HOME » NEWS » State » CHILD RESCUED WHO TORCHED BY HER MOTHER IN NELAMANGALA SESR ANLM

ಕ್ಷುಲಕ ಕಾರಣಕ್ಕೆ ಮಗುವಿನ ಮುಖ ಸುಟ್ಟ ಪಾಪಿ ತಾಯಿ: ಮಗುವನ್ನು ರಕ್ಷಿಸಿ ಮಕ್ಕಳ ಕೇಂದ್ರಕ್ಕೆ ರವಾನೆ

ಮಗು ಭಯಗೊಂಡು ಅರ್ಚಕ ರಂಗಶ್ಯಾಮಾಚಾರ್ ಬಳಿ ಓಡಿ ಬಂದಿದೆ. ಈ ವಿಚಾರವನ್ನು ಬಾಲಕಿಯ ಶಾಲೆ ಶಿಕ್ಷಕರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಮಗುವಿನಿಂದ ಹೇಳಿಕೆ ಪಡೆದಿದ್ದು, ಆಕೆಯನ್ನು ಮಕ್ಕಳ ಕೇಂದ್ರಕ್ಕೆ ಒಪ್ಪಿಸಿದ್ದಾರೆ. 

news18-kannada
Updated:October 31, 2020, 9:32 PM IST
ಕ್ಷುಲಕ ಕಾರಣಕ್ಕೆ ಮಗುವಿನ ಮುಖ ಸುಟ್ಟ ಪಾಪಿ ತಾಯಿ: ಮಗುವನ್ನು ರಕ್ಷಿಸಿ ಮಕ್ಕಳ ಕೇಂದ್ರಕ್ಕೆ ರವಾನೆ
ಮಗುವಿನ ರಕ್ಷಣೆ
  • Share this:
ನೆಲಮಂಗಲ (ಅ.31): ಹೆತ್ತ ತಾಯಿಯೇ 8 ವರ್ಷದ ಮಗಳಿಗೆ ನಿರಂತರವಾಗಿ ದೈಹಿಕ ಹಿಂಸೆ ನೀಡಿ ವಿಕೃತಿ ಮೆರೆದಿದ್ದು, ಗ್ರಾಮಸ್ಥರ ಸಹಾಯದಿಂದ ಬಾಲಕಿ ರಕ್ಷಣೆ ನಡೆದಿರುವ ಘಟನೆ ತಾಲೂಕಿನ ಕಣೇಗೌಡನಹಳ್ಳಿಯಲ್ಲಿ ನಡೆದಿದೆ. ತಾಯಿಯ ಹಿಂಸೆ ತಾಳಲಾರದೆ ಮಗು ಗ್ರಾಮದ ಅರ್ಚಕರ ಮನೆಗೆ ಹೋಗಿದೆ. ಬಳಿಕ ಮಗುವನ್ನು ಪೊಲೀಸರ ರಕ್ಷಣೆಯಲ್ಲಿ ಮಕ್ಕಳ ಸಹಾಯವಾಣಿಗೆ ಒಪ್ಪಿಸಲಾಗಿದೆ. ಚಂದ್ರಮ್ಮ ಮಗುವಿಗೆ ಹಿಂಸೆ ನೀಡುತ್ತಿದ್ದ ತಾಯಿ. ಕಳೆದ ಮೂರು ವರ್ಷಗಳ ಹಿಂದೆ ಪತಿತೊರೆದು ಗ್ರಾಮದ ಬಾಡಿಗೆ ಮನೆಯಲ್ಲಿ ಈಕೆ ಮಗುವಿನೊಂದಿಗೆ ವಾಸವಿದ್ದಳು. ಇಲ್ಲಿನ ಸರ್ಕಾರಿ ಶಾಲೆಯಲ್ಲಿ ಬಾಲಕಿ ಮೂರನೇ ತರಗತಿ ಓದುತ್ತಿತ್ತು. ಚಂದ್ರಮ್ಮ ರಾಷ್ಟ್ರೀಯ ಹೆದ್ದಾರಿ ಬೊಮ್ಮನಹಳ್ಳಿ ಬಳಿಯ ಮದ್ಯ ತಯಾರಿಕಾ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಳು. 

ಕೆಲಸಕ್ಕಾಗಿ ಮುಂಜಾನೆ 5.30ಕ್ಕೆಲ್ಲಾ ಹೊರಡುತ್ತಿದ್ದ ಚಂದ್ರಮ್ಮ ಮಗುವನ್ನ ಮನೆಯ ಹೊರಗೆ ಬಿಟ್ಟು ಬೀಗ ಹಾಕಿಕೊಂಡು ಹೋದರೆ ರಾತ್ರಿ ಮನೆಗೆ ಬರುತ್ತಿದ್ದಳು. ಕರೋನಾ ಹಿನ್ನಲೆಯಲ್ಲಿ ಶಾಲೆಗೆ ರಜೆ ಇರುವುದರಿಂದ ತಾನು ವಾಸವಿದ್ದು ಬಾಡಿಗೆ ಮನೆಯ ಮಾಲೀಕರ ತೋಟದಲ್ಲಿ ದನ ಕುರಿ ಮೇಯಿಸುವ ಕೆಲಸಕ್ಕೆ ಸೇರಿಸಿದ್ದಳು. ಬಾಲಕಿ ಮನೆಮಾಲೀಕರ ಮನೆ ಹಾಗೂ ಅಕ್ಕಪಕ್ಕದ ಮನೆಯವರು ಕೊಟ್ಟ ತಿಂಡಿ, ಊಟ ಮಾಡಿಕೊಂಡು ತಾಯಿ ಬರುವವರೆಗೂ ಕಾಯುತ್ತಿದ್ದಳು.

ಈ ನಡುವೆ ನಿತ್ಯ ಒಂದಲ್ಲ ಒಂದು ಕಾರಣಕ್ಕೆ ಮಗುವಿಗೆ ಈಕೆ ಹಿಂಸೆ ನೀಡುತ್ತಿದ್ದಳು. ಇತ್ತೀಚೆಗೆ ಮನೆ ಮಾಲೀಕ ಮಗು ತೋಟದ ಮನೆಗೆ ಬಂದಿರುವುದಾಗಿ ತಿಳಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಚಂದ್ರಮ್ಮ ಮುದ್ದೆ ಮಾಡುವ ಕೋಲಿನಿಂದ ಮನಬಂದಂತೆ ಥಳಿಸಿದ್ದಲ್ಲದೇ, ಬೆಂಕಿಯಲ್ಲಿ ಚಾಕುವನ್ನು ಕಾಯಿಸಿ ಮುಖದ ಮೇಲೆ ಬರೆ ಎಳೆದು ವಿಕೃತಿ ಮರೆದಿದ್ದಾಳೆ.

ಇದನ್ನು ಓದಿ: ಪಂಚಾಯತ್​ ಅಧಿಕಾರಿಗಳ ನಿರ್ಲಕ್ಷ್ಯ; ಪ್ರಧಾನಿ ಮೋದಿ ಸ್ಪೂರ್ತಿ ಪಡೆದು ಚರಂಡಿ ಸ್ವಚ್ಛತೆಗಿಳಿದ ಮಕ್ಕಳು

ಈ ನೋವಿನಿಂದಾಗಿ ಮಗು ಭಯಗೊಂಡು ಅರ್ಚಕ ರಂಗಶ್ಯಾಮಾಚಾರ್ ಬಳಿ ಓಡಿ ಬಂದಿದೆ. ಈ ವಿಚಾರವನ್ನು ಬಾಲಕಿಯ ಶಾಲೆ ಶಿಕ್ಷಕರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಮಗುವಿನಿಂದ ಹೇಳಿಕೆ ಪಡೆದಿದ್ದು, ಆಕೆಯನ್ನು ಮಕ್ಕಳ ಕೇಂದ್ರಕ್ಕೆ ಒಪ್ಪಿಸಿದ್ದಾರೆ.

ದೈಹಿಕ ಹಿಂಸೆ ನೀಡಿರುವ ತಾಯಿ ಹಾಗೂ ಬಾಲಕಾರ್ಮಿಕ ಕಾಯ್ದೆಯಡಿ ಮನೆಯ ಮಾಲೀಕರ ವಿರುದ್ಧವೂ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸುವುದಾಗಿ ಮತ್ತು  ಕೂಡಲೇ ಕಲ್ಯಾಣ ಸಮಿತಿ ಸಭೆಯಲ್ಲಿ ಚರ್ಚಿಸಿ ಬಾಲಕಿಯ ಪಾಲನೆ ಕುರಿತಾಗಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಗ್ರಾಮಾಂತರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರಾಮುಜೋಗಿಹಳ್ಳಿ ತಿಳಿಸಿದ್ದಾರೆ.
Published by: Seema R
First published: October 31, 2020, 9:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading