ಕೋಲಾರ (ಮೇ 16) : ಇಂದು ರಾಜ್ಯಾದ್ಯಂತ ಶಾಲೆಗಳು ಆರಂಭವಾಗಿದ್ದು (School), ಮಕ್ಕಳೆಲ್ಲಾ ನಲಿಯುತಾ, ಕುಣಿಯುತ್ತಾ ಶಾಲೆಗೆ ಬಂದಿದ್ದಾರೆ. ರಾಜ್ಯದ ಹಲವೆಡೆ ಮಕ್ಕಳಿಗೆ ಹೂ (Flowers) ಕೊಟ್ಟು, ಸಿಹಿ ಕೊಟ್ಟು ಶಾಲೆಗೆ ಬರ ಮಾಡಿಕೊಂಡ್ರು. ಆದ್ರೆ ಕೋಲಾರದಲ್ಲಿ ಮೊದಲ ದಿನವೇ ಮಕ್ಕಳಿಗೆ (Children) ನಿರಾಸೆಯಾಗಿದೆ. ಕೋಲಾರದ (Kolara) ಶ್ರೀನಿವಾಸಪುರ ತಾಲೂಕಿನ ಮೊಗಿಲಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನೆಲದ ಮೇಲೆ ಕೂರಿಸಿ ಮಕ್ಕಳಿಗೆ ಪಾಠ ಮಾಡಿದ್ದಾರೆ. ಕೋಲಾರದಲ್ಲಿ ಸರ್ಕಾರಿ ಶಾಲೆಯ ದುಸ್ಥಿತಿ ಕಂಡು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಬಿರುಕು ಬಿಟ್ಟಿದೆ ಶಾಲಾ ಕಟ್ಟಡ
ಕೋಲಾರದ ಶ್ರೀನಿವಾಸಪುರ ತಾಲೂಕಿನ ಮೊಗಿಲಹಳ್ಳಿ ಗ್ರಾಮದ ಸರ್ಕಾರಿ ಶಾಲಾ ಕಟ್ಟಡದ ಮಧ್ಯದ ಕೊಠಡಿ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಕುಸಿದಿದ್ದು, ಉಳಿದ ಎರಡು ಕೊಠಡಿಗಳು ಬಿರುಕು ಬಿಟ್ಟಿರೊ ಹಿನ್ನಲೆ ಶಾಲಾ ಆವರಣದಲ್ಲಿ ಮಕ್ಕಳಿಗೆ ಶಿಕ್ಷಕರು ಪಾಠ ಪ್ರವಚನ ಮಾಡುತ್ತಿದ್ದಾರೆ. ಬರೀ ನೆಲದ ಮೇಲೆ ಟಾರ್ಪಲ್ ಹಾಕಿ 25 ಮಕ್ಕಳನ್ನು ಕೂರಿಸಿ ಮುಖ್ಯೋಪಾಧ್ಯಾಯ ಸುಧಾಕರ್ ಪಾಠ ಮಾಡಿದ್ದಾರೆ.
ನೆಲದ ಮೇಲೆ ಕುಳಿತು ಮಕ್ಕಳ ಪಾಠ
ಶಾಲೆಗೆ ಬಂದ ಮೊದಲ ದಿನವೇ ಮಕ್ಕಳನ್ನು ನೆಲದ ಮೇಲೆ ಕುಳಿಸಿ ಪಾಠ ಮಾಡೋದು ಸರಿಯೇ ಎಂದು ಮುಖ್ಯೋಪಾಧ್ಯಾಯರನ್ನು ಕೇಳಿದ್ರೆ ಅವ್ರು ಹೇಳೋದು ಹೀಗೆ. ಶಾಲೆ ಕಟ್ಟಡಗಳು ಬಿರುಕು ಬಿಟ್ಟಿವೆ, ಯಾವಾಗ ಕಟ್ಟಡ ಬೀಳುತ್ತೋ ಗೊತ್ತಿಲ್ಲ, ಹೀಗಾಗಿ ಹೊರಗೆ ಪಾಠ ಮಾಡ್ತಿರೋದಾಗಿ ಶಿಕ್ಷಕರು ಹೇಳಿದ್ದಾರೆ.
ಇದನ್ನೂ ಓದಿ: Explained: ನಾಳೆಯಿಂದ ಶಾಲೆ ಶುರು, "ಬ್ಯಾಗು ಹಿಡಿ, ಸ್ಕೂಲಿಗ್ ನಡಿ" ಎನ್ನುವ ಮುನ್ನ ಈ ಮಾಹಿತಿ ಗೊತ್ತಿರಲಿ
ಮಳೆ, ಗಾಳಿ ಲೆಕ್ಕಿಸದೇ ಪಾಠ ಕೇಳ್ತಿರೋ ಮಕ್ಕಳು
ಇನ್ನೂ ರಾಜ್ಯದಲ್ಲಿ ಹಲವೆಡೆ ಮೋಡ ಕವಿದ ವಾತಾವರಣವಿದ್ದು, ಮಕ್ಕಳು ಮಳೆ, ಚಳಿ, ಗಾಳಿ ಲೆಕ್ಕಿಸದೇ ಪಾಠ ಕೇಳುತ್ತಿದ್ದಾರೆ. ಶಿಕ್ಷಣ ಇಲಾಖೆ ನಿರ್ಲಕ್ಷ್ಯಕ್ಕೆ ಪೋಷಕರು ಹಾಗೂ ಸಾರ್ವಜನಿಕರು ಕಿಡಕಾರಿದ್ದಾರೆ. ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿ ಎಂದು ಹೇಳೋ ಸರ್ಕಾರ, ಶಾಲೆಗಳಿಗೆ ಸರಿಯಾದ ಮೂಲಭೂತ ಸೌಕರ್ಯ ಒದಗಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.
ಶಾಲೆಗೆ ತಳಿರು ತೋರಣ ಕಟ್ಟಿ ಸ್ವಾಗತ
ಪುತ್ತೂರಿನ ಬ್ರಿಟಿಷ್ ಕಾಲದ ಕೊಂಬೆಟ್ಟು ಸರಕಾರಿ ಶಾಲೆಯಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರೇ ಖುದ್ದಾಗಿ ಮಕ್ಕಳನ್ನು ಬರಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಗಳಲ್ಲಿ ಒಂದಾಗಿರುವ ಕೊಂಬೆಟ್ಟು ಶಾಲೆಗೆ ತಳಿರು- ತೋರಣಗಳಿಂದ ಶೃಂಗರಿಸಿ ಶಿಕ್ಷಕರು ಹಾಗೂ ಶಾಸಕರು ಮಕ್ಕಳನ್ನು ಶಾಲೆಗೆ ಬರಮಾಡಿಕೊಂಡಿದ್ದಾರೆ. ಮಕ್ಕಳು ಬರುತ್ತಿದ್ದಂತೆ ಮಕ್ಕಳಿಗೆ ಹೂ, ಚಾಕಲೇಟು ಹಾಗು ಆರತಿ ಎತ್ತಿ ಶಾಸಕರು ಬರಮಾಡಿಕೊಂಡಿದ್ದಾರೆ.
ಹುಬ್ಬಳ್ಳಿಯಲ್ಲಿ ಶಾಲೆಗೆ ಬಂದ ಮಕ್ಕಳು
ಇಂದಿನಿಂದ ಶಾಲೆಗಳು ಪುನರಾರಂಭ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಉತ್ಸಾಹದಿಂದ ಶಾಲೆಗಳತ್ತ ವಿದ್ಯಾರ್ಥಿಗಳು ಮುಖ ಮಾಡಿದ್ದಾರೆ. ಪ್ರತಿ ವರ್ಷಕ್ಕಿಂತ 15 ದಿನಗಳು ಮುಂಚಿತವಾಗಿ ಶಾಲೆಗಳು ಪುನರಾರಂಭಗೊಂಡಿದ್ಗರೂ, ಹುಬ್ಬಳ್ಳಿಯಲ್ಲಿ ಬಹುತೇಕ ಕಡೆ ಸಂತಸದಿಂದಲೇ ವಿದ್ಯಾರ್ಥಿಗಳು ಆಗಮಿಸಿದ್ದರು.
ಪೊರಕೆ ಹಿಡಿದು ಶಾಲೆ ಸ್ವಚ್ಛ ಮಾಡಿದ ಶಿಕ್ಷಕರು
ವಿಜಯಪುರ ನಗರದ ಶಿಖಾರಖಾನೆಯ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರೇ ಪೊರಕೆ ಹಿಡಿದು ಶಾಲೆಯ ಆವರಣ ಸ್ವಚ್ಛಗೊಳಿಸಿದ್ದಾರೆ. ತಾವೇ ಸ್ವತಃ ಪೊರಕೆ ಹಿಡಿದು ಶಾಲೆಯ ಇಡೀ ಆವರಣ ಸ್ವಚ್ಛಗೊಳಿಸಿ, ತೆಂಗಿನಗರಿ ಕಟ್ಟಿ, ರಂಗೋಲಿ ಹಾಕಿದ್ದಾರೆ. ಈ ಮೂಲಕ ಅದ್ಧೂರಿಯಾಗಿ ವಿದ್ಯಾರ್ಥಿಗಳನ್ನು ಸ್ವಾಗತಿಸಿದ್ರು. ಗುಲಾಬಿ ಹೂವು ಕೊಟ್ಟು ಮಕ್ಕಳಿಗೆ ಶುಭ ಕೋರಿದ್ರು.
ಇದನ್ನೂ ಓದಿ: KSRTC: ಮೇ 16ಕ್ಕೆ ಶಾಲೆ-ಕಾಲೇಜು ಆರಂಭ; ಹಳೇ ಬಸ್ ಪಾಸ್ನಲ್ಲೇ ಪ್ರಯಾಣಕ್ಕೆ ಅವಕಾಶ
ಮೊದಲ ದಿನವೇ ಪಠ್ಯ-ಪುಸ್ತಕ ವಿತರಣೆ
ಗಡಿ ಜಿಲ್ಲೆ ಚಾಮರಾಜನಗರದಲ್ಲೂ ಸರ್ಕಾರಿ ಶಾಲೆಗಳ ಸಂಭ್ರಮದ ಆರಂಭವಾಗಿದೆ. ತಳಿರು ತೋರಣ ಕಟ್ಟಿ ರಂಗೋಲಿ ಬಿಡಿಸಿ ಸಂಭ್ರಮದ ವಾತಾವರಣ ನಿರ್ಮಾಣ ಮಾಡಿ, ವಿದ್ಯಾರ್ಥಿಗಳಿಗೆ ಗುಲಾಬಿ ಹೂ, ಸಿಹಿ ನೀಡಿ ಶಿಕ್ಷಕರು ಬರಮಾಡಿಕೊಂಡಿದ್ದಾರೆ. ಶಾಲೆಗೆ ಬಂದ ಮಕ್ಕಳಿಗೆ ಮೊದಲ ದಿನವೇ ಪಠ್ಯ-ಪುಸ್ತಕ ವಿತರಣೆ ಮಾಡಿ, ಹಾಲು, ಬಿಸ್ಕಿಟ್ ನೀಡಿ ಮಕ್ಕಳಲ್ಲಿ ಉತ್ಸಾಹ ತುಂಬಿದ್ದಾರೆ. ಜಿಲ್ಲೆಯಲ್ಲಿ 975 ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ 230 ಸರ್ಕಾರಿ ಪ್ರೌಢಶಾಲೆಗಳು ಇಂದಿನಿಂದ ಆರಂಭವಾಗಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ