಂಗ್ರಹಿಸಿದ್ರಾ? ಇದಕ್ಕಾಗೇ ಹಣ ಸಂದಾಯ ಮಾಡಿದ್ರಾ ಅನ್ನೋ ಅನುಮಾನ ಕಾಡ್ತಿದೆ.


ಪ್ರತಿ ದೂರು ನೀಡಲು ಬಿಜೆಪಿ ಸಿದ್ಧತೆ


ಇನ್ನೊಂದೆಡೆ ಕಾಂಗ್ರೆಸ್ ವಿರುದ್ಧ ಪ್ರತಿ ದೂರು ನೀಡಲು ಬಿಜೆಪಿ ತೀರ್ಮಾನಿಸಿದೆ. ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಕೊಡಲು ಮುಂದಾದ ಬಿಜೆಪಿ ನಿರ್ಧರಿಸಿದೆ.


ಚಿಲುಮೆ ಸಂಸ್ಥೆಗೆ ಹಿಂದಿನ ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರದ ಅವಧಿಯಲ್ಲಿಯೇ ಅನುಮತಿ ನೀಡಲಾಗಿತ್ತು. ಆ ಸಂದರ್ಭದಲ್ಲಿ ಎರಡು ಪಕ್ಷಗಳು ಮತದಾರರ ಪಟ್ಟಿ ದುರುಪಯೋಗ ಪಡೆಸಿಕೊಂಡಿರಬಹುದು ಎಂದು ದೂರು ನೀಡಲಾಗ್ತಿದೆ.


ಇದನ್ನೂ ಓದಿ:  Voter Data Steal: ಮತದಾರರ ಮಾಹಿತಿಗೆ ಕನ್ನ, ತನಿಖೆಗೆ ಇಳಿದ ಖಾಕಿಗೆ ಶಾಕ್; ಬಗೆದಷ್ಟು ತೆರೆದುಕೊಳ್ಳುತ್ತಿದೆ ಚಿಲುಮೆಯ ಕರಾಳ ಮುಖ


ಸಮೀಕ್ಷೆಗೆ ಜಾಹೀರಾತು


ಇನ್ನು ಚಿಲುಮೆ ಸಂಸ್ಥೆ ಸಮೀಕ್ಷೆ ನಡೆಸಲು ಜನರು ಬೇಕಾಗಿದ್ದಾರೆ ಎಂದು ಜಾಹೀರಾತು ಸಹ ನೀಡಿತ್ತು. ಆಧಾರ್​ ಜೋಡಣೆ, ಹೊಸಬರ ಸೇರ್ಪಡೆ, ಜಾಗೃತಿ ಕೆಲಸ ಎಂದು ಹೇಳಿ ಬಿಬಿಎಂಪಿ ಸಮೀಕ್ಷೆ ನಡೆಸಲು ಸೂಚನೆ ನೀಡಿತ್ತು. ಆದ್ರೆ ಚಿಲುಮೆ ಸಂಸ್ಥೆ ಮತದಾರರ ಖಾಸಗಿ ಮಾಹಿತಿ ಸಂಗ್ರಹಿಸಿರುವ ಆರೋಪಗಳು ಕೇಳಿ ಬಂದಿವೆ.

Published by:Mahmadrafik K
First published: