• Home
  • »
  • News
  • »
  • state
  • »
  • Voters Data Steal: ದುಡ್ಡು ಕೊಟ್ರೆ ಮತದಾರನ ಮಾಹಿತಿ, ರವಿಕುಮಾರ್ ಸೋದರನ ಬಂಧನವೇ ರೋಚಕ

Voters Data Steal: ದುಡ್ಡು ಕೊಟ್ರೆ ಮತದಾರನ ಮಾಹಿತಿ, ರವಿಕುಮಾರ್ ಸೋದರನ ಬಂಧನವೇ ರೋಚಕ

8 ವಿಧಾನಸಭಾ ಕ್ಷೇತ್ರಗಳ ಮಾಹಿತಿ ಕಲೆ ಹಾಕಿರುವ ಶಂಕೆ

8 ವಿಧಾನಸಭಾ ಕ್ಷೇತ್ರಗಳ ಮಾಹಿತಿ ಕಲೆ ಹಾಕಿರುವ ಶಂಕೆ

ಮೊದಲು ನನಗೆ ಏನು ಗೊತ್ತಿಲ್ಲ ಎಂದಿದ್ದ ಶೃತಿ, ಬಳಿಕ ಆಪ್ತ ಸ್ನೇಹಿತನ ಮನೆಗೆ ಹೋಗಿರುವ ಬಗ್ಗೆ  ಮಾಹಿತಿ ನೀಡಿದ್ದರು. ಈ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿ ನೆಲಮಂಗಲಕ್ಕೆ ತೆರಳಿ ಕಾರ್ಯಾಚರಣೆ ನಡೆಸಿದ್ದಾರೆ.

  • Share this:

ಚಿಲುಮೆ ಸಂಸ್ಥೆ (Chilume Organization) ಬೆಂಗಳೂರಿನ 8 ಕ್ಷೇತ್ರಗಳ ಮತದಾರರ ಮಾಹಿತಿ (Voters Details) ಸಂಗ್ರಹಿಸಿದೆ ಎನ್ನಲಾಗಿದೆ. ಚಿಲುಮೆ ಕಚೇರಿಯಲ್ಲಿ ಸಿಕ್ಕ ದಾಖಲೆಗಳ ಪರಿಶೀಲನೆ ವೇಳೆ ಈ ಸ್ಫೋಟಕ ವಿಚಾರ ಪತ್ತೆಯಾಗಿದೆ. ಯಾವ ಮತದಾರನ ಒಲುವು ಯಾವ ಪಕ್ಷದತ್ತ ಇದೆ ಅನ್ನೋದನ್ನ ಚಿಲುಮೆ ಸಮೀಕ್ಷೆ ಮಾಡಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಅದರಲ್ಲೂ ಸಿ.ವಿ ರಾಮನ್ ನಗರ, ಬ್ಯಾಟರಾಯನಪುರ, ಚಿಕ್ಕಪೇಟೆ, ಹೆಬ್ಬಾಳ ಸೇರಿದಂತೆ 8 ಕ್ಷೇತ್ರಗಳ ಮಾಹಿತಿ ಸಂಗ್ರಹಿಸಿ ಈ ಮಾಹಿತಿಯನ್ನು ರಾಜಕಾರಣಿಗಳ (Political Leaders) ಬಳಿ ಹಣ ಪಡೆದು ಮಾರಾಟ ಮಾಡಿರುವ ಅನುಮಾನಗಳು ವ್ಯಕ್ತವಾಗಿವೆ. ಈ ಅನುಮಾನದ ಹಿನ್ನೆಲೆ ಚಿಲುಮೆ ಸಂಸ್ಥೆಯ ಬ್ಯಾಂಕ್ ಖಾತೆಯನ್ನು (Bank Accounts) ಪರಿಶೀಲನೆ ಮಾಡಲಾಗ್ತಿದೆ. ಇನ್ನೊಂದೆಡೆ ಚಿಲುಮೆ ಸಂಸ್ಥೆ ಈ ಸಮೀಕ್ಷೆ (Survey) ನಡೆಸಲು ಕಾಲೇಜು ವಿದ್ಯಾರ್ಥಿಗಳನ್ನು (College Students) ಬಳಸಿಕೊಂಡಿರುವ ಬಗ್ಗೆ ತಿಳಿದು ಬಂದಿದೆ.


ರವಿಕುಮಾರ್ ಸೋದರನ ಬಂಧನವೇ ರೋಚಕ


ವೋಟರ್ ಐಡಿ ಅಕ್ರಮ ಕೇಸ್ ಚಿಲುಮೆ ಸಂಸ್ಥೆ ಮಾಲೀಕ ರವಿಕುಮಾರ್ ಸಹೋದರ ಬಂಧನವೇ ರೋಚಕ ಆಗಿದೆ. ಕೆಂಪೇಗೌಡನನ್ನು ಚೇಸಿಂಗ್ ಮಾಡಿ ಪೊಲೀಸರು ಬಂಧಿಸಿದ್ದಾರೆ. ಚೇಸಿಂಗ್ ಮಾಡಿ ಶಿಡ್ಲಘಟ್ಟದ ಬಳಿ ಹಿಡಿದಿದ್ದಾರೆ.


ಕಂಪನಿಯ ವ್ಯವಹಾರ ನೋಡಿಕೊಳ್ಳುತ್ತಿದ್ದ ಕೆಂಪೇಗೌಡ, ಕೇಸ್ ಆಗ್ತಿದ್ದಂತೆ ಪರಾರಿಯಾಗಿದ್ದ, ಆದ್ರೆ ಸ್ನೇಹಿತ ಕೃಷ್ಣಪ್ಪ ಜೊತೆ ಸಂಪರ್ಕದಲ್ಲಿದ್ದನು. ಯಾವುದು ವರ್ಕ್ ಔಟ್ ಆಗದಿದ್ದಾಗ ಕೆಂಪೇಗೌಡ ಪತ್ನಿ ಶೃತಿ ಅವರನ್ನು ಕರೆತಂದಿದ್ದ ಪೊಲೀಸರು ವಿಚಾರಣೆ ಮಾಡಿದ್ದರು.


ಮೊದಲು ನನಗೆ ಏನು ಗೊತ್ತಿಲ್ಲ ಎಂದಿದ್ದ ಶೃತಿ, ಬಳಿಕ ಆಪ್ತ ಸ್ನೇಹಿತನ ಮನೆಗೆ ಹೋಗಿರುವ ಬಗ್ಗೆ  ಮಾಹಿತಿ ನೀಡಿದ್ದರು. ಈ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿ ನೆಲಮಂಗಲಕ್ಕೆ ತೆರಳಿ ಕಾರ್ಯಾಚರಣೆ ನಡೆಸಿದ್ದಾರೆ. ಸ್ನೇಹಿತನನ್ನ ವಶಕ್ಕೆ ಪಡೆಯುತ್ತಿದ್ದಂತೆ ಕೆಂಪೇಗೌಡ ಎಲ್ಲಿ ಇದ್ದಾನೆಂಬ ಸುಳಿವು ಸಿಕ್ಕಿತ್ತು. ಈ ವೇಳೆ ಚೇಸ್ ಮಾಡಿ ಆರೋಪಿ ಕೆಂಪೇಗೌಡನನ್ನು ಪೊಲೀಸರು ಬಂಧಿಸಿದ್ದಾರೆ.


ಇದನ್ನೂ ಓದಿ:  Voters Data Steal: 1 ವೋಟರ್ ಐಡಿಗೆ 25 ರೂಪಾಯಿ; ಇತ್ತ ಸ್ಫೋಟಕ ಹೇಳಿಕೆ ನೀಡಿದ ಡಿಕೆಶಿ


ಎಂಟು ದಿನ ಪೊಲೀಸ್ ಕಸ್ಟಡಿಗೆ


ವೋಟರ್​ ಲಿಸ್ಟ್​ ಹಗರಣದಲ್ಲಿ ಬಂಧಿತ ಧರ್ಮೇಶ್ ಹಾಗೂ ರೇಣುಕಾ ಪ್ರಸಾದ್​ನನ್ನು  37ನೇ ಎಸಿಎಂಎಂ ನ್ಯಾಯಾಲಯದ ಎದುರು ಹಾಜರು ಮಾಡಿ 8 ದಿನಗಳ  ಕಾಲ ಪೊಲೀಸ್​ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಮತ್ತಷ್ಟು ಆರೋಪಿಗಳ ವಿಚಾರಣೆಗೆ ಕರೆದಿದ್ದು ಮತ್ತಷ್ಟು ಜನರ ಬಂಧನ ಆಗುವ ಸಾಧ್ಯತೆ ಇದೆ.


ಇನ್ನು ಚಿಲುಮೆ ಸಂಸ್ಥೆಯ ಬ್ಯಾಂಕ್ ಅಕೌಂಟ್ ಗಳನ್ನು ಫ್ರೀಜ್ ಮಾಡಿರುವ ಪೊಲೀಸರು, ಚಿಲುಮೆ ಸಂಸ್ಥೆಯ ಅಕೌಂಟ್ ಸೇರಿದಂತೆ ಡೈರೆಕ್ಟರ್ಸ್ ಅಕೌಂಟ್ ಗಳನ್ನು ಸೀಜ್ ಮಾಡಲಾಗಿದೆ. ಸಂಸ್ಥೆ ಮುಖ್ಯಸ್ಥ ರವಿಕುಮಾರ್ ಹಾಗೂ ಕೆಂಪೇಗೌಡರ ಅಕೌಂಟ್ಸ್ ಸಹ ಫ್ರೀಜ್ ಮಾಡಲಾಗಿದೆ. ಪೊಲೀಸರ ತನಿಖೆಗೆ ಚಿಲುಮೆ ಸಂಸ್ಥೆ ಮುಖ್ಯಸ್ಥ ರವಿಕುಮಾರ್ ಪತ್ನಿ ಐಶ್ವರ್ಯಾ ಸಹಕಾರ ನೀಡ್ತಿಲ್ಲ. ಎಷ್ಟೇ ವಿಚಾರಣೆ ಮಾಡಿದ್ರೂ  ಏನೂ ಬಾಯಿ ಬಿಡ್ತಿಲ್ಲ ಎನ್ನಲಾಗಿದೆ.


ಇದನ್ನೂ ಓದಿ:  Congress Leaders: ಧಮ್​ ಇದ್ರೆ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ಮಾಡಿಸಿ; ಸಿಎಂ ಬೊಮ್ಮಾಯಿಗೆ ಡಿಕೆಶಿ ಸವಾಲ್​!


ಕೆಂಪೇಗೌಡನ ಮಾವ ಪೊಲೀಸರ ವಶಕ್ಕೆ


ಚಿಲುಮೆ ಸಂಸ್ಥೆ ಅಕ್ರಮ‌ ಪ್ರಕರಣದಲ್ಲಿ ಶೃತಿ ತಂದೆ ಹುಚ್ಚಣ್ಣನನ್ನು ಪೊಲೀಸರ ವಶಕ್ಕೆ ಪಡೆದು ವಿಚಾರಣೆ ಮಾಡ್ತಿದ್ದಾರೆ. ಚಿಲುಮೆ ಟ್ರಸ್ಟ್‌ನ ಸಂಸ್ಥಾಪಕನಾಗಿರುವ ಕೆಂಪೇಗೌಡ‌ನ ಹೆಂಡತಿ ಶೃತಿ ತಂದೆ ವಿಚಾರಣೆ ಮಾಡಲಾಗ್ತಿದೆ. ನೆಲಮಂಗಲದ ಬೋಳಮಾರನಹಳ್ಳಿ ನಿವಾಸಿ ಆಗಿರುವ ಹುಚ್ಚಣ್ಣನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.


ಚಿಲುಮೆ ಅಕ್ರಮದ ವಿರುದ್ಧ ದೂರು ನೀಡಿದ್ದ ಸಮರ್ಥನಾ ಸಂಸ್ಥೆಯ ಸುಮಂಗಲಾ ನ್ಯೂಸ್​ 18 ಕನ್ನಡದ ಜೊತೆಗೆ ಮಾತನಾಡಿದ್ದಾರೆ. ಚುನಾವಣಾ ಅಧಿಕಾರಿಗೆ ದೂರು ಕೊಟ್ಟಾಗಲೇ ಕೆಲಸದ ಬಗ್ಗೆ ಮಾಹಿತಿ ಕೊಡಲಾಗಿತ್ತು. ಚಿಲುಮೆ ಮಾಹಿತಿ ಸಂಗ್ರಹದ ಬಗ್ಗೆ ಆಯುಕ್ತರಿಂದಲೂ ಆಕ್ಷೇಪ ವ್ಯಕ್ತವಾಗಿತ್ತು ಎಂದಿದ್ದಾರೆ.

Published by:Mahmadrafik K
First published: