Karnataka: ಜೂನ್​ಗೆ 6 ವರ್ಷ ಆಗದಿದ್ರೆ ಮತ್ತೆ UKGಗೆ ಹೋಗಬೇಕು: ಶಿಕ್ಷಣ ಇಲಾಖೆ ಆದೇಶದ ಬಗ್ಗೆ ಪೋಷಕರು ಹೇಳಿದ್ದೇನು?

ಈ ಶೈಕ್ಷಣಿಕ ವರ್ಷದಲ್ಲಿ ಪ್ರಿಸ್ಕೂಲ್‌ನಲ್ಲಿ ಯುಕೆಜಿಗೆ ದಾಖಲಾದ ಮಕ್ಕಳಿಗೆ ಮುಂದೆ ಒಂದನೇ ತರಗತಿಗೆ ದಾಖಲಾತಿ ಸಿಗುತ್ತಾ ಎಂದು ಪೋಷಕರು ಚಿಂತತರಾಗಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಶಿಕ್ಷಣ ಇಲಾಖೆ (Department Of Education) ಹೊರಡಿಸಿರುವ ಆದೇಶ ಪೋಷಕರನ್ನ (Parents) ಆತಂಕಕ್ಕೆ ತಳ್ಳಿದೆ. ಸರ್ಕಾರದ  ಈ ಆದೇಶದ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಜೂನ್ ವೇಳೆಗೆ ಮಗುವಿಗೆ ಆರು ವರ್ಷ ಆಗದಿದ್ರೆ, ಮತ್ತೊಮ್ಮೆ ಯುಕೆಜಿ (UKG) ತರಗತಿಯಲ್ಲಿ ಕುಳಿತುಕೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ. ಮಗು ಒಂದು ವರ್ಷ ಯುಕೆಜಿ ತರಗತಿ ಪುನರಾವರ್ತಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ವಿಶಾಲ್ ಆರ್. ಸುತ್ತೋಲೆ ಹೊರಡಿಸಿದೆ. ಸದ್ಯ ಒಂದನೇ ತರಗತಿಗೆ ದಾಖಲಾಗಲು ಮಗುವಿಗೆ ಕನಿಷ್ಠ 5 ವರ್ಷ 5 ತಿಂಗಳು ಆಗಿರಬೇಕು. ಆದ್ರೆ 2023ರ ಶೈಕ್ಷಣಿಕ ವರ್ಷದಿಂದ ಮಗುವಿಗೆ ಕನಿಷ್ಠ 6 ವರ್ಷ ಆಗಿರಬೇಕು ಎಂದು ಸ್ಪಷ್ಟವಾಗಿ ಸುತ್ತೋಲೆಯಲ್ಲಿ ಹೇಳಲಾಗಿದೆ.

ಶಾಲೆಗಳು, ಪೋಷಕರು ಮತ್ತು ಶಿಕ್ಷಕರು ಗೊಂದಲಕ್ಕೊಳಕ್ಕೆ ಒಳಗಾಗಿದ್ರೆ, ಪ್ರಿಸ್ಕೂಲ್ ಆಡಳಿತ ಮಂಡಳಿ ಮತ್ತು ಶಿಕ್ಷಣ ತಜ್ಞರು ಸರ್ಕಾರದ ಹೊಸ ಆದೇಶವನ್ನು ಸ್ವಾಗತಿಸಿವೆ.

5 ವರ್ಷ 11 ತಿಂಗಳಾದ್ರೆ ದಾಖಲಾತಿ ಸಿಗುತ್ತಾ?

ನನ್ನ ಮಗು ಜುಲೈನಲ್ಲಿ ಹುಟ್ಟಿದೆ. ಅವನಿಗೆ ಮುಂದಿನ ವರ್ಷ ಶಾಲೆ ಆರಂಭದ ವೇಳೆಗೆ 5 ವರ್ಷ 11 ತಿಂಗಳು ಆಗಿರುತ್ತದೆ. ಹಾಗಾದ್ರೆ ಮುಂದಿನ ವರ್ಷ ಮಗನಿಗೆ ಒಂದನೇ ತರಗತಿಗೆ ದಾಖಲಾತಿ ಸಿಗುತ್ತಾ ಎಂದು ಮಹಿಳೆಯೊಬ್ಬರು ಪ್ರಶ್ನೆ ಮಾಡಿದ್ದಾರೆ. ಪೋಷಕರು ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲಿಯೇ ಒಂದನೇ ತರಗತಿಗೆ ಸೇರಿಸಲು ಬಯಸುತ್ತಾರೆ. ಆದ್ರೆ ಶಿಕ್ಷಣ ಇಲಾಖೆ ಒಂದನೇ ತರಗತಿಯಲ್ಲಿ ಶೈಕ್ಷಣಿಕ ಕಠಿಣತೆ ತರುತ್ತವೆ. ಇದು ಮಕ್ಕಳ ಮೇಲೆ ಒತ್ತಡ ಉಂಟಾಗುವ ಸಾಧ್ಯತೆಗಳಿವೆ. ಈ ಆದೇಶ ಇದಕ್ಕೆ ಕಡಿವಾಣ ಹಾಕಲಿದೆ ಎಂದು ಬೆಂಗಳೂರು ಶಾಲೆಗಳು ಫೇಸ್ ಬುಕ್ ಪೇಜ್ ಅಡ್ಮಿನ್ ಶ್ವೇತಾ ಶರಣ್ ಹೇಳುತ್ತಾರೆ.

ಇದನ್ನೂ ಓದಿ:  ಮಕ್ಕಳನ್ನು ಶಾಲೆಗೆ ಸೇರಿಸುವ ವಯಸ್ಸಿನಲ್ಲಿ ಮಹತ್ತರ ಬದಲಾವಣೆ; ಸರ್ಕಾರದಿಂದ ಹೊಸ ರೂಲ್ಸ್​

ಈ ಶೈಕ್ಷಣಿಕ ವರ್ಷದಲ್ಲಿ ಪ್ರಿಸ್ಕೂಲ್‌ನಲ್ಲಿ ಯುಕೆಜಿಗೆ ದಾಖಲಾದ ಮಕ್ಕಳಿಗೆ ಮುಂದೆ ಒಂದನೇ ತರಗತಿಗೆ ದಾಖಲಾತಿ ಸಿಗುತ್ತಾ ಎಂದು ಪೋಷಕರು ಚಿಂತತರಾಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಗೊಂದಲಕ್ಕೆ ಸ್ಪಷ್ಟತೆ ಸಿಗಲಿದೆ ಎಂಬ ನಿರೀಕ್ಷೆಯಲ್ಲಿ ಪೋಷಕರಿದ್ದಾರೆ.

ಉತ್ತಮ ಕಲಿತಾ ಫಲಿತಾಂಶ

1ನೇ ತರಗತಿ ಆರಂಭಿಸಲು ಮಕ್ಕಳಿಗೆ 6ನೇ ವರ್ಷ ಸೂಕ್ತ ವಯಸ್ಸು ಎಂದು ಕರ್ನಾಟಕ ಕೌನ್ಸಿಲ್ ಫಾರ್ ಪ್ರಿಸ್ಕೂಲ್ ಅಸೋಸಿಯೇಷನ್ ​​ಹೇಳಿದೆ. ಇನ್ನೂ ಈ ಕುರಿತಯ ಪರಿಷತ್ತಿನ ಕಾರ್ಯದರ್ಶಿ ಪೃಥ್ವಿ ಬನವಾಸಿ ಮಾತನಾಡಿ, ಪೋಷಕರು ಆತಂಕಕ್ಕೆ ಒಳಗಾಗೋದು ಬೇಡ. ಇದು ಮಕ್ಕಳ ಉತ್ತಮ ಕಲಿಕಾ ಫಲಿತಾಂಶಕ್ಕೆ ಕಾರಣವಾಗಲಿದೆ. ಮಕ್ಕಳು ಭವಿಷ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು. ಈಗ ಹಿಂದಿನಂತೆ ನಿವೃತ್ತಿ ಬಗ್ಗೆ ಯೋಚಿಸಬೇಕಿಲ್ಲ ಎಂದು ಹೇಳಿದ್ದಾರೆ.

ಕಲಿಕೆಯ ಫಲಿತಾಂಶ ಈ ವಯಸ್ಸಿಗೆ ಸೂಕ್ತ

ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳನ್ನು ಶಾಲೆ ದಾಖಲು ಮಾಡೋದರಿಂದ ಕಲಿಕೆಯ ಮೇಲೆ ಪರಿಣಾಮ ಬೀರುತ್ತದೆ. ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಮಾತ್ರ ಕಲಿಕೆ ಆರಂಭದ ವಯಸ್ಸು ಕಡಿಮೆ ಇದೆ. ಗ್ರೇಡ್ 1 ಗಾಗಿ 6 ​​ವರ್ಷದ ಈ ನಿರ್ಧಾರವು NEP ಮತ್ತು RTE ಯೊಂದಿಗೆ ಹೊಂದಿಕೆಯಾಗುವುದಿಲ್ಲ. ಆದರೆ ಕಲಿಕೆಯ ಫಲಿತಾಂಶ ಈ ವಯಸ್ಸಿಗೆ ಸೂಕ್ತವಾಗಿದೆ. ನಾವು ಎರಡನೇ ಕ್ರಮಾಂಕದ ಪರಿಣಾಮಗಳು ಮತ್ತು ಪರಿವರ್ತನೆಯ ಪೀಳಿಗೆಯ ಮೇಲೆ ಪ್ರಭಾವದ ಬಗ್ಗೆ ಯೋಚಿಸಬೇಕಾಗಿದೆ ಎಂದು ಕವಿತಾ ಗುಪ್ತಾ ಸಬರ್ವಾಲಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಇದನ್ನೂ ಓದಿ:  Belagavi: ಒಂದು ಫೋಟೋ, 19 ಲಕ್ಷ; ಸೋಶಿಯಲ್ ಮೀಡಿಯಾ ಬಳಸೋ ಯುವತಿಯರೇ ಎಚ್ಚರ ಇಂಥಹವರು ಇರ್ತಾರೆ

ಇನ್ನೂ ಈ ಆದೇಶದ ಬಗ್ಗೆ ಮತ್ತೊಮ್ಮೆ ಮರು ಪರಿಶೀಲನೆ ನಡೆಸಬೇಕು ಎಂದು ಸರ್ಕಾರಕ್ಕೆ ಅಸೋಸಿಯೇಷನ್ ​​ಆಫ್ ಪ್ರಾಥಮಿಕ ಮತ್ತು ಪ್ರೌಢಶಾಲೆ ಮ್ಯಾನೇಜ್ಮೆಂಟ್ ಪತ್ರ ಬರೆದಿದೆ. ಪತ್ರದಲ್ಲಿ ಒಂದು ಮಗುವನ್ನ ಒಂದೇ ತರಗತಿಯಲ್ಲಿ ಪುನರಾವರ್ತಿಸಲು ಹೇಗೆ ಸಾಧ್ಯ ಎಂದು ಕೇಳಿದೆ. CBSE ಶಾಲೆಗಳ ಸಂಘದ ಆಡಳಿತ ಮಂಡಳಿ ಸಹ ಸರ್ಕಾರ ತನ್ನ ಆದೇಶವನ್ನುಹ ಹಿಂಪಡೆಯಬೇಕು ಎಂದು ಆಗ್ರಹಿಸಿವೆ.

ಬದಲಾವಣೆ ಘೋಷಣೆ ಮಾಡಿದರೆ ಹೇಗೆ?

ಖಾಸಗಿ ಶಾಲೆಗಳು ಮನಸೋ ಇಚ್ಛೆ ಮಕ್ಕಳನ್ನು ದಾಖಲು ಮಾಡಿಕೊಳ್ಲಲ್ಲ. ಸರ್ಕಾರದ ಎಲ್ಲಾ ನಿಯಮಗಳನ್ನು ಪಾಲನೆ ಮಾಡಲಾಗುತ್ತದೆ. ಮುಂದಿನ ವರ್ಷದಿಂದ ಬದಲಾವಣೆ ಘೋಷಣೆ ಮಾಡಿದರೆ ಹೇಗೆ? ಈ ಬಗ್ಗೆ ಪೋಷಕರಿಗೆ ಮನವರಿಕೆ ಮಾಡೋದು ಹೇಗೆ ಎಂಬುದನ್ನು ಒಮ್ಮೆ ಶಿಕ್ಷಣ ಸಚಿವರು ಯೋಚಿಸಬೇಕು ಎಂದು ಖಾಸಗಿ ಶಾಲೆಗಳು ಖಾರವಾಗಿ ಪ್ರತಿಕ್ರಿಯಿಸಿವೆ. ಆರ್‌ಟಿಇ ಕಾಯ್ದೆಯ ಎಲ್ಲ ಅಂಶಗಳನ್ನು ಸರ್ಕಾರ ಜಾರಿಗೆ ತಂದಿಲ್ಲ, ವಿಷಯವಾರು ಮತ್ತು ವರ್ಗವಾರು ಶಿಕ್ಷಕರನ್ನು ನೇಮಕ ಮಾಡಿಲ್ಲ, ಖಾಲಿ ಜಾಗ ನೋಡುವ ಬದಲು ಹೊಸ ನಿಯಮಗಳನ್ನು ಹೊರತರುತ್ತಿದ್ದಾರೆ ಎಂದು ಕಾರ್ಯನಿರ್ವಾಹಕ ಕಾರ್ಯದರ್ಶಿ ಬಸವರಾಜ ಗುರಿಕಾರ ಹೇಳಿದರು.
Published by:Mahmadrafik K
First published: