Hand Grenade in School: ಶಾಲಾ ಮಕ್ಕಳ ಕೈಯಲ್ಲಿ ಹ್ಯಾಂಡ್ ಗ್ರೆನೇಡ್! ಆತಂಕಕಾರಿ ವಸ್ತುವಿನ ಮೇಲೆ ಉರ್ದು ಬರಹ

ಬೆಳಗಾವಿ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ (Maharashtra) ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಶಾಲೆಯೊಂದರಲ್ಲಿ ಮಕ್ಕಳು ಹ್ಯಾಂಡ್ ಗ್ರೆನೇಡ್ (Hand Grenade) ಬಳಸಿ ಆಡವಾಡಿದ್ದಾರಂತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಹಾರಾಷ್ಟ್ರ: ಇದು ಖಂಡಿತ ರಾಜ್ಯವೇ ಬೆಚ್ಚಿ ಬೀಳೋ ಸುದ್ದಿ. ಯಾಕೆಂದರೆ ಬೆಳಗಾವಿ (Belagavi) ಜಿಲ್ಲೆಯ ಗಡಿಗೆ (Border) ಹೊಂದಿಕೊಂಡಿರುವ ಮಹಾರಾಷ್ಟ್ರದ (Maharashtra) ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಶಾಲೆಯೊಂದರಲ್ಲಿ ಮಕ್ಕಳು ಹ್ಯಾಂಡ್ ಗ್ರೆನೇಡ್ (Hand Grenade) ಬಳಸಿ ಆಡವಾಡಿದ್ದಾರಂತೆ. ಕುಡನೂರು ಗ್ರಾಮದ ಮರಾಠಿ ಶಾಲೆಯಲ್ಲಿ (Marathi School) ಹ್ಯಾಂಡ್ ಗ್ರೇನೆಡ್ ಬಾಂಬ್ ದೊರೆತಿದೆ. ಇದು ಗಡಿಭಾಗವಾದ ಅಥಣಿಯಲ್ಲೂ ಆತಂಕಕ್ಕೆ ಕಾರಣವಾಗಿದೆ. ಶಾಲೆಯಲ್ಲಿ ಮಕ್ಕಳು ಬಾಲ್ (Ball) ಎಂದುಕೊಂಡು ಆಟವಾಡುತ್ತಿರುವುದನ್ನು, ಗಮನಿಸಿದ ಕೆಲವು ಗ್ರಾಮಸ್ಥರು ಸಾಂಗ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸಾಂಗ್ಲಿ ಪೊಲೀಸರು, ಬಾಂಬ್ ನಿಷ್ಕ್ರಿಯ ದಳದೊಂದಿಗೆ ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಭಾರಿ ಅನಾಹುತ ತಪ್ಪಿದೆ. ಇನ್ನು ಪರಿಶೀಲನೆ ವೇಳೆ ಹ್ಯಾಂಡ್ ಗ್ರೆನೇಡ್ ಮೇಲೆ ಉರ್ದು ಭಾಷೆಯ ಬರಹ ಇತ್ತು ಎನ್ನಲಾಗಿದೆ. ಇದೀಗ ಹ್ಯಾಂಡ್ ಗ್ರೆನೇಡ್ ಹೇಗೆ ಸಿಕ್ಕಿತು, ಇದರ ಮೂಲಗಳೇನು ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ.

ಬಾಂಬ್ ಎಂದು ತಿಳಿಯದೇ ಆಟವಾಡಿದ ಮಕ್ಕಳು

ಮಕ್ಕಳು ಬಾಂಬ್ ಎಂದು ತಿಳಿಯದೇ ಗ್ರೆನೇಡ್‍ನೊಂದಿಗೆ ಆಟ ಆಡುತ್ತಿದ್ದದ್ದನ್ನು ಕಂಡು ಶಿಕ್ಷಕರು ಹಾಗೂ ಗ್ರಾಮಸ್ಥರು ಗಾಬರಿಗೊಂಡು ಪೊಲೀಸರಿಗೆ ಕರೆ ಮಾಡಿದ್ದಾರೆ. ತಕ್ಷಣ ಸಾಂಗ್ಲಿ ಪೊಲೀಸರು, ಬಾಂಬ್ ನಿಷ್ಕ್ರಿಯ ದಳದೊಂದಿಗೆ ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಭಾರಿ ಅನಾಹುತ ತಪ್ಪಿದೆ. ಇನ್ನು ಹ್ಯಾಂಡ್ ಗ್ರೇನೆಡ್​ ಬಿಟ್ಟರೆ ಬೇರೆ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ.

ಶಾಲೆಯಲ್ಲಿ ಪತ್ತೆಯಾದ ಗ್ರೆನೇಡ್


ಹ್ಯಾಂಡ್ ಗ್ರೆನೇಡ್ ಮೇಲೆ ಉರ್ದು ಭಾಷೆಯ ಬರಹ

ಇನ್ನು ಶಾಲೆಯಲ್ಲಿ ಪತ್ತೆಯಾಗಿರುವ ಹ್ಯಾಂಡ್ ಗ್ರೆನೇಡ್ ಮೇಲೆ ಉರ್ದು ಭಾಷೆಯ ಲಿಪಿ ಕಂಡು ಬಂದಿದೆ. ಗ್ರೆನೇಡ್ ಜೀವಂತವಾಗಿತ್ತೇ ಅಥವಾ ನಿಷ್ಕ್ರಿಯವಾಗಿತ್ತೇ ಎನ್ನುವ ಕುರಿತು ತನಿಖೆ ನಡೆಯುತ್ತಿದೆ. ಶಾಲೆಯಲ್ಲಿ ಗ್ರೆನೇಡ್ ಕಂಡುಬಂದಿರುವುದು ನೋಡಿದರೆ ಉಗ್ರರು ಶಾಲೆಯನ್ನು ಸ್ಫೋಟಗೊಳಿಸುವ ಯತ್ನದಲ್ಲಿದ್ದರೇ ಅಥವಾ ಇಲ್ಲಿ ವಾಸ್ತವ್ಯ ಹೂಡಿದ್ದರೇ ಎಂಬ ಅನುಮಾನಗಳು ಮೂಡಿವೆ.

ಇದನ್ನೂ ಓದಿ: Explained: ಕೇವಲ 10 ದಿನಗಳಲ್ಲಿ 3 ಹತ್ಯೆ, ಬಡ ಕುಟುಂಬಗಳ ಕಣ್ಣೀರು ಒರೆಸುವವರು ಯಾರು?

ಶಂಕಿತರ ವಿಚಾರಣೆ ನಡೆಸಿ ಕಳಿಸಿದ ಎನ್ಐಎ

ನಿನ್ನೆ ರಾಷ್ಟ್ರೀಯ ತನಿಖಾ ತಂಡದ ವಿದ್ಯಾರ್ಥಿಗಳು ಕರ್ನಾಟಕದ ಭಟ್ಕಳ ಹಾಗೂ ತುಮಕೂರಿನಲ್ಲಿ ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆದಿದ್ದರು. ಎನ್‌ಐಎ ಅಧಿಕಾರಿಗಳು ತುಮಕೂರಿನ ಶಂಕಿತ ಉಗ್ರ ಸಾಜಿದ್ ಮಕ್ರಾನಿ  ಮತ್ತು ಭಟ್ಕಳಿನ ಶಂಕಿತ ಉಗ್ರ ಅಬ್ದುಲ್ ಮುಖ್ತದೀರ್ ನನ್ನು ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ: NIA Raid: 6 ರಾಜ್ಯಗಳ 13 ಸ್ಥಳಗಳಲ್ಲಿ ಎನ್ಐಎ ದಾಳಿ; ತುಮಕೂರಲ್ಲಿ ವಿದ್ಯಾರ್ಥಿ, ಭಟ್ಕಳದಲ್ಲಿ ಶಂಕಿತರು ಅರೆಸ್ಟ್

6 ರಾಜ್ಯಗಳ 13 ಸ್ಥಳಗಳಲ್ಲಿ ಎನ್ಐಎ ದಾಳಿ

ನಿನ್ನೆ ರಾಷ್ಟ್ರೀಯ ತನಿಖಾ ದಳದ (NIA) ತಂಡ ಭರ್ಜರಿ ಬೇಟೆಯಾಡಿತ್ತು.  ಕರ್ನಾಟಕ (Karnataka), ಮಹಾರಾಷ್ಟ್ರ (Maharashtra) ಸೇರಿದಂತೆ 6 ರಾಜ್ಯಗಳ 13 ಸ್ಥಳಗಳ ಮೇಲೆ ಎನ್ಐಎ ಅಧಿಕಾರಿಗಳು (NIA Officers) ದಾಳಿ (Raid) ಮಾಡಿದ್ದರು. ಉಗ್ರ ಸಂಘಟನೆ (Terrorist Organization) ಜೊತೆ ಸಂಪರ್ಕ, ದೇಶದಲ್ಲಿ ಭಯೋತ್ಪಾದಕ ಕೃತ್ಯ ನಡೆಸಲು ಸಂಚು ಸೇರಿದಂತೆ ಇನ್ನಿತರ ದೇಶದ್ರೋಹಿ ಚಟುವಟಿಕೆ ನಡೆಸುತ್ತಿರುವವರಿಗೆ ಶಾಕ್ ಕೊಟ್ಟಿತ್ತು. ಕರ್ನಾಟಕದ ತುಮಕೂರು (Tumkur) ಹಾಗೂ ಭಟ್ಕಳದಲ್ಲಿ (Bhatkal) ಎನ್ಐಎ ಅಧಿಕಾರಿಗಳು ದಾಳಿ ಮಾಡಿದ್ದರು. ಭಟ್ಕಳದಲ್ಲಿ ಸಹೋದರರಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಇತ್ತ ತುಮಕೂರಿನಲ್ಲಿ ಪ್ರತಿಷ್ಠಿತ ಕಾಲೇಜ್‌ನಲ್ಲಿ (Collage) ಓದುತ್ತಿದ್ದ ವಿದ್ಯಾರ್ಥಿಯೊಬ್ಬನನ್ನು (Student) ವಶಕ್ಕೆ ಪಡೆದು ವಿಚಾರಣೆ ನಡೆಸಿ, ಇದೀಗ ಬಿಟ್ಟಿದ್ದಾರೆ ಎನ್ನಲಾಗಿದೆ.
Published by:Annappa Achari
First published: