• Home
  • »
  • News
  • »
  • state
  • »
  • Madikeri Dasara: ಮಡಿಕೇರಿಯಲ್ಲಿ ಮಕ್ಕಳ ದಸರಾ; ದಶಮಂಟಪ ತಯಾರಿಸಿದ ಪುಟಾಣಿಗಳು

Madikeri Dasara: ಮಡಿಕೇರಿಯಲ್ಲಿ ಮಕ್ಕಳ ದಸರಾ; ದಶಮಂಟಪ ತಯಾರಿಸಿದ ಪುಟಾಣಿಗಳು

ಮಕ್ಕಳ ದಸರಾ

ಮಕ್ಕಳ ದಸರಾ

ದಸರಾ ಹಬ್ಬದ ದಶಮಂಟಪಗಳ ಶೋಭಾಯಾತ್ರೆ ಸಂದರ್ಭದಲ್ಲಿ ಪ್ರದರ್ಶನವಾಗುವಂತಹ ಕಥಾ ಸನ್ನಿವೇಶವನ್ನು ವಿದ್ಯಾರ್ಥಿಗಳು ತಾವೇ ಸಿದ್ಧಪಡಿಸಿ ಹಿನ್ನಲೆ ಧ್ವನಿ ನೀಡಿ, ಕಲಾಕೃತಿಗಳ ಚಲನವಲನಗಳ ಪ್ರದರ್ಶನವು ಎಲ್ಲರ ಗಮನ ಸೆಳೆಯಿತು.

  • Share this:

ಕೊಡಗು: ಒಂದೆಡೆ ಮಡಿಕೇರಿ ದಸರಾದ (Madikeri Dasara) ದಶಮಂಟಪಗಳ ರೀತಿಯೇ ವಿವಿಧ ಕಥಾಹಂದರವನ್ನು ಆಧರಿಸಿ ಮಾಡಿದ ಮಕ್ಕಳ ಮಂಟಪಗಳು, ಮಗದೊಂದೆಡೆ ಹಣ್ಣು ತರಕಾರಿ ಸೇರಿದಂತೆ ವಿವಿಧ ವ್ಯಾಪಾರ ವಹಿವಾಟು. ಇನ್ನೊಂದೆಡೆ ವಿಜ್ಞಾನ ವಸ್ತು ಪ್ರದರ್ಶನ (Science Exhibition) ಸಾಕಷ್ಟು ಜನರಿಗೆ ಸ್ವಚ್ಚತೆಯ ಅರಿವು ಮೂಡಿಸುವ ಕೆಲಸ ಮಾಡಿತು. ಇದೆಲ್ಲಾ ಮಡಿಕೇರಿ ದಸರಾ ಜನೋತ್ಸವದ ಅಂಗವಾಗಿ ಗಾಂಧಿ ಮೈದಾನದಲ್ಲಿ ಸೋಮವಾರ ನಡೆದ ಮಕ್ಕಳ ದಸರಾ (Makkala Dadara Program) ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮಡಿಕೇರಿ ದಸರಾವನ್ನೇ ಹೋಲುವಂತೆ ವಿವಿಧ ಮಂಟಪಗಳನ್ನು ಮಾಡಿ ಎಲ್ಲರನ್ನು ಹುಬ್ಬೇರುವಂತೆ ಮಾಡಿದರು. ಕಳೆದೆರಡು ವರ್ಷಗಳಿಂದ ಕಳೆಗುಂದಿದ್ದ ಮಡಿಕೇರಿ ದಸರಾ ಮಹೋತ್ಸವಕ್ಕೆ ಈ ಬಾರಿ ಜೀವಕಳೆ ಬಂದಿತ್ತು. ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಮಕ್ಕಳ ದಸರಾವನ್ನು ಸೋಮವಾರ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ (MLA Appachu Ranjan) ಅವರು ಉದ್ಘಾಟಿಸಿದರು.


ಇನ್ನು ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಮಹನೀಯರ ವೇಷಭೂಷಣ ತೊಟ್ಟು ಪುಟಾಣಿಗಳು ಗಾಂಭೀರ್ಯದಿಂದ ವೇದಿಕೆ ಮೇಲೆ ಹೆಜ್ಜೆ ಹಾಕಿದರು. ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ 9ನೇ ವರ್ಷದ ಮಕ್ಕಳ ದಸರಾ ಆಯೋಜಿಸಲಾಗಿತ್ತು.


ಪ್ರತಿಭೆ ಪ್ರದರ್ಶಿಸಿದ ಮಕ್ಕಳು


ಮಕ್ಕಳಿಗಾಗಿ ರೂಪಿಸಲಾಗಿದ್ದ ಹಲವಾರು ಕಾರ್ಯಕ್ರಮಗಳಲ್ಲಿ ಪುಟಾಣಿಗಳು ಲವಲವಿಕೆಯಿಂದ ಪಾಲ್ಗೊಂಡರು. ಮಕ್ಕಳು ತಮ್ಮ ಕಲಾ ಪ್ರತಿಭೆಯನ್ನು ವೇದಿಕೆ ಮೇಲೆ ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾದರು.


Children dasara organized in madikeri rsk mrq
ಮಕ್ಕಳ ದಸರಾ


ಕ್ಲೇ ಮಾಡಲಿಂಗ್​​ನಲ್ಲಿಯಂತು ವಿದ್ಯಾರ್ಥಿಗಳು ಸುಂದರವಾದ ಗಣೇಶ ಮೂರ್ತಿ, ಮೈಸೂರು ದಸರೆಯ ಜಂಬೂ ಸವಾರಿ ಸೇರಿದಂತೆ ಅವರು ಮಾಡಿದ್ದ ವಿವಿಧ ಪ್ರತಿಮೆಗಳು ಮಕ್ಕಳ ಪ್ರತಿಭೆಯನ್ನು ಯಾವ ಶಿಲ್ಪಿಗೂ ಕಡಿಮೆ ಇಲ್ಲ ಎಂಬುದನ್ನು ಸಾಬೀತುಪಡಿಸಿದವು. ಛದ್ಮವೇಷ ಸ್ಪರ್ಧೆಗಳಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು.


ಕಲಾಕೃತಿ ಖರೀದಿ


ಮಕ್ಕಳ ಸಂತೆ, ಮಕ್ಕಳ ಮಂಟಪ, ಮಕ್ಕಳ ಅಂಗಡಿಗಳನ್ನು ಶಾಸಕರು, ನಗರಸಭೆ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಅವರು ವೀಕ್ಷಿಸಿದರು. ಬಗೆ ಬಗೆಯ ಸೊಪ್ಪು, ತರಕಾರಿಗಳು, ತಿಂಡಿ ತಿನಿಸುಗಳು, ಗೃಹ ಬಳಕೆಯ ವಸ್ತುಗಳು, ಮಣ್ಣಿನಿಂದ ತಯಾರಿಸಿದ ಕಲಾಕೃತಿಗಳನ್ನು ಶಾಸಕರು, ಜಿಲ್ಲಾಧಿಕಾರಿ ಮತ್ತು ವಿವಿಧ ಜನ ಪ್ರತಿನಿಧಿಗಳು ಖರೀದಿ ಮಾಡಿದರು.


ಗಮನ ಸೆಳೆದ ಮಕ್ಕಳ ಸಂತೆ


ಸಾರ್ವಜನಿಕರು ಉತ್ಸಾಹದಿಂದ ಮಕ್ಕಳ ದಸರಾದಲ್ಲಿ ಪಾಲ್ಗೊಂಡು ಮಕ್ಕಳನ್ನು ಪ್ರೋತ್ಸಾಹಿಸುತ್ತಿದ್ದರು. ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆ ಅನಾವರಣಗೊಳಿಸಲು ಮಕ್ಕಳ ದಸರಾ ಒಂದು ವೇದಿಕೆಯಾಗಿದೆ. ಸಾಮಾನ್ಯವಾಗಿ ಸಂತೆ ಮಾರುಕಟ್ಟೆಯಲ್ಲಿ ನಡೆಯುವ ವ್ಯಾಪಾರ ವಹಿವಾಟಿನ ಹಾಗೇ ಮಕ್ಕಳು ತರಕಾರಿ, ಹಣ್ಣು ಹಂಪಲು, ಸೊಪ್ಪು, ತಿಂಡಿ ತಿನಿಸುಗಳು ಇನ್ನಿತರ ಗೃಹ ಬಳಕೆ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ತಮ್ಮಲ್ಲಿರುವ ವ್ಯಾಪಾರದ ಕೌಶಲ್ಯವನ್ನು ಪ್ರದರ್ಶಿಸಿದರು.


Children dasara organized in madikeri rsk mrq
ಮಕ್ಕಳ ದಸರಾ


ಇದನ್ನೂ ಓದಿ:  Hubballi: ಭಾರತೀಯ ಸೇನೆ ಸೇರಲು ರೆಡಿಯಾಗಿದೆ ಹುಬ್ಬಳ್ಳಿ ಗನ್; ಸ್ವದೇಶಿ ನಿರ್ಮಿತ ಪವರ್ ಫುಲ್ ಅಟಲ್


ದಶಮಂಟಪದ ಶೋಭಾಯಾತ್ರೆ


ದಸರಾ ಹಬ್ಬದ ದಶಮಂಟಪಗಳ ಶೋಭಾಯಾತ್ರೆ ಸಂದರ್ಭದಲ್ಲಿ ಪ್ರದರ್ಶನವಾಗುವಂತಹ ಕಥಾ ಸನ್ನಿವೇಶವನ್ನು ವಿದ್ಯಾರ್ಥಿಗಳು ತಾವೇ ಸಿದ್ಧಪಡಿಸಿ ಹಿನ್ನಲೆ ಧ್ವನಿ ನೀಡಿ, ಕಲಾಕೃತಿಗಳ ಚಲನವಲನಗಳ ಪ್ರದರ್ಶನವು ಎಲ್ಲರ ಗಮನ ಸೆಳೆಯಿತು.


ಮಕ್ಕಳು ಚಾಟ್ಸ್ ಸ್ಟಾಲ್‍ಗಳನ್ನು ತೆರೆದು ಪಾನಿಪೂರಿ, ಚುರುಮುರಿ, ಬಜ್ಜಿ, ಹೋಂಮೇಡ್ ಕೇಕ್ ಸೇರಿದಂತೆ ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ಮಾರಾಟ ಮಾಡಿದರು.


ಇದನ್ನೂ ಓದಿ:  Karnataka Politics: ಕಾಂಗ್ರೆಸ್​​ ವಿರುದ್ಧ ಮೋದಿ ಅಸ್ತ್ರ; ಸಿದ್ದರಾಮೋತ್ಸವ, ಭಾರತ್ ಜೋಡೋಗೆ ಟಕ್ಕರ್ ನೀಡಲು ಬಿಜೆಪಿ ಪ್ಲ್ಯಾನ್


ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ


ಮೈಸೂರಿನ ಅರಮನೆಯಲ್ಲಿ ಮಧ್ಯಾಹ್ನ 1‌ಗಂಟೆ ವರೆಗೂ ಪೂಜಾ ಕಾರ್ಯ ನೆರವೇರಲಿದೆ . ಚಿನ್ನಲೇಪಿತ ಪಲ್ಲಕ್ಕಿಯಲ್ಲಿ ಆಯುಧ ತರಲಾಗುತ್ತದೆ. ಮೊದಲು ಸಾಲಿಗ್ರಾಮ ಪೂಜೆ, ನಂತರ ಅರಮನೆ ಆವರಣದಲ್ಲಿರುವ ಕೋಡಿ ಸೋಮೇಶ್ವರ ದೇವಾಲಯಕ್ಕೆ ಆಯುಧಗಳ ರವಾನೆ ಮಾಡಲಾಗುತ್ತದೆ. ಪಟ್ಟದ ಖಡ್ಗ, ಪಿಸ್ತೂಲು ಸೇರಿದಂತೆ ಅರಮನೆಯ ಆಯುಧಗಳನ್ನ ರವಾನಿಸಲಾಗುತ್ತದೆ. ಬೆಳಗ್ಗೆ 11.02 ರಿಂದ 11.25ರ ಶುಭ ಮುಹೂರ್ತದಲ್ಲಿ ಯದುವೀರ ಕೃಷದತ್ತ ಚಾಮರಾಜ ಒಡೆಯರ್‌ ಅರಮನೆಯ ಆಯುಧಗಳಿಗೆ ಪೂಜೆ ನೆರವೇರಿಸಲಿದ್ದಾರೆ.

Published by:Mahmadrafik K
First published: