ಕೋಲಾರ: ವಿಜಯಪುರದಲ್ಲಿ (Vijayapura) ನಿನ್ನೆ ವಿಪಕ್ಷ ನಾಯಕ ಸಿದ್ದರಾಮಯ್ಯಗೆ (Siddaramaiah) ಚುನಾವಣೆಗಾಗಿ (Election) ವಿದ್ಯಾರ್ಥಿನಿ (Student) 5,000 ರೂಪಾಯಿ ದೇಣಿಗೆ ನೀಡಿದ್ದು ಸಾಕಷ್ಟು ಸುದ್ದಿಯಾಗಿತ್ತು. ಇಂದು ಕೋಲಾರ ತಾಲೂಕಿನ ತಿಪ್ಪೇನಹಳ್ಳಿ ಗ್ರಾಮದಲ್ಲಿ ಜೆಡಿಎಸ್ ಸಮಾವೇಶ (JDS) ನಡೆದಿದೆ. ಈ ವೇಳೆ ಅಮ್ಮನಲ್ಲೂರು ಗ್ರಾಮದ ಮೋನ ಮತ್ತು ಸಹನಾ ಎಂಬ ಮಕ್ಕಳು, ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿಗೆ (Nikhil Kumaraswamy), ದೇಣಿಗೆ ಎಂದು ಮಕ್ಕಳು 5,000 ರೂಪಾಯಿ ನೀಡಿದ್ದಾರೆ.
ಸಿದ್ದರಾಮಯ್ಯಗೆ ಟಕ್ಕರ್ ಕೊಡಲು ಜೆಡಿಎಸ್ ರಣತಂತ್ರ
ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರಿಗೆ ಟಕ್ಕರ್ ನೀಡಲು ರಣತಂತ್ರ ರೂಪಿಸಿದ್ದಾರೆ. ಜೆಡಿಎಸ್ ನಾಯಕರು ಕ್ಷೇತ್ರದಲ್ಲಿ ನಿರಂತರ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಇದರ ಭಾಗವಾಗಿ ಇಂದು ಕೋಲಾರದ ವೇಮಗಲ್ ಹೋಬಳಿಯ ತಿಪ್ಪೇನಹಳ್ಳಿ ಗ್ರಾಮದಲ್ಲಿ ಜೆಡಿಎಸ್ ಸಮಾವೇಶ ಏರ್ಪಡಿಸಲಾಗಿತ್ತು. ಕೋಲಾರಕ್ಕೆ ಆಗಮಿಸಿದ ಜೆಡಿಎಸ್ ಯುವಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಗೆ 500ಕ್ಕೂ ಹೆಚ್ಚು ಬೈಕ್ಗಳ ಮೂಲಕ ರ್ಯಾಲಿ ಮಾಡಿ ಕಾರ್ಯಕರ್ತರು ಸ್ವಾಗತ ಮಾಡಿದರು.
ಜೆಡಿಎಸ್ ಅಭ್ಯರ್ಥಿ ಪರ ನಿಖಿಲ್ ಭರ್ಜರಿ ಪ್ರಚಾರ
ಕೋಲಾರ ಜೆಡಿಎಸ್ ಅಭ್ಯರ್ಥಿ ಸಿ.ಎಂ.ಆರ್ ಶ್ರೀನಾಥ್ ಪರ ನಿಖಿಲ್ ಕುಮಾರಸ್ವಾಮಿ ಪ್ರಚಾರ ಮಾಡಿದ್ದು, ಸಮಾವೇಶದಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಎಂಎಲ್ಸಿ ಗೋವಿಂದರಾಜು, ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್, ಮಾಲೂರು ರಾಮೇಗೌಡ ಸೇರಿದಂತೆ ಅನೇಕ ಮುಖಂಡರು ಭಾಗಿಯಾಗಿದ್ದರು. ಈ ವೇಳೆ ಅಮ್ಮನಲ್ಲೂರು ಗ್ರಾಮದ ಮಕ್ಕಳು ತಾವು ಕೂಡಿಟ್ಟಿದ್ದ ಐದು ಸಾವಿರ ರೂಪಾಯಿ ಹಣವನ್ನು ಕಾರ್ಯಕ್ರಮದ ವೇದಿಕೆಗೆ ಬಂದು ಜೆಡಿಎಸ್ ಪಕ್ಷಕ್ಕೆ ದೇಣಿ ನೀಡಿದರು.
ಹೆಲಿಕಾಪ್ಟರ್ ಮೂಲಕ ನಿಖಿಲ್ಗೆ ಹೂಮಳೆ!
ಇನ್ನು, ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶಕ್ಕೆ ಹೆಲಿಕಾಪ್ಟರ್ ಮೂಲಕ ಎರಡು ಬಾರಿ ಹೂ ಮಳೆ ಸುರಿಸಿದರು. ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ನಡೆಸುತ್ತಿರುವ ಸಿಎಂಆರ್ ಶ್ರೀನಾಥ್ ಪರ ನಿಖಿಲ್ ಕುಮಾರಸ್ವಾಮಿ ಅಬ್ಬರದ ಪ್ರಚಾರ ನಡೆಸಿದರು. ಇನ್ನು ಕಾರ್ಯಕ್ರಮಕ್ಕೆ ಆಗಮಿಸಿದ್ದ ಕಾರ್ಯಕರ್ತರಿಗೆ ಭರ್ಜರಿ ಬಿರಿಯಾನಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಮಾವೇಶಕ್ಕೆ ಆಗಮಿಸಿದ ಜನರಿಗೆ ಸುಮಾರು ಎರಡು ಸಾವಿರ ಕೆಜಿ ಚಿಕನ್ ಬಳಸಿ, 6 ಸಾವಿರ ಜನರಿಗೆ ಚಿಕನ್ ಬಿರಿಯಾನಿ ವ್ಯವಸ್ಥೆ ಮಾಡಲಾಗಿತ್ತು. ಜನರನ್ನ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟ ದೃಶ್ಯಗಳು ಕಂಡು ಬಂದವು.
ಕಾಂಗ್ರೆಸ್ ಟಿಕೆಟ್ ಫೈನಲ್ ಮಾಡಲು ಕಸರತ್ತು
ಕಾಂಗ್ರೆಸ್ ಮೊದಲ (Congress) ಪಟ್ಟಿಯಲ್ಲಿ 137 ಟಿಕೆಟ್ ಫೈನಲ್ ಮಾಡಲು ಭಾರೀ ಕಸರತ್ತು ಶುರು ಮಾಡಿದೆ. ಎಐಸಿಸಿ (AICC) ಪ್ರಧಾನ ಕಾರ್ಯದರ್ಶಿ ಮೋಹನ್ ಪ್ರಕಾಶ್ ನೇತೃತ್ವದ ಸ್ಕ್ರೀನಿಂಗ್ ಕಮಿಟಿ ಇಂದು ಮೊದಲ ಸಭೆ ನಡೆಸಿದೆ. ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷರ ಸಭೆಯಲ್ಲಿ ಕೆಪಿಸಿಸಿ (KPCC) ಕಾರ್ಯಾಧ್ಯಕ್ಷರ ಅಭಿಪ್ರಾಯಗಳನ್ನ ಕೇಳಲಾಗಿದೆ. ಕಾರ್ಯಾಧ್ಯಕ್ಷರಿಂದ ಪ್ರತಿ ಅಭ್ಯರ್ಥಿಗಳ ಮಾಹಿತಿಯನ್ನ ಪಡೆಯಲಾಗಿದೆ. ಸಭೆ ಬಗ್ಗೆ ಮಾತನಾಡಿದ, ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹ್ಮದ್, ಮೊದಲು ಕಾರ್ಯಧ್ಯಕ್ಷರ ಸಭೆ ಇದೆ. ಸಂಜೆ ಹಿರಿಯ ನಾಯಕರ ಸಭೆ ನಡೆಸುತ್ತಾರೆ. ನಾಳೆ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಜೊತೆ ಸಭೆ ಮಾಡುತ್ತಾರೆ ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ