HOME » NEWS » State » CHILD LABOURS INCREASED IN YADAGIRI DISTRICT RH

ಕೋವಿಡ್ ಸಂಕಷ್ಟಕ್ಕೆ ಸಿಲುಕಿ ಮಕ್ಕಳೊಂದಿಗೆ ಕೂಲಿಗೆ ತೆರಳುತ್ತಿರುವ ಪೋಷಕರು; ಯಾದಗಿರಿಯಲ್ಲಿ ಹೆಚ್ಚಾದ ಬಾಲ ಕಾರ್ಮಿಕರ ದುಡಿಮೆ!

ಯಾದಗಿರಿಯ ಗಂಗಾನಗರದ ನಿವಾಸಿ ಐಶ್ವರ್ಯ ಎಸ್ ಎಸ್ ಎಲ್ ಸಿ ಪಾಸಾಗಿದ್ದು  ಮುಂದಿನ ವ್ಯಾಸಂಗ ಮಾಡಲು ಹಣ ಬೇಕಾಗಿರುವುದರಿಂದ ತಾಯಿ ಜೊತೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾಳೆ. ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ವಿದ್ಯಾರ್ಥಿನಿ ಐಶ್ವರ್ಯ ಮಾತನಾಡಿ, ನಾನು ಎಸ್ ಎಸ್ ಎಲ್ ಸಿ ಪಾಸಾಗಿದ್ದೆನೆ ಪಿಯುಸಿ ಓದಬೇಕೆಂದರೆ ಹಣವಿಲ್ಲ. ಹೀಗಾಗಿ ಹತ್ತಿ ಬಿಡಿಸಲು ಬಂದಿದ್ದು, ಹತ್ತಿ ಬಿಡಿಸಿದ ಹಣ ಸಂಗ್ರಹ ಮಾಡಿ ಮುಂದೆ ಕಾಲೇಜಿಗೆ ಹೋಗುತ್ತೆನೆಂದಳು.

news18-kannada
Updated:November 2, 2020, 6:11 PM IST
ಕೋವಿಡ್ ಸಂಕಷ್ಟಕ್ಕೆ ಸಿಲುಕಿ ಮಕ್ಕಳೊಂದಿಗೆ ಕೂಲಿಗೆ ತೆರಳುತ್ತಿರುವ ಪೋಷಕರು; ಯಾದಗಿರಿಯಲ್ಲಿ ಹೆಚ್ಚಾದ ಬಾಲ ಕಾರ್ಮಿಕರ ದುಡಿಮೆ!
ಯಾದಗಿರಿ ಜಿಲ್ಲೆಯಲ್ಲಿ ಕೃಷಿ ಕೆಲಸ ಮಾಡುತ್ತಿರುವ ಬಾಲಕರು.
  • Share this:
ಯಾದಗಿರಿ: ಒಂದು ಕಡೆ ಕೋವಿಡ್ ಆರ್ಥಿಕ ಸಂಕಷ್ಟ ಮತ್ತೊಂದೆಡೆ ಜಿಲ್ಲೆಯಲ್ಲಿ ಬೆಂಬಿಡದೆ ವರುಣನ ಕಾಟದಿಂದ ಗ್ರಾಮೀಣ ಜನರ ಬದುಕು ಈಗ ಅಕ್ಷರಶ: ಬೀದಿ ಪಾಲಾಗಿದೆ. ಕೈಯಲ್ಲಿ ಹಣವಿಲ್ಲದೇ ಕಣ್ಣೀರು ಹಾಕುವಂತಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಹೆತ್ತವರೇ ತಮ್ಮ ಮಕ್ಕಳನ್ನು ದುಡಿಮೆ ಮಾಡಲು ಜಮೀನಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಕೂಲಿ ಕೆಲಸವೂ ಸಿಗದೆ ಒಂದು ತಾಲೂಕಿನಿಂದ ಇನ್ನೊಂದು ತಾಲೂಕಿಗೆ ಹೋಗಿ ಕೂಲಿ ಮಾಡುವಂತಾಗಿದೆ.

ಯಾದಗಿರಿ ತಾಲೂಕಿನ ಹತ್ತಿಕುಣಿ, ಬಂದಳ್ಳಿ, ಕಟಗಿ ಶಹಾಪುರ, ಯಾದಗಿರಿಯ ಗಂಗಾನಗರ ಮೊದಲಾದ ಭಾಗದಿಂದ ಸಾವಿರಾರು ಮಕ್ಕಳು ಜಮೀನಿಗೆ ತೆರಳಿ ಬಿಸಿಲಲ್ಲಿ ಹತ್ತಿ ಬಿಡಿಸುತ್ತಿದ್ದಾರೆ. ಬೆಳಗ್ಗೆ ಪೋಷಕರು ತಮ್ಮ ಮಕ್ಕಳೊಂದಿಗೆ ಟಂಟಂ, ಟ್ರ್ಯಾಕ್ಟರ್ ಹಾಗೂ ಇನ್ನಿತರ ವಾಹನಗಳಲ್ಲಿ ಕೆಲಸಕ್ಕೆ  ತೆರಳುತ್ತಿದ್ದಾರೆ.

ಯಾದಗಿರಿ ತಾಲೂಕಿನಿಂದ ವಡಗೇರಾ ತಾಲೂಕಿನ ಹಾಲಗೇರಾ, ನಾಯ್ಕಲ್, ವಡಗೇರಾ, ಮೊದಲಾದ ಕಡೆ ಹತ್ತಿ ಜಮೀನಿಗೆ ತೆರಳಿ ಕೂಲಿ ಮಾಡುತ್ತಿದ್ದಾರೆ. ಸರಕಾರ ಶಾಲೆ ಆರಂಭ ಮಾಡದ ಹಿನ್ನೆಲೆ ಮಕ್ಕಳು ಕೈಯಲ್ಲಿ ಪೆನ್ನು ಪುಸ್ತಕ ಹಿಡಿದು ಆಭ್ಯಾಸ ಮಾಡದೆ ಈಗ ಕೂಲಿ ಕೆಲಸಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಸುಭದ್ರಮ್ಮ ಮಾತನಾಡಿ, ಕೊರೋನಾದಿಂದ ನಮಗೆ ಕೆಲಸ ಸಿಗದಂತಾಗಿತ್ತು‌. ಅದೇ ರೀತಿ ಈಗ ಮಳೆಯಿಂದ ಬೆಳೆ ಹಾನಿಯಾಗಿದೆ. ಊಟ ಮಾಡಲು ಕೈಯಲ್ಲಿ ಹಣವಿಲ್ಲ. ಹೀಗಾಗಿ ನಾವು ನಮ್ಮ ಮಕ್ಕಳ ಜೊತೆ ಹತ್ತಿ ಬಿಡಿಸಿ ,ಬಂದ ಹಣದಲ್ಲಿ ಜೀವನ ಸಾಗಿಸುತ್ತೆವೆಂದು ನೋವು ತೊಡಿಕೊಂಡರು.

ಇದನ್ನು ಓದಿ: ಅಶೋಕ್ ಗಸ್ತಿ ನಿಧನದಿಂದ ತೆರವಾಗಿರುವ ರಾಜ್ಯಸಭೆ ಸ್ಥಾನಕ್ಕೆ ಡಿಸೆಂಬರ್ 1ರಂದು ಉಪಚುನಾವಣೆ

ಕೂಲಿ ಮಾಡಿದ ಹಣದಲ್ಲಿ ನಾನು ಓದುತ್ತೆನೆ ....!

ಬಹುತೇಕ ಮಕ್ಕಳು ಕೂಲಿ ಕೆಲಸಕ್ಕೆ ತೆರಳುತ್ತಿದ್ದಾರೆ. ಆದರೆ, ಕೆಲ ಮಕ್ಕಳು ಮನೆಯಲ್ಲಿ ಊಟಕ್ಕೆ ಏನು ಇಲ್ಲ. ಅಪ್ಪ ,ಅಮ್ಮನಿಗೆ ಆಶ್ರಯವಾಗಬೇಕೆಂದು ಕೆಲಸಕ್ಕೆ ಹೋಗುತ್ತಿದ್ದಾರೆ. ಯಾದಗಿರಿಯ ಗಂಗಾನಗರದ ನಿವಾಸಿ ಐಶ್ವರ್ಯ ಎಸ್ ಎಸ್ ಎಲ್ ಸಿ ಪಾಸಾಗಿದ್ದು  ಮುಂದಿನ ವ್ಯಾಸಂಗ ಮಾಡಲು ಹಣ ಬೇಕಾಗಿರುವುದರಿಂದ ತಾಯಿ ಜೊತೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾಳೆ. ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ವಿದ್ಯಾರ್ಥಿನಿ ಐಶ್ವರ್ಯ ಮಾತನಾಡಿ, ನಾನು ಎಸ್ ಎಸ್ ಎಲ್ ಸಿ ಪಾಸಾಗಿದ್ದೆನೆ ಪಿಯುಸಿ ಓದಬೇಕೆಂದರೆ ಹಣವಿಲ್ಲ. ಹೀಗಾಗಿ ಹತ್ತಿ ಬಿಡಿಸಲು ಬಂದಿದ್ದು, ಹತ್ತಿ ಬಿಡಿಸಿದ ಹಣ ಸಂಗ್ರಹ ಮಾಡಿ ಮುಂದೆ ಕಾಲೇಜಿಗೆ ಹೋಗುತ್ತೆನೆಂದಳು.
Published by: HR Ramesh
First published: November 2, 2020, 6:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories