ಶಾಲೆಗೆ ಕಳುಹಿಸುವ ಮುನ್ನ ತಿಳಿಯಿರಿ ಮಕ್ಕಳ ಮನಸು; ಸರ್ಕಾರದಿಂದ ಮನೋವೈದ್ಯರ ವ್ಯವಸ್ಥೆ
ಎಂಟು ತಿಂಗಳಿನಿಂದ ಕೊರೋನಾ ಮತ್ತು ಲಾಕ್ಡೌನ್ ಕಾರಣದಿಂದಾಗಿ ಹೊರ ಜಗತ್ತಿಗೆ ಹೆಚ್ಚು ತೆರೆದುಕೊಳ್ಳದ ಮಕ್ಕಳು ದಿಢೀರ್ ಶಾಲೆಗೆ ಹೋಗಬೇಕೆಂದರೆ ಹಿಂಜರಿಯುವುದು ಸಹಜ. ಈ ಹಿನ್ನೆಲೆಯಲ್ಲಿ ಅವರಿಗೆ ಕೌನ್ಸಲಿಂಗ್ ಮಾಡಲು ಸರ್ಕಾರ ತಜ್ಞರ ವ್ಯವಸ್ಥೆ ಮಾಡಿದೆ.
news18-kannada Updated:November 25, 2020, 4:12 PM IST

ಸಾಂದರ್ಭಿಕ ಚಿತ್ರ
- News18 Kannada
- Last Updated: November 25, 2020, 4:12 PM IST
ಬೆಂಗಳೂರು: ಶಾಲೆ ತೆರೆಯಲು ಸರ್ಕಾರ ಚಿಂತಿಸುತ್ತಿದೆ. ಸದ್ಯಕ್ಕೆ ಶಾಲೆ ತೆರೆಯದಿದ್ದರೂ ಡಿಸೆಂಬರ್ ನಂತರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಆದ್ರೆ ಮಕ್ಕಳು ಮಾತ್ರ ಶಾಲೆಗೆ ಹೋಗೋಕೆ ಸಿದ್ಧ ಇಲ್ಲ. ಮಕ್ಕಳನ್ನು ನಾನಾ ಮಾನಸಿಕ ಸಮಸ್ಯೆಗಳು ಕಾಡುತ್ತಿದೆ. ಸದ್ದಿಲ್ಲದೇ ಈ ಮುಗ್ಧ ಮನಸುಗಳು ಒದ್ದಾಡುತ್ತಿವೆ. ಹಾಗಾಗಿ ಮಕ್ಕಳ ಸಹಾಯಕ್ಕೆ ನಿಮ್ಹಾನ್ಸ್ನ ತಜ್ಞರು ಮುಂದೆ ಬಂದಿದ್ದಾರೆ. ಮಕ್ಕಳ ಹಕ್ಕುಗಳ ಕಾರ್ಯಕರ್ತರು, ಸ್ವಯಂಸೇವಕರಿಗೆ ವಿಶೇಷ ತರಬೇತಿ ನೀಡುತ್ತಿದ್ದಾರೆ. ರಾಜ್ಯದಲ್ಲಿ ಸುಮಾರು 60 ಸ್ವಯಂಸೇವಕರಿಗೆ ಆಪ್ತ ಸಮಾಲೋಚನೆ ಬಗ್ಗೆ ನಿಮ್ಹಾನ್ಸ್ನ ತಜ್ಞರು ತರಬೇತಿ ನೀಡುತ್ತಿದ್ದಾರೆ.
ತರಬೇತಿ ಪಡೆದ ಸ್ವಯಂಸೇವಕರು ಸಮಸ್ಯೆ ಇರುವ ಮಕ್ಕಳ ಮನೆಗೇ ಹೋಗಿ ಕೌನ್ಸಲಿಂಗ್ ಮಾಡುತ್ತಾರೆ. ತಜ್ಞರಿಂದಲೇ ತರಬೇತಿ ಪಡೆದಾಗ ಸರಿಯಾದ ರೀತಿಯಲ್ಲಿ ಮಕ್ಕಳ ಮನಸ್ಸನ್ನು ತಿದ್ದುವುದು ಸಾಧ್ಯ. ಅಂದ್ಹಾಗೆ ಇದೇ ಮೊದಲ ಬಾರಿಗೆ ಈ ರೀತಿಯ ಕೆಲಸ ನಡೆಯುತ್ತಿದೆ. ಸುಮಾರು 8 ತಿಂಗಳವರೆಗೆ ಮನೆಯಲ್ಲೇ ಇದ್ದ ಮಕ್ಕಳು ಈಗ ಮತ್ತೆ ಹೊರಜಗತ್ತಿಗೆ ಹೊಂದಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಪ್ರತಿ ಮಗುವಿನ ಸಮಸ್ಯೆಯೂ ಭಿನ್ನ, ಅವರಿಗೆ ನೀಡಬೇಕಾದ ಸಹಾಯವೂ ಬೇರೆಬೇರೆ ಆಗಿದೆ ಎನ್ನುವುದನ್ನು ತಜ್ಞರು ಗುರುತಿಸಿದ್ದಾರೆ. ಕೊರೋನಾ ಮತ್ತು ಲಾಕ್ಡೌನ್ನಿಂದಾಗಿ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳೇನು ಗೊತ್ತಾ?
* ಆನ್ ಲೈನ್ ತರಗತಿಯ ನೆಪದಲ್ಲಿ ನೀಲಿಚಿತ್ರದ ಚಟ
* ಶಾಲೆಗೆ ಹೋಗುತ್ತಿದ್ದಾಗ ಕದ್ದು ಮುಚ್ಚಿ ಸಿಗರೇಟ್ ಸೇದುತ್ತಿದ್ದ ಮಕ್ಕಳಲ್ಲಿ ಈಗ ವಿತ್ಡ್ರಾಯಲ್ ಸಿಂಪ್ಟಮ್ಸ್
* ಅಂಗವಿಕಲ ಮಕ್ಕಳಿಗೆ ಎಂಟು ತಿಂಗಳಿಂದ ದೈಹಿಕ ವ್ಯಾಯಾಮ ಇಲ್ಲದೇ ಹದಗೆಟ್ಟ ಆರೋಗ್ಯ
* ಮನೆಯಲ್ಲಿ ಎಲ್ಲರೂ ತಂತಮ್ಮ ಕೆಲಸಗಳಲ್ಲಿ ಬ್ಯುಸಿ, ನಾನು ಯಾರಿಗೂ ಬೇಡ ಎಂದು ಖಿನ್ನತೆಯಲ್ಲಿ ಬಳಲುವ ಮಕ್ಕಳುು* ಸಾಮಾನ್ಯವಾಗಿ ಚೂಟಿಯಾಗಿದ್ದ ಮಕ್ಕಳು ಈಗ ಒಂಟಿತನದಿಂದಾಗಿ ಹೆಚ್ಚು ಮಾತೇ ಆಡುತ್ತಿಲ್ಲ
* ಮನೆಯಲ್ಲಿ ಮಾತನಾಡುವ ಭಾಷೆ ಬಿಟ್ಟು ಉಳಿದದ್ದೆಲ್ಲಾ ಮರೆತಿದ್ದಾರೆ - ಈಗ ಎಲ್ಲವೂ ಮೊದಲಿನಿಂದ ಆರಂಭಿಸಬೇಕು
* ಶಾಲೆಗೆ ಹೋದರೆ ಕೊರೋನಾ ಬರುತ್ತೆ, ತಾನು ಸಾಯುತ್ತೇನೆ ಎನ್ನುವ ಭಯ
* ಜನರನ್ನು ನೋಡಿದರೆ ಆತಂಕ-ಭಯ, ಹೆಚ್ಚು ಜನರ ಗುಂಪು ನೋಡಿದರೆ ನಡುಕ
* ಖಿನ್ನತೆ ಹೆಚ್ಚಾಗಿ ಆತ್ಮಹತ್ಯೆ ಆಲೋಚನೆ
* ಸರಿಯಾದ ಸಮಯಕ್ಕೆ ಪೌಷ್ಟಿಕ ಆಹಾರ ದೊರೆಯದೆ ಅಪೌಷ್ಟಿಕತೆ
ಇಷ್ಟೆಲ್ಲಾ ಯೋಚನೆ ಆಲೋಚನೆ ಆ ಪುಟ್ಟ ಮನಸ್ಸುಗಳಲ್ಲಿ ಇದೆ ಎನ್ನುವುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ. ಮಕ್ಕಳ ಸಮಸ್ಯೆಗಳಿಗೆ ಪರಿಹಾರ ನೀಡಿ, ಅವರು ರೆಡಿ ಆದ ಮೇಲಷ್ಟೇ ಶಾಲೆಗೆ ಕಳುಹಿಸುವ ಕುರಿತು ಆಲೋಚನೆ ಮಾಡಬಹುದಾಗಿದೆ ಎನ್ನುತ್ತಾರೆ ತಜ್ಞರು.
ವರದಿ: ಸೌಮ್ಯಾ ಕಳಸ
ತರಬೇತಿ ಪಡೆದ ಸ್ವಯಂಸೇವಕರು ಸಮಸ್ಯೆ ಇರುವ ಮಕ್ಕಳ ಮನೆಗೇ ಹೋಗಿ ಕೌನ್ಸಲಿಂಗ್ ಮಾಡುತ್ತಾರೆ. ತಜ್ಞರಿಂದಲೇ ತರಬೇತಿ ಪಡೆದಾಗ ಸರಿಯಾದ ರೀತಿಯಲ್ಲಿ ಮಕ್ಕಳ ಮನಸ್ಸನ್ನು ತಿದ್ದುವುದು ಸಾಧ್ಯ. ಅಂದ್ಹಾಗೆ ಇದೇ ಮೊದಲ ಬಾರಿಗೆ ಈ ರೀತಿಯ ಕೆಲಸ ನಡೆಯುತ್ತಿದೆ. ಸುಮಾರು 8 ತಿಂಗಳವರೆಗೆ ಮನೆಯಲ್ಲೇ ಇದ್ದ ಮಕ್ಕಳು ಈಗ ಮತ್ತೆ ಹೊರಜಗತ್ತಿಗೆ ಹೊಂದಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಪ್ರತಿ ಮಗುವಿನ ಸಮಸ್ಯೆಯೂ ಭಿನ್ನ, ಅವರಿಗೆ ನೀಡಬೇಕಾದ ಸಹಾಯವೂ ಬೇರೆಬೇರೆ ಆಗಿದೆ ಎನ್ನುವುದನ್ನು ತಜ್ಞರು ಗುರುತಿಸಿದ್ದಾರೆ.