17 ವರ್ಷದ ಹುಡುಗಿ ವಯಸ್ಸು ಮುಚ್ಚಿಟ್ಟು ಮದುವೆಗೆ ಯತ್ನ; ಅಪ್ರಾಪ್ತೆ ರಕ್ಷಣೆ

ತುಮಕೂರು ಮೂಲದ 17 ವರ್ಷದ ಹುಡುಗಿ ಹಾಗೂ ನೆಲಮಂಗಲ ತಾಲೂಕು ತ್ಯಾಮಗೊಂಡ್ಲು ಗ್ರಾಮದ 28 ವರ್ಷದ ಹುಡುಗನಿಗೆ ಮದುವೆ ಮಾಡಲು ತಯಾರಿ ನಡೆಸಲಾಗಿತ್ತು

ಮದುವೆ ಮಂಟಪಕ್ಕೆ ದಾಳಿ ಮಾಡಿದ ಅಧಿಕಾರಿಗಳು

ಮದುವೆ ಮಂಟಪಕ್ಕೆ ದಾಳಿ ಮಾಡಿದ ಅಧಿಕಾರಿಗಳು

  • Share this:
ಬೆಂಗಳೂರು ಗ್ರಾಮಾಂತರ (ಡಿ. 13): ಅಪ್ರಾಪ್ತ ವಯಸ್ಸಿನ ಬಾಲಕಿಯ ವಯಸ್ಸು ಮುಚ್ಚಿಟ್ಟು ಮದುವೆ ಮಾಡಲು ಕುಟುಂಬಸ್ಥರು ಮುಂದಾಗಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಮದುವೆ ಮಂಟಪಕ್ಕೆ ಆಗಮಿಸಿದ ಅಧಿಕಾರಿಗಳು ಮದುವೆ ನಿಲ್ಲಿಸಿ, ಬಾಲಕಿ ರಕ್ಷಣೆ ಮಾಡಿದ್ದಾರೆ. ತುಮಕೂರು ಮೂಲದ 17 ವರ್ಷದ ಹುಡುಗಿ ಹಾಗೂ ನೆಲಮಂಗಲ ತಾಲೂಕು ತ್ಯಾಮಗೊಂಡ್ಲು ಗ್ರಾಮದ 28 ವರ್ಷದ ಹುಡುಗನಿಗೆ ಮದುವೆ ಮಾಡಲು ತಯಾರಿ ನಡೆಸಲಾಗಿತ್ತು. ಡಿ. 12 ಹಾಗೂ ಡಿ. 13 ರಂದು ಮದುವೆ ನಿಶ್ಚಯವಾಗಿತ್ತು. ಈ ಬಾಲ್ಯವಿವಾಹದ ಬಗ್ಗೆ ಮಕ್ಕಳ ಸಹಾಯವಾಣಿಗೆ ದೂರು ಬಂದ ಹಿನ್ನೆಲೆಯಲ್ಲಿ ಮಕ್ಕಳ ಸಹಾಯವಾಣಿ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಮದುವೆ ನಿಲ್ಲಿಸಿದ್ದಾರೆ. 

ನೆಲಮಂಗಲ ತಾಲೂಕು ಶಿವಗಂಗೆಯ ಖಾಸಗಿ ಕಲ್ಯಾಣ ಮಂಟಪಕ್ಕೆ ಬಾಲ್ಯವಿವಾಹವನ್ನು ಮಕ್ಕಳ ಸಹಾಯವಾಣಿ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ದಾಳಿ ನಡೆಸಿ ಬಾಲಕಿಯ ರಕ್ಷಿಸಿದ್ದಾರೆ. ಅಧಿಕಾರಿಗಳು ದಾಳಿ ನಡೆಸಿದಾಗ ಮಂಟಪದಲ್ಲಿ ವರನ ಕಡೆಯವರು ಮಾತ್ರ ಇದ್ದು ವಧುವಿನ ಕಡೆಯವರಿಗೆ ವಿಷಯ ತಿಳಿದು ಮದುವೆ ಮಂಟಪಕ್ಕೆ ಬಾರದೆ ಹುಡುಗಿಯನ್ನು ಬಚ್ಚಿಟ್ಟು ಹುಡುಗಿ ಇಲ್ಲವೆಂದು ನಾಟಕವಾಡಿದ್ದರು. ಈ ವೇಳೆ ಪೋಷಕರಿಗೆ ಎಚ್ಚರಿಕೆ ನೀಡಿದ ಅಧಿಕಾರಿಗಳು ಮದುವೆ ನಿಲ್ಲಿಸುವಲ್ಲಿ ಯಶಸ್ವಿಯಾದರು.

ಈ ಬಗ್ಗೆ ಅಧಿಕಾರಿಗಳು ವರನನ್ನು ವಿಚಾರಿಸಿದಾಗ ಹುಡುಗಿಗೆ 18 ವರ್ಷ ತುಂಬಿಲ್ಲ ಎಂಬ ಮಾಹಿತಿಯನ್ನು ಮುಚ್ಚಿಟ್ಟಿದ್ದರು. ಈ ಬಗ್ಗೆ ನನಗೆನೂ ಗೊತ್ತಿಲ್ಲ ಹುಡುಗಿಯನ್ನು ಸೋಮವಾರ ಕರೆತಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಒಪ್ಪಿಸುತ್ತೇನೆಂದು ತಿಳಿಸಿದರು. ಆದರೆ, ಅಧಿಕಾರಿಗಳು ಇಂದೇ ಒಪ್ಪಿಸುವಂತೆ ಪಟ್ಟು ಹಿಡಿದ ಪರಿಣಾಮ ಬಾಲಕಿಯನ್ನು ಕಡೆಗೆ ಒಪ್ಪಿಸಲಾಯಿತು. ಸದ್ಯ ರಕ್ಷಣೆ ಮಾಡಿರುವ ಅಪ್ರಾಪ್ತೆಯನ್ನು ಬಾಲಕಿಯರ ಮಂದಿರದಲ್ಲಿ ಆಶ್ರಯಕ್ಕೆ ನೀಡಲಾಗಿದೆ.
Published by:Seema R
First published: