Summer Camp: ಕಾಡಿನಲ್ಲೊಂದು ವಿಶೇಷ ಬೇಸಿಗೆ ಶಿಬಿರ; ಕೋಟೆ-ಬೆಟ್ಟ ಏರಿ, ಕಾಡು ಹಣ್ಣು ತಿಂದು ಪುಟಾಣಿಗಳ ಸಂಭ್ರಮ

ಪುಟ್ಟ ಪುಟ್ಟ ಮಕ್ಕಳು ಮೊದಲು ಒಂದೇ ಗುಕ್ಕಿಗೆ ತಿಂಡಿ ತಿಂದು, ಶಿಸ್ತಿನ ಸಿಪಾಯಿಗಳಂತೆ ಹೆಗಲ ಮೇಲೆ ಬ್ಯಾಗ್ ಏರಿಸಿಕೊಂಡು ಬೆಟ್ಟ ಏರಲು ಆರಂಭಿಸಿದ್ದರು. ಎದೆಗೆ ತಗುಲುವ ಕಡಿದಾದ ಬೆಟ್ಟ ಏರಲು ವೃದ್ಧರು ಏದುರಿಸಿರು ಬಿಡುತ್ತಿದ್ದರೆ, ಮಕ್ಕಳು ಮಾತ್ರ ಅದ್ಯಾವುದಕ್ಕೂ ಲೆಕ್ಕಿಸದೆ ಕಾಡಿನೊಳಗಿನ ಹನುಮಂತನಂತೆ ಬೆಟ್ಟ ಏರುತ್ತಲೇ ಇದ್ದರು.

ಬೇಸಿಗೆ ಶಿಬಿರದಲ್ಲಿ ಮಕ್ಕಳ ಸಂಭ್ರಮ

ಬೇಸಿಗೆ ಶಿಬಿರದಲ್ಲಿ ಮಕ್ಕಳ ಸಂಭ್ರಮ

  • Share this:
ಕೊಡಗು: ಕಾಡು (Forest) ಸುತ್ತೋದು, ಕಾಡು ಹಣ್ಣು (Wild Fruits) ತಿನ್ನೋದು ಅಂದರೆ ಯಾರಿಗೆ ಇಷ್ಟ ಆಗಲ್ಲ ಹೇಳಿ. ಹೌದು ಚಾರಣ (Trekking) ಎನ್ನೋದೆ ಹಾಗೆ ಎಂತಹವರನ್ನೂ ಸೂಜಿಗಲ್ಲಿನಂತೆ ಸೆಳೆದು ಬಿಡುತ್ತದೆ. ಅದರಲ್ಲೂ ಪುಟಾಣಿಗಳು (Children) ಚಾರಣ ಹೊರಟರೆ ಕೇಳಬೇಕಾ? ಗಿರಿ, ಪರ್ವತಗಳಿಗೆ ನಗು ಬಂದಂತೆ ಗದ್ದಲ, ಅದೇನೋ ಉತ್ಸಾಹ. ದೂರದಿಂದ ಕಾಣುತ್ತಿದ್ದ ಮುಗಿಲು ಚುಂಬಿಸೋ ಬೆಟ್ಟ, ಸುಂಯ್ಯ್ ಎಂದು ಬೀಸುತ್ತಿರೋ ಗಾಳಿ. ನಾನು ಮೊದಲು ಬೆಟ್ಟ ಏರಬೇಕು, ತಾನು ಮೊದಲು ತುದಿ ತಲುಪಬೇಕು ಎನ್ನೋ ಹಂಬಲದಲ್ಲಿ ನಡೆಯುತ್ತಿದ್ದ ಉತ್ಸಾಹದ ಚಿಲುಮೆಯ ಆ ಮಕ್ಕಳಿಗೆ ಬಿಸಿಲಿನ ಪರಿವೇ ಇರಲಿಲ್ಲ. ಎಲ್ಲರೂ ವಾಹನಗಳಲ್ಲಿ (Vehicles) ಝೊಂಯ್ ಅಂತ ಬೆಟ್ಟ ಏರುತ್ತಿದ್ದರೆ, ಇತ್ತ ಬೆಟ್ಟದ ಕೆಳಗೆ ನಾಲ್ಕು ವರ್ಷದ ಪುಟಾಣಿಗಳಿಂದ ಹಿಡಿದು ಎಂಭತ್ತು ವರ್ಷದ ವೃದ್ಧರಾದಿಯಾಗಿ ತೊಂಭತ್ತು ಮಂದಿ ಬೆಟ್ಟ ಏರಲು ಅಣಿಯಾಗಿದ್ದರು. ಈ ದೃಶ್ಯಗಳೆಲ್ಲ ಕಂಡುಬಂದಿದ್ದು ಬೇಸಿಗೆ ಶಿಬಿರದಲ್ಲಿ (Summer Camp).

ಬೇಸಿಗೆ ಶಿಬಿರದಲ್ಲಿ ಮಕ್ಕಳ ಕಲರವ

ಪುಟ್ಟ ಪುಟ್ಟ ಮಕ್ಕಳು ಮೊದಲು ಒಂದೇ ಗುಕ್ಕಿಗೆ ತಿಂಡಿ ತಿಂದು, ಶಿಸ್ತಿನ ಸಿಪಾಯಿಗಳಂತೆ ಹೆಗಲ ಮೇಲೆ ಬ್ಯಾಗ್ ಏರಿಸಿಕೊಂಡು ಬೆಟ್ಟ ಏರಲು ಆರಂಭಿಸಿದ್ದರು. ಎದೆಗೆ ತಗುಲುವ ಕಡಿದಾದ ಬೆಟ್ಟ ಏರಲು ವೃದ್ಧರು ಏದುರಿಸಿರು ಬಿಡುತ್ತಿದ್ದರೆ, ಮಕ್ಕಳು ಮಾತ್ರ ಅದ್ಯಾವುದಕ್ಕೂ ಲೆಕ್ಕಿಸದೆ ಕಾಡಿನೊಳಗಿನ ಹನುಮಂತನಂತೇ ಬೆಟ್ಟ ಏರುತ್ತಲೇ ಇದ್ದರು. ಅಂತು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕೋಟೆ ಬೆಟ್ಟದ ತುತ್ತ ತುದಿಗೆ ತಲುಪಿದ್ದ ಆ ವಿದ್ಯಾರ್ಥಿಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ.

ಓಡಿದರು, ಬಿದ್ದರು, ಸಂಭ್ರಮಿಸಿದರು!

ತುದಿಯಲ್ಲಿ ನಿಂತು ಪ್ರಕೃತಿ ದೇವಿಯ ಸೌಂದರ್ಯಕ್ಕೆ ಮನಸೋತಿದ್ದರು. ಬೆಟ್ಟದ ಮೇಲೆಲ್ಲ ಓಡಾಡಿ, ಜಾರಿ ಬಿದ್ದು, ನಲಿದು, ಕಾಡಲ್ಲಿ ಸಿಕ್ಕ ಅಪರೂಪದ ಕಾಡು ಹಣ್ಣುಗಳ ಸವಿಯನುಂಡು ನಲಿದರು. ಎಷ್ಟು ಉತ್ಸಾಹದಲ್ಲಿ ಬೆಟ್ಟ ಹತ್ತಿದ್ದರೋ ಅದಕ್ಕಿಂತ ಉತ್ಸಾಹದಲ್ಲಿ ಬೆಟ್ಟ ಇಳಿದರು. ಇಳಿಯುತ್ತಿದ್ದಂತೆ ಬೆಟ್ಟದ ಕೆಳಗಿನ ನದಿಯಲ್ಲಿ ನೀರು ಕಂಡಿದ್ದ ತಡ ನೀರಿಗೆ ಧುಮಿಕಿ ಮಿಂದೆದ್ದು ಸಂಭ್ರಮಿಸಿದರು.

ಇದನ್ನೂ ಓದಿ: Kusthi: ಗ್ರಾಮೀಣ ಜಾತ್ರೆಯಲ್ಲಿ ದಂಗಲ್ ದರ್ಬಾರ್! ಜಗಜಟ್ಟಿ ಕಾಳಗಕ್ಕೆ ಜನರ ಬಹುಪರಾಕ್

ವಾಂಡರ್ಸ್ ಕ್ಲಬ್ ವತಿಯಿಂದ ಆಯೋಜನೆ

ಇಂತಹ ಸಂಭ್ರಮದ ಕ್ಷಣಕ್ಕೆ ಅವಕಾಶ ಮಾಡಿದ್ದು ವಾಂಡರ್ಸ್ ಕ್ಲಬ್ ವತಿಯಿಂದ ಮಡಿಕೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ದಿ. ಸಿ.ವಿ.ಶಂಕರ್ ಸ್ಮರಣಾರ್ಥ ನಡೆಯುತ್ತಿರುವ ಉಚಿತ ಬೇಸಿಗೆ ಶಿಬಿರದ ಶಿಬಿರಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಕೋಟೆ ಬೆಟ್ಟದ ಚಾರಣ.

ಮಕ್ಕಳು, ವೃದ್ಧರು ಸೇರಿ 90 ಮಂದಿಯಿಂದ ಚಾರಣ

ಶಿಬಿರದಲ್ಲಿ ಭಾಗವಹಿಸುತ್ತಿರುವ 80 ಮಂದಿ ಮಕ್ಕಳು ಸೇರಿದಂತೆ ಸಂಘಟಕರು, ತರಬೇತುದಾರರು, ಪೋಷಕರು ಸೇರಿದಂತೆ 90 ಜನರು ಚಾರಣದಲ್ಲಿ ಭಾಗವಹಿಸಿದ್ದರು. ಸುಮಾರು 8 ಕಿ.ಮೀ. ದೂರದ ಬೆಟ್ಟವನ್ನು ಏರಿಳಿದರು. ಕೆಲವು ಮಕ್ಕಳು ಬಸವಳಿದಂತೆ ಕಂಡುಬಂದರಾದರೂ ನದಿ ನೀರು ಕಂಡಾಕ್ಷಣ ಅವರ ಸಂಭ್ರಮ ಮುಗಿಲು ಮುಟ್ಟಿತ್ತು..! ಪೋಷಕರೂ ಚಾರಣದ ಮಜಾ ಅನುಭವಿಸಿದರು.

ಬೆಟ್ಟದ ತಪ್ಪಲಿನಲ್ಲಿ ಭೋಜನದ ವ್ಯವಸ್ಥೆ

ಬೆಟ್ಟ ಏರಿಳಿದು ಹಸಿನಿವಿಂದ ಬಂದವರಿಗೆ ಬೆಟ್ಟದ ತಪ್ಪಲಿನಲ್ಲಿಯೇ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಹಸಿದು ಸವಿದ ಊಟ ಅಮೃತದಂತೆ ಇತ್ತು.

ಇದನ್ನೂ ಓದಿ: Mud Pots: ಫ್ರಿಡ್ಜ್‌ಗೊಂದು ಕಾಲ, ಮಡಿಕೆಗೊಂದು ಕಾಲ! ಬೇಸಿಗೆಯಲ್ಲಿ ಬಡವರ ಫ್ರಿಡ್ಜ್‌ಗೆ ಭಾರೀ ಡಿಮ್ಯಾಂಡ್

ಸಂಘಟಕರಾದ ಬಾಬು ಸೋಮಯ್ಯ, ತರಬೇತುದಾರರಾದ ಕೋಟೇರ ಮುದ್ದಯ್ಯ, ದೈಹಿಕ ಶಿಕ್ಷಣಾಧಿಕಾರಿ ಎಸ್‌.ಟಿ. ವೆಂಕಟೇಶ್, ಕುಡೆಕಲ್ ಸಂತೋಷ್, ಲೋಕೇಶ್, ಪೋಷಕರಾದ ಉಮೇಶ್, ಮಹೇಶ್,  ಸೌಮ್ಯ ಇತರರು ಚಾರಣಿಗರಿಗೆ ಎಲ್ಲಾ ಸೌಲಭ್ಯಗಳ ಒದಗಿಸಿ ಅವರ ಅನುಭವವನ್ನು ಸುಮಧುರಗೊಳಿಸಿದರು. ಒಟ್ಟಿನಲ್ಲಿ ಕೇವಲ ಶಾಲೆ, ಪಾಠ ಎಂದು ವರ್ಷವಿಡೀ ಓದು ಬರಹದಲ್ಲಿಯೇ ತಲ್ಲೀನರಾಗುತ್ತಿದ್ದ ವಿದ್ಯಾರ್ಥಿಗಳಿಗೆ ಬೇಸಿಗೆ ಶಿಬಿರದ ಚಾರಣ ಮಾತ್ರ ಹೊಸ ಲೋಕವನ್ನೇ ಸೃಷ್ಟಿಸಿದ್ದು ಸುಳ್ಳಲ್ಲ.
Published by:Annappa Achari
First published: