ನಮ್ಮ ಬೆಂಗಳೂರು ಇಮೇಜ್ಗೆ ಬಿಗ್ ಡ್ಯಾಮೇಜ್..!: ನಗರದಲ್ಲಿ ಹೆಚ್ಚಾಗ್ತಿದೆ ಮಕ್ಕಳ ಮೇಲಿನ ದೌರ್ಜನ್ಯ..!
Updated:September 6, 2018, 8:52 AM IST
Updated: September 6, 2018, 8:52 AM IST
ಮುನಿರಾಜು, ನ್ಯೂಸ್ 18 ಕನ್ನಡ
ಬೆಂಗಳೂರು(ಸೆ. 06): ಸಿಲಿಕಾನ್ ಸಿಟಿ ಬೆಂಗಳೂರು ವಿಶ್ವ ಮಟ್ಟದಲ್ಲಿ ಬ್ರಾಂಡ್ ಬೆಂಗಳೂರು ಆಗುತ್ತಿದೆ. ಈ ಖ್ಯಾತಿ ಗಳಿಸಿದ್ದ ನಗರಕ್ಕೆ ಒಂದು ಕಳಂಕವೂ ಅಂಟಿಕೊಳ್ಳುತ್ತಿದೆ. ಇತ್ತೀಚಿಗೆ ನಗರದಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚಾಗ್ತಿದೆ. ಇಷ್ಟಕ್ಕೂ ಆ ಕೇಸ್ಗಳೇನು.? ಇಲ್ಲಿದೆ ವಿವರ
ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಜನಸಂಖ್ಯೆ ಹೆಚ್ಚಾಗ್ತಿದ್ದಂತೆ ಸಮಸ್ಯೆಗಳೂ ಹೆಚ್ಚಾಗ್ತಿವೆ. ಅದರಲ್ಲೂ ಕ್ರಿಮಿನಲ್ ಕೃತ್ಯಗಳು ಸಿಕ್ಕಾಪಟ್ಟೆ. ಕಳ್ಳತನ, ದರೋಡೆ, ಕೊಲೆ ಸುಲಿಗೆ ಪ್ರಕರಣಗಳು ಆಧಿಕವಾಗ್ತಿವೆ. ಇದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.. ಇವೆಲ್ಲದರ ನಡುವೆ ಬ್ರಾಂಡ್ ಬೆಂಗಳೂರು ಹೆಸರಿಗೆ ಕಳಂಕವಾಗುತ್ತಿರುವುದು ಮುಗ್ಧ ಮಕ್ಕಳ ಮೇಲಿನ ದೌರ್ಜನ್ಯ. ಸಿಲಿಕಾನ್ ಸಿಟಿಯಲ್ಲಿ ವರ್ಷದಿಂದ ವರ್ಷಕ್ಕೆ ಅಪ್ರಾಪ್ತ ಬಾಲಕಿಯರ ಮೇಲಿನ ದೌರ್ಜನ್ಯ ಪ್ರಕರಣಗಳು ಜಾಸ್ತಿ ಆಗುತ್ತಿವೆ. ಇದಕ್ಕೆ ಪೊಲೀಸ್ ಇಲಾಖೆಯೇ ನೀಡಿರುವ ಮಾಹಿತಿ ಸಾಕ್ಷಿ ಎಂಬಂತಿದೆ.
ಬೆಂಗಳೂರಲ್ಲಿ ಮಕ್ಕಳ ಮೇಲೆ ದೌರ್ಜನ್ಯ2016 - 315 ಕೇಸ್ ದಾಖಲು
2017 - 401 ಕೇಸ್ ದಾಖಲು
2018 ಜೂನ್ವರೆಗೆ - 181 ಕೇಸ್ ದಾಖಲುಇಂತಹ ಪ್ರಕರಣಗಳಲ್ಲಿ ತ್ವರಿತವಾಗಿ ತನಿಖೆ ಮಾಡಿ ಆರೋಪಿಗಳಿಗೆ ಶಿಕ್ಷೆಯಾಗಬೇಕು. ಅದ್ರೆ ಬಹುತೇಕ ಪ್ರಕರಣಗಳು ಸೂಕ್ತ ಸಾಕ್ಷ್ಯಗಳಿಲ್ಲದೆ ಮುಚ್ಚಿ ಹೋಗುತ್ತಿವೆ.
ಇದುವರೆಗೂ ರಾಜ್ಯದಲ್ಲಿ 4,771 ಪೋಕ್ಸೊ ಕೇಸ್ಗಳು ಪೆಂಡಿಂಗ್ ಇವೆ. ವಿಚಾರಣೆ ಹಾಗೂ ತನಿಖೆ ನಡೆಯುತ್ತಿಲ್ಲ ಎಂದು ಖುದ್ದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ಕೆಲವು ಕೇಸ್ಗಳಲ್ಲಿ ಸೂಕ್ತ ಸಾಕ್ಷ್ಯ ಸಂಗ್ರಹಿಸುವಲ್ಲಿ ಪೊಲೀಸರು ವಿಫಲರಾಗುತ್ತಿದ್ದು ಆರೋಪಿಗಳು ಖುಲಾಸೆ ಆಗುತ್ತಿದ್ದಾರೆ.
ಪೋಕ್ಸೊ ಕೇಸ್ಗಳ ವಿಚಾರಣೆ ಮಾಡುವ ಎಸ್ಪಿಪಿಗಳ ಜೊತೆ ಗೃಹ ಸಚಿವರು ಸಭೆ ನಡೆಸಿ ಎಲ್ಲ ವಕೀಲರಿಗೂ ಹಿರಿಯ ನ್ಯಾಯಮೂರ್ತಿಗಳಿಂದ ತರಬೇತಿ ನೀಡಲು ಮುಂದಾಗಿದ್ದಾರೆ. ಆದೇನೆ ಇರ್ಲಿ ಸಾರ್ವಜನಿಕರಿಗೆ ಪೋಕ್ಸೊ ಕೇಸ್ಗಳ ಸಂಬಂಧ ಇನ್ನೂ ಹೆಚ್ಚಿನ ಅರಿವು ಮೂಡಿಸುವ ಆಗತ್ಯ.
ಬೆಂಗಳೂರು(ಸೆ. 06): ಸಿಲಿಕಾನ್ ಸಿಟಿ ಬೆಂಗಳೂರು ವಿಶ್ವ ಮಟ್ಟದಲ್ಲಿ ಬ್ರಾಂಡ್ ಬೆಂಗಳೂರು ಆಗುತ್ತಿದೆ. ಈ ಖ್ಯಾತಿ ಗಳಿಸಿದ್ದ ನಗರಕ್ಕೆ ಒಂದು ಕಳಂಕವೂ ಅಂಟಿಕೊಳ್ಳುತ್ತಿದೆ. ಇತ್ತೀಚಿಗೆ ನಗರದಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚಾಗ್ತಿದೆ. ಇಷ್ಟಕ್ಕೂ ಆ ಕೇಸ್ಗಳೇನು.? ಇಲ್ಲಿದೆ ವಿವರ
ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಜನಸಂಖ್ಯೆ ಹೆಚ್ಚಾಗ್ತಿದ್ದಂತೆ ಸಮಸ್ಯೆಗಳೂ ಹೆಚ್ಚಾಗ್ತಿವೆ. ಅದರಲ್ಲೂ ಕ್ರಿಮಿನಲ್ ಕೃತ್ಯಗಳು ಸಿಕ್ಕಾಪಟ್ಟೆ. ಕಳ್ಳತನ, ದರೋಡೆ, ಕೊಲೆ ಸುಲಿಗೆ ಪ್ರಕರಣಗಳು ಆಧಿಕವಾಗ್ತಿವೆ. ಇದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.. ಇವೆಲ್ಲದರ ನಡುವೆ ಬ್ರಾಂಡ್ ಬೆಂಗಳೂರು ಹೆಸರಿಗೆ ಕಳಂಕವಾಗುತ್ತಿರುವುದು ಮುಗ್ಧ ಮಕ್ಕಳ ಮೇಲಿನ ದೌರ್ಜನ್ಯ. ಸಿಲಿಕಾನ್ ಸಿಟಿಯಲ್ಲಿ ವರ್ಷದಿಂದ ವರ್ಷಕ್ಕೆ ಅಪ್ರಾಪ್ತ ಬಾಲಕಿಯರ ಮೇಲಿನ ದೌರ್ಜನ್ಯ ಪ್ರಕರಣಗಳು ಜಾಸ್ತಿ ಆಗುತ್ತಿವೆ. ಇದಕ್ಕೆ ಪೊಲೀಸ್ ಇಲಾಖೆಯೇ ನೀಡಿರುವ ಮಾಹಿತಿ ಸಾಕ್ಷಿ ಎಂಬಂತಿದೆ.
ಬೆಂಗಳೂರಲ್ಲಿ ಮಕ್ಕಳ ಮೇಲೆ ದೌರ್ಜನ್ಯ2016 - 315 ಕೇಸ್ ದಾಖಲು
2017 - 401 ಕೇಸ್ ದಾಖಲು
2018 ಜೂನ್ವರೆಗೆ - 181 ಕೇಸ್ ದಾಖಲು
Loading...