• Home
  • »
  • News
  • »
  • state
  • »
  • Voter Data Theft: ‘ಚಿಲುಮೆ’ App ಡೆವಲಪರ್​ ಬಲೆಗೆ; ಸಂಸ್ಥೆಗೆ ಸೇರಿದ ಮೂರು ಅಕೌಂಟ್ ಫ್ರೀಜ್

Voter Data Theft: ‘ಚಿಲುಮೆ’ App ಡೆವಲಪರ್​ ಬಲೆಗೆ; ಸಂಸ್ಥೆಗೆ ಸೇರಿದ ಮೂರು ಅಕೌಂಟ್ ಫ್ರೀಜ್

ಚಿಲುಮೆ

ಚಿಲುಮೆ

ವೋಟರ್ ಐಡಿ ಸ್ಕ್ಯಾಮ್​ ಕೇಸ್​ ತನಿಖೆಯನ್ನ ಪೊಲೀಸರು ಚುರಕುಗೊಳಿಸಿದ್ದಾರೆ. 28 ವಿಧಾನಸಭಾ ಕ್ಷೇತ್ರಗಳ ಆರ್​​ಒಗಳಿಗೆ ನೋಟಿಸ್ ನೀಡಿದ್ದು, ಇಂದು ವಿಚಾರಣೆಗೆ ಬರುವಂತೆ ಹಲಸೂರು ಗೇಟ್​ ಪೊಲೀಸರು ಬುಲಾವ್ ಕೊಟ್ಟಿದ್ದಾರೆ.

  • Share this:

ಚಿಲುಮೆ ಸಂಸ್ಥೆ (Chilume Organization) ವಿರುದ್ಧ ಮತದಾರರ ಮಾಹಿತಿ ಕದ್ದ (Voters Data Steal) ಪ್ರಕರಣದ ತನಿಖೆ ಚುರುಕುಗೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆ ಆಗಿದ್ದ ಪ್ರಮುಖ ಆರೋಪಿ ಚಿಲುಮೆ ಸಂಸ್ಥೆ ಮುಖ್ಯಸ್ಥ ರವಿಕುಮಾರ್‌ (Chilume Chief Ravikumar Arrest) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಹಲಸೂರು ಗೇಟ್​ ಪೊಲೀಸರು ರವಿಕುಮಾರ್‌ನನ್ನು ವಿಚಾರಣೆ ಮಾಡಿದ್ದಾರೆ. ಪ್ರಕರಣ ಸಂಬಂಧ ಈವರೆಗೂ ಒಟ್ಟು ಐವರನ್ನ ಬಂಧನ (Arrest) ಮಾಡಿ ವಿಚಾರಣೆ ಮಾಡಲಾಗ್ತಿದೆ. ಆರೋಪಿ ರವಿಕುಮಾರ್ ತುಮಕೂರು, ಉತ್ತರ ಕನ್ನಡ, ಶಿರಸಿ‌ ಭಾಗದಲ್ಲಿ ತಲೆಮರೆಸಿಕೊಂಡಿದ್ದ, ಅಂತಿಮವಾಗಿ ಬೆಂಗಳೂರಿನಲ್ಲೇ (Bengaluru) ಆರೋಪಿಯನ್ನ ಬಂಧಿಸಲಾಗಿದೆ. ಇನ್ನು  ಚಿಲುಮೆ ಸಂಸ್ಥೆಗೆ ಸೇರಿದ ಮೂರು ಬ್ಯಾಂಕ್ ಅಕೌಂಟ್​ಗಳನ್ನ ಫ್ರೀಜ್ ಮಾಡಲಾಗಿದೆ.


ಇನ್ನು ಚಿಲುಮೆಗೆ ಆ್ಯಪ್‌ ಡೆವಲಪ್‌ ಮಾಡಿಕೊಟ್ಟಿದ್ದ ಸಂಜೀವ್ ಶೆಟ್ಟಿ ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸಮೀಕ್ಷೆಗಾಗಿ ಸಂಜೀವ್ ಶೆಟ್ಟಿ ಎರಡು ಆ್ಯಪ್‌ ಡೆವಲಪ್‌ ಮಾಡಿದ್ರು.


15ಕ್ಕೂ ಅಧಿಕ ಜನರ ತೀವ್ರ ವಿಚಾರಣೆ


ಯಾವ ಉದ್ದೇಶಕ್ಕಾಗಿ ಚಿಲುಮೆ ಸಂಸ್ಥೆಯವರು ಆ್ಯಪ್ ಕೇಳಿದ್ರು? ಮತದಾರರ ಬಗ್ಗೆ ಆ್ಯಪ್‌ನಲ್ಲಿ ಡಿಟೇಲ್ಸ್ ಅಪ್ಲೋಡ್ ಮಾಡಲಾಗಿದ್ಯಾ? ಅನ್ನೋದರ ಬಗ್ಗೆ ಹಲಸೂರು ಗೇಟ್‌ ಪೊಲೀಸರು ವಿಚಾರಣೆ ನಡೆಸಿದರು. ಇನ್ನು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಮಾತನಾಡಿದ್ದು, ಈವರೆಗೆ ಐವರನ್ನ ಬಂಧಿಸಿ 15ಕ್ಕೂ ಹೆಚ್ಚು ಜನರನ್ನ ವಿಚಾರಣೆ ಮಾಡ್ತಿದೀವಿ ಎಂದಿದ್ದಾರೆ.


ಬಂಧಿತರು ಹೆಸರುಗಳು ಹೀಗಿವೆ


1.ಧರ್ಮೇಶ್, ಚಿಲುಮೆ ಸಂಸ್ಥೆ ಸಿಬ್ಬಂದಿ.


2.ರೇಣುಕಾ ಪ್ರಸಾದ್, ಚಿಲುಮೆ ಸಂಸ್ಥೆ ಸಿಬ್ಬಂದಿ‌.


3.ಕೆಂಪೇಗೌಡ, ರವಿಕುಮಾರ್ ಸಹೋದರ ಹಾಗೂ ಸಂಸ್ಥೆಯ ಮೇಲ್ವಿಚಾರಕ.


4.ಪ್ರಜ್ವಲ್, ಇ-ಪ್ರಕ್ಯೂರ್ಮೆಂಟ್ ಮೇಲ್ವಿಚಾರಕ.


5.ರವಿಕುಮಾರ್, ಚಿಲುಮೆ ಸಂಸ್ಥೆಯ ಮುಖ್ಯಸ್ಥ.


ಇದನ್ನೂ ಓದಿ:  Voters Data Steal: ದುಡ್ಡು ಕೊಟ್ರೆ ಮತದಾರನ ಮಾಹಿತಿ, ರವಿಕುಮಾರ್ ಸೋದರನ ಬಂಧನವೇ ರೋಚಕ


28 ವಿಧಾನಸಭಾ ಕ್ಷೇತ್ರಗಳ ಆರ್​ಓಗಳಿಗೆ ಬುಲಾವ್


ವೋಟರ್ ಐಡಿ ಸ್ಕ್ಯಾಮ್​ ಕೇಸ್​ ತನಿಖೆಯನ್ನ ಪೊಲೀಸರು ಚುರಕುಗೊಳಿಸಿದ್ದಾರೆ. 28 ವಿಧಾನಸಭಾ ಕ್ಷೇತ್ರಗಳ ಆರ್​​ಒಗಳಿಗೆ ನೋಟಿಸ್ ನೀಡಿದ್ದು, ಇಂದು ವಿಚಾರಣೆಗೆ ಬರುವಂತೆ ಹಲಸೂರು ಗೇಟ್​ ಪೊಲೀಸರು ಬುಲಾವ್ ಕೊಟ್ಟಿದ್ದಾರೆ. ಮೂರು ವಿಶೇಷ ತಂಡಗಳಿಂದ ಆರ್​​ಒಗಳ ವಿಚಾರಣೆ ನಡೆಯಲಿದ್ದು, ಯಾರಿಗೆಲ್ಲ ಬಿಇಒ ಕಾರ್ಡ್ ನೀಡಿದ್ದಾರೆ, ಯಾವ ಮಾನದಂಡದಲ್ಲಿ ನೀಡಿದ್ದಾರೆ ಅನ್ನೋದರ ಬಗ್ಗೆ ತನಿಖೆ ನಡೆಸಲಾಗುತ್ತದೆ.


ಪಿಜಿಯಲ್ಲಿದ್ದುಕೊಂಡು ಸರ್ವೇ


ಚಿಲುಮೆ ಸಂಸ್ಥೆಯ ಸುಮಾರು 200ಕ್ಕೂ ಹೆಚ್ಚು ಕೆಲಸಗಾರರು, ನಗರದ ವಿವಿಧ ಪಿಜಿಗಳಲ್ಲಿ ಇದ್ದುಕೊಂಡೇ ಸರ್ವೇ ಕೆಲಸ ಮಾಡ್ತಿದ್ರು. ಈಶಾ ಪಿಜಿ, ಶ್ರೀನಿವಾಸ ಸೇರಿದಂತೆ ಅನೇಕ ಪಿಜಿಗಳಲ್ಲಿ ಎರಡು ತಿಂಗಳ ಕಾಲ ಕೆಲಸಗಾರರನ್ನು ಇರಿಸಿದ್ರು. ದಾವಣಗೆರೆ, ಹಾಸನ, ಬೆಳಗಾವಿ, ರಾಯಚೂರು ಸೇರಿದಂತೆ ಹಲವು ಕಡೆಗಳಿಂದ ಜನರು ಬಂದಿದ್ರು. ಪಿಜಿಯಿಂದ್ಲೇ ಸರ್ವೇಗೆ ಹೋಗಲು ಚಿಲುಮೆ ಸಂಸ್ಥೆ ವ್ಯವಸ್ಥೆ ಮಾಡಿತ್ತು.


‘ಕೈ’-ಕಮಲ ವೋಟರ್ ಸ್ಕ್ಯಾಮ್ ವಾರ್


ಕಾಂಗ್ರೆಸ್ - ಬಿಜೆಪಿ ನಡುವೆ ವೋಟರ್‌ ಐಡಿ ವಾರ್‌ ತಾರಕಕ್ಕೇರಿದೆ. ಚಿಲುಮೆ ಸಂಸ್ಥೆ ಮತದಾರರ ಮಾಹಿತಿಗೆ ಕನ್ನ ಹಾಕಿದೇ ಅಂತ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಕಾಂಗ್ರೆಸ್ ಆರೋಪಗಳು ನಿರಾಧಾರ, ಸತ್ಯಕ್ಕೆ ದೂರ ಎಂದು ಸಿಎಂ‌ ಬೊಮ್ಮಾಯಿ ತಿರುಗೇಟು ಕೊಟ್ಟಿದ್ದಾರೆ.


ಇದನ್ನೂ ಓದಿ:  Sidddaramaiah: ಮದುವೆ ಮಂಟಪದಲ್ಲಿ ಆಪ್ತರ ಪರ ಮತ ಕೇಳಿ ಡಿಕೆಶಿಗೆ ಟಾಂಗ್ ಕೊಟ್ರಾ ಸಿದ್ದರಾಮಯ್ಯ?


ಚಿಲುಮೆ ಸಂಸ್ಥೆಗೆ 2017ರಲ್ಲಿ ಕಾನೂನು ಬಾಹಿರ ಅನುಮತಿ ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ.‌ ತಮ್ಮ ಅವಧಿಯಲ್ಲಿ ಮಾಡಿದ ತಪ್ಪನ್ನು ನಮ್ಮ ಮೇಲೆ ಹೇರಲು ಕಾಂಗ್ರೆಸ್ ಹೊರಟಿದೆ. ಇದು ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿಸಿದಂತಿದೆ ಅಂತ ಸಿಎಂ  ಬಸವರಾಜ್ ಬೊಮ್ಮಾಯಿ ಕಿಡಿಕಾರಿದ್ದಾರೆ.

Published by:Mahmadrafik K
First published: