• Home
  • »
  • News
  • »
  • state
  • »
  • Voters Data Scam: ಚಿಲುಮೆ ಸಂಸ್ಥೆ ಸಂಸ್ಥಾಪಕ ಅರೆಸ್ಟ್, ಪೊಲೀಸರಿಂದ ರವಿಕುಮಾರ್ ತೀವ್ರ ವಿಚಾರಣೆ

Voters Data Scam: ಚಿಲುಮೆ ಸಂಸ್ಥೆ ಸಂಸ್ಥಾಪಕ ಅರೆಸ್ಟ್, ಪೊಲೀಸರಿಂದ ರವಿಕುಮಾರ್ ತೀವ್ರ ವಿಚಾರಣೆ

ಮತದಾರರ ಮಾಹಿತಿ ಕಳುವು!?

ಮತದಾರರ ಮಾಹಿತಿ ಕಳುವು!?

ಚಿಲುಮೆ (Chilume) ಸಂಸ್ಥೆ ಸಂಸ್ಥಾಪಕ (Founder) ರವಿಕುಮಾರ್ (Ravi Kumar) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ನಾಲ್ವರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಬೆಂಗಳೂರು: ಮತದಾರರ ಮಾಹಿತಿ ಕಳುವು ಪ್ರಕರಣ (theft of voter information) ರಾಜ್ಯ ರಾಜಕೀಯದಲ್ಲಿ (Politics) ಅಲ್ಲೋಲ್ಲ ಕಲ್ಲೋಲ ಎಬ್ಬಿಸಿದೆ. ಹಗರಣದಲ್ಲಿ ಚಿಲುಮೆ (Chilume) ಎಂಬ ಸಂಸ್ಥೆ ಹೆಸರು ಕೇಳಿ ಬಂದಿದ್ದು, ಆ ಸಂಸ್ಥೆಯ ಪ್ರಮುಖರಿಗೆ ಪೊಲೀಸರು (Police) ಬಲೆ ಬೀಸಿದ್ದಾರೆ. ಇದೀಗ ಚಿಲುಮೆ ಸಂಸ್ಥೆ ಸಂಸ್ಥಾಪಕ (Founder) ರವಿಕುಮಾರ್ (Ravi Kumar) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ನಾಲ್ವರನ್ನು ಹಲಸೂರು ಗೇಟ್ ಠಾಣೆ (Halsuru Gate Station) ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಇದೀಗ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಹಲಸೂರು ಗೇಟ್ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸರಿಂದ ರೇಣುಕಪ್ರಸಾದ್, ಧರ್ಮೇಶ್ ಬೆನ್ನಲ್ಲೇ ಕಂಪನಿ ನಿರ್ದೇಶಕರಾದ ಕೆಂಪೇಗೌಡ, ಐಶ್ವರ್ಯರನ್ನು ಪೊಲೀಸ್ರು ಬಂಧಿಸಿದ್ರು. ಇಂದು ಡಿಜಿಟಲ್ ಸಮೀಕ್ಷಾ ಆ್ಯಪ್ ಡೆವಲಪ್ ಮಾಡಿದ್ದ ಸಂಜೀವ್ ಶೆಟ್ಟಿ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇದೀಗ ರವಿಕುಮಾರ್ ಕೂಡ ಪೊಲೀಸರ ಬಲೆಗೆ ಬಿದ್ದಿದ್ದಾರೆ.


ತಲೆ ಮರೆಸಿಕೊಂಡಿದ್ದ ರವಿಕುಮಾರ್


ಮತದಾರರ ಮಾಹಿತಿ ಕಳುವು ಹಗರಣದಲ್ಲಿ ಚಿಲುಮೆ ಸಂಸ್ಥೆ ಹೆಸರು ಮುಖ್ಯವಾಗಿ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರು ಸಂಸ್ಥೆಯ ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ಬಗ್ಗೆ ಸುಳಿವು ಪಡೆದಿದ್ದ ರವಿಕುಮಾರ್, ಕಂಪನಿಯ ಮತ್ತೋರ್ವ ಪ್ರಮುಖ ಲೋಕೇಶ್ ಎಂಬುವರ ಜೊತೆ ತಲೆಮರೆಸಿಕೊಂಡಿದ್ದರು. ರವಿಕುಮಾರ್‌ ಹಾಗೂ ಲೋಕೇಶ್‌ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿತ್ತು. ಅವರು ವಾಸವಿದ್ದ ನೆಲಮಂಗಲದ ಟಿ.ಬೇಗೂರು ಸೇರಿ ಹಲವು ಕಡೆ ಪರಿಶೀಲನೆ ನಡೆಸಲಾಗಿತ್ತು.




ಪೊಲೀಸರಿಂದ ಆರೋಪಿ ರವಿಕುಮಾರ್ ವಿಚಾರಣೆ


ಈಗಾಗಲೇ ನಾಲ್ವರನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ಪೊಲೀಸರಿಂದ ರೇಣುಕಾ ಪ್ರಸಾದ್, ಧರ್ಮೇಶ್ ಬೆನ್ನಲ್ಲೇ ಕಂಪನಿ ನಿರ್ದೇಶಕರಾದ ಕೆಂಪೇಗೌಡ, ಐಶ್ವರ್ಯರನ್ನು ಪೊಲೀಸ್ರು ಬಂಧಿಸಿದ್ರು. ಇಂದು ಡಿಜಿಟಲ್ ಸಮೀಕ್ಷಾ ಆ್ಯಪ್ ಡೆವಲಪ್ ಮಾಡಿದ್ದ ಸಂಜೀವ್ ಶೆಟ್ಟಿ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.  ಇದೀಗ ಸಂಸ್ಥಾಪಕ ರವಿಕುಮಾರ್‌ನನ್ನು ಪೊಲೀಸರು ಬಂಧಿಸಿ, ವಿಚಾರಣೆ ಪ್ರಾರಂಭಿಸಿದ್ದಾರೆ.


ಇದನ್ನೂ ಓದಿ: Voters Data Steal: ದುಡ್ಡು ಕೊಟ್ರೆ ಮತದಾರನ ಮಾಹಿತಿ, ರವಿಕುಮಾರ್ ಸೋದರನ ಬಂಧನವೇ ರೋಚಕ


ಕಚೇರಿಯಲ್ಲಿ ಪತ್ತೆಯಾಗಿತ್ತು ಹಣ ಎಣಿಕೆ ಯಂತ್ರ?


ಬೆಂಗಳೂರಿನ ಮಲ್ಲೇಶ್ವರದಲ್ಲಿನ ಚಿಲುಮೆ ಸಂಸ್ಥೆಯ ಕಚೇರಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ವೇಳೆ ಹಣ ಎಣಿಸುವ ಯಂತ್ರ ಸಿಕ್ಕಿದೆ ಎನ್ನಲಾಗಿದೆ. ಹಾರ್ಡ್‌ ಡಿಸ್ಕ್‌, ಮತದಾರರ ಗುರುತಿನ ಚೀಟಿಗಳ ಪಟ್ಟಿ, ಮೂರು ಪ್ರಿಂಟರ್‌, ಮೊಬೈಲ್‌ಗಳು ಜಪ್ತಿಯಾಗಿವೆ. ನ್ಯಾಯಾಲಯದ ಅನುಮತಿ ಪಡೆದು ಹಾರ್ಡ್‌ ಡಿಸ್ಕ್‌ ಹಾಗೂ ಮೊಬೈಲ್‌ಗಳ ರಿಟ್ರೀವ್‌ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ.




ಮತದಾರರ ಮಾಹಿತಿ ಅಕ್ರಮವಾಗಿ ಸಂಗ್ರಹಿಸಿದ ಆರೋಪ


ಚಿಲುಮೆ ಸಂಸ್ಥೆ ಬೆಂಗಳೂರಿನ 8 ಕ್ಷೇತ್ರಗಳ ಮತದಾರರ ಸಂಗ್ರಹಿಸಿದೆ ಎನ್ನಲಾಗಿದೆ. ಚಿಲುಮೆ ಕಚೇರಿಯಲ್ಲಿ ಸಿಕ್ಕ ದಾಖಲೆಗಳ ಪರಿಶೀಲನೆ ವೇಳೆ ಈ ಸ್ಫೋಟಕ ವಿಚಾರ ಪತ್ತೆಯಾಗಿದೆ. ಯಾವ ಮತದಾರನ ಒಲುವು ಯಾವ ಪಕ್ಷದತ್ತ ಇದೆ ಅನ್ನೋದನ್ನ ಚಿಲುಮೆ ಸಮೀಕ್ಷೆ ಮಾಡಿತ್ತು ಎಂಬ ಮಾಹಿತಿ ಲಭ್ಯವಾಗಿದೆ.


ಇದನ್ನೂ ಓದಿ: Voters Data Steal: 1 ವೋಟರ್ ಐಡಿಗೆ 25 ರೂಪಾಯಿ; ಇತ್ತ ಸ್ಫೋಟಕ ಹೇಳಿಕೆ ನೀಡಿದ ಡಿಕೆಶಿ


ಎಲ್ಲೆಲ್ಲಿ ಮತದಾರರ ಮಾಹಿತಿಗೆ ಕನ್ನ?


ಬೆಂಗಳೂರಿನ ಸಿ.ವಿ ರಾಮನ್ ನಗರ, ಬ್ಯಾಟರಾಯನಪುರ, ಚಿಕ್ಕಪೇಟೆ, ಹೆಬ್ಬಾಳ ಸೇರಿದಂತೆ 8 ಕ್ಷೇತ್ರಗಳ ಮಾಹಿತಿ ಸಂಗ್ರಹಿಸಿ ಈ ಮಾಹಿತಿಯನ್ನು ರಾಜಕಾರಣಿಗಳ ಬಳಿ ಹಣ ಪಡೆದು ಮಾರಾಟ ಮಾಡಿರುವ ಅನುಮಾನಗಳು ವ್ಯಕ್ತವಾಗಿವೆ. ಈ ಅನುಮಾನದ ಹಿನ್ನೆಲೆ ಚಿಲುಮೆ ಸಂಸ್ಥೆಯ ಬ್ಯಾಂಕ್ ಖಾತೆಯನ್ನು ಪರಿಶೀಲನೆ ಮಾಡಲಾಗಿತ್ತು. ಇನ್ನೊಂದೆಡೆ ಚಿಲುಮೆ ಸಂಸ್ಥೆ ಈ ಸಮೀಕ್ಷೆ ನಡೆಸಲು ಕಾಲೇಜು ವಿದ್ಯಾರ್ಥಿಗಳನ್ನು ಬಳಸಿಕೊಂಡಿರುವ ಬಗ್ಗೆ ತಿಳಿದು ಬಂದಿತ್ತು.

Published by:Annappa Achari
First published: